ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸೆನ್ನ ಪಾಲಿಸೋ ಎನ್ನಾ ಪ ಪಾಲಿಸೆನ್ನ ಗುರು ಫಾಲನಯನಾಸುರಪಾಲನ ಪಿತ ಶ್ರೀ ಪಾರ್ವತಿರಮಣಅ.ಪ. ಲಿಂಗವೇರಿ ಸುರರಂಗದಿ ಚರಿಸುವ ಶಿರಿರಂಗನ ಪದ ಪವನನ ಭೃಂಗಾ 1 ಕವಿ ವಿನುತ ಪರರಾಳಿಯ ಪ್ರಿಯಬಾಲಾ 2 ನವಿಲನೇರಿ ಬರುತಿಪ್ಪನ ಪಿತತಂದೆವರದಗೋಪಾಲವಿಠಲನ ಆಪ್ತಾ 3
--------------
ತಂದೆವರದಗೋಪಾಲವಿಠಲರು
ಮನವೇ ಚಿಂತಿಸು ಹರಿ ಮುರಾರಿಯ ಪ ಮಾಯಾ ಮನುಜಾಕಾರವ ತಾಳ್ದ ಸನಕಾದಿ ಸನ್ಮುನಿವಿನುತಪದ ವನಜಾತಯುಗಳನನು ಅ.ಪ ಪುರುಹೂತರಿಗೆ ತಾತನ ರತಿದೇವಿ ಸರಸಿಜಾಸನನಿಗೆ ಕರುಣಿಸಿವೇದವÀ ತರಳಗಭಯವನಿತ್ತು ತರಿದು ನೃಪರನು ದುರುಳರಾವಣ ಹರಣ ನೀಲಾಂಬರ ಯದುವರ ತುರಗವಾಹನ 1 ಸುಗುಣ ಗಣಾರ್ಣವನ ಸಜ್ಜನರಿಗೆ ಸುಗತಿಯಪಾಲಿಪನ ಸುರಪಾಲನ ನಿಗಮಚೋರನಕೊಂದು ಮೃಗನರವ ರೂಪವ ತಾಳಿ ಜಗವನಳೆದನ ಭೃಗುಜ ಶಾಖಾ ಮೃಗವ ವಧಿಸಿ ಹಲನೇಗಿಲನು ಪಿಡಿ ನಿಗಮನುತ ಕಲಿಯುಗದ ವೈರಿಯ 2 ಒಲಿದು ಪೂಜೆಯ ಕೊಂಬನ ಕುಂಭಜಶಾಪ ಕಲುಷವ ಕಳೆದವನ ವ್ಯಾಘ್ರಾಚಲದಲಿ ನಿಂತು ಭಕ್ತರ ಸಲಹುವ ಕಾರುಣ್ಯನಿಲಯ ಸಜ್ಜನಮನೋ ನಿಲಯ ಶ್ರೀನಿವಾಸನ ಜಲಜನೇತ್ರನ ಜಲಜಗಾತ್ರನ ವಿಲಸಿತಾಂಬುಜ ಮಾಲ ಭಕ್ತರಿ ಗೊಲಿವ ಶ್ರೀ ವರದಾರ್ಯವಿಠಲನ 3
--------------
ವೆಂಕಟವರದಾರ್ಯರು
ಮನವೇ ಚಿಂತಿಸು ಹರಿಯ-ಮುರಾರಿಯ ಪ ಮಾಯಾ ಯುಗಳನು-ಮನವೇ ಅ.ಪ. ಸ್ಮರವಿರಿಂಚಿನಯ ಪಿತನ-ಗೌರೀವರ-ಪುರಹೂತರಿಗೆ ತಾತನೆ ರತಿದೇವಿ-ಸರಸತಿಯರ ಮಾವನ-ಶ್ರೀರಮಣನ ಸರಸಿಜಾಸನಿಗೆ ಕರುಣೀಸುವೇದವ ಗಿರಿಯ ನೆಗೆಹಿ ವಿಶ್ವಂಭರೆಯ ದಾಡೆಯೊಳೆತ್ತಿ ತರಳಗಭಯವನಿತ್ತು ಮೂರಡಿ ಧರೆಯ ಬೇಡುತ ದುರುಳ ರಾವಣಹರಣ ನೀಲಾಂ- ಬರನ ಯದುವರ ತುರಗವಾಹನ1 ನಿಗಮಾಂತ ಗೋಚರನ-ನಿತ್ಯಾನಂದ-ಸುಗುಣಗಣಾರ್ಣವನ ಸಜ್ಜರಿಗೆ-ಸುಗತಿಯಪಾಲಿಪನ ಸುರಪಾಲನ ನಿಗಮಚೋರನ ಕೊಂದು ನಗವ ಬೆನ್ನೊಳು ಪೊತ್ತು ಜಗವನುದ್ಧರಿಸಿ ನರಮೃಗದರೂಪವ ತಾಳಿ ಜಗವ ನಳೆದನ ಭೃಗುಜ ಶಾಖಾ ಮೃಗವ ವಧಿಸಿ ಹಲ ನೇಗಿಲನು ಪಿಡಿದುಗುರು ಕೊನೆಯಿಂ ನಗುವನೆ ನೆಗಹಿದ-ನಿಗಮನುತ ಕಲಿಯುಗದ ವೈರಿಯ 2 ಪೂಜೆಯಕೊಂಬನ ಕುಂಭಜ ಶಾಪ-ಕಲುಷವ ಕಳೆದನ-ವ್ಯಾಘ್ರಾಚಲ ದಲಿನಿಂತು ಭಕ್ತರ ಸಲಹುವ ಕಾರುಣ್ಯನಿಲಯ ಸಜ್ಜನ ಮನೋನಿಲಯ ಶ್ರೀನಿವಾಸನ ಜಲಜಬಾಂಧವ ಕುಲಪವಿತ್ರನ ಜಲಜನೇತ್ರನ ಜಲಜ ಗಾತ್ರನ ವಿಲಸಿತಾಂಬುಜ ಮಾಲಭಕ್ತರಿಗೊಲಿವ ಶ್ರೀವರದಾರ್ಯ ವಿಠಲನ 3
--------------
ಸರಗೂರು ವೆಂಕಟವರದಾರ್ಯರು
ಶೇಷಶಯನ ಶ್ರೀಕೃಷ್ಣನಿಗಾರತಿ ಸತಿ ಲಕುಮಿಯು ಮಾಡಿದಳು ಪ ಸಾಸಿರನಾಮನ ಭೂಸುರಪಾಲನ ಸೋಸಿನಿಂದ ಸ್ಮರಿಸುತ ಮನದಿ ಅ.ಪ ಅಂಬುಧಿಯುದುಕದಿ ಆಲದ ಎಲೆ ಮೇಲೆ ಅಂಗುಟವನು ಬಾಯೊಳಗಿಟ್ಟು ತುಂಬಿಗುರುಳ ಮುಖಕಮಲದ ಚಲುವಗೆ ಸಂಭ್ರಮದಲಿ ಮುತ್ತಿನಾರತಿಯ 1 ಮಂದರಧರ ಗೋವಿಂದಗೆಮ್ಮಯ ಕುಂದುಗಳೆಣಿಸದೆ ಸಲಹೆನ್ನುತಾ ವಂದಿಸಿ ಪ್ರಾರ್ಥನೆ ಮಾಡುತ ಬೇಗದಿ ಇಂದಿರೇಶ ಸಲಹೆಂದೆನುತ 2 ಗೋವರ್ಧನವನು ಎತ್ತಿ ಸುಜನರನು ಗೋಗೋಪಾಲರ ಪೊರೆದವಗೆ ಗೋಪತಿ ಕಮಲನಾಭ ವಿಠ್ಠಲನಿಗೆ ಗೋಪಿಯರೊಡನಾಡುವ ಹರಿಗೆ 3
--------------
ನಿಡಗುರುಕಿ ಜೀವೂಬಾಯಿ
ಶ್ರೀಶ ಕೇಶವ ಮಾಧವ ವಾಸವ ವಂದಿತ ಪ ಸಾಸಿರನಾಮನೆ ಭೂಸುರಪಾಲನೆ ದೋಷವಿದೂರನೆ ಶೇಷಶಯನಹರಿ 1 ಇಂದಿರಾರಮಣನೆ ನಂದಗೋಪಿಯ ಕಂದ ಮಂದರಧರ ಗೋವಿಂದ ಗೋ ಗೋಪಪಾಲ2 ಭುವನ ಮೋಹನರೂಪ ನವನವ ಚರಿತನೆ ನವನೀತಧರ ಕೃಷ್ಣ ಭುವನ ವಿಲಕ್ಷಣನೆ 3 ರಂಗನಾಯಕನೆ ಪ್ಲವಂಗ ವತ್ಸರದೊಳು ಭಂಗಗಳಳಿಯುವ ಶೃಂಗಾರ ಮೂರುತಿ4 ಶ್ರಮ ಪರಿಹರಿಸುತ ಮಮತೆಯಿಂದಲಿ ಕಾಯ್ವಸುಮನಸವಂದ್ಯ ಶ್ರೀ ಕಮಲನಾಭ ವಿಠ್ಠಲ 5
--------------
ನಿಡಗುರುಕಿ ಜೀವೂಬಾಯಿ