ಒಟ್ಟು 26 ಕಡೆಗಳಲ್ಲಿ , 17 ದಾಸರು , 25 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

2. ಶಾರದೆ ಸರಸ್ವತಿ ಭಾರತಿ ಭಗವತಿ ಪ ಸಿರಿಸೊಸೆ ಪಾವನೆ ಸುರನುತ ಚರಣೆ ಅ.ಪ ಮಧುರ ಸಂಭಾಷಿಣೆ ವಿಧಿವರರಾಣಿ ಬುಧಜನ ತೋಷಿಣೆ ವಿಧುಮುಖಿಜನನಿ 1 ಧವಳಸುಗಾತ್ರೆ ಕಮಲನೇತ್ರೆ ಕವಿಜನ ಸ್ತೋತ್ರೆ ದಿವಿಜೆ ಪವಿತ್ರ 2 ರಾಜರಾಜಾರ್ಚಿತೆ ರಾಜಿಪಸುಚರಿತೆ ಮೂಜಗಭರಿತೆ ಜಾಜಿ ಪಟ್ಟಣವಾಸೆ 3
--------------
ಶಾಮಶರ್ಮರು
ಎಂಥ ಶೂರನೊ ರಾಮ ಎಂಥ ಧೀರನೊ ಪ ಕಂತುಹರನ ಧನುವನೆತ್ತ ಪಂಥದಿಂದ ಮುರಿದು ಬಿಸುಟ ಅ.ಪ. ಹಲವು ಶೂರರಾಜರದನು ಚಲಿಸಲಾಗದ ಧನುವ ಸುಲಭದಿಂದಲೆತ್ತಿ ಮುರಿದು ಲಲನೆ ಸೀತೆಯೊಲಿಸಿದವನು 1 ಸಕಲ ಕ್ಷತ್ರಿಯರನು ಗೆಲಿದು ಪ್ರಕಟನಾದ ಪರಶುರಾಮ ಶಕುತಿಯನ್ನು ತಾನು ಪರಮ ಯುಕುತಿಯಿಂದ ಗೆಲಿದು ಬಂದ 2 ಸಾಲು ಶಿರನ ಕೀಟವೆಂದು ಬಾಲದಲ್ಲಿ ತಂದ ವೀರ ವಾಲಿಯನೇಕ ಬಾಣದಲಿ ಲೀಲೆಯಿಂದಲಿರಿದ ಜಾಣ 3 ಹತ್ತನಾಲ್ಕು ಲೋಕಗಳನು ಸುತ್ತಿಗೆಲಿದು ಖ್ಯಾತನಾದ ಹತ್ತು ತಲೆಯ ದುಷ್ಟನನ್ನು ಕತ್ತು ಕಡಿದು ಕೆಡಹಿದವನು 4 ರಾಸಿ ದೈತ್ಯರನ್ನು ಕೊಂಡು ದೇಶವನ್ನು ಉದ್ಧರಿಸಿದ ವಾಸವಾದಿ ಸುರನುತ ರಂ- ಗೇಶವಿಠಲರೇಯನವನು 5
--------------
ರಂಗೇಶವಿಠಲದಾಸರು
ಕಾಮಿತವನು ಪಡಿಯೋ ಪ ಈ ಮಹಿಯೊಳು ರಘುವೀರ ತೀರ್ಥರ ಕರ- ತಾಮರಸೋದ್ಭವರೆನಿಸಿ ಮೆರೆದ ಗುರು ಅ.ಪ ಧರೆಸುತ ಮಂಡಿತ ಸುರಪುರದಲಿ ದ್ವಿಜ ವರ ಕುಲದಲಿ ಜನಿಸಿಯಳಿಮೇ- ಲಾರ್ಯರ ಬಳಿಯಲಿ ಶಬ್ದಾವಳಿ ಶಾಸ್ತ್ರವ ಪಠಿಸಿ ಇಳಿಸುರನುತ ಕರ ಜಲಜೋದ್ಭವ ರೆನಿಸಿ ಕಲಿತು ಗುರುಮುಖದಿ ಮರುತ ಶಾಸ್ತ್ರವನು ತಿಳಿಸುತ ಬುಧಜನ ರೊಲಿಸಿದಂಥ ಗುರು 1 ಹೇಮಮಂಟಪದಿ ಭೂಮಿ ಸುತಾನ್ವಿತ ರಾಮನ ಪೂಜಿಸು ತಾ ಶ್ರೀಮನ್ಮಧ್ವಕ ರಾಬ್ಜಾದಾಗತ ಸೌಮಿತ್ರಿಯ ಸಹಿತ ಸಾಮವ ಪಠಿಸುವ ಭೂಮಿಸುರಜನ ಸ್ತೋಮದಿ ಶೋಭಿಸುತ ಧೀಮಜನರಿಗೆ ಪ್ರೇಮದಿಂದ ಮೃಷ್ಟಾನ್ನದಾನ ಸನ್ಮಾನ ಮಾಡುತಿಹ 2 ಭೂತಳದಲಿ ಸುಕ್ಷೇತ್ರ ಬಹು ಆರ್ಥ ಯಾತ್ರಿಗಳಾ ಚರಿಸಿ ಭೂತಬಾಧೆ ರೋಗಾತುರ ಜನಗಳ ಭೀತಿಯ ಪರಿಹರಿಸಿ ಶಾಸ್ತ್ರಸುಧಾರಸ ಸತ್ಯಮೋದ ಯತಿ- ನಾಥರಿಂದ ಗ್ರಹಿಸಿ ಖ್ಯಾತ ಕಾರ್ಪರ ಕ್ಷೇತ್ರದಿ ನರಮೃಗನಾಥನ ಪ್ರೀತಿಗೆಪಾತ್ರರೆನಿಸಿರುವ 3
--------------
ಕಾರ್ಪರ ನರಹರಿದಾಸರು
ಕಾಮಿನೀಮಣಿ ರಾಮಭಾಮಿನಿ ಪ ಸೋಮಬಿಂಬ ವದನೆಯೆ ಸೀತೆಯೆ ಅ.ಪ. ಪಾವಮಾನಿ ಮನೋವಾರಿಜಾಶ್ರಿತೆ ದೇವತಾವಳೀ ದೇವಸನ್ನುತೆ ದೇವಬೃಂದ ವಂದಿತೆ ಸನ್ನುತೆ 1 ಭಕ್ತವತ್ಸಲೆಯೆ ಶಕ್ತಿರೂಪೆಯೆ ಮಾರ್ಗವಿಶದೆಯೆ ಮಾತೆಯೆ 2 ವರಧೇನುಪುರಿ ಪರಮೇಶ್ವರಿ ವರದಾಯಿನಿ ವರಲೋಕಪಾಲೆ ಕರುಣಾಕರೆ ವರರಾಮ ಜಾಯೆ ಪರಿಪಾಲಿತಾಶ್ರಿತೆ ಸುರನುತೆ 3
--------------
ಬೇಟೆರಾಯ ದೀಕ್ಷಿತರು
ಜವದಿ ಪಾಲಿಸೊ ಪ್ಲವಗೋತ್ತುಮ ಮರುತಾ ನಂಬಿದೆ ನಿರುತಾ ಪ ಅವನಿಶಾರ್ಚಿತ ಪವನಾತ್ಮಜ ಹನುಮಾ ಭವಸುರನುತ ಭೀಮಾ ಅ.ಪ ಮಾರುತಿ ಅಂಜನ ಗರ್ಭದೊಳುದವಿಸಿ ವಾರಿಧಿಯುತ್ತರಿಸಿ ಧಾರುಣಿ ಸುತೆಗತಿ ಹರುಷವಗೊಳಿಸಿದಿ | ನೀ ದ್ವಾಪರ ಯುಗದಿ ನಾರಿಯ ಮೊರೆ ಕೇಳಿ ದುರುಳನ ಶಿರ ತರಿದಿ ಆ ನಾರಿವೇಷದಿ 1 ಅದ್ವೈತರ ನೀನಳಿಸುವಲೋಸುಗದಿ | ಸದ್ಗುರುವರ ಜಗದಿ ಮಧ್ಯಾಸದನ ಸತಿಯುದರದಿ ಜನಿಸಿದಿ | ಸದ್ವೈಷ್ಣವರ ಪೊರೆದಿ ಸಿದ್ಧಾಂತವ ಸ್ಥಾಪಿಸಿ ಬದರಿಗೆ ನೀಪೋದೆ | ಮದ್ವಾಭಿದಾನದಿ 2 ನಂಬಿದೆ ವೃಕೊಜಠರಾ ದಶಶಿರ ಪುರನಾಥಾ ಪತಿ ಶಶಿಕುಲಸಂಜಾತಾ 3
--------------
ಶಾಮಸುಂದರ ವಿಠಲ
ಜೋ ಜೋ ಸುಚರಿತ್ರ ಪರಮ ಪವಿತ್ರಾ ಜೋ ಜೋ ಶತಪತ್ರನೇತ್ರ ಸುಗಾತ್ರಾ ಪ ಜೋ ಜೋ ವಟಪತ್ರಶಯನ ವಿಚಿತ್ರ ಜೋ ಜೋ ಸುಂದರಚಿತ್ರ ಸೀತಾಕಳತ್ರ ಅ.ಪ ಕುಶಿಕಾಧ್ವರಪಾಲಬಾಲ ಸುರನುತಿಪಾತ್ರಾ ಸನ್ನುತ ಸ್ವರರೂಪ ಚಿತ್ರ ನಿಶಿಚರಹರ ನಿತ್ಯಸುಖದಾತ ಮಿತ್ರಾ [ತ್ರಿಶಿರಾದ್ಯಸುರ ಸಂಹಾರಕನೇತ್ರ] 1 ಕರುಣಾಕಾರ ದಿವ್ಯ ಶಶಿಬಿಂಬವದನಾ ಶರಣಜನಾನತ ಮರಕತವದನಾ ಧರಣಿಜಲೋಲ ಭಾಸ್ಕರವಂಶಮದನಾ ನಿತ್ಯ ಮಾಂಗಿರಿಸದನಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತೋರೋ ತೋರೋ ತವ ದಿವ್ಯ ಚರಣವ ಪ ತೋರಿಸು ಕರುಣಾವಾರಿಧಿ ಶರಜ ನೀ ತೋರೋ ಅ.ಪ ವಲ್ಲಿದೇವಿಯ ವಲ್ಲಭ ಸುರನುತ ಪಲ್ಲವಾಧರ ವಿಶ್ವದೊಲ್ಲಭ ಶರಜ ನೀ ||ತೋರೋ 1 ತಾರಕನ ಸಂಹಾರಿ ಕಾರ್ತಿಕೇಯಾ ಶೂರಪದ್ಮನ ಅಸು ಹೀರಿದ ಶರಜ ನೀ ||ತೋರೋ2 ಕಂಬುಕಂಧರ ಭಕ್ತರ್ಗಿಂಬೀವ ಶರಜ ನೀ ||ತೋರೋ 3 ಯೋಗಿವಂದಿತ ರಾಗಾದಿ ವಿರಹಿತ ಆಗಮಜ್ಞನೆ ಗುಣಸಾಗರ ಶರಜ ನೀ ||ತೋರೋ 4 ವಾಸೀ ಪಾವಂಜೆ ಶೇಷ ಶಾಯಿಯ ಸಖ ದಾಸರ ಪೋಷ ಸರ್ವೇಶ ಶರಜ ನೀ ||ತೋರೊ 5
--------------
ಬೆಳ್ಳೆ ದಾಸಪ್ಪಯ್ಯ
ಬಾರೆ ಗೌರಿ ಪೂಜಿಸುವೆನು ಸಾರಸಾಂಬಕಿ ಸಾರುವೆ ಸಂಸಾರದಿ ಸುಖದೋರೆ ವಿಧುಮುಖಿ ಪ ಕುಸುಮ ಗಂಧ ಪರಿಮಳ ಚಂದದಿ ಸಮರ್ಪಿಸುವೆನು ಪುಷ್ಪಫಲಗಳ1 ಮಂಗಳೆಂದು ಪಾಡುತ ಬೆಳಗುವೆನು ಆರುತಿ ಮಂಗಳಗೌರಿಯೆ ಕೊಡು ಸೌಭಾಗ್ಯ ಸಂತತಿ2 ಮಂಗಳ ಪ್ರದಾತೆ ಗಿರಿಸಂಭೂತೆ ಸುರನುತೆ ಮಂಗಳಾಂಗಿ ಕುರು ಕರುಣಾಮಯಿ ನಮೋಸ್ತುತೆ 3 ನಿತ್ಯ ಮಾಡಿಸೆ ಪುತ್ರ ಪೌತ್ರಾದಿ ಸಂಪದವಿತ್ತು ರಕ್ಷಿಸೆ 4 ರತಿಯ ಪತಿಯ ಪಿತಗೆ ಸದಾಪ್ರತಿಮೆಯೆನಿಸುವ ಅತಿಥಿಗಳನು ಸೇವಿಸುವ ಸುಮತಿಯ ಕೊಡು ಜವ5 ಸಡಗರದಿ ನಿಮ್ಮಡಿಯ ಶೇವೆ ಬಿಡುದೆ ಮಾಡುವೆ ಮೃಡನ ರಾಣಿ ಕೊಡುವರಗಳ ಗಡನೆ ಬೇಡುವೆ 6 ಶರಣು ಜನರ ಪೊರೆವ ಕಾರ್ಪರ ನಾರಸಿಂಹನ ಚರಣ ಕಮಲಯುಗದಿ ಭಕುತಿ ಇರಲಿ ಅನುದಿನಾ 7
--------------
ಕಾರ್ಪರ ನರಹರಿದಾಸರು
ಬಿಜಯಂಗೈವುದು ಹಸೆಗೀಗಾ ಪ ಅಜಮುಖ ಸುರನುತೆ ಅಖಿಳಲೋಕೈಕ ಮಾತೆ ಅ.ಪ ಕೃಷ್ಣನ ಮೋಹದ ಪಟ್ಟದ ಜಾಯೆ ಅಷ್ಟ ಸೌಭಗ್ಯಗಳ ಅಮರರಿಗೀವಳೆ 1 ಶೃಂಗಾರ ಮಂಟಪದಿ ಅಂಗನೆಯರೆಲ್ಲರು ಸಂಗೀತವ ಪಾಡಿ ಸರಸದಲಿ ಮಂಗಳದೇವತೆ ಬಾರೆಂದು ಕರೆವರು 2 ಅರುಂಧತಿ ಶಚಿ ಮುಖರ್ನೆರದಿಹರು ಗುರುರಾಮವಿಠಲನ ತರುಣೀ ಮಣಿಯೆ ಬೇಗಾ 3
--------------
ಗುರುರಾಮವಿಠಲ
ಭಜರೆ ಮಾನಸ ದ್ವಿಜವರಗಮನಂ ಪ ದ್ವಿಜಕುಲ ತೋಷಣಂ ಗಜವರ ಪೋಷಣಂ ಅ.ಪ ವಿಜಯ ಸಾರಥಿಂ ಭಜಕೃಷ್ಣಮೂರುತಿಂ ಭಜಕಾಮರತರುಂ ಕುಜನಕುಠಾರಂ 1 ಹರಿಪದ ಸ್ಮರಣಂ ದುರಿತನಿವಾರಣಂ ಭವ ಮುಖಸುರನುತ ಚರಣಂ 2 ಜಲಧಿಜಾರಮಣಂ ಬಲಿಕೃತ ಕರುಣಂ ವಿಲಸತ್ಕಾರ್ಪರ ನಿಲಯ ನರಹರಿಂ 3
--------------
ಕಾರ್ಪರ ನರಹರಿದಾಸರು
ಭೂರಿ ನಿಗಮವ ಕದ್ದ ಚೋರದೈತ್ಯನ ಗೆದ್ದ ಸಾರ ವೇದಗಳ ವಿಧಿಗಿತ್ತ ಸಾರ ವೇದಗಳ ವಿಧಿಗಿತ್ತ ಮತ್ಸ್ಯಾವ- ತಾರಗಾರತಿಯ ಬೆಳಗಿರೆ 1 ವಾರಿಧಿ ಮಥನದಿ ನೀರೊಳು ಗಿರಿ ಮುಳುಗೆ ತೋರಿ ಬೆನ್ನಾಂತ ಸುರನುತ ತೋರಿ ಬೆನ್ನಾಂತ ಸುರನುತ ಕೂರ್ಮಾವ- ತಾರಗಾರತಿಯ ಬೆಳಗಿರೆ 2 ಧಾತ್ರಿಯ ಕದ್ದೊಯ್ದ ದೈತ್ಯನÀ ಮಡುಹಿದ ಎತ್ತಿ ದಾಡೆಯಲಿ ನೆಗಹಿದ ಎತ್ತಿ ದಾಡೆಯಲಿ ನೆಗಹಿದ ವರಾಹ- ಮೂರ್ತಿಗಾರತಿಯ ಬೆಳಗಿರೆ 3 ಕಡು ಬಾಲನ ನುಡಿಗೆ ಒಡೆದು ಕಂಬದೊಳುದಿಸಿ ಒಡಲ ಸೀಳಿದ ಹಿರಣ್ಯಕನ ಒಡಲ ಸೀಳಿದ ಹಿರಣ್ಯಕನ ನರಸಿಂಹ ಒಡೆಯಗಾರತಿಯ ಬೆಳಗಿರೆ 4 ಸೀಮಾಧಿಪತಿ ಬಲಿಯ ಭೂಮಿ ಮೂರಡಿ ಬೇಡಿ ಈ ಮೂರು ಜಗವ ಈರಡಿಯ ಈ ಮೂರು ಜಗವ ಈರಡಿ ಮಾಡಿ ಅಳೆದ ವಾಮನಗಾರತಿಯ ಬೆಳಗಿರೆ 5 ಅಂಬರಕೇಶನ್ನ ನಂಬಿದ ಕತ್ರಿಯರ ಸಂಭ್ರಮ ಕುಲವ ಸವರಿದ ಸಂಭ್ರಮ ಕುಲವ ಸವರಿದ ಪರಶುರಾ- ಮೆಂಬಗಾರತಿಯ ಬೆಳಗಿರೆ 6 ತಂದೆ ಕಳುಹಲು ವನಕೆ ಬಂದಲ್ಲಿ ಸೀತೆಯ ತಂದ ರಾವಣನ ತಲೆಹೊಯ್ದ ತಂದ ರಾವಣನ ತಲೆಹೊಯ್ದ ರಘುರಾಮ- ಚಂದ್ರಗಾರತಿಯ ಬೆಳಗಿರೆ 7 ಶಿಷ್ಟ ಯಮಳಾರ್ಜುನರಭೀಷ್ಟವ ಸಲಿಸಿದ ದುಷ್ಟ ಕಂಸನ್ನ ಕೆಡಹಿದ ದುಷ್ಟ ಕಂಸನ್ನ ಕೆಡಹಿದ ನಮ್ಮ ಶ್ರೀ ಕೃಷ್ಣಗಾರತಿಯ ಬೆಳಗಿರೆ 8 ರುದ್ರನ್ನ ತ್ರಿಪುರದೊಳಿದ್ದ ಸತಿಯರ ಬುದ್ಧಿ ಭೇದಮಾಡಿ ಕೆಡಿಸಿದ ಬುದ್ಧಿ ಭೇದಮಾಡಿ ಕೆಡಿಸಿ ಬತ್ತಲೆ ನಿಂದ ಬೌದ್ಧಗಾರತಿಯ ಬೆಳಗಿರೆ 9 ಪಾಪಿಜನ ಭಾರಕ್ಕೆ ಈ ಪೃಥ್ವಿ ಕುಸಿಯಲು ತಾ ಪಿಡಿದು ಖಡ್ಗ ತುರಗವ ತಾ ಪಿಡಿದು ಖಡ್ಗ ತುರಗವೇರಿದ ಕಲ್ಕಿ- ರೂಪಗಾರತಿಯ ಬೆಳಗಿರೆ 10 ಮುತ್ತೈದೆ ನಾರಿಯರು ಮುತ್ತಿನಾರತಿ ಮಾಡಿ ಹತ್ತವತಾರಿ ಹಯವದನ ಹತ್ತವತಾರಿ ಹಯವದನನ ಪಾಡುತ ಚಿತ್ರದಾರತಿಯ ಬೆಳಗಿರೆ 11
--------------
ವಾದಿರಾಜ
ಮಂಗಳಂ ನರಶಿಂಗ ಮೂರುತಿಗೆ ಲಕ್ಷ್ಮೀಸಮೇತಗೆ ವಿಹಂಗ ವಾಹನಗೆ ಅಂಗಜನಪಿತಗೆ ಅಂಗುಟದಿ ಗಂಗೆಯನು ಪಡೆದವಗೆ ಮಾ ತಂಗವರದಗೆ ಪ ವಾರಿಜಾಸನ ಮುಖ್ಯಸುರನುತಗೆ ಉ- ದಾರ ಚರಿತಗೆ ಸೇರಿದವರಘದೂರ ಮಾಡುವಗೆ ಕಾರ್ಪರ ಋಷಿಗೆ ಘೋರ ತಪಸಿಗೆ ಒಲಿದು ಬಂದವಗೆ ಅಶ್ವತ್ಥ ರೂಪಗೆ 1 ಕುಕ್ಷಿಯೊಳು ಜಗವಿಟ್ಟು ರಕ್ಷಿಪಗೆ ಕರುಣಾಕ- ಟಾಕ್ಷಗೆ ವಕ್ಷದೊಳು ಶ್ರೀ ವತ್ಸಲಾಂಛನಗೆ ದ್ರೌಪದಿ ದೇವಿಗೆ ಅಕ್ಷಯಾಂಬರವಿತ್ತು ಸಲಹಿದಗೆ ಲಕ್ಷ್ಮೀನೃಸಿಂಹಗೆ 2 ಕೃಷ್ಣವೇಣಿ ತಟವಿರಾಜಿತಗೆ ಸೃಷ್ಟ್ಯಾದಿ ಕರ್ತಗೆ ಶ್ರೇಷ್ಠತರು ಪಿಪ್ಪಲದಿ ಪ್ರಕಟಿತಗೆ ದುಷ್ಟನಿಗ್ರಹಗೆ ದ್ಯಷ್ಟ ಬಾಹುಗಳಿಂದ ಭಜಕರಿಗೆ ಇಷ್ಟಾರ್ಥಗರಿವಗೆ 3 ಹಿಂದೆ ಗೋರೂಪದಲಿ ಬಂದವಗೆ ಬಹುಸುಂದರಾಂಗಗೆ ವಂದಿಸುವೆ ಶೀ ವೇಂಕಟೇಶನಿಗೆ ಮಂದರೋದ್ಧರಗೆ ಭವ ಬಂಧ ಬಿಡಿಸುವಗೆ ಆನಂದವೀವಗೆ 4 ತರುಳ ಪ್ರಹ್ಲಾದನ್ನ ಕಾಯ್ದವಗೆ ಸುರಸಾರ್ವಭೌಮಗೆ ಶರಣು ಜನ ಮಂದಾರನೆನಿಸುವಗೆ ಭೂಸುರರ ಪೊರಿವಗೆ ಧರಣಿಯೊಳು ಕಾರ್ಪರ ಸುಮಂದಿರಗೆ ಶಿರಿನಾರಶಿಂಹಗೆ 5
--------------
ಕಾರ್ಪರ ನರಹರಿದಾಸರು
ಯಾಕೆ ದಯವುಬಾರದು ಗೋಪಾಲಕೃಷ್ಣಾ ಪ ಕರುಣನಾದ ದೇವ ಅ.ಪ ಬಿಡದಾನಂದಾದಿ ಇನ್ನು ಇಂದಿರೆ ರಮಣ 1 ನಿನ್ನ ಧ್ಯಾನಾವೇಗತಿ ಎನ್ನುತ ನೀ ಎಂದೆಂದಿಗಾಪ್ತನು ಛಲದಾನಿ ಇರುವದು ನಿನಗೆ ಎನ್ನ ದಿವ್ಯದಾನಿಗಳರಸ 2 ತ್ರಿಜಗವಂದಿತಧೊರಿಯೆ ಸದ್ಗುಣಶೀಲ ಸುಜನರ ಭಾಗ್ಯನಿಧಿಯೆ ಜಲದೊಳು ಯಿ ----- ಸುರನುತ-----ತ ಪರಾಕ್ರಮ 3
--------------
ಹೆನ್ನೆರಂಗದಾಸರು
ವಾಗ್ದೇವಿ ಭಾರತಿ ನೀಡೆನಗೆ ಸುಮತಿ ನಂದಸುತನ ಪದದಿ ಕೊಡು ರತಿ ಪ ಕಳೆದು ಮನದಿ- ಗರಿಯೆ ಬಂದು ಬೇಗ ಅ.ಪ ಇಂದು ಮೌಲಿ ಮುಖ್ಯ ಸುರಗಣ ವಂದಿತಳೆ ಎನ್ನ ಅನುದಿನ ನಂದ ಮುನಿಯ ಶಾಸ್ತ್ರವಚನ ಛಂದದಿಂದ ಪಠಣ ಶ್ರವಣಾನಂದವಾಗುವಂದದಿ ಗುರು ಗಂಧ ವಾಹನರಾಣಿ ನಿನಗೆ1 ಪೇಳಲಳವೆ ನಿಮ್ಮ ಮಹಿಮೆಯ ಕಾಲಭಿಮಾನಿ ಕೇಳುವೆ ಸುಜ್ಞಾನ ಭಕುತಿಯ ಕಾಲಕಾಲಗಳಲ್ಲಿ ಎನ್ನ ಶುಭ ಲೀಲೆಗಳನು ಪಾಡಿ ಪೊಗಳುವಂತೆ ಜನನಿ 2 ಚಾರು ಕೃಷ್ಣಾತೀರಸಂಸ್ಥಿತಾ ಉದಾರ ಚರಿತ ನೀರಜಾಸನಾದಿಸುರನುತಾÀ ಶೇರಿದ ಭಕುತರಿಗೆ ತ್ರಿದಶ ಭೂರುಹ ವೆಂದೆನಿಸಿದಂಥಾ ಪಾರ ಮಹಿಮ ಕಾರ್ಪರಸಿರಿ ನಾರಸಿಂಹನ ಸೊಸೆಯೆ ನಿನಗೆ 3
--------------
ಕಾರ್ಪರ ನರಹರಿದಾಸರು
ವಿಠಲಯ್ಯ ವಿಠಲಯ್ಯ ಪ ತಟಿತ್ಕೋಟಿನಿಭಕಾಯ ಜಗನ್ನಾಥ ವಿಠಲಯ್ಯಾ ಅ.ಪ. ಭಜಿಸುವೆ ನಿನ್ನನು ಅಜಭವ ಸುರನುತ ಭಜಕಾಮರತರು ಕುಜನ ಕುಠಾರಾ 1 ನೀ ಕರುಣಿಸದೆ ನಿರಾಕರಿಸಲು ಎನ್ನ ಸಾಕುವರಾರು ದಯಾಕರ ಮೂರುತಿ 2 ಶರಣಾಗತರನು ಪೊರೆವನೆಂಬ ತವ ಬಿರಿದು ಕಾಯೋ ಕರಿವರದ ಜಗನ್ನಾಥ 3
--------------
ಜಗನ್ನಾಥದಾಸರು