ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾವ ದೇವರು ನೀನೆ ಎನ್ನ ಕೈ ಪಿಡಿಯೋ ದೇವ ಹರಿ ತವಪಾದ ಮರೆಹೊಕ್ಕೆ ಕಾಯೊ ಪ ತರಳ ಪ್ರಹ್ಲಾದನಂ ಸಂಕಟದಿ ರಕ್ಷಿಸಿದಿ ಮರೆ ಬಿದ್ದ ಅಸುರನಿಗೆ ಸ್ಥಿರಪಟ್ಟ ಕೊಟ್ಟಿ ಕಂಟಕ ಭರದಿ ನೆರವಾಗಿ ತರಿದಯ್ಯ ತರುಣಿಯ ಮೊರೆ ಕೇಳಿ ಅಕ್ಷಯವನಿತ್ತಿ 1 ಶಿಲೆಯರೂಪದಿ ಬಿದ್ದ ಸತಿಯನುದ್ಧರಿಸಿದಿ ಕುಲಗೆಟ್ಟ ಅಜಮಿಳನ ಅಂತ್ಯದಲಿ ಕಾಯ್ದಿ ಒಲಿದು ನಭೋರಾಜನಂ ಶಾಪದಿಂದುಳಿಸಿದಿ ಅಳಿಯದ ಪದವಿ ನೀಡಿ ಧ್ರುವರಾಜನ್ಪೊರೆದಿ 2 ಭಕ್ತವತ್ಸಲನೆಂಬ ಬಿರುದಗಳ ಪೊತ್ತಿರುವಿ ಭಕ್ತನಿಗೆ ಬರುವ ನಿಖಿಲಾಪತ್ತುಗಳನು ಕತ್ತರಿಸಿ ಹಿತವಾದಭಕ್ತಿಯನು ಕರುಣಿಸಿ ನಿತ್ಯನಿರ್ಮಲಸುಖವ ನೀಡು ಶ್ರೀರಾಮ 3
--------------
ರಾಮದಾಸರು
ಕುಟಿಲವನು ಕಳಿಯೋ ನಿಟಿಲ ನಯನಾ ಪ ದುರ್ವಿಷಯ ಲಂಪಟದಿ ಮುಳಿಗಿ ಘನ ಸಂಕಟಕೆ ಒಳಗಾದೆನೊ ಪ್ರಭುವೇ ಅ.ಪ. ಪಂಚಭೇದ ಜ್ಞಾನವನು ಪಂಚವಿಧ ತೋರೆಂದು ಬಿನ್ನೈಪೆ ಮಂಚಪದಯೋಗ್ಯಾ ವೈರಾಗ್ಯ 1 ಕಾಮಿನಿಯಳಾ ಇಟಕೊಂಡು ಅನ್ಯಳ ಕಾಮಿಸುವುದುಚಿತವೇ ರಾಯಾ ಕಾಮರೂಪದಿಂದೆನ್ನ ಕಡೆಗೆತ್ತಿ ಕಾಯದಿರೆ ಕಾಮಹರನೆಂಬ ಬಿರುದ್ಯಾತಕೊಕಾಮಪಿತನೇ ಕೇಳು ಕಾಲಕಾಲಕೆ ನಿನ್ನ ಕಾಲಿಗೆರಗುವಂತೆ ಮಾಡಿ 2 ಬಿಲ್ವಭಜಕನೆ ಕೇಳು ಮತ್ತೊಂದು ನಾನೊಲ್ಲೆಶಪಥ ಪೂರ್ವಕ ಪೇಳ್ವೆ ಮಿಥ್ಯಮತವೊಲ್ಲೆನೊಒಲ್ಲದ ಸುರನಿಗೆ ಚೆಲ್ವಿಯಾಗಿತ್ತು ಕಂಗೆಡಿಸಿ ಉಳಿಸಿದೆ ಬಿಲ್ಲುಗಾರನೆ ಮಗನ ಕಾಳಗದಿ ಕೆಡಹಿ ತಂದೆ-ವರದಗೋಪಾಲವಿಠಲನ ನೋಡಿ ತೋರಿದೇ 3
--------------
ತಂದೆವರದಗೋಪಾಲವಿಠಲರು
ಇಂಥ ಹೆಣ್ಣನು ನಾನೆಲ್ಲಿ ಕಾಣೆನೊ |ಹೊಂಚತಾರಿ ಕಾಣಿರೊ ಪಸಂತತ ಸುರರಿಗೆ ಅಮೃತವನುಣಿಸಿದಪಂತಿಯೊಳಗೆ ಪರಪಂತಿಯ ಮಾಡಿದ ಅ.ಪಮಂದರಗಿರಿ ತಂದು ಸಿಂಧುವಿನೊಳಗಿಟ್ಟುಚೆಂದದಿಂದಲಿ ಕಡೆದಮೃತವ ತೆಗೆದು ||ಇಂದುಮುಖಿಯೆ ನೀ ಬಡಿಸೆಂದು ಕೊಟ್ಟರೆ |ದಂಧನೆಯನು ಮಾಡಿ ದೈತ್ಯರ ವಂಚಿಸಿದ 1ವಿಸುವಾಸದಿಂದಲಿ ಅಸುರಗೆ ವರವಿತ್ತು |ತ್ರಿಶುಲಧರನು ಓಡಿ ಬರುತಿರಲು ||ನಸುನಗುತಲಿ ಬಂದು ಭಸುಮಾಸುರನಿಗೆ |ವಿಷಯದಾಸೆಯ ತೋರಿ ಭಸುಮವ ಮಾಡಿದ 2ವಸುಧೆಯೊಳಗೆ ಹೆಣ್ಣು ಒಸಗೆಯಾಗದ ಮುನ್ನ |ಬಸುರಿಲ್ಲದೆ ಬೊಮ್ಮನ ಪಡೆದಿಹಳು ||ಕುಸುಮನಾಭ ನಮ್ಮ ಪುರಂದರವಿಠಲನ |ಪೆಸರ ಪೊತ್ತವಳು ಈ ಹೊಸ ಕನ್ನಿಕೆಯು 3
--------------
ಪುರಂದರದಾಸರು