ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಬ್ಬಬ್ಬ ಈ ವರನ ಅದ್ಭುತಾಕೃತಿ ನೋಡಿ ಉಬ್ಬುಸವು ಮಿಗಿಲಾಯ್ತು ಸಹಿಪೆನೆಂತು ಕೆಮ್ಮೀಸೆ ಕೆಂಗಣ್ಣು ಕೆಂಪಾದ ರೋಮಗಳು ಹೆಮ್ಮಾರಿಯಂದದೊಳು ಮೊರೆವಮಿಗಿಲು ಕೆನ್ನೀರು ಪಾನದಿಂದುನ್ಮತ್ತನಂದದಿಂ ಘನ್ನಘಾತಕನಾಗಿ ಮೆರೆವ ಬೀಗಿ ಕರುಳ ಮಾಲೆಯ ಧರಿಸಿ ಮೆರೆಯುತಿಹನೀ ಸಹಸಿ ತರತರದಿ ಸುರನರರು ನಡುಗುತಿಹರು ಸ್ತಂಭವಿದೆ ಜನ್ಮಸ್ಥಲವಾಯಿತಿವಗೆ ಕುಂಭಿಣೀಯಂಬರಕೆ ಮಧ್ಯದೊಳಗೆ ಸಂಭ್ರಮದಿ ನೆಲಸಿಹನೆ ಪಡಿಯಮೇಲೆ ನಂಬಿದೆನು ಶೇಷಗಿರಿವರನ ಲೀಲೆ
--------------
ನಂಜನಗೂಡು ತಿರುಮಲಾಂಬಾ
ಜಯ ಶರಣರ ಸುರಧೇನು ಜಯ ಜಯ ಸೀತಾರಮಣ ಪ ಸೊಕ್ಕಿದ ದೈತ್ಯರ ಬಾಧಿಗಾರದಿಹ ದೇವರ್ಕಳ ಮೊರೆಯನು ಕೇಳಿ ಮಿಕ್ಕನುಜರ ಕೂಡ ಬೆಳೆದು ಅಕ್ಕರದಲಿ ಕಾಯದು ಬರಲಿ ನಕ್ಕಿ ಕೈವಿಡಿದನೇ ಜಯತು 1 ಆಖರ ದೂಷಣರಳಿದು ತಾಕಪಿಕರಢಿಯನೆ ಕೂಡಿ ಬೇಕಾದ ಸ್ಥಿರಪದ ನೀಡಿ ಸಾಕೇತ ಪುರಾಧೀಶ ಜಯತು 2 ಲಲನೆ ದಾಮದಲಿ ಕುಳ್ಳಿರಲಿ ಬಲಕವಶಿಷ್ಠ ಭರತ ಶತೃಘ್ನ ಕೂಡೆ ನೆಲಿಛತ್ರ ವಿಡಯೆ ಲಕ್ಷ್ಮಣನು ಉಳಿದಸುರನರರು ಕುಳ್ಳಿರಲಿ ಬೆಳಗಿದಳಾರತಿ ಜಯತು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಳಿನನಾಭ ಸುಂದರ ಸುಗುಣಾಕರ ಕಮಲೇಶ ಜಗದೀಶ ಪ ಚಲಿಸಬಲ್ಲರೇ ನಿನ್ನ ಬಲವಿಲ್ಲದಿರಲು ಸಕಲ ಸುರನರರು ಅ.ಪ ಬ್ರಹ್ಮಾದಿಗಳು ನಿನ್ನ ಸಮ್ಮತಿಯಲಿ ಈ ಬ್ರಹ್ಮಾಂಡದಲಿ ತಮ್ಮ ಕರ್ಮರಚಿಸಿ ನಿನ್ನ ಮರ್ಮವನರಿಯಲು ತಮ್ಮ ಕಾಲವ ಕಳೆಯುವರು 1 ಅಜ್ಞಾನದೂರನೆ ಸುಜ್ಞಾನ ಮೂರುತಿ ಯಜ್ಞನಾಮಕ ಪರಮಾತ್ಮ ನಿನ್ನ ಜಿಜ್ಞಾಸದಿಂ ಸುಪ್ರಜ್ಞೆಯ ಪೊಂದದ ಅಜ್ಞಾನಿ ಇದನರಿಯುವನೇ 2 ಸರ್ವತ್ರ ವ್ಯಾಪ್ತನೆ ಸರ್ವಾಗಮಾರ್ಥನೆ ಸರ್ವ ಪ್ರೇರಕ ಸರ್ವೇಶ ಗರ್ವ ತೊರೆದು ನೀನೋರ್ವ ಸ್ವತಂತ್ರನೆಂ ದರಿವ ಜನಕೆ ಸುಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ವಾಯುದೇವರು - ಹನುಮಂತ ಎಂಥ ವೈರಾಗ್ಯ ಹನುಮಂತ ಎಂಥ ಸೌಭಾಗ್ಯ ಗುಣವಂತ ಪ ಸಂತತ ರಾಘವನಂಘ್ರಿ ಕಮಲದಲಿ ಅಂತರಂಗ ಭಕುತಿಯ ಬೇಡಿದೆಯೊ ಅ.ಪ ಆವರಿಹರು ನಿನ್ಹೊರತು ರಾಘವರ ಭಾವವರಿತು ಪ್ರತಿ ಕ್ಷಣಗಳಲಿ ಸೇವೆ ಸಲಿಸಿ ದಯ ಪಡೆಯಲು ಭೋಗವ ದಾವದನುಭವಿಸೆ ದುರ್ಲಭವು ಜೀವೋತ್ತಮನದ ಬಯಸದೆ ಏಕೋ ಭಾವದಿ ಪದಸೇವೆಯ ಕೇಳಿದ ವೀರ 1 ಜ್ಞಾನಪರಾಕ್ರಮ ಧ್ಯೆರ್ಯವೀರ್ಯಕಧಿ ಷ್ಠಾನ ಪವನಸುತ ಜಗತ್ರಾಣ ನೀನಲ್ಲದೆ ಖಗಮೃಗ ಸುರನರರುಗ ಳೇನು ಚಲಿಸಬಲ್ಲರೊ ಹನುಮ ಪ್ರಾಣಭಾವಿ ಚತುರಾನನ ಭುವಿಯೊಳ ಗೇನು ರುಚಿಯೊ ಕಲ್ಯಾಣಚರಿತ ನಿನಗೆ 2 ಕಪಿ ರೂಪದಿ ದಶಕಂಧರನ ಮಹಾ ಅಪರಾಧಕ್ಕೆ ಶಿಕ್ಷೆಯನಿತ್ತೆ ನೃಪರೂಪದಿ ದುರ್ಯೋಧನನಸುವನು ಅಪಹರಿಸಿದೆಯೋ ಬಲ ಭೀಮ ವಿಪುಲ ಪ್ರಮತಿ ವರವೈಷ್ಣವ ತತ್ವಗ ಳುಪದೇಶಿಸಿದ ಪ್ರಸನ್ನ ಯತಿವರೇಣ್ಯ3
--------------
ವಿದ್ಯಾಪ್ರಸನ್ನತೀರ್ಥರು
ಕೃಷ್ಣವೇಣಿ164ನಮೋ ನಮೋ ಕೃಷ್ಣವೇಣಿನಮೋ ನಮೋ ಕೃಷ್ಣವೇಣಿ ಕಲ್ಯಾಣಿ ಪ.ಈ ಜನ್ಮದಘವು ನಾನಾ ಜನ್ಮಕೃತದೋಷಆರ್ಜಿತವಾದ ಪಂಚ ಮಹಾಪಾಪವುತ್ರಿಜಗತ್ಪಾವನಿಯೆ ನಿನ್ನ ಕಂಡು ನಾ ಕಳೆದೆರಾಜಿಸುವ ದಿವ್ಯಗತಿಯೀಯೆ ಎನ್ನತಾಯೆ 1ವಿಪ್ರಮುನಿ ಸುರನರರು ಕನ್ಯಕ್ಕೆಗುರುಬರಲುಕ್ಷಿಪ್ರನೆರೆದರು ಉಭಯತೀರವಿಡಿದುಸುಪ್ರಾರ್ಥನೆಯ ಮಾಡಿ ಆನಂದದಿ ಹರಿಯನೆ ಪ್ರಸನ್ನೀಕರಿಸಿಕೊಳ್ಳುವರಮ್ಮ 2ನಿರ್ಮಳಾತ್ಮಕÉ ಗಂಗೆ ಸಂಗೆ ಗುಣೋತ್ತುಂಗೆಹಿಂಗಿಸು ಭವವ ಪಾವನತರಂಗೆಜಂಗಮ ಜಡಾತ್ಮರನುದ್ಧರಿಸುತಿಹೆ ಸದಾಮಂಗಳ ಶ್ರೀಪ್ರಸನ್ವೆಂಕಟನೊಲುಮೆಯಲ್ಲಿ 3
--------------
ಪ್ರಸನ್ನವೆಂಕಟದಾಸರು