ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಜಯತು ಜಾಹ್ನವಿಯೆ ಭಕ್ತ ಸಂಜೀವಿ ಜಯ ಮಂಗಳವನೀಯೆ ಜಯ ನಮ್ಮ ಕಾಯೆ ಪ ಕಮಲಜನು ಪಾತ್ರೆಯೊಳು ಧರಿಸಲಾ ಹರಿಪಾದ- ಕಮಲವನು ತೊಳೆಯಲಾವೇಗದಿಂದ ವಿಮಲ ಸಂಗತಿಯಿಂದ ಮಂದಾದಿನಿಯೆನಿಸಿ ಸುಮನ ಸಾವನಿಯಲ್ಲಿ ಮೆರೆದೆ ಸುರನದಿಯೆ1 ಧ್ರುವಲೋಕಕಿಳಿದು ಅಮರಾವತಿಯ ಸಾರಿದೆ ರವಿಯಂತೆ ಪೊಳೆಯುತ ಆ ಜನ ಮಧ್ಯದಿಂ ಭುವನದೊಳಗೀರೈದು ನೂರು ಯೋಜನದಗಲ ತವಕದಿಂದಲಿ ಧುಮುಕಿ ಚತುರ ಭಾಗವಾದೆ 2 ಶಿವನ ಮಸ್ತಕದಲ್ಲಿ ಶೋಭಿಸುವ ಮಹಮಹಿಮೆ ಭವದೊರೆ ಭಗೀರಥಗೆ ವಲಿದು ಬರುತ ಕವಿ ಜನ್ಹುಮುನಿಯಿಂದ ಪುಟ್ಟಿ ಹಿಮಗಿರಿ ದಾಟಿ ಜವನ ಭಗಿನಿಯ ಕೂಡಿ ಮಣಿಕರ್ಣಿಕೆಯ ನೆರದೆ 3 ಅಳಕನಂದನೆ ನಿನ್ನ ಸ್ಮರಣೆ ಮಾಡಿದ ಜನಕೆ ಕುಲಕೋಟಿ ಪಾವನವು ಸಂದೇಹವಿಲ್ಲ ಮಜ್ಜನ ಪಾನ ಮಾಡಿದಗೆ ಪೊಳೆಗೆ ವೈಕುಂಠಪುರ ಅವನ ಹೃದಯದಲಿ 4 ದೇಶದೇಶಗಳಿಂದ ಬಂದ ಸುಜನರ ಪಾಪ ನಾಶನವ ಮಾಳ್ಪ ನೀ ನಿಷ್ಕಾಮದಿ ಮಾಧವ ವಿಜಯವಿಠ್ಠಲನ ಸೋಸಿನಿಂದಲಿ ಪೊಗಳುತಿಹೆ ಸುವಿಖ್ಯಾತೆ 5
--------------
ವಿಜಯದಾಸ
ತಿಂಗಳಿಗೆ ತಿಂಗಳಿಗೆ ಬರುತಿಹ | ಪಿಂಗಳರ ನಾಮವನು ಬರೆವೆನು |ಇಂಗಿತಜÕರು ಕೇಳ್ವುದು ಉದಾಶನವ ಮಾಡದಲೆ ಪಧಾತ ಚೈತ್ರಕೆ ಆರ್ಯಮಾಯೆಂಬಾತ ವೈಶಾಖಕೆ ಸುಜೇಷ್ಠಕೆ |ನಾಥನೆನಿಸುವಮಿತ್ರಆಷಾಢಕ್ಕೆ ಬಹ ವರುಣ ||ಖ್ಯಾತನಾಗಿಹ ಶ್ರಾವಣಕೆಪುರುಹೂತಭಾದ್ರಪದಕೆ ವಿವಸ್ವಾನೆ |ಭೂತಿಯುತನಾಗಿರುವ ತ್ವಷ್ಟ್ರಾಶ್ವೀನ ಮಾಸದಲಿ 1ಹರಿದಿನಪ ಕಾರ್ತೀಕ ಮಾಸದಿ |ಇರುತಿಹನು ಮಾರ್ಗಶಿರದಿಸವಿತೃ|ವರದ ಭಗ ಪುಷ್ಯದಲಿ ಪೂಷಾ ಮಾಘಮಾಸದಲಿ ||ಸುರನದಿಯೆ ಮೊದಲಾಗಿಹ ಐ |ವರಿಗೆ ಸಮಪರ್ಜನ್ಯ ಫಾಲ್ಗುಣ |ಕರಿತು ಇಂತು ಯಥಾವಿಧಿಯೊಳಘ್ರ್ಯವನು ಕೊಟ್ಟು ಜಪವ 2ಮಾಡುತಿಹ ಧನ್ಯರಿಗೆ ಪಾಪಗ |ಳೋಡಿ ಸುತ ದಯದಿಂದ ಯೇನೇನೆ |ಬೇಡಿದಿಷ್ಟವ ಕೊಟ್ಟು ಕರ್ಮಕೆ ಸಾಕ್ಷಿ ತಾನಾಗಿ ||ಮಾಡುವನು ಸಂರಕ್ಷಣೆಯ ಒಡ | ನಾಡುವನುಬಿಡನೊಂದರೆಕ್ಷಣ |ಈಡುಇಲ್ಲದ ಮಹಿಮಶ್ರೀ ಪ್ರಾಣೇಶ ವಿಠಲನು 3
--------------
ಪ್ರಾಣೇಶದಾಸರು
ಭಾಗೀರಥಿ ದೇವಿ ನಮೋ ||ಭಾಗೀರಥಿ ದೇವಿ ಭಯ ನಿವಾರಣ ಗಂಗೆ |ಸಾಗರನರ್ಧಂಗೆ ಸುತರಂಗೆ ಪವಾಮನ ವಾಮ ಪಾದಾಂಗುಷ್ಟನಖಸೋಕಿ |ಆ ಮಹ ಬ್ರಹ್ಮಾಂಡ ಸೀಳಾಲೂ | ಭಾಗೀ..... ||ತಾಮರಸಜ ಲೋಕಕ್ಕಿಳಿದು ಮಜ್ಜನವಾಗಿ |ಸ್ವಾಮಿ ಪಾದೋದಕಳೆನಿಸಿದೆ || ಭಾಗೀ... 1ಹರಿಪಾದ ಜಲ ದೊರಕುವದು ದುರ್ಲಭವೆಂದು |ಹರ ಪ್ರಾರ್ಥಿಸಲು ಜಡೆಯೊಳು ನಿಂದೆ | ಭಾಗೀ.... ||ಮೊರೆಯಿಡೆ ದೇವತೆಗಳಿಗೆ ವೊಲಿದು ಬಂದು |ಸುರನದಿಯೆಂದು ಕರೆಸಿಕೊಂಡೇ | ಭಾಗೀ..... 2ಚನ್ನಾಗಿ ಸ್ವರ್ಗದೊಳಗೆ ನಿಂತ ಕಾರಣ |ಸ್ವರ್ನದಿಯೆಂದು ಕರೆಸಿದೆವ್ವ | ಭಾಗೀ.... ||ಉನ್ನತಧೃವಮಂಡಲಕ್ಕೆ ಪೋಗಿ ಮುಟ್ಟಿದೆ |ನಿನ್ನಾಕಾಶ ಗಂಗೆ ಎಂಬೋರೆ | ಭಾಗೀ..... 3ಭಗೀರಥ ಬಹುಕಾಲ ಪ್ರಾರ್ಥಿಸೆ ಕರುಣದಿಂ |ಜಿಗಳಿ ಹೇಮಾದ್ರಿಗೆ ನಡೆತಂದೆ | ಭಾಗೀ.... ||ಸೊಗಸಿಲಿಂ ತ್ರಿಪಥಾಗಿ ದಕ್ಷಿಣದಲಿ ಬಂದು |ಸಗರರಾಯನ ಉದ್ಧರಿಸಿದೇ | ಭಾಗೀ..... 4ತವಕದಿಂದಲ್ಲಿ ಜಹ್ನು ಋಷಿಯಲ್ಲಿ ಜನಿಸಿ ಜಾ |ಹ್ನವಿಯೆಂದು ಸ್ತುತಿಸೋರೆ ಸುರರೆಲ್ಲ | ಭಾಗೀ.... ||ಭುವನದೊಳೆಲ್ಲರು ಪುನೀತರಾಗೋದು ಸಿದ್ಧ |ತವಪಾದಸ್ಮøತಿಮಾತ್ರದಿಂದಲೀ | ಭಾಗೀ...... 5ನಂದಿನಿ ನಳಿನಿ ಸೀತಾ ಮಾಲತೀ ಮಲಹ |ಮಂದರಧರ ಪದಿ ಶ್ರೀಗಂಗೆ | ಭಾಗೀ...... ||ಸುಂದರ ತ್ರಿಪಥ ಭಾಗೀರಥಿ ಭೋಗವತಿ |ವಂದೆಜಾಹ್ನವಿತ್ರಿದಶೇಶ್ವರಿ | ಭಾಗೀ.... 6ವಸುಗಳ ಮಾತು ಲಾಲಿಸಿ ರಾಯನಲಿ ಬಂದು |ಬಸುರಿಂದ ಪಡೆದು ಉದ್ಧರಿಸಿದೆ | ಭಾಗೀ.... |ಅಸಹ್ಯ ಕರ್ಮವ್ಯಾಕೆಂದೆನಲು ಕುಮಾರನ |ಕೊಸರುತ ನಿಜರೂಪವೈದಿದೇ | ಭಾಗೀ.... 7ನಮೊ ನಮೊ ಶುಭಗಾತ್ರೆ ನಮೊ ನಮೋ ಸುಚರಿತ್ರೆ |ನಮೊ ನಮೊ ಶಂತನುವಿನ ಮಿತ್ರೆ | ಭಾಗೀ..... ||ಶಮದಮಾದಿಗಳಿತ್ತುಪೊರೆಅನುದಿನದಲ್ಲಿ |ಅಮರವಿನುತಪಾದಪಂಕಜೆ | ಭಾಗೀ.....8ಕಾಣಲು ಪಾಪಹರವು ಮುಕ್ತಿ ಅಹುದು |ಸ್ನಾನದ ಫಲವು ಬಲ್ಲವರಿಲ್ಲ | ಭಾಗೀ...... ||ಕ್ಷೋಣಿಯ ಮ್ಯಾಲುಳ್ಳ ಸರಿದ್ವರಳೆನಿಸುವೆ |ಪ್ರಾಣೇಶ ವಿಠಲನ್ನ ದಯದಿಂದ | ಭಾಗೀ..... 9
--------------
ಪ್ರಾಣೇಶದಾಸರು