ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಾಡಿಯೆತ್ತಲಿಂದ ಬಂದುದೆ ಮಾತ ನಾಡಲರಿಯದಿಪ್ಪ ಹೊಚ್ಚ ಹೊಸ ಹರೆಯದ ಮುಗುದೆಗೀ ಪ ಬಳುಕೆ ಸಿಂಹಮಧ್ಯ ಬಟ್ಟಮೊಲೆಗಳು ಮರೆ ತೋರವಾದ ಬಳವಿ ಮುಡಿಯೊಳಲರು ಹೊಯ್ಯನಿಳೆಯಲುದುರಲು ಜಲಜಮುಖದಿ ಬೆಮರುದೋರೆ ವಲಯಹಾರ ಉರದಿ ಘಲಿರು ಘಲಿರೆನೆ ಆವಕಡೆಯು ಕುಲುಕಿ ಕುಲುಕಿ ನಡೆವ ಈ 1 ಮಿಸುಪ ಮಂದಹಾಸ ಮುಖದಿ ಮಸಗಿದಂತ ಕಾಂತಲಜ್ಜೆ ಮುಸುಕೆ ಮಿಸುಪ ಕದಪಿನಲ್ಲಿ ಎಸೆವ ಓಲೆ ಢಾಳಿಸಿ ಸಸಿನೆ ತಿದ್ದಿ ಉರದಿ ಜರಿಯ ವಸನವನ್ನು ಸಂತವಿಸುತ ಕುಸುರಿಲಂಗ ದಂದವನ್ನು ಎಸಸಿ ಬಿಡುವ ನಡೆವ 2 ಕರವನೊಯ್ಯಗೊಲಿದು ಉರಗಗಿರಿಯ ಮೇಲೆ ಬಾಲಚಂದ್ರ ನಿರಲು ಸೆರಗ ಮರೆಯಮಾಡಿ ಮರಳಿ ಮರಳಿ ನೋಡುತಾ ಸ್ಮರನತಾತ ಸುರನಗರದೆರೆಯ ವೈಕುಂಠಲಕ್ಷ್ಮಿಯರಸನೊಡನೆ ನೆರೆದ ಪರಿಯ ಸಿರಿಯ ಗರುವ ಗಮನದಾ 3
--------------
ಬೇಲೂರು ವೈಕುಂಠದಾಸರು
ಗಾಡಿಯೆತ್ತಲಿಂದ ಬಂದುದೇ ಮಾತ ನಾಡಲರಿಯದಿಪ್ಪ ಹೊಚ್ಚಹೊಸ ಹರೆಯದ ಮುಗುದೆಗೀ ಪ ಬಳುಕೆ ಸಿಂಹಮಧ್ಯ ಬಟ್ಟ ಮೊಲೆಗಳದುರೆ ತೋರವಾದ ಬಳಲುಮುಡಿಯೊಳಲರು ಒಯ್ಯನಿಳೆಯೊಳುದುರಲೂ ಜಲಜಮುಖದಿ ಬೆವರುದೋರೆ ವಲಯತೋರಹಾರ ಉರದಿ ಘಲಿರು ಘಲಿರನುಲಿವ ಕುಲುಕಿ ಕುಲಕಿ ನಡೆವ ಯೀ 1 ಮಿಸುಪ ಮಂದಹಾಸ ಮುಖದಿ ಮಸಗಿದಂತ ಕಾಂತಿ ಲಜ್ಜೆ ಮುಸುಕೆ ಮಿಸುಪ ಕದಪಿನಲ್ಲಿ ಎಸೆವ ಓಲೆ ಢಾಳಿಸೆ ಸಸಿನೆ ತಿದ್ದಿ ಉರದಿ ಜರಿವ ವಸನವನ್ನು ಸಂತವಿಸುತ ಉಸುರಿಲಿಂದ ಗಂಧವನ್ನು ಎಸಸಿಬಿಡುವ ನಡೆವ ಯೀ 2 ಕರವನೊಯ್ಯನೊಲಿದು ರೋಜಗಿರಿಯ ಮೇಲೆ ಬಾಲಚಂದ್ರ ನಿರಲುಸೆರಗಮರೆಯಮಾಡಿ ಮರಳಿಮರಳಿನೋಡುತಾ ಸ್ಮರನತಾತ ಸುರನಗರ ದೆರೆಯ ಲಕ್ಷ್ಮಿಯರಸನೊಡನೆ ನೆರೆದಪರಿಯ ಸಿರಿಯ ಗರುವಗಮನದಾ ಯೀ 3
--------------
ಕವಿ ಲಕ್ಷ್ಮೀಶ
ಜಯ ಜಯ ಕೃಪಾಂಬುಧಿಯೆ ಜಯ ಸುಗುಣ ಶರನಿಧಿಯೆ ಜಯತು ಸಂಶ್ರುತನಿಧಿಯೆ ವಿಮಳ ಸುಧಿಯೇ ಪ ಜಯ ಸಮಸ್ತೋಪಧಿಯೆ ಜಯ ಸರ್ವಧೀಮತೆಯೇ ಜಯ ಜಯತು ಸಲಹೆನ್ನ ಸೌಭಾಗ್ಯ ನಿಧಿಯೆ ಅ.ಪ ನತ ನಿರ್ಜಿತ ವ್ರಾತೆ ರತಿಪತಿಪಿತ ಪ್ರೀತೆ ರತುನಕರ ಸಂಜಾತೆ ನುತಿಸಲೆನ್ನಳವೆ ನಿನ್ನನು ಲೋಕಮಾತೆ 1 ವಿಗಡವಿಶ್ರುತ ಮಾಯೆ ತ್ರಿಗುಣಾನ್ವಿತ ವಿದಾಯೆ ನಿಗಮ ನಿರುತೋಪಾಯೆ ನಿತ್ಯೆ ನಿರಪಾಯೆ ಜಗನ್ಮೋಹನೆ ಕಾಯೆ ಅಗಣಿತೋಪಮದಾಯೆ ಪೊಗಳಲೆನ್ನಳವೆ ನಿನ್ನನು ಲೋಕಮಾತೆ2 ಪರಮ ಶಕ್ತಿಗುಣಾಢ್ಯೆ ನಿರುತಾಗಮಾವೇದ್ಯೆ ಸ್ಮರನ ಪೆತ್ತತಿ ಚೋದ್ಯೆ ಸೌಖ್ಯ ಪ್ರದಾದ್ಯೆ ಸುರನಗರದಧಿನಾಥ ವರಲಕ್ಷ್ಮೀಕಾಂತನಾ ಅರಸಿ ಸಿರಿಮಾಲಕ್ಷ್ಮಿ ಭವರೋಗ ವೈದ್ಯೇ 3
--------------
ಕವಿ ಲಕ್ಷ್ಮೀಶ
ಬಂದಿದೆ ದೂರು ಬರಿದೆ ಪಾಂಡವರಿಗೆ ಪ ಕೊಂದವರಿವರು ಕೌರವರನೆಂಬಪಕೀರ್ತಿ ಅ ಮುನ್ನಿನ ವೈರದಿ ಕಡು ಸ್ನೇಹವ ಮಾಡಿಉನ್ನತ ಲೆತ್ತ ಪಗಡೆಯಾಡಿಸಿತನ್ನ ಕುಹಕದಿಂದ ಕುರುಬಲವ ಕೊಂದವನುಘನ್ನಘಾತಕ ಶಕುನಿಯೊ ಪಾಂಡವರೊ 1 ಮರಣ ತನ್ನಿಚ್ಛೆಯೊಳುಳ್ಳ ಗಾಂಗೇಯನುಧುರದೊಳು ಷಂಡನ ನೆಪದಿಂದಲಿಸರಳ ಮಂಚದ ಮೇಲೆ ಮಲಗಿ ಮೊಮ್ಮಗನಕೊರಳ ಕೊಯ್ದವನು ಭೀಷ್ಮನೊ ಪಾಂಡವರೊ 2 ಮಗನ ನೆಪದಿ ಕಾಳಗವ ಬಿಸುಟು ಸುರನಗರಿಗೈದಲು ವೈರಾಗ್ಯದಲಿಜಗವರಿಯಲು ಕುರುವಂಶಕ್ಕೆ ಕೇಡನುಬಗೆದು ಕೊಂದವನು ದ್ರೋಣನೊ ಪಾಂಡವರೊ3 ತೊಟ್ಟ ಬಾಣವ ತೊಡಲೊಲ್ಲದೆ ಮಾತೆಗೆಕೊಟ್ಟ ಭಾಷೆಗೆ ಐವರ ಕೊಲ್ಲದೆನೆಟ್ಟನೆ ರಣಮುಖದಲಿ ತನ್ನ ಪ್ರಾಣವಬಿಟ್ಟು ಕೊಂದವನು ಕರ್ಣನೊ ಪಾಂಡವರೊ 4 ಮಥನಿಸಿ ಸೂತತನವ ಮಾಡಿ ರಣದೊಳುಅತಿಹೀನಗಳೆಯುತ ರವಿಸುತನರಥದಿಂದಿಳಿದು ಪೋಗಿ ಕೌರವಬಲವನುಹತ ಮಾಡಿದವನು ಶಲ್ಯನೊ ಪಾಂಡವರೊ 5 ಜಲದೊಳು ಮುಳುಗಿ ತಪವ ಮಾಡಿ ಬಲವನುಛಲದಿಂದೆಬ್ಬಿಸಿ ಕಾದುವೆನೆನುತಕಲಿ ಭೀಮಸೇನನ ನುಡಿಗೇಳಿ ಹೊರವಂಟುಕುಲವ ಕೊಂದವನು ಕೌರವನೊ ಪಾಂಡವರೊ6 ಕವುರವ ಪಾಂಡವರಿಗೆ ಭೇದ ಪುಟ್ಟಿಸಿಪವುಜೊಡ್ಡಿ ಕುರುಕ್ಷೇತ್ರದಿ ಕಾದಿಸಿಸವುಶಯವಿಲ್ಲದೆ ಕುರುಬಲವ ಕೊಂದವನುಹಿವುಸಕನಾದಿಕೇಶವನೊ ಪಾಂಡವರೊ 7
--------------
ಕನಕದಾಸ
ಮೃಗಮೋಹಿನಿಯೊಡನೇಕೋ ಪಂಥ ಪ ಕಾಂತ ಸಿರಿಕಾಂತ ಸುರನಗರಾಧಿಪ ಅ- ನಂತ ಗುಣವಂತ ದೇವಾ ಎನ್ನ ಸಲಹೊ ಅ.ಪ ಸುಲಲಿತ ಲತಾಂಗಿ ನಿನ್ನೊಲುಮೆಯಲ್ಲಿ ನೆರೆಹೊಂಗಿ- ಸಲೆ ಮನವ ಮಾಡಿ| ನಿನ್ನಗಲಿ ಬಾಯಾರಿ ಬಲು ವಿರಹದಾಸರಿನ ಬೇಸರಿನಲ್ಲಿ ಯಿಂ_ ತಳಿದವಳ ಕಾಯೊ ಸಿರಿಧಾಮ ಗುಣಧಾಮ 1 ಕಳಕಳಿಪ ನೋಟ ಕಾತರಿಪ ವಿರಹದ ಹೂಟ ಅಳಲು ಮನ ಅಳಿನಿದ್ರೆ ನಿನಗಾಲಯ ಮುದ್ರೆ ಅಳಿದುಳಿಸು ಲಜ್ಜೆಗೇಡುಗಳ ಪಾಡುಗಳ ಇಂ- ತುಳಿದವಳ ಕಾಯೊ ಸಿರಿಧಾಮ ಗುಣಧಾಮ 2 ಮೂರಾರವಸ್ಥೆಗಳ ನೀರಿಕಡೆಯನವಸ್ಥೆ ಮಾತಿರುವಳೆ ಬಾಲೆ ನಿನಗೆದ್ದ ಮೇಲೆ ನಾರಿಯೆಡೆಗೈದರಲೆಗಲಿಪ್ಪಿ ಬಿಗಿದಪ್ಪಿ ಸೊಗಸೇ ತೋರಿಸಿದನಮರ ಪುರಿಪಾಲ ಸಿರಿಲೋಲ 3
--------------
ಕವಿ ಲಕ್ಷ್ಮೀಶ