ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ನಂಬಿದ ನರಗೆ ಅನ್ಯರಾಶ್ರಯವೇಕೋಚನ್ನ ಗುರು ವಿಜಯರಾಯ ||ಬನ್ನ ಬಡುವೆನೊ ಜೀಯ ಘನ್ನ ಭವದೊಳು ಶಿಲ್ಕಿಇನ್ನು ಕಡೆಗ್ಹಾಕೋ ಬ್ಯಾಗ ಈಗ ಪ ಸುರನದಿ ನರನ ಸುತ್ತ ಪರಿಯಲು ನೀರಿಗಾರ್ತನಾಗುವುದುಚಿತವೆ ||ಮತ್ತೆ ಸುರಧೇನುವಿನ ಹತ್ತಿಲಿರುವ ಯಿನ್ನುಹಸ್ತು ಬಳಲುವುದುಚಿತವೆ ||ನಿತ್ಯ ಸುಖದಾರಿ ವಿಚಿತ್ರ ನೀ ತೋರೆ ನಾಹಸ್ತ ನರಗೊಡ್ಡುವುದು ಯತ್ನ ಉಚಿತವೆ ಗುರುವೆ 1 ಕ್ಷೀರವಾರಿಧಿ ಸೇರಿ ನೀರ ಮಜ್ಜಿಗೆಗಾಗಿಚೀರಿ ವರಲುವುದುಚಿತವೆ ||ನೂರಾರು ವಸನದ ಹೇರು ಮನೆಯೊಳಗಿರಲುಕೋರಿ ವುಡುವುದು ವುಚಿತವೆ ||*ವಾರವಾರಕೆ ಹರಿಯ ತೋರುವರನ ಬಿಟ್ಟುಕ್ರೂರ ವನ ಸೇವಿಸುವ ದಾರಿಗುಚಿತವೊ ಗುರುವೆ 2 ಸಾಕಿ ಸಲಹೆಂದು ಅತಿ ವ್ಯಾಕುಲದಿ ಬಂದವನನೂಕಿ ಬಿಡುವುದುಚಿತವೆ ||ಬೇಕಾದ ವರವು ನೀ ಲೋಕರಿಗೆ ಕೊಡುವೆನ್ನಕಾಕುಗೊಳಿಸವುದುಚಿತವೆ ||ಏಕ ಬುದ್ಧಿಯಿನಿತ್ತು ಜೋಕೆ ಮಾಡೆ ಮನ-ನೇಕ ಮಾಡುವದುಚಿತವೆ ||ಶ್ರೀಕಾಂತ ವೇಣುಗೋಪಾಲ ವಿಠಲ ನಿನ್ನವಾಕು ಮನ್ನಿಸಲು ನಾ ಕೆಡುವದುಚಿತವೆ ಗುರುವೆ 3
--------------
ವೇಣುಗೋಪಾಲದಾಸರು
ಯತಿವರ ನಿಮ್ಮನು ಸ್ತುತಿಪ ಜನರು ದಿವ್ಯ ಗತಿಯನು ಪೊಂದುವರು ರಾಘವೇಂದ್ರ ಪ ಕ್ಷಿತಿಯೊಳಗೆ ದಶಪ್ರಮತಿಗಳ ಸುಖಕರ ಮತದ ಪರಮ ಸಂಗತಿಗಳ ಹರಡಿದ ಅ.ಪ ಜಯ ಮುನಿಗಳವರ ಗ್ರಂಥಗಳಿಗೆ ಸುಖಮಯ ಟಿಪ್ಪಣಿಗಳನು ರಚಿಸಿ ಚಿನ್ ಮಯ ರಾಮರ ಸೇವೆಯ ಸಂತಸದಲಿ ಗೈದು ಸುಮಂತ್ರಾಲಯದಲಿ ನೆಲೆಸಿದ 1 ಮಂಗಳಕರವಾದ ತುಂಗಾನದಿಯ ತರಂಗಗಳಲಿ ಮಿಂದು ನಿಮ್ಮನು ನಿಸ್ಸಂಗರಾದ ಸಾಧು ಸಂಘವ ಪೊರೆಯುವ 2 ಪರಿಪರಿಯಲಿ ನಿಮ್ಮ ನಮಿಪ ಸೇವಕರಿಗೆ ಸುರಧೇನುವಿನಂತೆ ಸಂತತ ಹರುಷದಿಂದಲಿ ನಿಮ್ಮ ಭಜಿಪ ಸುಜನರಿಗೆ ಸುರತರುವಂತೆ ಪ್ರಸನ್ನರಾಗುವಂಥ 3
--------------
ವಿದ್ಯಾಪ್ರಸನ್ನತೀರ್ಥರು