ಒಟ್ಟು 4 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾವಮಾನಿಯೇ ಪಾಲಿಸೋ ಕರಪಿಡಿದುದ್ಧರಿಸೋ ಸೇವಕರೊಳಗಾಡಿಸೋ ಪ ಶೇವಿಸುವವರಿಗೆ ದೇವತರುವೆನಿಸಿ ಭೂವಲಯದಿ ಶು¨sಛಾವಣಿ ನಿಲಯ ಅ.ಪ ಜೀವೋತ್ತುಮಾನೀನೆನ್ನುತ ಹೇ ಪ್ರಾಣನಾಥ ಭಾವಿಸುವೆನೊ ಸಂತತ ಪಾವನ ಚರಿತ ಕೃಪಾವಲೋಕನದಿ ಪಾವನ ಮಾಡೈ ಭಾವಿ ವಿಧಾತ 1 ತುಂಗತರಂಗದುದಧಿ ಲಂಘಿಸುತ ಮುದದಿ ಅಂಗನೆ ಸೀತೆ ಕರದಿ ಉಂಗುರವ ಕೊಡುತ ಮಂಗಳಾಂಗ ರಘು ಪುಂಗವಗೆರಗಿ ಸುಸಂಗತಿ ತಿಳಿಸಿದ 2 ಇಂದು ಕುಲದಿ ಜನಿಸಿ ರಿಪುವೃಂದವ ಮಥಿüಸಿ ಇಂದ್ರಜನಣ್ಣನೆನಿಸಿ ಅಂದು ರಣದಿ ಕುರು ವೃಂದವ ಮಥಿಶ್ಯಾ ನಂದ ಕಂದ ಮುಕ್ಕುಂದನ ನೊಲಿಸಿದ 3 ಮೇದಿನಿಯೊಳು ಜನಿಸಿ ಮೋದಮುನಿಯೆನಿಸಿ ಭೇದಮತವ ಸ್ಥಾಪಿಸಿ ವಾದಿಗಳನು ನಿರ್ವಾದಗೈಸುತಲಿ ಸಾಧು ಜನಕೆ ಬಲು ಮೋದವಗರೆದ 4 ಪುರಮರ್ದನಾದಿ ಸುರವರ ನಿರುತ ಸೇವಿಪರ ತಿಮಿರ ಭಾಸ್ಕರ ಶರಣು ಜನಕೆ ಸುರತರುವೆಂದೆನಿಸಿದ ಸಿರಿ ಕಾರ್ಪರ ನರಹರಿ ಗತಿಪ್ರೀಯ 5
--------------
ಕಾರ್ಪರ ನರಹರಿದಾಸರು
ಮಂಗಲ ಮಾನವಿ ನಿಲಯ ಕವಿಗೇಯ ಗುರುರಾಯ ಗುರುರಾಯ ಪಿಡಿಕೈಯಾ ಪ ಪರಮ ಕರುಣದಲಿ ವಿರಚಿತ ಶ್ರೀ ಮ- ದ್ಹರಿಯ ಕಥಾಮೃತ ಗ್ರಂಥ ಶುಭ್ರ ಚರಿತ ಜಗನ್ನಾಥ ಜಗನ್ನಾಥ ಪ್ರಖ್ಯಾತ1 ಮೇದಿನಿ ಸುರರಿಗೆ ಮೋದಮುನಿ ಮತದ ಭೇದ ಪಂಚಕ ಸುಬೋಧ ಪ್ರದರಾದ ಸ- ಮೋದ 2 ಶರಣು ಜನಕೆ ಸುರತರುವೆಂದೆನಿಸಿದ ಸಿರಿಕಾರ್ಪರ ಶುಭನಿಲಯ ನರಹರಿಯ ಸುಪ್ರೀಯ ಸುಪ್ರೀಯ ದಾಸಾರ್ಯ 3
--------------
ಕಾರ್ಪರ ನರಹರಿದಾಸರು
ಮಂಗಳ ಜಯ ಮಂಗಳ ಮಂಗಳ ಶ್ರೀ ನರಸಿಂಗ ಮೂರುತಿಗೆ ಪ ಅಂಗುಟಾಗ್ರದಿ ಗಂಗೆಯ ಪಡೆದ ಗಾತ್ರ ಶ್ರೀ ರಂಗನಿಗೆ ಅಂಗಜರಿಪು ಧನು ಭಂಗವ ಮಾಡಿ ಸೀ- ತಾಂಗನೆಯಳ ಕರಪಿಡಿದವಗೆ 1 ವರಮತ್ಸ್ಯಗೆ ಗಿರಿಧರ ಕ್ರೋಢಗೆ ತರುಳನ ರಕ್ಷಿಸಿ ಧರೆಯ ಬೇಡಿದಗೆ ಪರಶು ಧರಿಸಿದ ರಾಮಕೃಷ್ಣಗೆ ಧರಿಸದೆ ವಸನವ ತುರಗನೇರಿದಗೆ 2 ಕರಿವರ ಕರೆಯಲು ಭರದಿ ಬಂದವಗೆ ಸ್ಮರಿಪರ ಭಯ ಪರಿಹರಿಸುವ ದೇವಗೆ ಶರಣು ಜನಕೆ ಸುರತರುವೆಂದೆನಿಸಿದ ಸಿರಿ ಕಾರ್ಪರ ನರಹರಿ ರೂಪಗೆ 3
--------------
ಕಾರ್ಪರ ನರಹರಿದಾಸರು
ವರ ಹಳ್ಳೇರಾಯಾ ಮಾಂಪಾಲಯ ಪ ಕರ ಮುಗಿವೆನು ದುಮ್ಮದ್ರಿನಿಲಯ ಅ.ಪ ತರಣಿ ಕುಲತಿಲಕ ಸಿರಿರಾಮನ ಪದ ಸರಸಿಜ ಮಧುಕರ ಸುರಗಣ ಸೇವ್ಯಾ 1 ಸೋಮ ಕುಲಜ ಬಲರಾಮನನುಜನ ಪ್ರೇಮಪಾತ್ರ ಬಲಭೀಮನೆ ಕೃಪಯಾ2 ಸಿರಿಕೃಷ್ಣನೆ ಪರತರನೆಂದರುಹಲು ವಿರಚಿತ ಶಾಸ್ತ್ರ ಶ್ರೀ ಗುರು ಮಧ್ವಾರ್ಯ 3 ಯವನ ಕುಲದಿ ಭಜಿಸುವರಿಗೊಲಿದೆಯಾ ಅವನಿಸುರಾರ್ಚಿತ ಶ್ರೀ ಪವಮಾನತನಯಾ4 ಶರಣು ಜನಕೆ ಸುರತರುವೆಂದೆನಿಸಿದ ಸಿರಿಕಾರ್ಪರ ನÀರಹರಿಗತಿ ಪ್ರೀಯಾ 5
--------------
ಕಾರ್ಪರ ನರಹರಿದಾಸರು