ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಜವದನೆ ಸುರರಾಜನ ಪುರದೊಳುರಾಜಿಸುತಿಹ ಕುಜವ ಪ ರಾಜೀವ ಮುಖಿಯೆನಿಸುವ ಸಖಿಗೊಲಿದಿತ್ತರಾಜನ ತೋರೆನಗೆ ಅ ನೆತ್ತಿಯಿಂದಿಳಿದಳ ಹೆತ್ತ ಮಗನ ಮೊಮ್ಮನೆತ್ತಿದಾತನ ಪಿತನ ತುತ್ತು ಮಾಡುವನ ವೈರಿಯನೇರಿ ಜಗವನು ಸುತ್ತು ಬರುತಲಿಪ್ಪನಕತ್ತಲೆಯೊಳು ಕಾದಿ ಅಳಿದಯ್ಯನ ಶಿರವಕತ್ತರಿಸಿದ ಧೀರನಸತ್ತ ಮಗನ ತಂದಿತ್ತವನನು ಎ-ನ್ನೊತ್ತಿಗೆ ಕರೆದು ತಾರೆ 1 ವರುಷವೈದರ ಪೆಸರವನ ತಾಯನುಜನಧರಿಸಿದಾತನ ಸಖನಧುರದೊಳು ತನಗೆ ಬೆಂಬಲ ಮಾಡಿಕೊಂಡು ಭೂವರಗೆ ತಾನೊಲಿದವನಸುರಗಿರಿಯನು ಸುತ್ತಿ ಬಾಹನ ಸುತನ ಕೈಯಲಿಹರಸಿ ದಾನವ ಕೊಂಡನಧರಣಿಜಾತನ ಶಿರವರಿದು ನಾರಿಯರನುಪುರಕೆ ತಂದವನ ತೋರೆ 2 ಹನ್ನೆರಡನೆಯ ತಾರೆಯ ಪೆಸರಾಕೆಯಕನ್ನೆಯಯ್ಯನ ಮನೆಯತನ್ನ ತಾ ಮರೆ ಮಾಡಿಕೊಂಡಿಪ್ಪರಸಿಯಬಣ್ಣವ ಕಾಯ್ದಿಹನಪನ್ನಗಶಯನ ಬೇಲಾಪುರದರಸನುತನ್ನ ನೆನೆವ ಭಕ್ತನಮನ್ನಿಸಿ ಕಾಯುವ ಚೆನ್ನಾದಿಕೇಶವ ಪ್ರ-ಸನ್ನನ ತೋರೆನಗೆ 3
--------------
ಕನಕದಾಸ
ಸಂಪ್ರದಾಯದ ಹಾಡುಗಳು ಅವಳೊಡನೆ ಮುನಿವ ಬಗೆಯೇನೋ ಪೇಳೋ ಪ ಸಿರಿಮುಡಿಗೆ ಸಂಪಿಗೆಯ ಕೊರಳ್ಗೆ ಕಸ್ತೂರಿಯನುವರಫಾಲದೆಡೆಗೆ ಕುಂಕುಮ ರೇಖೆಯಧರಿಸಿ ಪಾಟೀರ ಕರ್ದಮವನಂಗಕೆ ತಿವುರಿಕರದಿ ವೀಣೆಯ ಪಿಡಿದು ನಲಿದು ಪಾಡುವಳು1 ವರರತ್ನ ಕಂಕಣವು ಬಾಹು ಭೂಷಣವಾಯ್ತುಮಿರುಪಮುದ್ರಿಕೆ ಸ್ವರ್ಣ ಕಟಕವಾಯ್ತುಕರದ ಕೊನೆಯೊಳಗೆ ದೋರೆಯವನಿಟ್ಟಳು ತನ್ನಬೆರಳ್ಗೆ ವೈಢೂರ್ಯದುಂಗುರವ ಧರಿಸಿದಳು 2 ಸುರರ ದಾನವರ ತೌರವರನಾಕಾಶವನುಉರಗತತಿಯನು ಕುಂಭಸಂಭವನನು ಹರನಹರಸುತರ ಸುರಗಿರಿಯ ಕೋಪಿಸಿ ಕೆಳದಿಪುರದ ರಾಮೇಶ ನಿನ್ನ ಬರವ ಹಾರೈಸುವಳು 3
--------------
ಕೆಳದಿ ವೆಂಕಣ್ಣ ಕವಿ
ಹದಿನಾಲ್ಕು ಲೋಕವನಾಳುವ ತಂದೆಗೆ | ಮುದದಿಂದ ನಾನೊಬ್ಬ ಭಾರವಾದೆನೆ ಪ ಸುರಗಿರಿಯು ಶರಧಿಯೊಳು ಕಡೆವಾಗ ಮುಣಗಲಾ || ಭರದಿಂದ ಪೋಗಿ ಚೆನ್ನಾಂತು ಪೊತ್ತೆ || ಧರಣಿಯು ಮೊರೆಯಿಡಲು ತೆರಳಲ್ಲಿ ಬಂದು | ಭೂತರುಣಿಯನು ಸೆರೆಬಡಿಸಿ ಉಳುಹಿಕೊಳ್ಳಲಿಲ್ಲವೆ 1 ಸುರಪತಿ ಮುನಿದೇಳು ಹಗಲಿರುಳು ಮಳೆಗರೆಯೆ | ಬೆರಳಲಿ ಧರಿಸಿ ಕಾಯ್ದು ನಿಜದೆ || ವರಮುನಿ ಪಸವನು ಬೇಡಲಾಗಿ ಬೆದರಿ ನರ- | ನರಸಿ ನಿನ್ನ ಕರೆಯೆ ಕರುಣದಲಿ ಪಾಲಿಸಿದೆ 2 ಜಲಜಾಕ್ಷ ಬೆಟ್ಟವನು ಪೊತ್ತು ಬಳಲಿದಾಗ | ಸಲಹಬೇಕೆಂದು ಬೇಸರಿಸಲಿಲ್ಲಾ || ಸುಲಭದಲಿ ಶೇಷಾಚಲನಾಗಿಪ್ಪ | ಒಲಿದೆನ್ನ ಸಂರಕ್ಷಿಸೊ ವಿಜಯವಿಠ್ಠಲನೆ 3
--------------
ವಿಜಯದಾಸ