ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋ ಜೋ ಎನ್ನಿ ನಿರ್ವಿಕಾರಿಯಜೋ ಎಂದು ತೂಗಿರಿ ಬ್ರಹ್ಮಾಸ್ತ್ರ ದೊರೆಯ ಪ ವಾದಾತೀತಳಿಗೆ ಹೃದಯ ತೊಟ್ಟಿಲ ಮಾಡಿವೇದ ನಾಲಕು ಎಂಬ ನೇಣನೆ ಹೂಡಿಸಾಧನ ಚತುಷ್ಪಯ ಹಾಸಿಗೆ ಹಾಸಿಬೋಧಾನಂದಳನು ಭಾವದಿ ತಂದು ನೋಡಿ 1 ಶುದ್ಧದ ಚವುರಿ ಸಡಿಲಿಸಿ ಮಗ್ಗುಲಲಿ ಶಾಂತರಸ ದೀಪಗಳ ಹಚ್ಚಿಹೊಡೆಯುತಿಹ ಭೇರಿಗಳ ಘಂಟಾರವ ಹೆಚ್ಚೆಎಡೆಬಿಡದೆ ಓಂಕಾರ ಮಂತ್ರ ಘೋಷಣವು ಮುಚ್ಚಿಕಿಡಿ ನಯನೆಯಳನು ನೋಡಿ ಹರುಷ ತುಂಬೇರಿ 2 ಹಿರಿದಾ ಖಡ್ಗದ ಹಲಗೆ ಬಲ ಭಾಗದಲಿಟ್ಟುಶರಶಾಙರ್É ಬತ್ತಳಿಕೆ ಎಡಭಾಗದಲ್ಲಿಟ್ಟು ದುಷ್ಟ ಶತ್ರುಗಳ ಕಾಲದೆಸೆಗಿಟ್ಟುಪರಮಾಮೃತ ಪಾನ ಪಾತ್ರೆ ತುಂಬಿಟ್ಟು 3 ಜೋ ಜೋ ಶತ್ರು ಸ್ತಂಭಿನಿ ಎನ್ನಿರಿ ನರರೆಲ್ಲಜೋ ಜೋ ಗತಿಮತಿ ಸ್ತಂಭಿನಿ ಎನ್ನಿರಿ ಸುರರೆಲ್ಲಜೋ ಜೋ ಜಿಹ್ವಾ ಸ್ತಂಭಿನಿ ಎನ್ನಿರಿ ಹರರೆಲ್ಲಜೋ ಜೋ ಸ್ತಂಭಿನಿ ಎನ್ನಿರಿ ಧರೆಯೆಲ್ಲ 4 ಜೋ ಜೋ ಸುರಗಿರಿ ಧೈರ್ಯದಾಯಿನಿ ಜೋ ಜೋಜೋ ಜೋ ಹರಿ ಸಮ ಭಾಗ್ಯವೀವಳೆ ಜೋ ಜೋಜೋ ಜೋ ಶಿವ ಸಮ ಸತ್ವವೀವಳೆ ಜೋ ಜೋಜೋ ಜೋ ನಂಬಿದ ರಾಜ್ಯವೀವಳೆ ಜೋ ಜೋ 5 ಭಕ್ತರಭಿಮಾನಿ ಭಕ್ತಮಾತೃಕೆ ಜೋ ಜೋಭಕ್ತವತ್ಸಲೆ ಭಕ್ತ ಕರುಣಾಳು ಜೋ ಜೋಭಕ್ತ ಜೀವನಿ ಭಕ್ತ ಬಂಧುವೆ ಜೋ ಜೋಭಕ್ತ ಚಿಂತಾಮಣಿ ಭಾಗ್ಯಳೇ ಜೋ ಜೋ 6 ಯೋಗಾರೂಢಕೆ ಏಕಾಕ್ಷರಿ ಜೋ ಜೋಯೋಗಿ ಹೃದ್ವಾಸಿನಿ ಯೋಗ್ಯಳೇ ಜೋಜೋಯೋಗಿ ಬೃಹತ್ಯಾಗಿ ವಿರಾಗಿ ಜೋಜೋಯೋಗಿಗಳ ಭಂಡಾರಿ ಯೋಗೀಳೆ ಜೋಜೋ 7 ಚಿದಬಿಂದುಗಳೆಂಬ ಮಂತ್ರ ಪುಷ್ಪ ಚೆಲ್ಲಿಚೆದುರೆಯರು ಮಂಗಳಾರತಿ ಬೆಳಗುತಿಲ್ಲಿಸದಮಳೆ ನೀ ಮಲಗು ಯೋಗ ನಿದ್ರೆಯಲಿಚಿದಾನಂದ ತಾನಾದ ಬಗಳಾಂಬೆ ಸುಖದಲಿ 8
--------------
ಚಿದಾನಂದ ಅವಧೂತರು
ಪಾಲಿಸೆನ್ನನು ಪದ್ಮಪತ್ರ ವಿಶಾಲಲೋಚನೆ ಜಾಹ್ನವಿಶೈಲಜಾತಾಭಗಿನಿಮಂಗಳೆ ಮೂಲಮಂತ್ರ ಸ್ವರೂಪಿಣಿ ಪ ಹರನ ಜಡೆಯಿಂದಿಳಿದು ಬ್ರಹ್ಮನ ಕರದ ಪಾತ್ರೆಯೊಳ್ನೆಲೆಸಿದೆಸುರರ ಸಂರಕ್ಷಿಸಲು ಭರದಿಂ ಸ್ವರ್ಗಲೋಕವ ಸಾರಿದೆಧರೆಯ ಭಾರವ ತೊಳೆಯಲಲ್ಲಿಂ ಭರದಿ ಸುರಗಿರಿಗೈದಿದೆಹರುಷದಲಿ ಹಿಮಗಿರಿಯ ಶೃಂಗದಿ ಪರಿದು ಪಾವನ ಮಾಡಿದೆ1 ವರ ಭಗೀರಥ ತರಲು ಕಾಶಿಯ ಪುರವರದಿ ನೀ ನೆಲಸಿದೆಥರಥರದ ಪ್ರಾಕಾರ ಮಣಿಗೋಪುರದ ಸಾಲೊಳಗೊಪ್ಪಿದೆನರರು ಮಾಡಿದ ಪಾಪರಾಶಿಯ ತೊಳೆದು ಪಿತೃಗಳ ಸಲಹಿದೆಹರಿಗೊಲಿದು ಮಣಿಕರ್ಣಿಕಾಖ್ಯೆಯ ಧರಿಸಿ ಜಗದೊಳು ತೋರಿದೆ 2 ಜಾಹ್ನವಿ ನಮ್ಮನುಅರ್ತಿಯಿಂ ಸಲಹೆಂಬ ಸ್ತ್ರೀಯರ ಮೊತ್ತವನು ನಾ ಕಂಡೆನು 3 ಚಾರುಮಣಿ ಕೋಟೀರಕುಂಡಲಿ ಹಾರಮಣಿಮಯ ನೂಪುರೆವೀರಮುದ್ರಿಕೆ ಕಡಗ ಕಂಕಣದಿಂದಲೊಪ್ಪುವ ಶ್ರೀಕರೆಹಾರ ಪದಕ ಸಮೂಹ ಕಾಂಚೀದಾಮ ವೈಭವ ಭಾಸುರೆಭೂರಿ ಮರಕತ ರತ್ನಮಾಲ್ಯ ಕೇಯೂರ ಭೂಷಣ ಭಾಸ್ವರೆ 4 ಆಣಿ ಮುತ್ತಿನ ಮೂಗುತಿಯು ಕಟ್ಟಾಣಿ ಗುಂಡಿನ ಸರಗಳುಮಾಣಿಕವು ಬಿಗಿದಿರ್ದ ರಾಗಟೆ ಚೌರಿ ಪೊಸ ಬಾವಲಿಗಳುಕ್ಷೋಣಿ ಗತಿಶಯವಾದ ಮುತ್ತಿನ ಮಲಕು ಮೋಹನ ಸರಗಳು ಕಲ್ಯಾಣಿ ಗಂಗಾದೇವಿಗೆಸೆದವು ಪರಿಪರಿಯ ಭೂಷಣಗಳು 5 ಕಾಲಸರಪಣಿ ಉಂಗುರವು ಅಣಿವೆಟ್ಟು ಪಿಲ್ಲಿಯ ಸಾಲ್ಗಳುಮೇಲೆನಿಪ ವೊಡ್ಯಾಣ ಕಿಂಕಿಣಿ ಗೆಜ್ಜೆಮೊಗ್ಗೆಯ ಸರಗಳುತೋಳಬಳೆ ಭುಜಕೀರ್ತಿ ಹಿಂಬಳೆ ಚಳಕೆಮಣಿದೋರೆಗಳು (?)ಮೇಲೆ ರಂಜಿಪ ನಿಮ್ಮ ನೋಡಿ ಕೃತಾರ್ಥವಾಯ್ತೀಕಂಗಳು 6 ಜಾಹ್ನವಿ ನಿರ್ಮಲೆರಂಗದುದ್ಘತರಂಗ ಶ್ರೀಕರ ಪಾವನೀಕೃತ ಭೂತಲೆಭಂಗಿತಾಮಯಸಂಘೆ ಮಂಗಲಸೂತ್ರಯುತ ಕಂಠೋಜ್ವಲೆಮಂಗಲಾತ್ಮಿಕೆ ಮಹಿತೆ ಕರುಣಾಪಾಂಗೆ ಶರದಿಂದೂಜ್ವಲೆ 7
--------------
ಕೆಳದಿ ವೆಂಕಣ್ಣ ಕವಿ
ರಾಜವದನೆ ಸುರರಾಜನ ಪುರದೊಳುರಾಜಿಸುತಿಹ ಕುಜವ ಪ ರಾಜೀವ ಮುಖಿಯೆನಿಸುವ ಸಖಿಗೊಲಿದಿತ್ತರಾಜನ ತೋರೆನಗೆ ಅ ನೆತ್ತಿಯಿಂದಿಳಿದಳ ಹೆತ್ತ ಮಗನ ಮೊಮ್ಮನೆತ್ತಿದಾತನ ಪಿತನ ತುತ್ತು ಮಾಡುವನ ವೈರಿಯನೇರಿ ಜಗವನು ಸುತ್ತು ಬರುತಲಿಪ್ಪನಕತ್ತಲೆಯೊಳು ಕಾದಿ ಅಳಿದಯ್ಯನ ಶಿರವಕತ್ತರಿಸಿದ ಧೀರನಸತ್ತ ಮಗನ ತಂದಿತ್ತವನನು ಎ-ನ್ನೊತ್ತಿಗೆ ಕರೆದು ತಾರೆ 1 ವರುಷವೈದರ ಪೆಸರವನ ತಾಯನುಜನಧರಿಸಿದಾತನ ಸಖನಧುರದೊಳು ತನಗೆ ಬೆಂಬಲ ಮಾಡಿಕೊಂಡು ಭೂವರಗೆ ತಾನೊಲಿದವನಸುರಗಿರಿಯನು ಸುತ್ತಿ ಬಾಹನ ಸುತನ ಕೈಯಲಿಹರಸಿ ದಾನವ ಕೊಂಡನಧರಣಿಜಾತನ ಶಿರವರಿದು ನಾರಿಯರನುಪುರಕೆ ತಂದವನ ತೋರೆ 2 ಹನ್ನೆರಡನೆಯ ತಾರೆಯ ಪೆಸರಾಕೆಯಕನ್ನೆಯಯ್ಯನ ಮನೆಯತನ್ನ ತಾ ಮರೆ ಮಾಡಿಕೊಂಡಿಪ್ಪರಸಿಯಬಣ್ಣವ ಕಾಯ್ದಿಹನಪನ್ನಗಶಯನ ಬೇಲಾಪುರದರಸನುತನ್ನ ನೆನೆವ ಭಕ್ತನಮನ್ನಿಸಿ ಕಾಯುವ ಚೆನ್ನಾದಿಕೇಶವ ಪ್ರ-ಸನ್ನನ ತೋರೆನಗೆ 3
--------------
ಕನಕದಾಸ
ಸಂಪ್ರದಾಯದ ಹಾಡುಗಳು ಅವಳೊಡನೆ ಮುನಿವ ಬಗೆಯೇನೋ ಪೇಳೋ ಪ ಸಿರಿಮುಡಿಗೆ ಸಂಪಿಗೆಯ ಕೊರಳ್ಗೆ ಕಸ್ತೂರಿಯನುವರಫಾಲದೆಡೆಗೆ ಕುಂಕುಮ ರೇಖೆಯಧರಿಸಿ ಪಾಟೀರ ಕರ್ದಮವನಂಗಕೆ ತಿವುರಿಕರದಿ ವೀಣೆಯ ಪಿಡಿದು ನಲಿದು ಪಾಡುವಳು1 ವರರತ್ನ ಕಂಕಣವು ಬಾಹು ಭೂಷಣವಾಯ್ತುಮಿರುಪಮುದ್ರಿಕೆ ಸ್ವರ್ಣ ಕಟಕವಾಯ್ತುಕರದ ಕೊನೆಯೊಳಗೆ ದೋರೆಯವನಿಟ್ಟಳು ತನ್ನಬೆರಳ್ಗೆ ವೈಢೂರ್ಯದುಂಗುರವ ಧರಿಸಿದಳು 2 ಸುರರ ದಾನವರ ತೌರವರನಾಕಾಶವನುಉರಗತತಿಯನು ಕುಂಭಸಂಭವನನು ಹರನಹರಸುತರ ಸುರಗಿರಿಯ ಕೋಪಿಸಿ ಕೆಳದಿಪುರದ ರಾಮೇಶ ನಿನ್ನ ಬರವ ಹಾರೈಸುವಳು 3
--------------
ಕೆಳದಿ ವೆಂಕಣ್ಣ ಕವಿ
ಹದಿನಾಲ್ಕು ಲೋಕವನಾಳುವ ತಂದೆಗೆ | ಮುದದಿಂದ ನಾನೊಬ್ಬ ಭಾರವಾದೆನೆ ಪ ಸುರಗಿರಿಯು ಶರಧಿಯೊಳು ಕಡೆವಾಗ ಮುಣಗಲಾ || ಭರದಿಂದ ಪೋಗಿ ಚೆನ್ನಾಂತು ಪೊತ್ತೆ || ಧರಣಿಯು ಮೊರೆಯಿಡಲು ತೆರಳಲ್ಲಿ ಬಂದು | ಭೂತರುಣಿಯನು ಸೆರೆಬಡಿಸಿ ಉಳುಹಿಕೊಳ್ಳಲಿಲ್ಲವೆ 1 ಸುರಪತಿ ಮುನಿದೇಳು ಹಗಲಿರುಳು ಮಳೆಗರೆಯೆ | ಬೆರಳಲಿ ಧರಿಸಿ ಕಾಯ್ದು ನಿಜದೆ || ವರಮುನಿ ಪಸವನು ಬೇಡಲಾಗಿ ಬೆದರಿ ನರ- | ನರಸಿ ನಿನ್ನ ಕರೆಯೆ ಕರುಣದಲಿ ಪಾಲಿಸಿದೆ 2 ಜಲಜಾಕ್ಷ ಬೆಟ್ಟವನು ಪೊತ್ತು ಬಳಲಿದಾಗ | ಸಲಹಬೇಕೆಂದು ಬೇಸರಿಸಲಿಲ್ಲಾ || ಸುಲಭದಲಿ ಶೇಷಾಚಲನಾಗಿಪ್ಪ | ಒಲಿದೆನ್ನ ಸಂರಕ್ಷಿಸೊ ವಿಜಯವಿಠ್ಠಲನೆ 3
--------------
ವಿಜಯದಾಸ