ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೊಂದಿ ಭಜಿಸೊ ನಿರುತ ಮಾನವ ಮಹಿವೃಂದಾರಕವ್ರಾತ ಪ ವಂದಿತ ಶ್ರೀ ಸುಯಮೀಂದ್ರರ ಹೃದಯಾರ ವಿಂದ ಭಾಷ್ಕರ ಸುವೃತೀಂದ್ರ ಪದಮುಗ ಅ.ಪ ಧರೆಯೊಳು ದ್ವಿಜನಿಕರ ಉದ್ಧರಿಸಲು ಗುರುವರ ಸುಶೀಲೇಂದ್ರರ ಕರದಿ ತುರಿಯಾಶ್ರಮ ಧರಿಸುತ ಶ್ರೀಮೂಲ ತರಣಿ ಕುಲೇಂದ್ರನ ಚರಣವ ಪೂಜಿಸಿ ಮರುತ ಶಾಸ್ತ್ರವ ಭಕ್ತಿ ಪೂರ್ವಕ ನಿರುತ ಪ್ರವಚನ ಗೈದು ಶಿಷ್ಯರಿ ಗೊರೆದು ಕರುಣದಿ ಪೊರೆದ ಪಾವನ ಚರಿತರಡಿದಾವರೆಗಳ್ಹರುಷದಿ 1 ಸತಿಭಕ್ತಿ ಸುವಿರಕತಿ ಶಾಂತಾದಿ ಹಲವು ಸದ್ಗುಣ ಪ್ರತತಿ ಕಲಿಯಾಳಿಕೆಯೊಳು ಸ್ಥಳವಕಾಣದೆ ವಿಧಿ ಬಳಿಗೆ ಬಿನ್ನೈಸಲು ನಳಿನಜ ಯೋಚಿಸಿ ಇಳೆಯೊಳಗೆ ಸುವೃತೀಂದ್ರ ತೀರ್ಥರ ಚಲುವ ಹೃದಯ ಸ್ಥಾನ ತೋರಲು ಬಳಿಕ ಸುಗುಣಾವಳಿಗಳಿವರೊಳು ನೆಲಸಿದವು ಇಂಥ ಅಲಘು ಮಹಿಮರ 2 ಸಿರಿಯಾಸ್ಯ ಸಂವತ್ಸರದಿ ಸುವೈಶಾಖ ವರಮಾನ ಶಿತಪಕ್ಷದಿ ಹರಿದಿನದಲಿ ದಿವ್ಯ ಮೂರನೆಯಾಮದಿ ವರ ಮಂತ್ರ ಮಂದಿರ ಪರಮ ಸುಕ್ಷೆತ್ರದಿ ಸಿರಿಮನೋಹರ ಶಾಮಸುಂದರ 3
--------------
ಶಾಮಸುಂದರ ವಿಠಲ
ಶ್ರೀ ರಾಘವೇಂದ್ರರು ಇಂಥಾ ಗುರುಗಳ ಕಾಣಿನಾ | ಭೂತಳದೊಳು ಇಂಥಾ ಯತಿಗಳ ಕಾಣಿನಾ ಪ ಕಾಣಿ \ ಮಂತ್ರ ಮಂದಿರದಲ್ಲಿ ನಿಂತು ಭಜಕರಿಗೆ | ಚಿಂತೆ ಕಳೆವ ಕರುಣಿ ಅ.ಪ ದೇವಸ್ವಭಾವನೀತನು | ಸತತ ಪವನ ದೇವನಾವೇಶಯುಕ್ತನು || ಆವ ಸಂಶಯವ್ಯಾಕೆ | ದೇವಾಧಿದೇವ ನರಮೃಗ ದೇವನೀತನ ಭಕ್ತಿಗೆ | ಧಾವಿಸಿ ಬಂದ ಸ್ತಂಭದಿ ಭಾವ ಭಕ್ತಿಯಲಿ | ಸೇವಿಪರಿಗೆ ಭವ ನೋವು ಕಳೆದು ಸುರ | ಗೋವಿನ ತೆರ ವರ ವೀವನು ಕರುಣದಿ | ಕಾಮನು ಪರಮ ಪಾವನ ಚರಿತನು | ಕೋವಿದರೊಡೆಯನು 1 ವರಹಜ ತಟದಲ್ಲಿರುವ ಭಕ್ತರು ಕೂಗಿ ಕರೆದಲ್ಲಿಗೋಡಿ ಬರುವ | ಮರುತ ಶಾಸ್ತ್ರದ ಮರ್ಮ ಭರಿತವಾದಂಥ ದಿವ್ಯ ಪರಿಮಳ ಗ್ರಂಥವ ವಿರಚಿಸಿ ಬುಧರಿಗೆ ಗರೆದನು ಕರುಣದಿ ಪೊರೆದನು ಪರಮತ ಮುರಿದನು ಜಗದೋಳ್ ಮೆರೆದನು ಹೊಸ ಹೊಸ ಪರಿ ಸುಮಹೋತ್ಸವ ಹರುಷದಿ ಪ್ರತಿದಿನ ಗುರು ಸುಯಮೀಂದ್ರರ | ಕರದಿಂಗೊಂಬರು 2 ಮಂದಹಾಸನ ಶ್ರೀ ಶಾಮಸುಂದರ ರಂಘ್ರಿ ಸೇವಕ | ಕೇಸರಿ ಎನಿಸಿ ಗಂಧವಾಹನ ಮತ | ಸಿಂಧುವಿಗೆ ಶಶಿ ಯಂದದಿ ರಾಜಿಸಿ ವೃಂದಾವನವನು ಒಂದೆ ಮನದಲಿ ವಂದಿಸಿ ನಮಿಸುವ ವಂದ್ಯಾಂಧಕರಿಗೆ | ಕಂದರಕ್ಷಿಗಳ ಕುಂದದಿ ಕೊಡುವ | ಕರ್ಮಂದಿ ಕುಲಾಗ್ರಣಿ 3
--------------
ಶಾಮಸುಂದರ ವಿಠಲ