ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣರಾಯನೆ ನಿನ್ನ ಕೃತ್ಯಗಳೆಲ್ಲ ಸೃಷ್ಟಿಯೊಳಗೆ ನಾ ಬೀರಲ್ಯಾ ಪ ಕಷ್ಟ ಬಿಡಿಸದೆ ಸುಮ್ಮನಿದ್ದೆಯಾ ಸ್ವಾಮಿ ಅ.ಪ. ಜನನ ಮರಣ ಶೂನ್ಯನೆನಿಸಿಕೊಂಡು ಗೋಪಿ ತನಯನಗಿದ್ದುದ ಹೇಳಲ್ಯಾ ಸನಕಾದಿಸೇವ್ಯ ಪೂಜ್ಯನೆ ತುರುಗಳ ಹಿಂಡು ವನದಲ್ಲಿ ಕಾಯ್ದದ್ದು ಹೇಳಲ್ಯಾ ನಾನು 1 ದನುಜ ಭಂಜನನಾದ ‌ಘನ ಮಹಿಮನೆ ಮಾಗ ಧನಿಗಂಜಿ ಓಡಿದ್ದು ಹೇಳಲ್ಯಾ ಎಣೆಯಿಲ್ಲದಾ ಶೂರ ರಣದೊಳು ಪಾರ್ಥಗೆ ಅನುಗನಾಗಿದ್ದದ್ದು ಹೇಳಲ್ಯಾ ನಾನು 2 ಸತತ ತೃಪ್ತನಾಗಿ ಕ್ಷಿತಿಯೊಳು ಬೆಣ್ಣೆಯ ಮಿತವಾಗಿ ಕದ್ದದ್ದು ಹೇಳಲ್ಯಾ ಕೃತಿದೇವಿರಮಣನೆ ಅತಿ ಪ್ರೀತಿಯಲಿ ಗೋಪ ಸತಿಯರ ಕೂಡಿದ್ದು ಹೇಳಲ್ಯಾ ನಾನು 3 ಶ್ರುತಿತತಿಗಳಿಗಭೇದ್ಯ ಪ್ರತಿಯಿಲ್ಲದೆ ದೇವ ಸತಿಗೊಶನಾದದ್ದು ಹೇಳಲ್ಯಾ ಶತಕೃತು ವಿಧಿವಂದ್ಯ ಸುತರಾಪೇಕ್ಷಿಸಿ ಭೂತ ಪತಿಯನ್ನು ಬೇಡಿದ್ದು ಹೇಳಲ್ಯಾ ನಾನು 4 ಭೂತಳದೊಳು ದೇವತೆಗಳೊಡÀನೆ ಇಂಥ ರೀತಿಲಿ ಚರಿಸಿದ್ದು ಹೇಳಲ್ಯಾ ಭೀತಿರಹಿತ ಜಗನ್ನಾಥವಿಠ್ಠಲನೆ ಅ ದ್ಭುತ ಮಹಿಮನೆಂದು ಹೇಳಲ್ಯಾ ನಾನು 5
--------------
ಜಗನ್ನಾಥದಾಸರು
ಎತ್ತಾರೆ ಹಿಂದಿನ ಮಾತು |ಭಾರತೀಶನಿನ್ನಭೃತ್ಯರು ತಮ್ಮನುವರಿತು | ನೀ ಸಲಹದಿದ್ದರೆ ಹೀಗೆಂದು ಪಮೂಗು ಹಿಡಕೊಂಡು ಕುಳಿತಿದ್ದಿ ನೂರತೊಂಭತ್ತೆಂಟು ಕಲ್ಪ |ಆಗಲೊಬ್ಬರೂ ನಿನ್ನನಾರೆಂದು ಕೇಳಾರೋ ||ಈಗ ದೇವರ ದಯೆಯಿಂದ ಹದಿನಾಲ್ಕು ಲೋಕಕ್ಕೆ ಮಂತ್ರಿ |ಯಾಗಿ ಸಂತೋಷದಿಂದ ಮೇಲು ಮೆರೆವುದಕ್ಕೀ ಗರ್ವವೆಂದು 1ಊರ ಸೇರದಲೆ ಕಂಡ ಗಿಡದ ತೊಪ್ಪಲುಗಳ ತಿಂದು |ಅರಣ್ಯದೊಳು ಬಹುಕಾಲ ಬದುಕಿದ್ದು ಮತ್ತೂ ||ಶ್ರೀರಾಮನಾಳಾಗಿ ಶಿಲೆಯ ಪೊತ್ತುದು ಜಗವೆಲ್ಲಾ ಬಲ್ಲದು ಮುಂದೆ |ವಾರಿಜಾಸನ ಪದವಿಯಾಳೆಂದುಹರಿನುಡಿದುದಕೀಗರ್ವವೆಂದು 2ತಿರಿದುಂಡು ಹನ್ನೆರಡಬ್ದ ವನವಾಸ ಅಜ್ಞಾತವೊಂದು |ವರುಷ ಮತ್ಸ್ಯಾಧಿಪನಾಗಾರದಲಿ ಪಾಕ ಮಾಡಿ ||ತರುಣೀ ಮಾನಭಂಗವ ನೋಡಿ ಸುಮ್ಮನಿದ್ದೆಯಾಗ ಕೃಷ್ಣ |ತರಿದು ದುರ್ಯೋಧನರ ರಾಜ್ಯ ನಿಮಗಿತ್ತುದಕೀ ಗರ್ವವೆಂದು 3ಎಲ್ಲರೂ ಕಂಡದ್ದು ಹುರಳಿ ಗುಗ್ಗರಿ ತಿಂದು ಭಿಕ್ಷಾರ್ಥಿಯಾಗಿ |ಮುಳ್ಳು ಮರದಡಿಯಲ್ಲಿ ಕುಳಿತದ್ದು ಹಿರಿಬದರಿಯಲ್ಲಿ ||ಸುಳ್ಳಲ್ಲ ವೇದವ್ಯಾಸಾನಂತ ವೇದಾರ್ಥ ತಿಳಿಸಿ ಸಕಲ |ಬಲ್ಲವನೆಂದು ಪೆಸರೂ ಕೊಟ್ಟದೆವೇ ಈ ಗರ್ವವೆಂದು 4ಏನೆಂಬುವ ಸರ್ವರಲ್ಲಿ ಹೊಕ್ಕು ಬಳಕೆ ಮಾಡುತಿದ್ದಿ |ಹೀನರು ನಿನಗೀಸು ನೀರ ಹಾಕಂದುಕೇಳಿ||ಪ್ರಾಣೇಶ ವಿಠಲನ್ನ ಭಜಿಸಿ ಪೂರ್ಣ ದಯಕೆ ಪಾತ್ರನಾಗಿ |ಮೀನಾಂಕಾರಿ ಮುಖರಿಂದರ್ಚನೆಗೊಂಬಕ್ಕೀ ಗರ್ವವೆಂದು 5
--------------
ಪ್ರಾಣೇಶದಾಸರು