ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

100(ಅ) ತುಳಸಿದೇವಿ ಶರಣು ಹೊಕ್ಕೆನು ಕಾಯೆ ಶ್ರೀ ತುಳಸಿ ತಾಯೆ ನಾರಾಯಣನ ಪ್ರೀಯೇ ತರಣಿಕೋಟಿ ದಿವ್ಯ ಪ್ರಕಾಶ ಹರಿಚರಣಕಮಲಕಾಭರಣಿಯೆನಿಪಳೆ ಪ ಉದಧಿಯೊಳುದಿಸಿದಮೃತವ ಮುದದಿಂದಲಿ ಶ್ರೀಧರನು ನೋಡಿ ಸ್ವೀಕಾರವನು ಮಾಡಿ ಆ- ನಂದಲಾನಂದ ಬಾಷ್ಪಗಳು ಉದುರಲಕ್ಷಿಯೊಳು ಉದುಭವಿಸಿದೆಯೆ ನೀನು ಪದುಮಮುಖಿಯೆ ನಿಮ್ಮ ಅದುಭುತ ಮಹಿಮೆಯು ಪದ ಕವಿಗಳಿಗೆಲ್ಲ ಪೊಗಳಲಸಾಧ್ಯ 1 ನಿಮ್ಮ ಮೂಲ ಮಧ್ಯಾಗ್ರದಲಿ ಬ್ರಹ್ಮಾದಿ ಸುರರು ಸುಮ್ಮನದಿಂದ ಒಲಿದಿಹರು ಒಮ್ಮನದಿಂದ ಸ್ತುತಿಸಲು ಶುಭಗುಣವಂತೆ ಧರ್ಮಾರ್ಥ ಕಾಮ ಮೋಕ್ಷಗಳ ಗಮ್ಮನೆ ಕೊಡುವ ನಮ್ಮಮ್ಮಗೊಲಿದು ನಿನ್ನಮ್ಮಿದವರಿಗಾಧರ್ಮದ ನಿಧನೆ (?) 2 ನಿಷ್ಠೀಲಿ ನಿಮ್ಮ ಭಜಿಸುವ ಭಕುತರಿಗೆ ಬಂದ ಕಷ್ಟವ ಕಳೆದು ಕೈವಿಡಿದು ದುಷ್ಟ ಸಂಗವನೆ ಬಿಡಿಸಿ ಇಹಪರದಲ್ಲಿ ವಿಷ್ಣುಭಕ್ತರಿವರೆಂದೆನಿಸಿ ಶ್ರೇಷ್ಟ ಕದುರುಂಡಲಗಿ ಹನುಮಯ್ಯನೊಡೆಯನು ಶ್ರೀ- ಕೃಷ್ಣನ ಲೋಕದಿ ಸಂತುಷ್ಟಬಡಿಸುವಾ 3
--------------
ಕದರುಂಡಲಗಿ ಹನುಮಯ್ಯ
ತೋರೊ ನಿನ್ನಯ ಮೂರ್ತಿಯ ಮೂರ್ತಿ ಬೀರೊ ಹೃದಯವೆಂಬೊ ನೀರಜಹಾದೊಳಗೆ ಸಾರೋ ಸಾರಿ ಸಾರಿಗೆ ಸೇರೊ ಬಾರೊ ಬಾರೊ ಪರಿವಾರದೊಡನೆ ಮನಸೂರೆಗೊಡುವೆ ಕಂ ಸಾರಿ ಮುರಾರಿ ಪ ತುಂಬೆ ವಿಶ್ವಮಾಯಾದ ಬೊಂಬೆ ನಾಮ ಪೀಯೂಷ ಉಂಬೆ ಸೇವೆಯ ಕೈಕೊಂಬೆ ಅನ್ಯರ ನಂಬೆ ಕಾಂಬೆ ನಮಿಸಿ ಪಾಲಿಸೆಂಬೆ ಕಾಲಿಗೆ ಮನ ದುಂಬೆ ದಂತೆ ಎರಗಿ ಅಂಬೆ ಪಿಡಿವಾಕೊಂಬೆ ಅಂಬುಜಾಕ್ಷ ನೀ ನೆಂಬದು ಸುರನಿಕರಂಬ ಹಂಬಲಿಸಲು ದಿಂಬಾಗಿ ಕರ್ಣಾವಲಂಬನವಾಯಿತು ಇಂಬಿಡು ಪ್ರಾಙ್ಞನೆಂದೆಂಬ ಮೂರುತಿಯಾ1 ಸ್ನಾನ ಪ್ರಣಮ ವಾಚಾ ಮಾನದಿಂದಲಿ ಬಲು ಮೌನವಾಗಿದ್ದು ಮಾಳ್ಪ ಧ್ಯಾನವು ಇತ್ತು ಮಾಜ್ಞಾನಾ ನಾನಾ ಪ್ರಕಾರದಿಂದ ದಾನಧರ್ಮಂಗಳ ನಿ ದಾನ ಕೊಂಡಡಲಾಮೇಲೆ ನೆನೆವೆನನುದಿನ ಮಾನವನ ಹೀನವ ನಾಡದೆ ನೀನೆನಿಸದೆ ಸುಮ್ಮನದಿಂದಲಿ ನೋಡೊ ದಾನವನ ವಡಲನು ಬಗದು ಕರುಳನು ವನಮಾಲೆ ಹಾಕಿದ ಶ್ರೀನಿಕೇತನ 2 ಇಂದು ಮಾಡುವದೇನು ಚಂದ ಭಕ್ತರಿಗತಿ ಬಂಧವನೆ ಯಾಕೆಂದಾ ಅಂದ ರಕ್ಕಸನಾಗಿ ಕೊಂದಾವರದ ಮುಕ್ಕುಂದಾ ವಂದಿತ ಮರ ವೃಂದಾ ಕರುಣದಿಂದಾ ಎಂದಿಗೆಂದಿಗೆ ಎನ್ನಿಂದಗಲದೆ ಗೋ ವಿಂದ ಇಂದಿರಾಪತಿ ಸುಂದರ ವಿಗ್ರಹ ಮಂದಿರದೊಳು ಸುಮದಾಸನದಲ್ಲಿ ಬಂದು ವಿಜಯವಿಠ್ಠಲೆಂದು ನೀನಿಂದು3
--------------
ವಿಜಯದಾಸ
ನೆರೆ ಮಾಡುವೆ ನಮ್ಮೈಯ್ಯಾ ಸಾಧುರಾ ಪ ಝಮ್ಮನೆ ಹೋಗುವೆ | ಸುಮ್ಮನದಿ ಬಾಗುವೆ | ಮುಮ್ಮಳಿ ತ್ರಯಗಳ ನೀಗುವೆ ನಮ್ಮೈಯ್ಯಾ 1 ಬೋಧಾಮೃತನುಂಬೆ | ಮಾಧವನಾ ಕಾಂಬೆ | ಸಾದರ ಪರಗತಿ ಪಡಕೊಂಬೆ ನಮ್ಮೈಯ್ಯಾ 2 ಘನಗುರು ಚರಿತವಾ | ನೆನೆಯುತ ನಿರುತವಾ | ಮನಕ ಮಾಡುವೆ ಪ್ರೇಮ ಭರಿತವಾ ನಮ್ಮೈಯ್ಯಾ 3 ಶ್ರವಣ ಮಾಡುವೆ | ತವಕದಿ ಕೊಡುವೆ | ಹವಣಿಸಿ ವರಗಳ ಬೇಡುವೇ ನಮ್ಮೈಯ್ಯಾ4 ಮಹಿಪತಿ ಸುತ ಪ್ರೀಯಾ | ಮಹಿಯೊಳೊಲಿವಪರಿಯಾ | ವಿಹಿತದಿ ಬಲುವೆನೆ ಭಕ್ತಿಯಾ ನಮ್ಮೈಯ್ಯಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು