ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಶ್ರಮ ಧರ್ಮ ನಾಲ್ಕು ಉಪದ್ರಆಶ್ರಮ ಧರ್ಮ ಬಿಡೆ ಅವ ಪಟ್ಟ ಬದ್ಧ ಪ ಬ್ರಹ್ಮಚಾರಿಯು ಆಗೆ ಕರ್ಮದ ಉಪದ್ರಬ್ರಹ್ಮಚರ್ಯವು ಹೋಗೆ ಸ್ತ್ರೀಯ ಉಪದ್ರಸುಮ್ಮಗೆ ವಾನಪ್ರಸ್ಥನಾಗೆ ಬೆಂಕಿ ಉಪದ್ರಹಮ್ಮಳಿದು ಸಂನ್ಯಾಸಿಯಾಗೆ ಸ್ನಾನದುಪದ್ರ 1 ಗೃಹಸ್ಥನಾಗೆ ವ್ರತಗಳ ಉಪದ್ರಸತತ ಸಂಧ್ಯಾ ಜಪತಪದ ಉಪದ್ರಮಿತಿ ಇಲ್ಲದ ನಾನಾ ಕರ್ಮಗಳ ಉಪದ್ರಸತತ ಶುಚಿ ಅಶುಚಿ ಎಂಬುದರ ಉಪದ್ರ 2 ಆವ ಆಶ್ರಮದಲಿರೆ ಆವುದೊಂದು ಉಪದ್ರಆವ ಆಶ್ರಮದಿ ಉಪದ್ರವೇ ಅದು ಹೋಗದುಆವಾಶ್ರಮಗಳಿಗೆ ಬೇರೆ ಇರೆ ಸುಖಿಯಿಹದೇವ ಚಿದಾನಂದ ಮಹ ಸರ್ವಮಹೋಪದ್ರವ ಪರಿಹಾರವಯ್ಯ 3
--------------
ಚಿದಾನಂದ ಅವಧೂತರು
ಮಾಯಾ ನೋಡಮ್ಮ ಶ್ರೀಯರಸ ನೀಲಮೇಘ ಛಾಯ ಕೃಷ್ಣರಾಯ ತನ್ನ ಪ. ಕಾಶೀಶ ಮೃತ್ಯುಂಜಯಾಯಿ ವಿಷವಲ ಭಂಜನಾದಿಗಳೀತನಿಗಂಜಿ ಕೊಂಬುವರು ಮಂಜುಳಾತ್ಮ ನಿಜಕರಕಂಜದಿಂದ ಪಾದವೆತ್ತಿ ನಿರಂಜನ ತಾ ಲೀಲೆಯಿಂದ 1 ಪುಟಿತಹಾಟಕ ಮಣಿಘಟಿತ ಕಂಕಣಾಂಗದ ಕಟಿಸೂತ್ರಗಳನಿಟ್ಟು ನಟನಂದದೀ ವಟಪತ್ರಶಾಯಿವೋಷ್ಠಪುಟದಿ ಪಾದವನಿಕ್ಕಿ ಕಟಬಾಯೊಳಮೃತವಾ ಸ್ಫುಟವಾಗಿ ಸುರಿಸುತ 2 ಲಿಂಗದೇಹಭಂಗತಾಗಿನಂಗವನ್ನು ದೂರಗೈಸಿ ತುಂಗಮತಿವಂತ ಋಷ್ಯ ಶೃಂಗಾದಿಗಳು ನಿತ್ಯ ಮಂಗಳ ದೇವಿಯರ ಗಂಗೆಯ ಪಡೆದು ಶಿವಂಗ ಶುದ್ಧಿಗೈಸಿ 3 ಗೋಪಿ ಗೃಹ ಕರ್ಮರತಳಾಗಿರಲು ಒಮ್ಮನದಿಂದ ಅಮ್ಮರ ಗಣಾರಾಧಿತ ಕ್ಷಮೆಯನಳದ ಪಾದ ಸುಮ್ಮಗೆ ಕರದೊಳೆತ್ತಿ ಖಮ್ಮಗಿಹದೆಂದು ತನ್ನ 4 ಕರಪಲ್ಲವಾಧೃತ ಲೋಕವಂದ್ಯರೂಪ ಫಣಿ- ಶೇಖರಾದ್ರಿವಾಸ ಭಕ್ತನಾಕ ಭೂರುಹ ನೀಕರಿಸಿ ದುರಿತವ ಸೋಕದಂತೆ ನಮ್ಮನೀಗ ಸಾಕುವ ಪರಮ ಕರುಣಾಕರ ಶ್ರೀ ಕೃಷ್ಣ ತನ್ನ 5
--------------
ತುಪಾಕಿ ವೆಂಕಟರಮಣಾಚಾರ್ಯ
ಕೂಗದೆ ಉಸುರಿಕ್ಕದೆ- ನೀವು |ಬೇಗನೆ ಬನ್ನಿ ರಂಗ ಮನೆಯ ಪೊಕ್ಕ ಪಹೆಜ್ಜೆಗಳಿವೆಕೋ ಮನೆಯಲಿ-ಕಾಲ |ಗೆಜ್ಜೆಯ ದನಿ ಕೇಳಬರುತಲಿದೆ ||ನಿರ್ಜರಪತಿ ತನ್ನ ಮನಸಿಗೆ ಬಂದಂತೆ |ಮಜ್ಜಿಗೆ ಓಕುಳಿ ಆಡಿಹನಕ್ಕ 1ಸೂರಿನ ಕೆಳಗೆ ಕುಳ್ಳಿರಿಸಿ-ತನ್ನ |ಓರಗೆ ಮಕ್ಕಳುಗಳ ನಿಲ್ಲಿಸಿ ||ಕೇರಿಕೇರಿಯಿಂದ ಗೋಡೆ ಧುಮುಕಿ ಪೋಗಿ |ಸೂರೆಗೊಳ್ಳುತಾನೆ ಸುಮ್ಮಗೆ ಬನ್ನಿ 2ಹಾಲು ಚೆಲ್ಲಿ ಹಳ್ಳ ಹರಿದಿಹವೆ-ಮೊಸರ |ಮೇಲಿನ ಕೆನೆಗಳು ಬಳಿದಿಹವೆ ||ಬಾಲಚೋರ ಶ್ರೀ ಪುರಂದರವಿಠಲನು |ಚಾಲುವರಿದರಿನ್ನು ಬಿಡಬಾರದಕ್ಕ 3
--------------
ಪುರಂದರದಾಸರು
ಚಂಡಿಯ ಕಂಡಿರಾ ಪ್ರಚಂಡೆಯ ಕಂಡಿರಾದಿಂಡೆಯರಾದವರ ಖಂಡಿಸುತಿರುವ ಕತ್ತಿಯತಿರುಹುತಿರುವ ಗದೆಯಪನಿಷ್ಟರಾಗಿಹ ಭಕ್ತರ ದೂರನುಕೇಳಿಕೋಪವತಾಳಿಕಟ್ಟುಗಳಿಲ್ಲದ ರೌದ್ರವು ತೋರಲುಮೋರೆಕಂಗಳುಕೆಂಪೇರಲುಉಟ್ಟಿಹ ಪೀತಾಂಬರವನೆ ಕಾಶಿಯಹೊಯ್ದು ದಿಟ್ಟ ನಿಟ್ಟುಸಿರಸುಯ್ದುಕಟ್ಟಿದಳು ಆಯುಧಂಗಳ ಧರಿಸಿ ಝಳಝಳ ಝಳಪಿಸಿ1ಹೂಕಾಂರವನೇ ಮಾಡುತ ದೇಹವ ಮರೆದು ಕಂಗಳ ತೆರೆದುಬೆಂಕಿಯ ಸುರಿಯಲು ಎಡಬಲ ಅದಿರೆ ಹರಿಹರ ಬೆದರೆಅಂಕೆಯಿಲ್ಲದ ಸಿಡಿಲಬ್ಬರದಂತಾಗೆ ಹಾ ಎಂದು ಕೂಗೆಪಂಕಜಮುಖಿತಾ ಕೂಗುತ ಅವುಡುಗಚ್ಚೆಭೂಮಿ ಬಾಯಿ ಬಿಚ್ಚೆ2ನಡೆದಳು ಶತ್ರುಗಳೆಡೆಗೆ ಆಗ ವೇಗದಲಿ ಮನೋ ಯೋಗದಲಿತೊಡರಿಕೊಂಡಳುವೈರಿಸೇನೆಯ ನಿಲಿಸಿ ತಾ ಘುಡು ಘುಡಿಸಿತುಡುಕಿ ಪಿಡಿದಳು ದುಷ್ಟರ ಜಿಹ್ವೆಯನೂಕಿ ತಾ ಮುಂದಕೆ ಜೀಕಿಖಡುಗದಿ ಸೀಳುತ ರೌದ್ರದಿ ನಿಂತಳು ವೀರೆಕಂಗಳುಕಿಡಿಯನೆ ಕಾರೆ3ಹೊಯ್ದಳಾಕ್ಷಣ ದುರ್ಜನ ಸೇನೆಯ ಬಗಳೆರಿಪುತಲೆಗಳು ಉರುಳೆತೊಯ್ದಳಾಕ್ಷಣ ರಕ್ತದ ಬಿಂದಿಗೆ ಉಕ್ಕೆ ಮುಖ ಪುಟವಿಕ್ಕೆಸುಯ್ದರು ವೈರಿಗಳೆಲ್ಲರು ಗತಿಮತಿಗೆಟ್ಟು ಬಹುಕೇಡ ಕೆಟ್ಟುಕಾಯ್ದಳು ತನ್ನನು ನಂಬಿದವರ ಭಯ ಹರಿಯೆಬಹು ಸುಖ ಸುರಿಯೆ4ಹಮ್ಮಿನವರನೆಲ್ಲರ ತೊಳೆದು ಶಾಂತಳಾಗಿ ಬಗಳೆ ತಾ ತೃಪ್ತಳಾಗಿಬ್ರಹ್ಮ ಚಿದಾನಂದ ಭಕ್ತನಾಥನ ಸೇರಿ ಅಮಿತಾನಂದವೇರಿಸುಮ್ಮಗೆ ಪೂಜಿಸಿಕೊಳುತ ಕೇವಲ ಘನದಿ ತಾ ನಿತ್ಯನುದಿನದಿಬ್ರಹ್ಮರಂದ್ರದಿ ವಾಸ ಮಾಡಿಹ ಸುಖಿಯಆ ಬಗಳಾಮುಖಿಯ5
--------------
ಚಿದಾನಂದ ಅವಧೂತರು