ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣದ್ವೈಪಾಯನ ಗುರುರಾಜರ ಚರಣ ಕಮಲಕಾನಮಿಪೆ ಶಿರಬಾಗಿ ಬಿನ್ನೈಪೆ ಪ ವೇದವ್ಯಾಸರ ಕರಕಮಲಜರೆನಿಸಿ ವೇದೇಶರ ಮುಖದಿ ವೇದಾಂತ ಸುಶಾಸ್ತ್ರ ಜ್ಞಾನವ ಘಳಿಸಿ ಮೇದಿನಿಯೊಳು ಚರಿಸಿ ಮೇದಿನಿ ಸುರರಿಗೆ ಮೋದವ ಗರೆದ 1 ಧರಿಜಾರಮಣನ ಪದಪೂಜಿಸಿದಂಥ ಶ್ರೀ ವ್ಯಾಸರ ಮಂತ್ರ ಧರಿಯೊಳು ಜಪಿಸಿದರಿವರೆ ಮಹಾಂತರೆನಿಸಿದರತಿ ಶಾಂತ ವರುಣಿಸಲೊಶವೆ ಗುರುವರ ಮಠದಲಿ ಸುರಗಂಗೆಯು ಬಂದಿರುವ ಮಹಿಮೆಯನು 2 ವರ ಭೀಮಾತಟದಿ ವಿರಾಜಿಸುವಂಥ ಕುಸುಮೂರುತಿ ಸಂಸ್ಥ ಶರಣಾಗತ ಜನರಿಗೆ ಸಕಲಾಭೀಷ್ಟ ಗರಿಯುವ ಸುಸಮರ್ಥ ಧರೆಯೊಳು ಮೆರೆಯುವ 'ಶಿರಿ ಕಾರ್ಪರ ನರಹರಿ' ಯ ನೊಲಿ-ಸಿರುವ ಪರಮ ಮಹಾತ್ಮ3
--------------
ಕಾರ್ಪರ ನರಹರಿದಾಸರು
ಗುರುಸ್ತುತಿ ಬಾರಯ್ಯ ಗುಣನಿಧಿಯೆ ಗುರುಭಾನುಕೋಟ್ಯುದಯ ಧ್ರುವ ಗುರುವರ ಶಿರೋಮಣಿಯೆ ಕರುಣಾನಂದ ಖಣಿಯೆ ಸುರತರು ಚಿಂತಾಮಣಿಯೆ 1 ಸುಪಥದ ಸಾಧನಿಯೆ ಭಕ್ತಜನಭೂಷಣಿಯೆ ಜಗತ್ರಯ ಜೀವನಿಯೆ 2 ಮಹಾನುಭವದ ಜಾಗ್ರತಿಯೆ ಮಹಿಮರ ಘನ ಸ್ಫೂರುತಿಯೆ ಮಹಿಪತಿ ಸ್ವಾಮಿ ಶ್ರೀಪತಿಯೆ ಸಹಕಾರ ಸುಮೂರುತಿಯೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡಬಾರದೆ ಹರಿಯ ಮನವೆ ಧ್ರುವ ಸುಲಲಿತವಾಗಿ ಸುಲ್ಲಭವಾಗ್ಹಾನೆ ನೆಲೆ ನಿಭವಾಗಿ ತನ್ನೊಳು ತುಂಬ್ಹಾನೆ 1 ಹೃದಯಕಮಲದೊಳು (ಕರೆಗುಡು)ತ್ಹಾನೆ ಸದೋದಿತ ಸವಿಸುಖ ಬೀರುತಲ್ಹಾನೆ 2 ಹಲವು ಪರಿಯಲಿ ತಾ ಸಲಹುತಲ್ಹಾನೆ ಕುಲಕೋಟಿ ಬಂಧು ಬಳಗಾಗ್ಹಾನೆ 3 ಕಣ್ಣಿನ ಮುಂದೆವೆ ತಾನೆ ಕಟ್ಹಾನೆ ಬಣ್ಣ ಬಣ್ಣದಲಿ ತಾ ಭಾಸುತಲ್ಹಾನೆ 4 ಸ್ವಹಿತ ಸುಖದ ಸುಮೂರುತಿ ಆಗ್ಹಾನೆ ಮಹಿಪತಿಯೊಳು ಶ್ರೀಪತಿ ಆಗ್ಹಾನೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು