ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿತು ನಡೆಯಲಿ ಬೇಕು ನರಕಾಯವೆತ್ತಿದ ಮೇಲೆಅರಿಯದಿದ್ದರೆ ನರಕವೇ ಪ್ರಾಪ್ತಿ ಪ ಭಂಗ ಹರಿಯೆ 1 ಭಕ್ತಿಹೀನರ ಮನೆಯ ಪಟ್ಟು ಸುಪ್ಪತ್ತಿಗೆಗಿಂತಭಕ್ತರ ಮನೆಯ ಕಡೆಬಾಗಿಲ ಕಾಯುವುದು ಲೇಸುಮುಕ್ತಿಮಾರ್ಗವ ತೋರ್ಪ ಮುರಹರನ ದಾಸರನುಸಕ್ತಿಯಿಂ ಸೇವಿಸುವುದು ಬಲು ಸೌಖ್ಯ ಹರಿಯೆ 2 ಆಶೆಕಾರರ ಮನೆಯ ವಿಲಾಸ ಸುಖಕಿಂತಆಶಾರಹಿತರ ಮನೆಯ ನಿರ್ಗತಿಕ ದೈನ್ಯ ಲೇಸುಭೂಸುರಪ್ರಿಯ ಕಾಗಿನೆಲೆಯಾದಿಕೇಶವನಮೀಸಲಿನ ಪಾದಭಜನೆ ಕಡುಲೇಸು ಮನವೆ 3
--------------
ಕನಕದಾಸ
ಪರಮಪಾವನ ಸಂಸಾರದ ಘನ ಅ.ಪ ಕರಿಯಪಾಲನ ಕರುಣ ಕಡುಕಮಲನಯನ ಖರೆಯ ಸುಖಕೆ ತೊರಪಿಟ್ಟೆನ್ನ ಕೊರಗಿಪ್ಪ ಕಿರಿಕಿರಿಯ ತರಿದು1 ಜನಕಜಾವರ ಜನಕ ಜಗದ ಜಯ ಸುಖಕರ ಜನುಜನಮದಿ ಜನಿಸಿ ಬರುವ ಜಡರನಳಿದು ಜಯವ ನೀಡಿ 2 ಸುಜನ ಜೀವನ ಸುಖಶರಧಿ ಸುಮನರೊಂದನ ಶುಭಕೆ ಶುಭವೆನಿಸುವ ಸುಮುಕ್ತಿ ಸುದಯದಿತ್ತು ಸಲಹು ಶ್ರೀರಾಮ 3
--------------
ರಾಮದಾಸರು
ಮಾಡು ಮನವೆ ಸದ್ಭಕ್ತಿ ನೋಡು ನಿನ್ನೊಳು ಸುಮುಕ್ತಿ ಧ್ರುವ ನೀಡಿ ತನುಮನ ಧನ ಕೂಡು ನೀ ಸದ್ಗುರುವಿನ ನೋಡು ನಿನ್ನೊಳಗೆ ಖೂನ ಗೂಢ ನಿಜಧನ 1 ಪಿಡಿದು ಸದ್ಗುರು ಪಾದ ಬಿಡದೆ ನೋಡು ನೀ ಸದಾ ತಡೆದು ಕಾಮಕ್ರೋಧ ಪಡಿಯೋ ಸುಬೋಧ 2 ಕೂಡಿ ಸದ್ಗುರು ಸುಪಥ ನೋಡು ನೀ ಸದೋದಿತ ಮೂಢ ಮಹಿಪತಿ ಮನವೆ ನಿನ್ನ ಸ್ವಹಿತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧಿಸಿ ನೋಡಿ ಸುವೃತ್ತಿ ಭೇದಿಸಿಕೂಡಿ ಸುಮುಕ್ತಿ ಧ್ರುವ ಹಿಡಿದು ಸಾರುವ ಶ್ರುತಿ ನಿಜಗೂಡಿ ಗೂಡಿನೊಳಗೆ ಬೆರೆದಾಡಿ ಇಡಾಪಿಂಗಳ ನಾಡಿ ನಡುವಾವಿನ ಜಾಡೆ ಹಿಡಿದು ಘನಗೂಡಿ 1 ಏರಿನೋಡಲು ಆರು ಚಕ್ರತಾಂ ದೋರುತದೆ ಸುಪಥ ತಿರುಗಿನೋಡಲು ತನ್ನೊಳು ತಾ ಅಮೃತ 2 ಹಿಡಿದು ಗುರುಪಾದಾರವಿಂದ ಪಡೆದ ಮಹಿಪತಿ ಅನಂದ ಗೂಢ ಗುರುತವಾಯಿತು ಬಲು ಚಂದ ಕಡಿದ್ಹೋಯಿತು ಭವಬಂಧ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ಮರಿಸೆಲವೋ ಸ್ಮರಿಸೆಲವೋ ಮನವೇ | ನಿರುತದಿ ಗುರುಮಹೀಪತಿ ಪಾದಾ ಪ ಆದ್ಯಾತ್ಮದಘನ ವಿದ್ಯೆಯ ಸಾಧಿಸಿ | ಸಿದ್ಧರ ನಡುವೆ ಪ್ರಸಿದ್ಧರಾದವರ 1 ನೆಟ್ಟನೆ ಶರಣರ ಪುಟ್ಟಿಸಿರಧಿಕಾ | ಬಿಟ್ಟುಪದೇಶವ ಕೊಟ್ಟು ಸಾಕುವರಾ 2 ಧಾರುಣಿಯೊಳು ಸಂಸಾರ ಮಾಡಿದರ | ಸಾರಸಜಲದಂತೆ ರಚಿಸಿದರಾ 3 ಯೋಗಧಾರುಣದಿ ಸಾಗಿಪದಿನಗಳು | ಭಾಗವತಾಗ್ರಣಿ ಎನಿಪಶ್ರೀಗುರುಪಾದಾ4 ವಿತ್ತಜನರು ತಂದಿತ್ತರೆ ಹಿಡಿಯದೆ | ನಿತ್ಯವ್ಯಯವ ಪವಡಿಸುತಿಹರವರಾ5 ಯುಕ್ತದಿ ವಿಷಯಾಸಕ್ತಿಯತ್ಯಜಿಸಿ | ವಿ ರಕ್ತಿ ಬೆಳಿಸಿ ಸುಮುಕ್ತಿ ಪಡೆದವರಾ 6 ಸ್ವಸ್ಥದಿ ನಾಲ್ಕು ಅವಸ್ಥೆಯ ಮೀರಿ | ಸ ಮಸ್ತರಲಿ ನಿಜ ವಸ್ತು ಕಂಡವರಾ7 ಕಾಖಂಡಕಿ ಸ್ಥಳ ಶ್ರೀಕರವಂದ್ಯೆ | ನಿ ರಾಕರಿಸದೆ ಅಂಗೀಕರಿಸಿದರಾ 8 ಎಂದೆಂದಿಗೂ ಹೊರಗೊಂದಿನ ಹೋಗದೆ | ಮಂದಿರದೊಳಗಾನಂದದಲಿಹರಾ9 ತಾಪತೃಯದಾ ಭವಪರಿಹರಿಸುತ | ತಾಪೋರೆದನು ಗುರು ಶ್ರೀಪತಿಗುರುಪಾದಾ 10 ಅಂಕಿತ-ಗುರುಶ್ರೀಪತಿ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತಂದೆ ತಾಯಿಮಿತ್ರನೀನೆ ಬಾಂಧವ ನೀನೆ ನಿನ್ನಿಂದ ಬಳಗಿಲ್ಲೆನಗೆ ಇಂದಿರಾಧವನೆ ಕಾಯೊ ಪ.ಹೊಲೆಯ ರಕ್ತದಿ ರೇತ ನಿಲಿಸಿದನೊರ್ವ ಪಿತನೆಲೆಸಿ ಗರ್ಭದೊಳು ರಕ್ಷಿಸಿದೆ ನೀನುಹಲವು ಯೋನಿಯ ತೋರಿ ತೊಳಲಿಸಿ ತುದಿಯಲ್ಲಿನೆಲೆಗೆ ನಿಲ್ಲಿಸುವಂಥ ಸುಲಭ ಜನಕನಲ್ಲೆ 1ನವಮಾಸ ಧರಿಸಿ ಸ್ತನ್ಯವನುಣಲಿತ್ತಳವ್ವೆತವಕದಿ ನಡೆ ನುಡಿಸುವೆಯೊ ನೀನುಆವ ಕಾಲಕಾಲದಲ್ಲಿ ತವಗರ್ಭದಲ್ಲಿ ಪೊತ್ತುಜೀವಕೆ ಚೈತನ್ಯಾಶನವೀವ ತಾಯಿ ನೀನಲ್ಲವೆ 2ಶ್ರೇಯಸನಾದರಿಸುವ ಪ್ರಿಯಸಖರೆಲ್ಲರು ನಿ:ಶ್ರೇಯಸದಿ ಸುಖಮುದದಾಯಕ ನೀನೆಮಾಯಪಾಶ ಬಂಧನದಿ ನೋಯುವರವರ್ಗಾಬಾಧೆಯನಟ್ಟಿ ಕಳೆವ ಚಿನ್ಮಯಮಿತ್ರನೀನಲ್ಲವೆ3ವಿತ್ತವಿರೆ ಸಹೋದರರಿತ್ತ ಬನ್ನಿ ಕೂಡ್ಯೆಂಬರುವಿತ್ತಶೂನ್ಯನಾದರೆ ನೀನುಪೇಕ್ಷಿಸೆ ಅಯ್ಯಒತ್ತಿ ಬಹದುರಿತವಿಪತ್ತುಗಳ ಸವರಿ ಸುಮುಕ್ತಿಯ ಪದವೀವಾನಿಮಿತ್ತ ಬಂಧು ನೀನಲ್ಲವೆ 4ಸಿರಿಯು ಪೋಗೆ ನಿಲ್ಲರು ಶರೀರ ಸಂಬಂಧಿಗಳಾತುರದ ದಾರಿದ್ರ್ಯ ಪಾಪಹರನು ನೀನೆಕರುಣಿ ಪ್ರಸನ್ನ ವೆಂಕಟರಮಣ ನಿನ್ನ ನಾಮಸ್ಮರಣೆ ಎನ್ನ ಜಿಹ್ವೆಗೆ ಮರೆಯದಿರಲಿ ಕಂಡ್ಯ 5
--------------
ಪ್ರಸನ್ನವೆಂಕಟದಾಸರು