ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಗನ್ನಾಥದಾಸರ ಸ್ತೋತ್ರ ಅಂಬುಜಾಕ್ಷಿ ಸ್ತಂಭದಿಹನ್ಯಾರೇ - ಸಾರೇ ಪ ನಂಬಿ ಭಜಿಸುವ ಭಕುತರ ಮನದಹಂಬಲ ನೀಡುವರೆ - ನೀರೇ ಅ.ಪ ಸುರರೊಡೆಯನೋಲ್ ಪರಿಪರಿಯಲೈ- ಶ್ವರ್ಯದಿಂ ರಾಜಿಸುವರ್ಯಾರೇಹರಿಕಥಾಮೃತ ಗ್ರಂಥ ವಿರಚಿಸಿಧರಣಿ ಸುರರುದ್ಧರಿಸಿದವರೆ 1 ಫುಲ್ಲಲೋಚನೆ ಬಲ್ಲೆಯಾ ಇವ -ರಿಲ್ಲಿರುವ ಕಾರಣವಿದೇನೆಫುಲ್ಲನಾಭನ ಪುಡುಕುತಲೀಪ್ರಹ್ಲಾದನನುಜ ಸಹ್ಲಾದರಿವರೆ 2 ಜಲಜ ತುಳಸಿಮಣಿ ಸುಮಾಲಿಕೆಗಳದಿ ಧರಿಸಿಹನ್ಯಾರೆ - ನೀರೇಕಲಿಯುಗದಿ ಕಮಲಾಪತಿ ವಿ- ಠಲನ ಒಲಿಸಿದಿಳೆಯೊಳಗೆ ಮೆರೆವರೆ 3
--------------
ಕಮಲಪತಿವಿಠ್ಠಲರು
ಶ್ಯಾಮಸುಂದರಿ ಭೂಮಿನಂದಿನಿ ರಾಮಸುಂದರಿ ಸೀತೆಯೆ ಪ ಪ್ರೇಮದಿಂದ ದಿವ್ಯ ಪೀಠಕೆ ಭಾಮಿನಿಯೆ ಬಾ ಪ್ರಿಯೆ ಅ.ಪ. ದೇವ ಸುಂದರಿಯರು ಸೇರಿ ದೇವಿ ನಿನ್ನ ಕರೆವರು ದೇವ ವೃಂದವು ನಿನ್ನ ಸ್ಮರಿಸಿ ಭಾವಿಸುತ್ತಲಿರುವರು 1 ಮಂದಗಮನೆ ಸುಂದರಾಂಗಿ ಮಂದಹಾಸ ಶೋಭಿತೆ ಚಂದ್ರಬಿಂಬ ಸದೃಶವದನೆ ಚಂದ್ರವಂಶ ನಂದಿನಿ 2 ಭ್ರಮರ ವೇಣಿ ಸುಮ ಸುಮಾಲಿ ಕಾಯುತೆ ವಿಮಲ ವಾಣಿ ರಮಣಿ ತರುಣಿ, ಸುಮನ ಕೀರವಾಣಿಯೆ 3 ಮಾನಿನಿ ಶಿರೋಮಣಿಯೆ ಧೇನುನಗರ ವಲ್ಲಭೆ ಜಾನಕಿಯೆ ಸನ್ನುತೆಯೆ ಮೌನಿ ಬೃಂದವಂದಿತೆ4
--------------
ಬೇಟೆರಾಯ ದೀಕ್ಷಿತರು
ಶ್ರೀ ಪ್ರಾಣೇಶ ದಾಸರಾಯರ ಸ್ತೋತ್ರ ಸಾನುರಾಗದಲಿ ಸ್ಮರಿಸುವರ ಭಕುತಿಯನ್ನು ಕೊಡುತಿಹರು ಪ ವರಕಾಶ್ಯೊಪಸದ್ಗೋತ್ರದಿ ಲಿಂಗಸು - ಗುರು ಕರಣಿಕರಲಿ ಸಂಜನಿಸಿ ತಿರುಕಾರ್ಯರ ಪರತನುಭವಯೋಗೀಂ - ದ್ರರು ಯಂಬ ಸುನಾಮದಿ ಕರಿಸಿ 1 ಕೆಲವುಕಾಲ ಲೌಕಿಕವನುಸರಿಸುತ ಲಲನೆ ತರಳರಿಂದೊಡಗೂಡಿ ಬಲು ವಿನಯದಿ ಸಾಧುಗಳರ್ಚಿಸಿ ನಿ - ರ್ಮಲ ವೈರಾಗ್ಯ ಮನದಿ ಕೂಡಿ2 ಮೂಜಗದೊಳು ಪ್ರಖ್ಯಾತರೆನಿಸಿದ ಶ್ರೀ ಜಗನ್ನಾಥಾರ್ಯರ ಪಾದಾಂ - ಭೋಜ ಭಜಿಸಿ ಪ್ರಾಣೇಶಾಂಕಿತವನು ತಾಜವದಿಂದವರಲಿಪಡೆದ 3 ಶ್ರೀಶಪಾದಯುಗ್ಮಗಳಲಿ ಸದ್ರತಿ ದಾಸಜನಗಳಲಿ ಸದ್ಭಕುತಿ ಹೇಸಿಭವದ ಸುಖದಾಸೆ ಜರಿದು ಸಂ - ತೋಷದಿ ಧರಿಸಿಹ ಸುವಿರಕುತಿ 4 ನೇಮದಿ ಯಮನಿಯಮವ ವಹಿಸಿ ತಾ ಮುದದಲಿ ನಲಿಯುತ ಕೀರ್ತಿಸುತಿಹ ಶ್ರೀ ಮನೋಹರನ ಸುಗುಣರಾಶಿ 5 ಪರಿಪರಿ ಹರಿಕಥೆವರ ಪ್ರಮೇಯಗಳ ಸರ್ವಜ್ಞ್ಞರ ಉಕ್ತ್ಯನುಸರಿಸಿ ವಿರಚಿಸಿ ಹರಿಮಂದಿರದ ಸುಪಥ ಪಾ - ಮರರಿಗೆ ಸೌಕರ್ಯವಗೈಸಿ 6 ವರದೆಂದ್ರರ ಪದಸರಸಿಜ ಸೇವಿಸಿ ಹರುಷದಲವರ ಕರುಣ ಪಡೆದ ವರವೃಂದಾವನ ಸಂಸ್ಥಾಪಿಸಿ ಪರಿಪರಿಯಿಂದಲಿಯಾರಾಧಿಸಿದ7 ಜ್ಞಾನದಿಲಯವನು ಚಿಂತಿಸುತಾ ಚಿತ್ರ ಬಾನುಸಪ್ತಮಿ ಯಾಶ್ವಿಜಶುದ್ಧ ಜಾನಕಿ ಪತಿಪದ ಧೇನಿಸಿಹರಿಪುರ ಕೀನರ ದೇಹ ಜರಿದು ಸಾರ್ದ 8 ಪರಮಭಾಗವತರೆನಿಸುವರಿವರನ ವರ ತನದ ಸುಮಾಲಿಕೆ ಸತತ ಸ್ಮರಿಸುವ ಭಕುತರ ಪುರುಷಾರ್ಥಗಳನು ವರದೇಶವಿಠಲನ ಕೊಡುವ ತ್ವರಿತ 9
--------------
ವರದೇಶವಿಠಲ