ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಗಾಭೋಗ ದಾಸ ಭಾಗ್ಯವೆ ಭಾಗ್ಯ ಹರಿಕೊಟ್ಟ ಸೌಭಾಗ್ಯ ದಾಸ ಭಾಗ್ಯಕ್ಕೆ ಜಗದಿ ಸರಿಮಿಗಿಲಿಲ್ಲವೆಂದು ದಾಸತ್ವವೇ ಮಧ್ವಮತ ಸಾರತತ್ವವೆಂದು ವ್ಯಾಸರಾಯರು ಜಗದಿ ದಾಸರ ನಿಲ್ಲಿಸಿದರು ದಾಸರಿಗಂಕಿತ ಇರಲೇಬೇಕೆನುತಲಿ ದಾಸ ಪುರಂದರವಿಠ್ಠಲನಿಗೆನಿಸಿದರು ಈ ಸುಮಾರ್ಗವ ತಂದೆ ಮುದ್ದುಮೋಹನ ಗುರು ಮಾಸದಂತೀಗ ಮತ್ತೆ ಬಿತ್ತಿ ಬೆಳೆಸಿದರು ದಾಸ ಜನಪ್ರಿಯ ಗೋಪಾಲಕೃಷ್ಣವಿಠ್ಠಲ ತಾ ಸುಮ್ಮನೀವ ತನ್ನ ನಿಜದಾಸರಿಗೆ ಮುಕ್ತಿ
--------------
ಅಂಬಾಬಾಯಿ
ದಾಸರೆ ಪುರಂದರದಾಸರು ಲೇಸಾಗಿ ಎನಗೆ ಸುಮಾರ್ಗವನು ತೋರಿದರು ಪ ಅತಿ ಮುಗ್ಧನಾಗಿ ದುರುಳರಾ ದುರಾಚಾರದಲ್ಲಿ ಮತಿಗೆಟ್ಟು ಮಹಿಯೊಳಗೆ ತಿರುಗುತಿರಲೂ ಅತಿ ದಯಾಪರರಾಗಿ ತನ್ನವನಿವನೆಂದು ಹಿತದಲ್ಲಿ ಪೊರೆದು ಕುಮತಿಯ ಬಿಡಿಸಿದರು1 ಶಬ್ದಾದಿ ಮೊದಲಾದ ವಿಷಯಂಗಳಾ ಕರ್ಮ ದಬ್ಧ್ದಿಯೊಳಗೆ ಬಿದ್ದು ಪೊರುಳುತಿದ್ದಾ ಲುಬ್ಧಕನ ಕರೆದು ದೃಢವಾಗಿ ಸುಜ್ಞಾನದ ಅಬ್ಧಿಯೊಳಗಿಟ್ಟು ಕರುಣದಲಿ ನೋಡಿದರು 2 ಹಿಂದೆ ಏಸೇಸು ಜನ್ಮ ಜನಿಸಿ ಅನ್ಯ ಕಾಲ ನೊಂದ ನರನಾ ತಂದು ವೈರಾಗ್ಯದೊಳು ಪೊಗಸಿ ಸೌಖ್ಯವ ಪರಶಿ ತಂದೆ ಮಕ್ಕಳನು ಸಾಕಿದಂತೆ ಸಾಕಿದರು3 ಉಪದೇಶವಿತ್ತರು ಸುಪ್ರೀತಾರ್ಥದಲಿ ಬಂದು ಜಪ ನಿಜಾಸನ ಧ್ಯಾನ ಜ್ಞಾನದಿಂದ ಸಪುತೆರಡು ಲೋಕದ ಒಡೆಯನ್ನ ಪಾದವ ಸಫಲವಾಗುವಂತೆ ಸಾಧನವ ಪೇಳಿದರು 4 ದಾರಿದ್ರ ದೋಷವ ಸೇರಿದ ಮಾನವನಿಗೆ ಆರು ಕೊಡದಲೆ ಧೇನು ದೊರಕಿದಂತೆ ಕಾರುಣ್ಯದಲಿ ಗುರು ಪುರಂದರದಾಸರು ಮೂರುತಿ ವಿಜಯವಿಠ್ಠಲನ್ನ ತೋರಿಸಿದರು 5
--------------
ವಿಜಯದಾಸ
ನಾರದ ಪ್ರಿಯ ಕೃಷ್ಣ ನರಾಕಾರ ಜಾರ ಚೋರ ಶೂರ ಧೀರಪ ಘೋರತರವಾದ ಸಂಸಾರ ಸುಖ ದುಃಖಗಳ ಮೀರಿ ಪೊರೆವಂಥ ಬಲು ಭಾರಕರ್ತನೇ ಸೂರಿ ಜನರನು ಸದಾ ಸಾರಸಾಕ್ಷ ಬಿಡದಲೆ ಪಾರುಗಾಣಿಸುವ ದೇವಾ 1 ಮಂದಮತಿಯನಳಿದು ಚಂದದಿ ಸುಮಾರ್ಗವನ್ನು ನಂದದಿಂದ ತೋರ್ಪ ಮುಚುಕುಂದ ವಂದ್ಯನೆ ಎಂದಿಗೆಮ್ಮ ಗತಿಯೆಂದು ಹೊಂದಿ ಬೇಡ್ವ ಭಕುತರ ವÀಂದಿಸುವರ ಭವಬಂಧನ ಬಿಡಿಸುವ ದೇವಾ2 ದಾಶರಥೆ ಎನ್ನ ಕ್ಷೇಶ ನಾಶ ಮಾಡು ದಯದಿ ದಿ ನೇಶ ಶತಕೋಟಿ ಭಾಸ ಸಂಕಾಶ ಶ್ರೀಶ ವಾಸುದೇವ 3
--------------
ಜಗನ್ನಾಥದಾಸರು
ಸಿದ್ಧಿ ವಿನಾಯಕ ಪರಿಪಾಹಿ | ವರ ಪ ಸಿದ್ಧಿ ವಿನಾಯಕ ವೀರಭದ್ರನಗ್ರಜನೆ ಮಹಾ ರುದ್ರದೇವನ ಸುಕುಮಾರ | ಧೀರ ಅ.ಪ ಮೊದಲು ನಿನ್ನಡಿಗಳಿಗೆ ಮುದದಿ ವಂದಿಸುವರಿಗೆ ಸದಮಲ ಸುಮಾರ್ಗವೀವದೇವ | ವರ1 ಏಕವಿಂಶತಿಸುರೂಪ ಕಾಕುದುರ್ಮತಿಯನು ನಿ- ರಾಕರಿಸಿ ಕೊಡುವದು ನಿರ್ವಿಘ್ನವಂ | ವರ 2 ತಾಮಸರಹಿತ ಗುರುರಾಮವಿಠಲನಡಿಗಳ ನಿ- ಷ್ಕಾಮದಿಂದಾ ಭಜಿಸುವಂತೆಮಾಡು | ವರ 3
--------------
ಗುರುರಾಮವಿಠಲ
ನೀ ಕಾಯ್ದರೆ ಕಾಯ್ದಾ ಬಗೆಯಲ್ಲದೆ ಬೇರೆಏಕಮತಿ ಎನ್ನೊಳಿಲ್ಲಶ್ರೀಕಾಂತ ಕರುಣಿ ನೀನಕ್ಲಿಷ್ಟ ಕಾಣಯ್ಯಬೇಕೆಂದು ಸಾಕುತಿಹೆ ಹರಿಯೆ ಪ.ವೇದ ಶಾಸ್ತ್ರ ಪುರಾಣ ಸಾರಾರ್ಥ ತಿಳಿದರಿಯೆಸಾಧನ ಸುಮಾರ್ಗವರಿಯೆಆದರದಿ ಭಕುತಿ ಬಲಿದೊಮ್ಮೆ ಪೂಜಿಸಲರಿಯೆಮಾಧವಮುರಾರಿ ಕೃಷ್ಣಾ ತುಷ್ಟಾ1ಮನ ಮರ್ಕಟವು ತನ್ನ ಮತಿಯಲ್ಲಿ ವಿಷಯ್ಯೆಂಬವನಕೆ ಮೆಚ್ಚಿದೆ ನೋಡಯ್ಯವನಚರತ್ವವನೀಗಿಕ್ಷಣವಾರೆ ತವಚರಣವನಜರಸವುಣ್ಣದಲ್ಲೈ ರಂಗಯ್ಯ 2ಜನುಮ ಜನುಮದ ತಾಯಿ ತಂದೆಗುರುಬಂಧುನನ್ನನು ಗತಿಗಾಣಿಪ ದಾತನೆಎನ್ನಭವತಪ್ಪುಗಳನರಸದಿರು ಅರಸಿದರೆನಿನಗುಚಿತೆ ಪ್ರಸನ್ವೆಂಕಟೇಶ ಶ್ರೀಶ 3
--------------
ಪ್ರಸನ್ನವೆಂಕಟದಾಸರು
ಶ್ರೀ ವಿಷ್ಣುಮಹಿಮೆ ಸಂಕೀರ್ತನೆ ಸರ್ವದಾ ವಿಸ್ಮøತಿಯನೀಗಿಮಾಡಿ ವೈಷ್ಣವರುಪ.ಪುಣ್ಯಮಾರ್ಗವನರಿಯದ ಮೂಢರಿಗೆಉನ್ನತಕುಟಿಲಪಾಮರಮನುಜರಿಗೆಘನ್ನ ಸಾಧನವಿದೆ ಮತ್ತೊಂದು ಕಾಣೆಪುಣ್ಯಶ್ಲೋಕನ ವಾರ್ತೆ ಕೀರ್ತನೆಯ ಪಠನೆ 1ಜನ್ಮ ಮರಣವಿಲ್ಲ ಅವ ಜೀವನ್ಮುಕ್ತಧನ್ಯ ವಿಶುದ್ಧಾತ್ಮ ನಿಜ ಹರಿಭಕ್ತಚಿನ್ಮಯಾಚ್ಯುತನ ಚಾರಿತ್ರ್ಯವಿಸ್ತರವವರ್ಣವರ್ಣಂಗಳಿಂದೆ ಪಾಡಿ ನಲಿಯುತ 2ಧರ್ಮ ಸುಮಾರ್ಗವರ್ಜಿತ ಕಲಿಯುಗದಿನಿರ್ಮಲಮನ ಹೊಂದಲೀಸದ ಭವದಿಧರ್ಮಪ್ರಭು ಶ್ರೀ ಹರಿಗುಣಕೀರ್ತನೆಉಮ್ಮಯದಲಿ ಮಾಡುವುದು ಹರಿಪ್ರಾರ್ಥನೆ 3ನಿರುತ ವಿಶುದ್ಧಾಂತರಾತ್ಮ ಶ್ರೀಹರಿಗೆಗುರುಸುಖತೀರ್ಥರ ತೀರ್ಥಜೀವರಿಗೆಹರಿಹರಿಹರಿಎಂದು ಕೂಗಿ ಬಾಳ್ವರಿಗೆ4ಅಘೋರ ಯಮಮಾರ್ಗ ನರಕ ಶ್ರೀಮದ್ಗರುಡಧ್ವಜ ನಾರಾಯಣಾಪವರ್ಗರಾಮ ರಾಮ ರಾಮ ರಾಮ ರಾಮನೆಂಬನಾಮಪಾಠಕರಿಗೆ ಸ್ವಪ್ನದಿ ವಜ್ರ್ಯ 5ಹೃದಯದಿ ಹರಿರೂಪ ಮುಖದಿ ಸದ್ಗಾನಉದರದಿ ನೈವೇದ್ಯ ಶಿರದಿ ನಿರ್ಮಾಲ್ಯಸುದರ್ಶನಶಂಖಾಂಕಿತ ಭುಜದವರಿಗೆಪದ್ಮನಾಭನ ನಾಮಕೀರ್ತನೆಕೈವಲ್ಯ6ಶತಕೋಟಿ ರಾಮಾಯಣ ಕೀರ್ತನೆ ಹನುಮಂತಯತಿ ಶುಕಾಚಾರ್ಯ ಭಾಗವತಶಾಸ್ತ್ರಸತತ ನಾರದದೇವ ಮುನಿತತಿ ನೃಪರೆಲ್ಲರತಿಪತಿಪಿತನ ಪೊಗಳಿ ಮುಕ್ತಾಗಿಹರು 7ಕಲಿಕಾಲದಲಿ ಕೇಶವಗೆ ಪ್ರಿಯ ಕೀರ್ತನೆಲಲಿತಸಾಧನವೆನಿಪುದೀ ಕೀರ್ತನೆಬಲುಶ್ರುತಿಮಥಿತಾರ್ಥಸಾರವೆ ಕೀರ್ತನೆಹುಲುಮಾನವರಿಗೆ ದೂರವು ಹರಿಕೀರ್ತನೆ 8ಭವರೋಗಭೇಷಜಹರಿನಾಮಕೀರ್ತನೆಭವವಾರ್ಧಿಪೋತ ಭವಾಟವಾಗ್ನಿಭವವಿಧಿಕೀರ್ತಿತಪದ ಪ್ರಸನ್ವೆಂಕಟಭವನದಾಸರು ಸವಿದುಂಬಾಮೃತವು 9
--------------
ಪ್ರಸನ್ನವೆಂಕಟದಾಸರು