ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(2) ಉಡುಪಿ ಕೃಷ್ಣ ಕಂಡೇ ಕಡೆಗೋಲ ಪಿಡಿದನ ಉಡುರಾಜ ವದನನ ಮಂಡೆಯೊಳ್ ಮಯೂರ ಪಿಂಛವನಿಟ್ಟನ ಪ ಪಡುಗಡಲೆಡೆ ಉಡುಪಿಯೊಳಗಿಹ ಕಡಲಣುಗಿಯ ಒಡೆಯಕೃಷ್ಣನ ಕಂಡೇ ಅ.ಪ ಶ್ರಾವಣ ಕೃಷ್ಣ ಪ್ರಪಂಚಗುರುವ ಸುಮಶರಪಿತ ಸುಮನೋಹರ ಶ್ಯಾಮಸುಂದರನ ಸ್ವಪ್ನದಿ 1 ಸತ್ಯವಂತರ್ಗಾಂ ಸತ್ಯಂ ಮುಕ್ತಿನಾಥಂ ಉತ್ತಮತರಚಿತ್ತರಾದ ಭಕ್ತರ ಕಾಯವೆನೆಂದನ 2 ಸುಳ್ಳು ಸುಳ್ಳೆಂದು ಪೇಳುವ ಪೊಳ್ಳನ ಪಾಪಿಯ ತಳ್ಳುವೆ ಸುಖವಿಲ್ಲದಿರುವ ಖುಲ್ಲರ ಜತೆಯೊಳಗೆಂದನ3 ಹರಿಶ್ಚಂದ್ರ ನಳರೊಲು ಕೀರ್ತಿಯನು ಪರ್ಬಿಸಿ ಶರಣರ ಸುಖಸರಣಿಯಲ್ಲಿ ಕರುಣದಿಂದ ಕಾವೆನೆಂದನಾ4 ಕನಸುಮನಸಿನಲ್ಲಿಯೂ ಅನವರತ ತನ್ನಯ ಘನಪದಯುಗವನಜ ತೋರಿ ಅನುವನೀವ ಜಾಜೀಶನ 5
--------------
ಶಾಮಶರ್ಮರು
ಸುನಾಮ ಕೇಶವ ಮಾಧವ ನಾಶನ ಭವನಿಧಿಬಂಧನ ಪ ಬೋಲೋ ರಾಧಾಕೃಷ್ಣ ಸುಲೀಲ ಪಾಲಯ ಕುಲಕೋಟಿ ಪಾವನ ಅ.ಪ ವೃಂದಾವನ ಮಾಲಾನಂದ ಲೀಲಾ ಇಂದಿರೆಪ್ರಿಯ ಮಣಿಮಾಲನ ಸಂದರಮಂದರ ಮಂದಿರ ದೇವಕಿ ಕಂದ ಮುಕ್ಕುಂದ ಗೋಪಾಲನ1 ನೀಲಶ್ಯಾಮ ಭವಮಾಲಹರಣ ದಯ ಆಲಯ ಭಜನಾನಂದನ ಕಾಲ ಕುಜನ ಕುಲಶೀಲ ಶಿಷ್ಟಪ್ರಿಯ ಲೋಲಗಾನ ಹರಿ ಗೋವಿಂದನ 2 ಅಮಿತಮಹಿಮ ಅಸುರಮರ್ದನ ಕಮಲನಾಭ ಕರಿಪಾಲನ ಕಾಮಿತದಾಯಕ ಸುಮಶರಪಿತ ಮಮ ಸ್ವಾಮಿ ಶ್ರೀರಾಮ ಮುಕ್ತಿ ಸೋಮನ 3
--------------
ರಾಮದಾಸರು
ಹಾರಹಾಕುವೆ ಮಾರಸುಂದರ ಶರೀರ ಸುಕುಮಾರಗೆ ಪ ಮರುಗ ಮಲ್ಲಿಗೆ ಜಾಜಿಸಂಪಿಗೆ ಸುರಗಿಬಕುಳ ಪಾದರಿ ಪರಿಪರಿಯಿಂದ ಹಾರ ಕಟ್ಟಿ ಹರಿನಾ ನಿನ್ನ ಕೊರಳಿಗೆ 1 ಕಮಲ ಪುಷ್ಪದ ಹಾರವನ್ನು ವಿಮಲ ಮನದಿ ತಂÀದಿಹೆ ಸುಮಶರಪಿತ ಕೊರಳ ಕೊಟ್ಟರೆ ನಮಿಸಿ ನಿಮಗೆ ಹರುಷದಿ 2 ಮಾನಿನಿಯರ ಮೊರೆಯಕೇಳಿ ಪ್ರಾಣನಾಥವಿಠ್ಠಲ ತಾನೆ ಕರವನೀಡಿ ಹಾರವ ಗಾನಲೋಲ ಧರಿಸಿದ 3
--------------
ಬಾಗೇಪಲ್ಲಿ ಶೇಷದಾಸರು