ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳೊ ಬಾಲನೆ ವೇಳೆ ಮೀರುತಿಹುದು ಪ ಕೇಳುತಿಹರು ಯದುಮೌಳಿಯೆಲ್ಲಿ ಎಂದು ಅ.ಪ ಎದ್ದು ಬಾರೆಲೋ ಮುದ್ದು ಬಾಲಕೃಷ್ಣ ಪದ್ಧತಿಯಲಿ ಕ್ಷೀರ ಸಿದ್ಧವಾಗಿಹುದು 1 ಜಾಣ ನಿನ್ನಯ ವೇಣುನಾದ ಕೇಳೆ ಏಣನಯನೆಯರು ಕಾಣ ಬಯಸುತಿಹರು 2 ಯಮುನಾ ತೀರದಿ ಸುಮಲತೆಗಳಲ್ಲಿ ಕಮಲನಯನ ನಿನ್ನ ರಮಿಸ ಬಯಸುತಿಹರು 3 ಮೌನಿಜನರು ತಮ್ಮ ಸ್ನಾನ ಮುಗಿಸಿ ನಿನ್ನ ಜ್ಞಾನ ಪೊಂದೆ ಗುಣಗಾನ ಮಾಡುತಿಹರು 4 ನಿನ್ನ ಪ್ರಿಯ ಜನರನ್ನು ಕಾಯಿಸಲು ಇನ್ನು ತರವೇನೋ ಪ್ರಸನ್ನವದನನಾಗಿ 5
--------------
ವಿದ್ಯಾಪ್ರಸನ್ನತೀರ್ಥರು
ದುರಿತ ಉಪಶಮನೆ | ಅಮಮ ಮಂದಗಮನೆ || ಅಗಣಿತ ಸುಮನೆ ಪ ಆ ಮಹಾ ಮಾರ್ತಾಂಡ ಪುತ್ರೆ ಮಂಗಳಗಾತ್ರೆ | ಕಾಮಿತ ಸುಫಲದಾಯೆ ಕಾಲನಿಭ ಕಾಯೆ | ಆ ಮಂಜುಗಿರಿ ಬಳಿಯ ಅಲ್ಲಿ ಪುಟ್ಟಿದ ಸಿರಿಯೆ | ಸೋಮಕುಲಪಾವನೇ ಶರಣ ಸಂಜೀವನೆ 1 ಗಂಗಾ ಸಂಗಮ ಘನತರಂಗಿಣೀ ಮಹಾಮಹಿಮೆ | ಅಂಗವಟೆ ಅತಿ ಚಲುವೆ ನಲಿದಾಡಿ ನಲಿವೆ | ಮುಂಗುರಳು ಸುಮಲತೆ ಮೂಲೋಕ ವಿಖ್ಯಾತೆ | ಕಂಗಳಲಿ ನೋಳ್ಪಂಗೆ ಹೃತ್ಕಮಲ ಭೃಂಗೆ 2 ವಾರಿನಿಧಿ ಪ್ರಥುಕುಗಾಮಿನಿ | ಹಾರ ಮುಖೆ ಸುಪ್ರಮುಖೆ | ವೀರಶಕ್ತಿ ವಿಜಯವಿಠ್ಠಲನ |ಕಾರುಣ್ಯಪಾತ್ರೆ ಸಂಗೀತಲೋಲೆ 3
--------------
ವಿಜಯದಾಸ