ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವ ಫಣಿಭೂಷಣನೆ ಬಾ ಸಕಲ ಜನ ಜೀವಚೈತನ್ಯ ಬಾರೈ ದೇವತೆಗಳುಯ್ಯಲೆಯನು ಭಯಭಕ್ತಿ ಭಾವದಿಂ ತೂಗತಿಹರು ಪ ಅವನಿಯೊಳಗಯನವೆರಡು ಸರಪಣಿಗೆ ಭುವನವೇಳರ ಪೀಠವು ಶಿವನೆ ತೊಡಿಸಿರಲು ಮೇಲೆ ಕುಣಿಕೆ ತಾ ಧ್ರುವನ ಕೈಲಿಹುದುಯ್ಯಲೆ 1 ಧರಣಿಯಿದು ಮೇಲುಮಣೆಯು ಗಗನದಿ ಸ್ಫುರಿಸುತಿಹ ಶಶಿಸೂರ್ಯರು ದೀಪವಾ ಗಿರಲೊಪ್ಪುತಿಹದುಯ್ಯಲೆ 2 ಇಂದ್ರಾದಿ ದಿಕ್ಪಾಲಕರು ಮಿಕ್ಕಾದ ಗಂಧರ್ವ ಸುರ ಸಿದ್ಧರು ವಂದಿಸುತ ಸ್ತುತಿಗೈಯುತ ಸಂದಣಿಸಿ ಮುಂದೆ ನಿಂದಿಹರು ಮುದದಿ 3 ಕುಸುಮಮಾಲೆಗಳಾಗಿವೆ ನಕ್ಷತ್ರ ವೆಸೆದು ಗಗನದಲೊಪ್ಪುತ ಅಸಮತೇಜೋರಾಶಿಯೆ ಮದನಹರ ನಸುನಗುತ ಬಂದು ನೆಲೆಸು 4 ಮಂಗಳ ಮಹಾಮಹಿಮನೆ ಶಿವಗಂಗೆ ಗಂಗಾಧರೇಶ ನೀನೆ ಲಿಂಗವೆಂದೆನಿಸುತಿಲ್ಲಿ ತಿರುಪತಿಯ ರಂಗ ವೆಂಕಟನೆನಿಸುವೆ 5
--------------
ತಿಮ್ಮಪ್ಪದಾಸರು
ರಂಗನೆ ಬಾ ಮನಮಂದಿರಕೆ ಶೃಂಗಾರದ ಶ್ರೀ ಹರಿ ಶೌರೇ ಪ ನಗುತ ನಗುತ ಬಾ ಖಗವಾಹನ ಹರಿ ಬಗೆ ಬಗೆ ಕ್ರೀಡೆಗಳ ತೋರುತಲಿ ಝಗ ಝಗಿಸುವ ಪೀತಾಂಬರಧಾರಿಯೆ ಅಗಣಿತ ಗುಣನಿಧಿ ಬಾ ಹರಿಯೆ 1 ಪಕ್ಷಿವಾಹನ ಪುರುಷೋತ್ತಮ ಶ್ರೀಹರಿ ರಕ್ಷಿಸಿ ಕಾಪಾಡುವ ಜಗವ ಕುಕ್ಷಿಯೊಳಡಗಿಸಿ ಸಲಹುವ ಸುಜನರ ರಕ್ಷಿಸಿ ಪೊರೆಯಲು ಬಾ ಹರಿಯೆ 2 ಪೊಂಗೊಳಲೂದುತ ಮಂಗಳ ಚರಿತ ಹೃ- ದಂಗಳದೊಳು ನಲಿದಾಡುತಲಿ ಅಂಗಜಜನಕ ಗೋಪಾಂಗನೆ ಲೋಲ ಶ್ರೀ- ಮಂಗಳ ಮೂರುತಿ ಬಾ ಹರಿಯೆ 3 ಗಂಗಾಜನಕಗೆ ಭೃಂಗಕುಂತಳೆಯರು ರಂಗು ಮಾಣಿಕದಾರತಿ ಬೆಳಗೆ ಪೈಂಗಳನಾಮ ಸಂವತ್ಸರದಲಿ ಭವ ಭಂಗವ ಮಾಡಲು ಬಾ ಹರಿಯೆ 4 ಭ್ರಮರ ಕುಂತಳೆಯರು ಘಮಘಮಿಸುವ ಸುಮಮಾಲೆಗಳ ಕಮಲನಾಭ ವಿಠ್ಠಲಗರ್ಪಿಸುವರು ಶ್ರಮ ಪರಿಹರಿಸಲು ಬಾ ಹರಿಯೆ 5
--------------
ನಿಡಗುರುಕಿ ಜೀವೂಬಾಯಿ
ನವರತ್ನ ಖಚಿತ ಮಾಣಿಕ್ಯದ ಮಂಟಪದಿನವವಿಧದ ಹಂಸತೂಲಿಕ ತಲ್ಪದಲಿಭುವನಮೋಹನ ಶ್ರೀಹರಿಪವಡಿಸಿರಲುಕವಿಗಳು ಪೊಗಳಿ ಪಾಡುವರು ಶ್ರೀಹರಿಯೆಏಳಯ್ಯ ಬೆಳಗಾಯಿತು 1ನಾಗಶಯನನೆ ಏಳು ನಾಗಾರಿವಾಹನನೆನಾಗಸಂಪಿಗೆ ಪಾರಿಜಾತವರಳುತಿದೆಬೇಗದಲಿ ಭಾಗೀರಥಿ ಉದಕವನೆ ತಂದುನಾಗಕನ್ನಿಕೆಯರು ಕಾದು ನಿಂತಿಹರುಏಳಯ್ಯ ಬೆಳಗಾಯಿತು 2ಅತ್ರಿ ವಸಿಷ್ಠ ಭಾರದ್ವಾಜ ಗೌತಮರುಸುತ್ತೆಲ್ಲ ಋಷಿಗಳು ಸ್ತೋತ್ರವನೆ ಮಾಡುತ್ತಮಿತ್ರೆರುಕ್ಮಿಣಿ ಭಾಮೆರಿಂದ ಸೇವಿಪ ಹರಿಗೆಮುತ್ತಿನಾರತಿ ಪಿಡಿದು ನಿಂದಿಹರು ಹರಿಯೆಏಳಯ್ಯ ಬೆಳಗಾಯಿತು 3ಲಕ್ಷ್ಮಿರಮಣನೆ ಏಳು ಪಕ್ಷಿವಾಹನ ಏಳುಕುಕ್ಷಿಯೊಳು ಜಗವನಿಂಬಿಟ್ಟವನೆ ಏಳುರಕ್ಷ ಶಿಕ್ಷಕ ಜಗದ್ರಕ್ಷಕನೆ ನೀ ಏಳುಈಕ್ಷಿಸಿ ಭಜಕರನುದ್ದರಿಸಲೇಳುಏಳಯ್ಯ ಬೆಳಗಾಯಿತು 4ಕಮಲಮಲ್ಲಿಗೆ ಜಾಜಿಕುಸುಮಮಾಲೆಗಳನ್ನುಕಮಲಾಕ್ಷಿಗರ್ಪಿಸುತ ಹರುಷದಿಂದಕಮಲನಾಭ ವಿಠ್ಠಲ ಸಲಹು ಸಲಹೆಂದೆನುತಕಮಲಭವೇಂದ್ರಾದಿಗಳು ಸ್ತುತಿಸುವರು ಹರಿಯೆಏಳಯ್ಯ ಬೆಳಗಾಯಿತು 5ಏಳು ಧೃವವರರೂಪ ಏಳು ನರಹರಿರೂಪಏಳುನಗಧರರೂಪಏಳಯ್ಯ ಹರಿಯೆಏಳಯ್ಯ ಬೆಳಗಾಯಿತು
--------------
ನಿಡಗುರುಕಿ ಜೀವೂಬಾಯಿ