ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವ ಫಣಿಭೂಷಣನೆ ಬಾ ಸಕಲ ಜನ ಜೀವಚೈತನ್ಯ ಬಾರೈ ದೇವತೆಗಳುಯ್ಯಲೆಯನು ಭಯಭಕ್ತಿ ಭಾವದಿಂ ತೂಗತಿಹರು ಪ ಅವನಿಯೊಳಗಯನವೆರಡು ಸರಪಣಿಗೆ ಭುವನವೇಳರ ಪೀಠವು ಶಿವನೆ ತೊಡಿಸಿರಲು ಮೇಲೆ ಕುಣಿಕೆ ತಾ ಧ್ರುವನ ಕೈಲಿಹುದುಯ್ಯಲೆ 1 ಧರಣಿಯಿದು ಮೇಲುಮಣೆಯು ಗಗನದಿ ಸ್ಫುರಿಸುತಿಹ ಶಶಿಸೂರ್ಯರು ದೀಪವಾ ಗಿರಲೊಪ್ಪುತಿಹದುಯ್ಯಲೆ 2 ಇಂದ್ರಾದಿ ದಿಕ್ಪಾಲಕರು ಮಿಕ್ಕಾದ ಗಂಧರ್ವ ಸುರ ಸಿದ್ಧರು ವಂದಿಸುತ ಸ್ತುತಿಗೈಯುತ ಸಂದಣಿಸಿ ಮುಂದೆ ನಿಂದಿಹರು ಮುದದಿ 3 ಕುಸುಮಮಾಲೆಗಳಾಗಿವೆ ನಕ್ಷತ್ರ ವೆಸೆದು ಗಗನದಲೊಪ್ಪುತ ಅಸಮತೇಜೋರಾಶಿಯೆ ಮದನಹರ ನಸುನಗುತ ಬಂದು ನೆಲೆಸು 4 ಮಂಗಳ ಮಹಾಮಹಿಮನೆ ಶಿವಗಂಗೆ ಗಂಗಾಧರೇಶ ನೀನೆ ಲಿಂಗವೆಂದೆನಿಸುತಿಲ್ಲಿ ತಿರುಪತಿಯ ರಂಗ ವೆಂಕಟನೆನಿಸುವೆ 5
--------------
ತಿಮ್ಮಪ್ಪದಾಸರು
ನಂಬಿದೆ ನಮ್ಮಮ್ಮನ ನಂಬಿದೆ ಪ ಕದಂಬ ಕರರ್ಚಳ ನಂಬಿದೆ ಅ.ಪ. ಕರವೀರದೊಳಗಿರುತಿಹಳು ರವಿ ಕಿರಣ ಕಾಂಚನ ಪೀಠ ನಿಧಿತಳು ಸುರತರುಣಿ ಸಂಘಾತ ಸೇವಿತಳು ಆಹಾಹರಿಯ ವಕ್ಷದಿ ಕೂತು ಕರುಣ ಕಟಾಕ್ಷದಿಪರಿವಾರ ಜನಕೆಲ್ಲ ಸುರಿವಳು ಸುಖವನ್ನು 1 ಕರದಿ ಕಂಕಣ ತೋಡೆ ಬಳೆಯು ನಾಗಮುರಿಗೆ ವಂಕಿಯುಶೋಭ ಸಿರಿಯು ಪಾದಾಭರಣದ ಕಲಕಲಧ್ವನಿಯು ಆಹಾಕರಣದಿ ವಾಲಿ ಕಂಠದಿ ಸರ ಸುರಗಿಯುಭರಮ ಮೇಖಳ ಕಾಂತಿ ಹರವಿಲಿ ಬೆಳಗೋದು 2 ಮುಖವನೋಡಲು ಸೋಮಬಿಂಬ ದಿವ್ಯ ಚಿಕುರಮ ಭ್ರಮರದಂಬನಾಸ ಮುಖದಿ ಮಣಿಯು ರವಿಬಿಂಬ ಆಹಾವಿಕಸಿತ ಸುಮಮಾಲೆ ವಿಕಸರ ಫಣಿವೇಣಿಚಕಚಕಿತಾಭರಣಳಕಳಂಕ ಚಲಿವಿಯ 3 ಕವಿ ಭುವನದೊಳಿರುವಳ 4 ದೇಶಕಾಲಗಳಿಂದಸಮಳು ಹರಿಗಾಸುಗುಣಗಳಿಂದಾಸಮಳುಸುಖರಾಶಿ ಸೌಂದರ್ಯ ಸೌಭಗಳು ಆಹಾವಾಸುದೇವನ ಭಕ್ತಿರಾಶೆ ಪೂರೈಸುತಿಂದಿ-ರೇಶನು ಚ್ಛಾಂಗದಿ ತಾ ಸುಖಿಸುವಳಂಬ 5
--------------
ಇಂದಿರೇಶರು
ರಂಗನೆ ಬಾ ಮನಮಂದಿರಕೆ ಶೃಂಗಾರದ ಶ್ರೀ ಹರಿ ಶೌರೇ ಪ ನಗುತ ನಗುತ ಬಾ ಖಗವಾಹನ ಹರಿ ಬಗೆ ಬಗೆ ಕ್ರೀಡೆಗಳ ತೋರುತಲಿ ಝಗ ಝಗಿಸುವ ಪೀತಾಂಬರಧಾರಿಯೆ ಅಗಣಿತ ಗುಣನಿಧಿ ಬಾ ಹರಿಯೆ 1 ಪಕ್ಷಿವಾಹನ ಪುರುಷೋತ್ತಮ ಶ್ರೀಹರಿ ರಕ್ಷಿಸಿ ಕಾಪಾಡುವ ಜಗವ ಕುಕ್ಷಿಯೊಳಡಗಿಸಿ ಸಲಹುವ ಸುಜನರ ರಕ್ಷಿಸಿ ಪೊರೆಯಲು ಬಾ ಹರಿಯೆ 2 ಪೊಂಗೊಳಲೂದುತ ಮಂಗಳ ಚರಿತ ಹೃ- ದಂಗಳದೊಳು ನಲಿದಾಡುತಲಿ ಅಂಗಜಜನಕ ಗೋಪಾಂಗನೆ ಲೋಲ ಶ್ರೀ- ಮಂಗಳ ಮೂರುತಿ ಬಾ ಹರಿಯೆ 3 ಗಂಗಾಜನಕಗೆ ಭೃಂಗಕುಂತಳೆಯರು ರಂಗು ಮಾಣಿಕದಾರತಿ ಬೆಳಗೆ ಪೈಂಗಳನಾಮ ಸಂವತ್ಸರದಲಿ ಭವ ಭಂಗವ ಮಾಡಲು ಬಾ ಹರಿಯೆ 4 ಭ್ರಮರ ಕುಂತಳೆಯರು ಘಮಘಮಿಸುವ ಸುಮಮಾಲೆಗಳ ಕಮಲನಾಭ ವಿಠ್ಠಲಗರ್ಪಿಸುವರು ಶ್ರಮ ಪರಿಹರಿಸಲು ಬಾ ಹರಿಯೆ 5
--------------
ನಿಡಗುರುಕಿ ಜೀವೂಬಾಯಿ
ಶ್ರೀರಮಣೀಮಣಿ ಬಾರೌ ಶ್ರೀಕರಮಣಿಪೀಠಕೆ ಪ. ಸಾರಸದಳನಯನೆ ಸುಗುಣಾಭರಣೆ ಸಾರಸಭವವಂದಿತಚರಣೆ ಕ್ಷೀರಸಾಗರನಂದನೇ ವರ ಕಾರುಣ್ಯಾಮೃತಪೂರಿತ ವದನೆ 1 ಪವನಾತ್ಮಜಸಂಸೇವಿತಾಂಘ್ರಿಯುಗಳೇ ಪಾಲಿತಾಮರ ಜಾಲೇ ಪಾವನಗುಣಶೀಲೇ ಶಶಾಂಕನಿಭಫಾಲೇ ಪಾಲಿಸುನೀಂ ಪಂಕಜಸುಮಮಾಲೆ 2 ಕೇಶವಹೃದಯನಿವಾಸಿನೀ ಪದ್ಮಾಸಿನೀ ಕ್ಲೇಶ ನಿವಾರಿಣಿ ಭುವನೈಕ ಜನನಿ ಕಾಂಕ್ಷಿತಾರ್ಥ ಪ್ರದಾಯಿನಿ 3
--------------
ನಂಜನಗೂಡು ತಿರುಮಲಾಂಬಾ
ಸ್ವಾಮಿ ವೆಂಕಟರಮಣ ಭೂಮಿಪಾಲಕ ದೇವ ಸಂಜೀವ ಪ ಸುರರು ಅಸುರರೆಲ್ಲ ಶರಧಿಯ ಮಥಿಸಲು ಸಿರಿಯು ಜನಿಸಿ ಬಂದು ಹರಿಯ ಸೇರಿದಳು 1 ಸತಿ ಕುಸುಮಮಾಲೆಯನು ಅತಿ ಹರುಷದಿ ಜಗತ್ಪತಿಗೆಯಿಕ್ಕಿದಳು 2 ವಾರಿಧಿಯಾಕ್ಷಣ ಧಾರೆಯನೆರೆಯಲು ವಾರಿಜಾಂಬಕ ಲಕ್ಷ್ಮಿ ಒಡನೆ ನಿಂದಿರಲು 3 ಫಣ್ಭಿಹ್ತ್ರ1ಸೆಮಣಿಯೊಳು ರಮಣಿಯನೊಡಗೊಂಡು ಗುಣನಿಧಿಯು ಒಪ್ಪಿರಲು ತರುಣಿಯರೆಲ್ಲ 4 ಪಚ್ಚವ ಧರಿಸಿ ನವ ಸ್ವಚ್ಛವಾಗಿಯೆ ತುಳಿದು ಅಚ್ಯುತ ಮಹಾಲಕ್ಷ್ಮಿಗಚ್ಚಬೇಕೆನುತ 5 ಸಣ್ಣ ಮಲ್ಲಿಗೆ ಎಣ್ಣೆ ಬಣ್ಣವಾದರಿಸಿನವ ಪುಣ್ಯವಂತೆಗೆ ಕೈಗರ್ಣವ ಕೊಡಲು 6 ಸಿರಿ ತನ್ನ ತಲೆಗೆ ಪ್ರೋಕ್ಷಿಸಿಕೊಳಲು ಹರಿಯು ಮೆಚ್ಚಿದನು 7 ಗಟ್ಟಿಯಾದರಿಸಿನವ ಬಟ್ಟಲೆಣ್ಣೆಯಗೂಡಿ ಮುಟ್ಟಲಂಜಿಯೆ ನಿಲಲು ಸೃಷ್ಟಿಪಾಲಕನ 8 ಅಂಗೈಯ ಅರಿಸಿಣವ ಮುಂಗೈಗೆ ಒರಸುತ್ತ ರಂಗನ ಸಿರಿಮೊಗವ ಕಂಗಳಿಂದೀಕ್ಷಿಸುತ 9 ಅಭಯ ಹಸ್ತವನಿತ್ತ ತ್ರಿಭುವನದೊಡೆಯನು ಅಬುಜಲೋಚನೆ ಮುಖಾಂಬುಜಕೆ ತಿಮುರಿದಳು 10 ಸತಿ ಕೈಯ ಅರಿಶಿಣವ ಪತಿಯಾದಿಕೇಶವನ ನುತಿಸಿ ಊರಿದಳು 11 ಸಿರಿಯೆನೆತ್ತಿದ ಕೈಯ ಹರಿ ತಾನು ತೋರಿಸಲು ಸಿರಿ ನಾರಾಯಣ ಎಂದು ಅರಿಶಿಣವ ತಿಮುರೆ 12 ಶಂಖವ ಧರಿಸಿದ ಪಂಕಜಾಕ್ಷನೆ ವಿಷ್ಣು ವೆಂಕಟೇಶನ ಕರಪಂಕಜಕೆ ತಿಮುರೆ 13 ಕದನದೊಳ್ ಖಳರನು ಸದೆದು ಮರ್ದಿಸಿ ಗೆಲಿದು ಮಧುಸೂದನ ಶ್ರೀವತ್ಸದೆದೆಯ ತೋರೆನುತ 14 ಚಕ್ರವ ಪಿಡಿದು ಪರಾಕ್ರಮಿಯೆನಿಸಿಯೇ ಅಕ್ರೂರಗೊಲಿದ ತ್ರಿವಿಕ್ರಮಗೆ ತಿಮುರೆ 15 ವಾಮನನನಾಗೆ ಶ್ರಮವನು ಪಟ್ಟೆನುತ ಭೂಮಿಯ ಅಳೆದ ಪಾದವಿತ್ತಲು ತಾರೆನುತ16 ಕಾದಲನು ಕಾಣುತ್ತ ಪಾದವನಿತ್ತನು ಶ್ರೀಧರನೆನುತಲಿ ಅರಸಿನವ ತಿಮುರೆ 17 ವಾಮಪಾದವ ಕಂಡು ಭಾಮಿನಿ ತಾರೆನೆಲು ಸೋಮಸನ್ನಿಭ ಹೃಷಿಕೇಶ ತಾನಿತ್ತ 18 ಪದ್ಮಬÁಂಧವ ತೇಜ ಪದ್ಮಸಂಭವ ಪೂಜ ಪದ್ಮನಾಭಗೆ ಪದ್ಮಗಂಧಿ ತಾ ತಿಮುರೆ 19 ಆ ಮಹಾ ನಾಮದ ದಾಮೋದರನ ಕಂಡು ಭಾವೆ ಮಹಾಲಕ್ಷುಮಿ ವೀಳ್ಯವ ಕೊಡಲು 20 ವಾಸುದೇವನು ತನ್ನ ಅರಸಿ ಮಾಲಕ್ಷ್ಮಿಗೆ ಪೂಸಿದನರಿಸಿನದ ಎಣ್ಣೆಯ ಮೊಗಕೆ 21 ಪಂಕಜಾಕ್ಷನ ಕಂಡು ಕಂಕಣದ ಹಸ್ತವನು ಕುಂಕುಮದೆಣ್ಣೆಯ ಸಂಕರ್ಷಣ ತಿಮುರೆ 22 ಬುದ್ಧಿವಂತೆಯ ಎಡದ ಮುದ್ದು ಹಸ್ತವ ನೋಡಿ ಉದ್ಧರಿಸಿ ನವ ಪ್ರದ್ಯುಮ್ನ ನಗುತ 23 ಅನಿರುದ್ಧ ನಗುತಲೆ ಘನಕುಚಮಂಡಲಕೆ ಅರಿಸಿನವ ತಿಮುರೆ 24 ಪುರುಷರೊಳು ಉತ್ತಮನು ಹರುಷವನು ತಾಳಿಯೆ ಅರಸಿ ಮಹಾಲಕ್ಷುಮಿಗೆ ಅರಿಸಿನವ ತಿಮುರೆ 25 ಅಧೋಕ್ಷಜನು ತನ್ನ ತುದಿವೆರಳ ಅರಿಸಿನವ ಪದುಮನೇತ್ರೆಯ ಪದದೊಳಗೆ ಮಿಡಿದಿರ್ದ 26 ನಾರಸಿಂಹನು ಸತಿಯ ಮೋರೆಯಿಂದಾರಭ್ಯ ಓರಣವಾಗಿಯೇ ಅರಿಸಿನವ ತಿಮುರೆ 27 ನೆಚ್ಚಿಯೆ ಹರಿ ತಾನು ಅಚ್ಚ ಕರ್ಪೂರದೆಲೆಯ ಅಚ್ಯುತ ಕೊಡಲು 28 ಮನದಿ ಲಜ್ಜಿತೆಯಾಗಿ ಘನಮಹಿಮ ಮುನಿವಂದ್ಯ ತನಗೆ ವಲ್ಲಭ ನಿಜನಾದನೆನುತ 29 ಆ ಪರಮಹಿಮನು ರೂಪಸಂಪನ್ನ ದ- ಯಾಪರನಾಗಿಯೆ ಉಪೇಂದ್ರ ತಾನೊಲಿದು 30 ಹರಯೆಂಬ ನಾಮದಿ ಹರದಿ ಮಾಲಕ್ಷ್ಮಿಯ ವರಸಿದ ಶ್ರೀಹರಿಯು ಹರದಿಯರ್ಪೊಗಳೆ31 ಬೆಟ್ಟದೊಡೆಯನೆನಿಸಿ ದೃಷ್ಟಿಗೋಚರವಾದ ಶ್ರೀಕೃಷ್ಣ ಮಾಲಕ್ಷುಮಿಗೆ ಆರತಿಯ ತಿಮುರೆ 32 ವರಮಹಾಲಕ್ಷುಮಿಗೆ ವರಾಹತಿಮ್ಮಪ್ಪಗೆ ಅರಸಿನದೆಣ್ಣೆಯ ರಚಿಸಿದ ಪರಿಯು 33
--------------
ವರಹತಿಮ್ಮಪ್ಪ
ನವರತ್ನ ಖಚಿತ ಮಾಣಿಕ್ಯದ ಮಂಟಪದಿನವವಿಧದ ಹಂಸತೂಲಿಕ ತಲ್ಪದಲಿಭುವನಮೋಹನ ಶ್ರೀಹರಿಪವಡಿಸಿರಲುಕವಿಗಳು ಪೊಗಳಿ ಪಾಡುವರು ಶ್ರೀಹರಿಯೆಏಳಯ್ಯ ಬೆಳಗಾಯಿತು 1ನಾಗಶಯನನೆ ಏಳು ನಾಗಾರಿವಾಹನನೆನಾಗಸಂಪಿಗೆ ಪಾರಿಜಾತವರಳುತಿದೆಬೇಗದಲಿ ಭಾಗೀರಥಿ ಉದಕವನೆ ತಂದುನಾಗಕನ್ನಿಕೆಯರು ಕಾದು ನಿಂತಿಹರುಏಳಯ್ಯ ಬೆಳಗಾಯಿತು 2ಅತ್ರಿ ವಸಿಷ್ಠ ಭಾರದ್ವಾಜ ಗೌತಮರುಸುತ್ತೆಲ್ಲ ಋಷಿಗಳು ಸ್ತೋತ್ರವನೆ ಮಾಡುತ್ತಮಿತ್ರೆರುಕ್ಮಿಣಿ ಭಾಮೆರಿಂದ ಸೇವಿಪ ಹರಿಗೆಮುತ್ತಿನಾರತಿ ಪಿಡಿದು ನಿಂದಿಹರು ಹರಿಯೆಏಳಯ್ಯ ಬೆಳಗಾಯಿತು 3ಲಕ್ಷ್ಮಿರಮಣನೆ ಏಳು ಪಕ್ಷಿವಾಹನ ಏಳುಕುಕ್ಷಿಯೊಳು ಜಗವನಿಂಬಿಟ್ಟವನೆ ಏಳುರಕ್ಷ ಶಿಕ್ಷಕ ಜಗದ್ರಕ್ಷಕನೆ ನೀ ಏಳುಈಕ್ಷಿಸಿ ಭಜಕರನುದ್ದರಿಸಲೇಳುಏಳಯ್ಯ ಬೆಳಗಾಯಿತು 4ಕಮಲಮಲ್ಲಿಗೆ ಜಾಜಿಕುಸುಮಮಾಲೆಗಳನ್ನುಕಮಲಾಕ್ಷಿಗರ್ಪಿಸುತ ಹರುಷದಿಂದಕಮಲನಾಭ ವಿಠ್ಠಲ ಸಲಹು ಸಲಹೆಂದೆನುತಕಮಲಭವೇಂದ್ರಾದಿಗಳು ಸ್ತುತಿಸುವರು ಹರಿಯೆಏಳಯ್ಯ ಬೆಳಗಾಯಿತು 5ಏಳು ಧೃವವರರೂಪ ಏಳು ನರಹರಿರೂಪಏಳುನಗಧರರೂಪಏಳಯ್ಯ ಹರಿಯೆಏಳಯ್ಯ ಬೆಳಗಾಯಿತು
--------------
ನಿಡಗುರುಕಿ ಜೀವೂಬಾಯಿ