ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳುತಲೆದ್ದು ಮನವೆ ನೀ ವಲೀ ನಿಜಖೂನ ಕುಲಕೋಟಿ ಉದ್ಧರಿಸುವ ನೆಲೆನಿಭ ಸ್ಥಾನ ಬೆಳಗಾಗಲಿಕ್ಕೇರಿತು ನೀ ಒಳಿತಾಗಿ ಪೂರ್ಣ ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ 1 ಒಳಮುಖನಾಗರಿಯೋ ನೀ ಸುಲಲಿತ ಜ್ಞಾನ ಅಲೇಶ ಮಾಡದೆ ನೀ ಬ್ಯಾಗ ಬಲಿ ನಿಜಧ್ಯಾನ ಥಳಥಳಗುಡುತಲ್ಯದ ಒಳಿತಾಗಿ ಪೂರ್ಣ ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ 2 ತೊಳಿಬೇಕೆಲೊ ಮನದ ಹೀನ ಮಲಿನಗುಣ ಕರ್ಮ ತಮಂಧತನ ಕಳೆಕಾಂತಿಯುಳ್ಳ ಕರುಣಾರ್ಣವ ಸ್ವಾಮಿ ಪೂರ್ಣ ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ 3 ಸಲೆ ಮೊರೆಹೊಕ್ಕು ನೀ ಸದಾಬಲಿ ಭಕ್ತಿ ಪೂರ್ಣ ಅನುದಿನ ಸದ್ವಸ್ತು ಶರಣ ಸಕಳ ಸುರವುತಲ್ಯದೆ ಬಲ್ಲ ಸ್ವಾಮಿ ಕರುಣ ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ 4 ಇಳೆಯೊಳಿದೆ ಸಕಲಪುಣ್ಯಶಿರೋನಿಧಾನ ಘಳಿಸುವದೊಂದೆ ಸುಫಳಿತ ಸುದಿವ್ಯ ಘನ ತಿಳಿಯೊ ಸುಮನವೆ ಮಹಿಪತಿಸ್ವಾಮಿ ಪೂರ್ಣ ಒಲುವಾಂಗೆ ಮಾಡು ಗುರುಮೂರ್ತಿಗೆ ಸುನಮನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬೋಧರ ನೋಡಿರೈ ಸತ್ಯಬೋಧರ ಪಾಡಿರೈ ಪ ಚಂದ್ರಾ ಸದ್ಗುಣ ಸಾಂದ್ರಾ ಅ.ಪ. ಜವನೋಧರ್ಮ ಪ್ರಸ್ರವನೋ ಯತಿ ಪುಂಗವನೋ ರಾಮಾರ್ಚನ ಕೃತ ಪೂತ ಹಸ್ತ ಪಲ್ಲವನೋ ವಿದ್ವದ್ಧವನೋ ಕಾಮಿತೇಷ್ಟ ಪ್ರದ ಚಿಂತಾಮಣಿಗುಣಯುತನೋ ಜತಸನ್ನುತನೊ 1 ಪಚ್ಚದ್ಯತಿಯೋ ಸಜ್ಜನ ಕುನರೂಪ ಪ್ರೋನ್ನತಿಯೋ ಕವಿಜನ ಹರಿಸಮ್ಮತವೋ 2 ಹರಿಜನಧನವೋ ಅಭಯ ಸುಮನವೋ ಮದಮರ್ದನವೋ ದಾಸರ ವಶವೊ 3
--------------
ನರಸಿಂಹವಿಠಲರು
ಯಮುನೇ ದುರಿತೋಪಶಮನೇ ಪ ಶರಣೆಂಬೆ ತವ ಪಾದಾಂಬುರುಹ ಯುಗಳಿಗೆ ದಿವಾ ಕರತನಯೆ ಸಪ್ತಸಾಗರ ಭೇದಿನೀ ಹರಿತೋಷ ಲಾಭ ಸುಂದರಿ ಸುಭಗೆ ನಿನ್ನ ಸಂ ದರುಶನಕೆ ಬಂದೆ ಭಕ್ತರ ಪಾಲಿಪುದು ಜನನಿ 1 ಮಕರಾದಿ ಮಾಸದಲಿ ವಿಖನಸಾವರ್ತ ದೇ ಶಕೆ ಬಂದು ವಿಜ್ಞಾನ ಭಕುತಿಯಿಂದಾ ತ್ರಿಕರಣದ ಶುದ್ಧಿಯಲಿ ಸಕೃತ ಸ್ನಾನದ ಗೈಯೆ ಸಕಲ ಸುಖವಿತ್ತು ದೇವಕೀಸುತನ ತೋರಿಸುವೆ 2 ಕನಕಗರ್ಭಾವರ್ತವೆನಿಪ ದೇಶದಲಿ ಸ ಜ್ಜನರ ಪಾಲಿಪೆನೆಂಬ ಅನುರಾಗದಿ ಪ್ರಣವಪಾದ್ಯಗೆ ವಿಮಲ ಮುನಿಯಂತೆ ನಿರುತ ಕುಂ ಭಿಣಿಯೊಳಗೆ ಸರಸ್ವತಿ ದ್ಯುನದಿಯಂದದಿ ಮೆರೆದೆ 3 ಜಮದಗ್ನಿ ಮುಖ್ಯ ಸಂಯಮಿಗಳನುದಿನದಿ ಆ ತಮ ತಮ್ಮೊಳಗೆ ರಮಾರಮಣ ದಾಮೋದರನ ಸುಮಹಿಮೆಗಳನು ಪೊಗಳುತಮಿತ ಮೋದದಲಿಹರು 4 ಪಿಂಗಳಾಧಿಷ್ಠಿತೆ ಶುಭಾಂಗಿ ಸುಮನವನಿತ್ತು ಕಂಗೊಳಿಸು ಎನ್ನಂತರಂಗದಲ್ಲಿ ತುಂಗ ಸುಮಹಿಮ ಜಗನ್ನಾಥ ವಿಠಲನ ಸುಗು ಣಂಗಳ ತುತಿಪುದಕೆ ಮಂಗಳ ಮತಿಯನೀಯೇ 5
--------------
ಜಗನ್ನಾಥದಾಸರು
ಶ್ರೀ ಸತ್ಯಧೀರರು ಚಾರು ಚರಣಗಳಿಗೆರಗುವೆನು ಪ ವರಮತಿಗುಣಗನ ಮಣಿಯೆ ಅ.ಪ. ಯತಿ ಆಶ್ರಮದಿ ಸೀತಾ ಪತಿಯ ಪೂಜಿಸುತಿರೆ ಮತಿಹೀನರಪಹಾಸ್ಯ ಮಾಡಿದರೆ ಪರಿಯಂತ ಹರಿಸೇವೆಯಾ ಅತಿ ಭಕುತಿಯಿಂದಲಿ ಮಾಡಿದ್ಯೋ ಜೀಯಾ ಹಿತದಿಂದ ಕೈಗೊಂಡ ದಶರಥನಂದ ರಘುರಾಯ ಯತಿವರನೆ ನಿನ್ನಯ ಕ್ಷಿತಿಯೊಳಗೆ ಹರಿ ಪ್ರತಿ ದಿಗಂತ ಪರಿಹರಿಸಿದ ವರಕೀರ್ತಿ ಆಶ್ರಯದಿಂದ ಬಂದೆ 1 ವರಮಧ್ವಮತಾಭಿಮಾನಿಯೆ ನಿನ್ನಯ ದರುಶನದಿಂದ ಪಾವನನಾದೆನೋ ದೊರಕಾದೊ ಯಂದಿಗೆಲ್ಲರಿಗೆ ಈ ಗುರುಗಳ ವರಸೇವಾ ಸರ್ವಜ್ಞ ಪೀಠಕೆ ಸರಸ ಶೋಭಿಸುವಾ ಹರಿವಾಯುಗಳಲಿ ನಿಶ್ಚಯದ ಭಕುತಿಯನು ಪಾಲಿಸುವಾ ನಿರುತದಲಿ ಕಾವಾ ಪರಮಭಕ್ತರ ಭಾಗ್ಯನಿಧಿಯಂದರಿದು ಹಂಬಲಿಸುತಲಿ ನಿನ್ನಯ ಚರಣಕೆರಗಿದೆ ತ್ವರದಿ ಕರುಣಿಸಿ ಪೊರೆಯೊ ಶರಣರ ಸಂಜೀವಾ 2 ಆನಂದಜ್ಞಾನದಾಯಕನಾಜ್ಞೆಯಿಂ ಸತ್ಯಜ್ಞಾನಾ- ನಂದಗಿತ್ತಿ ಉತ್ತಮಪದವಾ ಗಾನಲೋಲನ ಜಗತ್ಪಾಲನ ಪ್ರಿಯನೇ ತವ ಸೇವಾ ತನುವನೊಪ್ಪಿಸಿ ಇಡುವೆ ನಿನ್ನಡಿಗಳ ಮೇಲೆ ಶಿರವಾ ಸೇವಕನೋ ಅನುಚಿತೋಚಿತಕರ್ಮ ಕೃಷ್ಣಾರ್ಪಣವೆನುವ ಸುಮನವ ಕೊಡು ನೀ 3
--------------
ಹನುಮೇಶವಿಠಲ
ಸ್ಮರಿಸುಮನವೆ ನೀ ದೇವಕಿ ಕಂದನ ಧ್ರುವ ಪಾಲನ ಕುರುಳರ ನಾಶನ 1 ಉರಗಶಯನನ ಗರುಡವಾಹನನ 2 ಸಿರಿಯ ಲೋಲನ ಪರಮ ಪಾವನನ 3 ಸುರರಾಜವಂದ್ಯನ ಕರಿರಾಜಪ್ರಿಯನ 4 ಗಿರಿಯನೆತ್ತಿದನ ತುರುಗಳಗಾಯದ್ದವನ 5 ಸಾರ ಸಂಜೀವನ 6 ಭಂಜನ ದುರಿತ ನಿವಾರಣ 7 ಸರ್ವಾರ್ಥಕಾರಣ ಹರುಷದ ಜೀವನ 8 ಪರಿಪೂರ್ಣವಿಹನ ಪೂರಿತ ಕಾಮನ 9 ಗುರುಶಿರೋರತ್ನನ ಕರುಣಲೋಚನ 10 ಸ್ಮರಿಸು ಮನವೆ ನೀ ಮಹಿಪತಿ ಈಶನ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು