ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರತಿ ನಿತ್ಯ ಕಲ್ಯಾಣಿ ಪರಶಿವೆಗೆ || ಅತ್ಯುತ್ತಮ ನವರತ್ನದಿ ಕೆತ್ತಿದ | ಮುತ್ತಿನ ಆರತಿ ಬೆಳಗುವೆನು || ದೇವಿಗಾರತಿಯ ಬೆಳಗುವೆನು 1 ಗಂಧ ಕತ್ತುರಿ ಪರಿಮಳದಿ || ಕುಂದಣದಾರತಿ ಬೆಳಗುವೆನು || ದೇವಿಗಾರತಿಯ ಬೆಳಗುವೆನು 2 ಪರಿಪರಿ ಸುಮದಲಿ ಶೃಂಗರಿಸಿ || ವರ ಸುಮದಾರತಿ ಬೆಳಗುವೆನು || ದೇವಿಗಾರತಿಯ ಬೆಳಗುವೆನು 3 ಮಂಗಳ ಗೌರಿ ಕೃಪಾಕರಿಗೆ | ಮಂಗಳದಾಯಕಿ ಶಂಕರಿಗೆ || ಮಂಗಳಾರತಿಯ ಬೆಳಗುವೆನು || ದೇವಿಗಾರತಿಯ ಬೆಳಗುವೆನು4
--------------
ವೆಂಕಟ್‍ರಾವ್
ಇಂತುಯನ್ನಾ ಬಯಕೆ ಕೈಗೂಡಿಸೋ ದೇವಾ ಅಂತರ, ಗಲಿದೇ ಹಂಬಲಿಸುತಿದೇ ಜೀವಾ ಪ ನಿನ್ನ ಸಿರಿಪದಾ ಸಖಚಂದಿರದಲಿ ಎನ್ನ ಕಂಗಳು ಚಕೋರಾಗಿ ನೋಡಲಿ ನಿನ್ನ ಕಥೆಯಾ ಘನ ಗರ್ಜನೆಯಲಿ ಘನ್ನ ಶ್ರವಣ ಮಯವಾಗಿ ನಲಿಯಲಿ 1 ನಿನ್ನ ನಾಮಾ ಮೃತ ಫಲ ಸೇವಿಸಲಿ ಎನ್ನ ನಾಲಿಗೆ ಶುಕವಾಗಿರಲಿ ನಿನ್ನ ಚರಣಾರ್ಪಿತ ತುಲಸಿ ಕುಸುಮದಲಿ ಎನ್ನ ಪ್ರಾಣವು ಮಧುಪಾಗಿ ಕೂಡಲಿ 2 ನಿನ್ನ ಮನೆಯಾಶೆಯಾ ಊಳಿಗದಲಿ ಎನ್ನಂಗ ನಿರುತ ಮಾರಿಸಿ ಕೊಳ್ಳಲಿ ಘನ್ನ ಗರು ಮಹಿಪತಿ ಪ್ರಭು ಯಚ್ಚರದಲಿ ನಿನ್ನಂಕಿತದಾ ಜನ್ಮಗಳೇ ಬರಲಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ ಪ ನೀ ದೇಹದೊಳಗೊ ನಿನ್ನೊಳು ದೇಹವೊ ಹರಿಯೆಅ ಬಯಲೊಳಗೆ ಆಲಯವೊ ಆಲಯದೊಳಗೆ ಬಯಲೊಬಯಲು ಆಲಯವೆರಡು ನಯನದೊಳಗೊನಯನ ಬುದ್ಧಿಯ ಒಳಗೊ ಬುದ್ಧಿ ನಯನದ ಒಳಗೊನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ1 ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊಸವಿಯು ಸಕ್ಕರೆ ಎರಡು ಜಿಹ್ವೆಯೊಳಗೊಜಿಹ್ವೆ ಮನಸಿನ ಒಳಗೊ ಮನಸು ಜಿಹ್ವೆಯ ಒಳಗೊಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ 2 ಕುಸುಮದಲಿ ಗಂಧವೋ ಗಂಧದಲಿ ಕುಸುಮವೋಕುಸುಮ ಗಂಧಗಳೆರಡು ಆಘ್ರಾಣದೊಳಗೊಅಸಮಭವ ಕಾಗಿನೆಲೆಯಾದಿಕೇಶವರಾಯಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ ಹರಿಯೆ 3
--------------
ಕನಕದಾಸ
ಮಹಾಬಲಿಪುರ ಮಹಾಬಲೇಶ್ವರ ಮಾವಳಿಪುರ ಮಿಹಿರಾ ಸುರುಚಿರ ಪರಾತ್ಪರಾ ಪ ಮಹೀಸುರಾರ್ಚಿತ ಸದಾಕೃಪಾಕರ ವಿಹಂಗವಾಹನ ಪೀತಾಂಬರ ಅ.ಪ ಮಧುಸೂದನ ತವಪಾದುಕಾ ಸಾರದ ಮಾಧವಿ ಸುಮದಲಿ ಪೂದತ್ತರುದಿಸಿ ಮೇದಿನಿಯೊಳು ತವಾರಾಧನ ತತ್ವವ ಬೋಧಿಸುವಂತೆ ನೀಗೈದೆ ಕೃಪಾನಿಧೆ 1 ಶ್ರೀಮದನಂತ ದಿವ್ಯಾಸನಮಂಡಿತ ಶ್ರೀಮಹೀಸಂಯುತ ಲೋಕವಿಖ್ಯಾತಾ ಪ್ರೇಮಸುಧಾನ್ವಿತ ಕಾಮಿತದಾತಾ ಶ್ರೀ ಮಾಂಗಿರಿಪತಿ ಶರಣಸಂಪ್ರೀತಾ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಎಲ್ಲಿಯ ಮಧುರಾಪುರವು | ಎಲ್ಲಿಯ ತಾ ಬಿಲ್ಲು ಹಬ್ಬ |ಎಲ್ಲಿಯ ಸೋದರಮಾವನೆ ಪಎಲ್ಲಿಯ ಮಲ್ಲರಸಂಗ |ಖುಲ್ಲಕಂಸನು ನಮಗೆ |ಎಲ್ಲಿಯ ಜನ್ಮದ ವೈರಿಯೆ-ಸಖಿಯೆ ಅ.ಪವೃಂದಾವನದೊಳಗಿರುವ ವೃಕ್ಷಜಾತಿಗಳೆಲ್ಲ |ಒಂದೊಂದು ಫಲದಿಂದಲಿ ಸಂದಣಿತವೆ ||ಕುಂದಕುಸುಮದಲಿರುವ ಮಂದಿರದಲಿಚಕೋರ|ಒಂದೊಂದು ಸುಖಭರಿತವೆ ||ಅಂದುಮಾಧವನಮ್ಮ ಹೊಂದಿ ಕರವಿಡಿದ |ನಂದನ ಕಂದನ ಚರಿತವೆ ಸಖಿಯೆ 1ಅಕ್ರೂರ ತಾನೆಲ್ಲ ಅಚ್ಯುತಗೆಎಡೆಮಾಡಿ |ಆ ಕ್ರೂರನೆನಿಸಿದನೆ |ವಕ್ರಮಾರ್ಗವ ಕೂಡಿ ವನಿತೆಯರ ಉಸಿರೆಣಿಸಿ |ಚಕ್ರಧರನಗಲಿಸಿದನೆ ||ಆಕ್ರಮಿಸಿ ಸುರಲೋಕ ಪಾರಿಜಾತವನಂಬು-|ಜಾಕ್ಷಿಗೆ ತಂದಿತ್ತನೆ-ಸಖಿಯೆ 2ನೀರ ಚೆಲ್ಲಾಟದೊಳು ನಿಲಿಸಿ ನಮ್ಮೆಲ್ಲರ |ನಾರಿಯರಿಗೆ ಚಲ್ಲಿದನೆ ||ಮೋರೆ ಮೋರೆ ನೋಡಿ ಅಧರಾಮೃತಗಳ |ಸಾರಿ ಸಾರಿ ಸವಿದುಂಬನೆ ||ದ್ವಾರಕಾಪುರವಾಸ ಪುರಂದರವಿಠಲ |ಸೇರಿ ನಮ್ಮನು ಸಲಹುವನೆ-ಸಖಿಯೆ 3
--------------
ಪುರಂದರದಾಸರು