ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಶ್ರೀ ಜಯತೀರ್ಥರು) ಜಯತೀರ್ಥರೇ ನಮ್ಮ ಸುಮತೋದ್ಧಾರಕರು ಮಳಖೇಡ ನಿಲಯರು ಪ ಪೂರ್ಣಪ್ರಜ್ಞರಲಿ ಪಶುರೂಪ ತಾಳಿ ಭಾಷ್ಯಗಳ ಪೇಳಿ ಜೀರ್ಣಮಲಿನ ಮೂಢಮತಗಳಿಗೆ ದಾಳಿ ಈ ಗ್ರಂಥಗಳ್ಹೇಳಿ ಪೂರ್ಣಬೋಧ ಗುರುಮತವಾರ್ವವ ಪೇಳಿ ಸುಜ್ಞರಾದರು ಮುದ ತಾಳಿ 1 ಇದೇ ದೇಶಪಾಂಡೆರೊಳುದ್ಭವಿಸೆ ನರಜನ್ಮ ವಹಿಸಿ ಪದಪಿನಿಂದ ಗೃಹಸ್ಥಾಶ್ರಮವನುಸರಿಸಿ ಸಂಸಾರದಿ ಬೆರಸಿ ಕುದರಿ ಏರಿ ಪೊಳೆ ನೀರಿಗೆ ಬಾಯಿ ಸರಿಸಿ ಬಹು ನೀರಡಿಸಿ ಸದಮಲಕ್ಷೋಭ್ಯರು ಪಶುವೆಂದುಚ್ಚರಿಸಿ ಪೂರ್ವ ಜನ್ಮ ಸ್ಮರಿಸಿ 2 ಕ್ಷಿಪ್ರದಿ ಯತ್ಯಾಶ್ರಮವೆ ತಾಳಿದರು ಟೀಕವ ಕೈಗೊಂಡರು ಸುಪ್ರಸಿದ್ಧ ಹರಿಮತವನುದ್ಧರಿಸಿದರು ವ್ರತಗಳ ಪೇಳಿದರು ವಿಪ್ರವರ್ಗಕೆ ಹರಿಮಾರ್ಗವ ತೋರಿದರು ಹರಿಮತ ತತ್ವಜ್ಞರು ಸುಪ್ರಸಿದ್ಧ ನರಸಿಂಹವಿಠಲತರು ಶತಪತ್ರ ಶೇಷಾಲಂಕೃತರು 3
--------------
ನರಸಿಂಹವಿಠಲರು
ಶರಣನ್ನ ಮಾತು ಲಾಲಿಸೊ ಪ ಭವ ಕರವ ಪಿಡಿದು ಪೊರೆ ಎಂದು ನಿನ್ನ ನಾ ಕರೆವೆ ಬಾಯ್ದೆರೆವೆ ಆಲ್ವರಿವೆ ನತಜನ ಸುರತರುವೆ ಅ.ಪ ಮಧ್ವಮುನಿ ಸುಮತೋದ್ಧಾರಕ ಯತಿಕುಲ ತಿಲಕ ಪಾವಕ | ವಿದ್ವತ್ ಜನತತಿ ಪಾದ ಪದ್ಮಕೆ ನಮಿಸುವೆ ಶುದ್ಧ ಸುಜ್ಞಾನವ ನೀಡೊ ಅಘದೂಡೋ ಕೃಪೆ ಮಾಡೋ | ಸುತನೆಂದು ನೋಡೋ 1 ವಿರಚಿಸಿ ಗ್ರಂಧತ್ರಯವ | ಬೋಧಿಸಿ ಭೇದ ಪೊರೆದಿ ದ್ವಿಜ ಪರಿವಾರವ | ನೆರೆನಂಬಿದ ಭೂಪಗೆ ಧಾವಿಸುತ ಭರದಿ ಬರುವ ಕುಹಯೋಗ ಕಂಟಕವ ದಯದಿ ನೀತರಿದಿ | ಸುಖಗರೆದಿ ಧಾರುಣಿಯೊಳು ಮೆರಿದಿ 2 ವಂದಿಪೆ ಸುಸುಗತಿದಾಯಕ ಶ್ರೀವರ ಶಾಮ ಸುಂದರ ಕೃಷ್ಣೋಪಾಸಕ ತಂದೆ ಎಂದು ನಿನ್ನ ಪೊಂದಿ ಪ್ರಾರ್ಥಿಸುವೆ ಬಂದು ಜವದಿ ಪುರಂದರದಾಸರ ಪ್ರಿಯಾ 3
--------------
ಶಾಮಸುಂದರ ವಿಠಲ