ಒಟ್ಟು 8 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸರಾಯಾ ಎನ್ನ | ಬೆಂಬಿಡದಲೆ ಕಾಯೋ ಬಹು ಪರಿಯಿಂದ ದಾಸರಾಯಾ ಪ ಈರೇಳು ವರುಷವಾರಂಭಿಸಿ ಪ್ರತಿದಿನ | ದಾಸರಾಯ ಜಾವು ಮೂರುಗಳಲ್ಲಿ ಮುಕುಂದನ ಚರಣವ | ದಾಸರಾಯಾ | ಚಾರು ಮನಾಬ್ಜದಿ ಬಹಿರದಿ ಬಗೆ ಬಗೆ | ದಾಸರಾಯಾ | ಭೂರಿ ಭಕುತಿ ಭರಿತನಾಗಿ | ದಾಸರಯ್ಯಾ1 ಪುಂಗವ ಸುಮತೀಂದ್ರ ರಾಯ ಕರೆದ ನಿನ್ನ | ದಾಸರಾಯಾ | ಸಂಗೀತ ರಸನ ಪಾನಮಾಡಿ ಹರುಷದಿ | ದಾಸರಾಯಾ | ಹರಿ | ಡಿಂಗರೊಳುತ್ತುಂಗನೆನಿಸಿಕೊಂಡೆ ದಾಸರಾಯ 2 ಕುಶಲಗಾನವ ಕೇಳಿ ಗುರುಸತ್ಯ ಪೂರ್ಣರು | ದಾಸರಾಯಾ | ಪರಾ ವಸುನಾಮ ಗಂಧರ್ವನವತಾರ ನೀನೆಂದು | ದಾಸರಾಯಾ | ಪೆಸರಿಟ್ಟರಂದು ವಿದ್ವಜ್ಜನ ಮೆಚ್ಚಲು ದಾಸರಾಯಾ | ಎನ ಗೊಶವಹುದೇ ನಿಮ್ಮ ಮಹಿಮೆ ಕೊಂಡಾಡಲು |ದಾಸರಾಯಾ | 3 ಚರಿಸಿದೆ ಪುಣ್ಯಕ್ಷೇತ್ರಗಳ ಭಕುತಿಯಿಂದ | ದಾಸರಾಯಾ | ಪ್ರತಿ | ವರುಷ ಬಿಡದೆ ಶೇಷಗಿರಿಯವಾಸನ | ದಾಸರಾಯಾ | ಪರಿಯಂತ | ದಾಸರಾಯಾ | ಪರಿ ಚರಿಯವ ಕೈಕೊಂಡು ಪಡೆದೆ ಮಂಗಳಗತಿ ದಾಸರಾಯ 4 ಮುನಿಯು ಉಪೇಂದ್ರರಾಯರು ನಿಮ್ಮ ಚರಿತೆಯ | ದಾಸರಾಯಾಕೇಳಿ ಸಾನುರಾಗದಿ ಸರ್ವ ಮಂತ್ರೋಪದೇಶವ | ದಾಸರಾಯಾ | ಆನುಪೂರ್ವಕಮಾಡಿ ಅತಿ ಸಂತೋಷದಿ | ದಾಸರಾಯಾ | ಕೊಟ್ಟರು ಶ್ರೀ ನರಸಿಂಹ ಪ್ರತಿಮೆ ಸಾಲಿಗ್ರಾಮ | ದಾಸರಾಯಾ | 5 ಕಿಂಕರನೆನಿಸಿ ಪರಂದರದಾಸರೆ | ದಾಸರಾಯಾ | ಅವರಿಂ ದಂಕಿತ ವಹಿಸಿ ನಿಶ್ಯಂಕೆಯಿಂದ ನೀನು ದಾಸರಾಯಾ | ಪೊಂಕವ ಪೊಗಳುತ ಪೊಡವಿಯೊಳು ಚರಿಸಿದೆ | ದಾಸರಾಯಾ|ಭವ ಪಂಕವ ದಾಟ ಪರೇಶನನೈದಿದೆ | ದಾಸರಾಯಾ 6 ಪರಿಯಂತ ಕರ ಒಡ್ಡಲೊಲ್ಲೆನೆಂಬುವ ಛಲ | ದಾಸರಾಯಾ | ನಿನಗೆ ಸಲ್ಲಿತು ನಿಜ ಭಾಗವತರ ಪ್ರಿಯ | ದಾಸರಾಯಾ | ನಿಮ್ಮಾ ಅನುಭವೋಪಾಸನೆ ಏನು ತಿಳಿಯದು ದಾಸರಾಯಾ 7 ಕಮಲ ಧ್ಯಾನ ದಾಸರಾಯಾ | ಸ್ನಾನ ವರ ಮಂತ್ರ ಜಪ ತಪ ವಿಹಿತಾಚರಣೆಗಳು | ದಾಸರಾಯಾ ಪೆರತೊಂದು ಸಾಧನ ಮನ ವಾಕ್ಕಾಯಗಳಲಿ | ದಾಸರಾಯಾ | ನಾನೊಂದರಿಯೆ ದಯಾಬ್ಧಿ ಉದ್ಧರಿಸೆನ್ನ ಭವದಿಂದ ದಾಸರಾಯಾ 8 ನಾರಾಯಣಾತ್ಮಜ ಅನಂತಾರ್ಯರುದರದಿ ದಾಸರಾಯಾ |ಪುಟ್ಟಿ | ನೂರೊಂದು ಕುಲಗಳುದ್ಧಾರ ಮಾಡಿದೆ | ದಾಸರಾಯಾ | ಕಾರುಣ್ಯನಿಧಿ ಜಗನ್ನಾಥವಿಠಲ | ದಾಸರಾಯಾ | ನಿಮ್ಮ ಚಾರು ಚರಿತ್ರೆಯ ತುತಿಸಿ ಪಾವನನಾದೆ | ದಾಸರಾಯಾ 9
--------------
ಜಗನ್ನಾಥದಾಸರು
ಬಂದೆ ಭಗವತ್ಪಾದಯುಗಾರ ವಿಂದಕೆ ಮಿಳಿಂದನಾಗಿ ವಂದನೀಯರೆ ಯತಿಕುಲಾಬ್ಧಿ ಚಂದ್ರರ ಭುವನೇಂದ್ರತೀರ್ಥರೆ1 ಪರಮ ಪಾವನ ಭುವನೇಂದ್ರರ ಕರಸಂಜಾತ ವರದೇಂದ್ರರ ಕರಸರೋರುಹಭವರೆ ಮಹಾ ಕರುಣಾಂತಃಕರಣ ಧೀರರೆ2 ಸುಮತೀಂದ್ರಾದಿ ಯತೀಂದ್ರರ ವಿಮಲ ಹೃದಯಕಮಲಭಾಸ್ಕರ ಅಮಮ ನಿಮ್ಮ ಕಾಂಬ ಯೋಗ ಸುಕೃತ ಭೋಗಪೂಗ3 ಪೂರ್ಣಪ್ರಜ್ಞಾಚಾರ್ಯವರ್ಯ ಸನ್ನುತ ಮತಧೈರ್ಯ ಧುರ್ಯ ಧನ್ಯನಾದೆನು ನಾನಿಂದು ಸನ್ನಿಧಾನವನು ಕಂಡೆನು4 ಶ್ರೀಶ ಲಕ್ಷ್ಮೀನಾರಾಯಣ ವ್ಯಾಸ ರಘುಪತಿಯ ಚರಣೋ- ಪಾಸಕರೆ ಪಾವನರೆ ಕಾಶೀವiಠಾಧೀಶ್ವರರೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ರಾಮ ಶ್ರೀ ರಘುನಂದನ ಶರಣು ಸಾರ್ವ- ಭೌಮ ಭೂಸುರವಂದ್ಯ ಸೋಮಶೇಖರಮಿತ್ರ ಕಾಮಿತ ಫಲದಾತ್ರ ಸನ್ನುತ ಸೀತಾ ಪ. ಕ್ರೂರ ದಾನವ ಸಂಹಾರ ಕೌಸಲ್ಯಾಕುಮಾರ ಭೂ- ಭಾರಹರ ಭಜಕÀಜನೋದ್ಧಾರ ವೇದಾಂತಸಾರ ಚಾರುವದನ ಮಣಿಹಾರ ಕುಂಡಲಧರ ವೀರರಾಘವ ವಿಶ್ವಾಧಾರ ಕರುಣಿಸು ಸೀತಾ 1 ಪಾಪರಹಿತ ಪಾವನ ಚರಿತ ಅಹಲ್ಯಾ ಹರಣ ದಿವ್ಯರೂಪ ರಮಾರಮಣ ತಾಪ ವಿಚ್ಛೇದನ ತಾಮಸ ಗುಣಹರಣ ದ- ಯಾಪರ ಬ್ರಹ್ಮಸ್ವರೂಪ ಮೂರುತಿ ಸೀತಾ 2 ಮಾಧವ ಪುಣ್ಯಚರಿತ ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ ಸದಾನಂದ ಸುಮತೀಂದ್ರ ಹೃದಯ ಪಂಕಜಭೃಂಗ ಕದನ ವಿಕ್ರಮ ಬಾಹು ಕೋದಂಡಧೃತ ಸೀತಾ 3
--------------
ಹೆಳವನಕಟ್ಟೆ ಗಿರಿಯಮ್ಮ
ಸಂತರನ ಸ್ಮರಿಸಿ ಜನರು ಸಂತರನ ಸ್ಮರಿಸಿ ಜನ ನಿಂತಲ್ಲಿ ಕುಳಿತಲ್ಲಿ ಇಂತೆಂತು ಸದ್ಧರ್ಮ ಚರಿಸುವ ಕಾಲಕ್ಕೆ ಅಂತರಂಗದಲಿದ್ದು ಚಿಂತೆಯನು ಬಿಟ್ಟು ಸಿರಿ ಕುಂತುಪಿತನೊಲಿಮೆಯಿಂದ ಪ ವ್ಯಾಸ ಶಿಷ್ಯರಾದ ಗುರುಮಧ್ವ ಮುನಿರಾಯ ಮಾಧವ ಮು ನೇಶ ಅಕ್ಷೋಭ್ಯ ಜಯರಾಯ ವಿದ್ಯಾಧಿರಾಜ ಪೋಷಿತ ಕವೇಂದ್ರತೀರ್ಥರಾ ನ್ಯಾಶಿ ವಾಗೀಶ ಯತಿ ರಾಮಚಂದ್ರ ನಂದ ವ್ಯಾಸ ವಿದ್ಯಾಧೀಶರೂ 1 ವೇದಮುನಿ ಸತ್ಯವ್ರತ ಸತ್ಯನಿಧಿ ರಾಯ ಬೋಧ ಮೂರುತಿ ಸತ್ಯನಾಥ ಸತ್ಯಾಭಿನವ ಕ್ರೋಧ ಜಯ ಸತ್ಯಪೂರ್ಣ ಸತ್ಯ ವಿಜಯ ವಿ ನೋದ ಸತ್ಯಪ್ರಿಯರೂ ಭೇದಾರ್ಥ ಬಲ್ಲ ವಿಭುಧೇಂದ್ರ ರಘುತನಯ ಸ ಮ್ಮೋದ ಜಿತಾಮಿತ್ರ ತೀರ್ಥ ಮುನಿಪ ಸುರೇಂದ್ರ ವಾದಿ ಎದೆ ಶೂಲ ವಿಜಯೀಂದ್ರ ಸುಧಿಯೀಂದ್ರ ಹ ಲ್ಲಾದ ರಾಘವೇಂದ್ರರು 2 ಯೋಗೆಂದ್ರ ಭೂಸುರೇಂದ್ರ ಸುಮತೀಂದ್ರ ಉಪೇಂದ್ರ ಯೋಗಿ ಶ್ರೀಪಾದರಾಯರ ಪೀ ಳಿಗೆಯ ಅತಿ ಸಾಧನವು ವ್ಯಾಸರಾಯರ ಪಾರಂಪರಿಯವ ಲೇ ಸಾಗಿ ಎಣಿಸಿ ಕೊಂಡಾಡಿ ಆಗಮನುಕೂಲ ಮಧ್ವ ಶಾಸ್ತ್ರವನುಸರಿಸಿ ವೇಗದಿಂದಲಿ ಮಹಸಂತರಿಗೆ ಶಿರ ನಿತ್ಯ 3 ಕ್ಷೇತ್ರ ಸರೋವರ ನದಿ ಮಿಗಿಲಾದ ದೇಶದಲಿ ಗಾತ್ರ್ರದಂಡಿಸಿ ಮಾಡಿ ಹರಿಯ ಮೆಚ್ಚಿಸುವ ಪಾ ರತ್ರಯವನೇ ಬಯಸುವ ಪುತ್ರ ಪೌತ್ರರ ಕೂಡಿ ಜ್ಞಾನದಲಿ ಇಪ್ಪ ಚ ರಿತ್ರಾರಾ ಮಹಿಮೆ ಕೊಂಡಾಡಿದವರ ವಿ ಚಿತ್ರವನು ಪೊಗಳುವ ದಾಸದಾಸಿಯರ ಪದ ಸ್ತೋತ್ರ ಮಾಡಿರೋ ಆವಾಗ 4 ಉದಯಕಾಲದಲೆದ್ದು ಸಂತನ ಮಾಲಿಕೆಯನ್ನು ಮೃದು ಪಂಚರತ್ನದಲಿ ನಿರ್ಮಿತವಾಗಿದೆ ಸದಮಲರು ಪೇಳಿ ಸಂತೋಷದಲಿ ಕೇಳಿ ಕೊರಲೊಳಗೆ ಪದರೂಪದಲ್ಲಿ ಧರಿಸಿ ಮದ ಮತ್ಸರವು ಪೋಗಿ ವೈರಾಗ್ಯದಲಿ ಸಾರ ಹೃದಯರ ಬಳಿ ಸೇರಿ ಜ್ಞಾನ ಸಂಪಾದಿಸಿ ಪದೋಪದಿಗೆ ವಿಜಯವಿಠ್ಠಲನ ನಾಮಾಮೃತವ ವದನದಿಂದಲಿ ಸವಿದುಂಬ 5
--------------
ವಿಜಯದಾಸ
ಸ್ಮರಿಸು ಗುರು ಸಂತತಿಯನು ಮನವೇ ಪ ಪೊರೆವ ಹರಿ ಚತುರವಿಧ ಪುರುಷಾರ್ಥಗಳನಿತ್ತು ಅ.ಪ. ಪರಮಹಂಸಾಖ್ಯ ಹರಿ ಗುರುತಮನೆನಿಸುತಿಪ್ಪ ಪರಮೇಷ್ಠಿ ತತ್ಸುತರು ಸನಕಾದ್ಯರಾ ಕರಕಮಲ ಸಂಜಾತ ಕೂರ್ಮಾಸ ಜ್ಞಾನನಿಧಿ ಕೈವಲ್ಯ ಯತಿವರರ 1 ಜ್ಞಾನೇಶ ಪರತೀರ್ಥ ಸತ್ಯ ಪ್ರಜ್ಞ ಪ್ರಾಜ್ಞ ಸೂನು ಸುತಪೋರಾಜ ವರಕುಮಾರಾ ಅಚ್ಯುತ ಪ್ರೇಕ್ಷರಂಘ್ರಿಗಳ ಆ ನಮಿಪೆನನವರತ ಭಕ್ತಿ ಪೂರ್ವಕದೀ 2 ಅಚ್ಛಿನ್ನ ಭಕ್ತ ಮರುತವತಾರ ಮಧ್ವಮುನಿ ಪ್ರೋಚ್ಚಾಬ್ಜನಾಭ ನರಹರಿ ಮಾಧವಾ ಸಚ್ಚರಿತ ಅಕ್ಷೋಭ್ಯ ಮುನಿಪ ಪ್ರತಿವಾದಿ ಭೂ ತೋಚ್ಛಾಟನವಗೈದ ಜಯತೀರ್ಥ ಗುರುವರರ 3 ವಿದ್ಯಾಧಿರಾಜ ರಾಜೇಂದ್ರ ಸುತಪೋನಿಧಿ ಜ ಯಧ್ವಜರ ಪುರುಷೋತ್ತಮ ಬ್ರಹ್ಮಣ್ಯರಾ ಮಧ್ವ ಸಿದ್ಧಾಂತ ಸ್ಥಾಪಕ ವ್ಯಾಸರಾಯ ಪ್ರ ಸಿದ್ಧ ಶ್ರೀನಿವಾಸಯತಿಗಳ ಪವಿತ್ರ ಪದ 4 ಲಕ್ಷ್ಮೀ ಕಾಂತರನ ಶ್ರೀಪತಿ ರಾಮಚಂದ್ರರನ ಲಕ್ಷ್ಮೀ ವಲ್ಲಭ ಲಕ್ಷ್ಮೀ ನಾಥಪತಿಯಾ ಲಕ್ಷ್ಮೀ ನಾರಾಯಣರ ಶ್ರೀ ರಘುನಾಥ ಸು ಭಿಕ್ಷುಗಳ ಜಗನ್ನಾಥ ಗುರುಗಳನಾ 5 ಮೂರ್ತಿ ವಿ ಶ್ರೀನಾಥ ಗುರುವರರ ಕರಕಮಲಜಾತ ವಿ ದ್ಯಾನಾಥ ಯತಿಗಳನು ಅನುದಿನದಿ ಮರೆಯದಲೆ 6 ವಿಧ್ಯಾಧಿರಾಜರ ಕವೀಂದ್ರ ವಾಗೀಶರ ಸ್ವ ಸಿದ್ಧಾಂತ ಸ್ಥಾಪಿಸಿದ ರಾಮ ಚಂದ್ರಾ ಅದ್ವೈತ ಕುಮುದ ದಿನಪ ವಿಬುಧೇಂದ್ರಾರ್ಯ ಸದ್ವೈಷ್ಣವಾಗ್ರಣಿ ಜಿತಾಮಿತ್ರ ಮುನಿವರರ 7 ರಘುನಂದನ ಸುರೇಂದ್ರ ವಿಜಯೀಂದ್ರ ಸುಧೀಂದ್ರ ವಾರಿಧಿ ರಾಘವೇಂದ್ರಾರ್ಯರಾ ನಿಗಮಾರ್ಥ ಕೋವಿದ ಸುಯೋಗೀಂದ್ರ ಸೂರೀಂದ್ರ ಜಗತೀತಳದಿ ಪ್ರಸಿದ್ಧ ಸುಮತೀಂದ್ರರ 8 ಸಾಧುಜನಸನ್ನುತ ಉಪೇಂದ್ರರಾಯರ ವೇದ ವೇದಾಂಗ ಚತುರ ವಾದೀಂದ್ರ ಯತಿಯಾ ದ್ಯಾದಾನಾಸಕ್ತ ವರದೇಂದ್ರ ಯತಿವರರ 9 ರಾಮವೇದವ್ಯಾಸರಂಘ್ರಿ ಕಮಲಗಳ ಹೃ ತ್ತಾಮರಸದೊಳು ಪೂಜಿಸಿದ ಬಗೆಯನ್ನು ಧೀಮಂತರಿಗೆ ತಿಳಿಸಲೋಸುಗದಿ ನವರತ್ನ ಹೇಮ ಮಂಟಪ ವಿರಚಿಸಿದ ಭುವನೇಂದ್ರರಾ 10 ಪವಮಾನ ಮತ ಪ್ರವರ್ತಕರೊಳುತ್ತಮರೆನಿಪ ಭವ ಗೆದ್ದಾ ಸುಬೋಧ ಸುಜನೇಂದ್ರರಾ ಅವನಿತ ದೊಳಗೆ ಅಭ್ಯಧಿಕರನ ಮಾಡಿ ಸ ತ್ಕವಿಗಳನೆ ಸಂತೈಸಲೆಂದು ಸ್ಥಾಪಿಸಿದವರಾ 11 ಹರಿಯ ಸಂಸ್ಮರಣೆ ಅಹರ್ನಿಶಿಗಳಲಿ ಮಹ ವಿಪ ತ್ಪರಿಹಾರಗೈಸುವುದು ಗುರುಗಳ ಸ್ಮರಣೇ ಪರಮ ಸೌಖ್ಯವನೀವದಾದಾವ ಕಾಲದಲಿ ಪೊರೆವ ಜಗನ್ನಾಥ ವಿಠ್ಠಲವೊಲಿದು ನಿರುತಾ12 ನವ ವೃಂದಾವನ
--------------
ಜಗನ್ನಾಥದಾಸರು
ಬಂದೆ ಭಗವತ್ಪಾದಯುಗಾರವಿಂದಕೆ ಮಿಳಿಂದನಾಗಿವಂದನೀಯರೆ ಯತಿಕುಲಾಬ್ಧಿಚಂದ್ರರ ಭುವನೇಂದ್ರತೀರ್ಥರೆ 1ಪರಮಪಾವನ ಭುವನೇಂದ್ರರಕರಸಂಜಾತ ವರದೇಂದ್ರರಕರಸರೋರುಹಭವರೆ ಮಹಾಕರುಣಾಂತಃಕರಣ ಧೀರರೆ 2ಸುಮತೀಂದ್ರಾದಿ ಯತೀಂದ್ರರವಿಮಲ ಹೃದಯಕಮಲಭಾಸ್ಕರಅಮಮ ನಿಮ್ಮ ಕಾಂಬ ಯೋಗಅಮಿತಸುಕೃತಭೋಗಪೂಗ3ಪೂರ್ಣಪ್ರಜ್ಞಾಚಾರ್ಯವರ್ಯಸನ್ನುತಮತಧೈರ್ಯ ಧುರ್ಯಧನ್ಯನಾದೆನು ನಾನಿಂದುಸನ್ನಿಧಾನವನು ಕಂಡೆನು 4ಶ್ರೀಶ ಲಕ್ಷ್ಮೀನಾರಾಯಣವ್ಯಾಸ ರಘುಪತಿಯ ಚರಣೋ-ಪಾಸಕರೆ ಪಾವನರೆಕಾಶೀವiಠಾಧೀಶ್ವರರೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶರಣು ಮುನಿಪಮಣಿಯೆ ಸುಮತೀಂದ್ರಕರುಣಾಮೃತದ ಖಣಿಯೆಶರಣೆಂದವರಿಗೆ ವರಚಿಂತಾಮಣಿಯೆಧರೆಯ ಮೇಲಿನೊಬ್ಬ ದೊರೆ ನಿನಗೆಣೆಯೆ ಪ.ಸಂತತ ಸೇವಕ ಸಂತರಿಗೊಲಿದೀಗಸಂತತಿ ಸಂಪದವಿತ್ತೆ ಬೇಗಶಾಂತ ಶುಭಗುಣ ವಸಂತನೆಂಬೊ ಕೀರ್ತಿ ವಿಶ್ರಾಂತಿಯಮಿತ ದಿಗಂತಕೆ ವಾರ್ತಿ 1ತಾಳ ತಮ್ಮಟೆಕಂಬುಕಾಳೆ ಬಿರುದುಬುಧಮೇಳದಿಂ ಶಿಷ್ಯ ಜನಾಲಯಕೆ ಸಾಲದೀವಿಗೆಯೊಳು ಮಾಲಿಕೆ ಗ್ರಹಿಸಿ ಆಂದೋಳಿಕಿಳಿದು ಬಂದು ಪಾಲಿಪೆಅವರ2ಶ್ರೀಗುರು ಪ್ರಸನ್ನವೆಂಕಟಾಚಲವಾಸ ರಾಮನಪಾದನಿಶಿದಿನಾರ್ಚಿಸುವೆ ಸಂತೋಷಸಾಂದ್ರಋಷಿಯೋಗೀಂದ್ರರಕರಬಿಸಜಜ ಯೋಗೀಂದ್ರಸುಶರಧಿ ಸಂಭವಶಶಿಸುಮತೀಂದ್ರ3
--------------
ಪ್ರಸನ್ನವೆಂಕಟದಾಸರು