ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಡು ಬಿಡು ವಾಜಿಥರವಲ್ಲಾ | ಪ್ರಾಣಿ ಪ ಕಡಲಶಯನೆಚ್ಚರ ಗಳದೆಲ್ಲಾ | ಬಿಡದೇ ನಿನ್ನ ನೀ ಮರೆವುದು ಸಲ್ಲಾ | ಎಡಬಲ ನೋಡದೆ ನೀ | ವಿಡಿ ಗುರುಗಳ ಅಡಿಗಳ | ಪಡಿ ನಿಜಗತಿಯಾ 1 ಏಸು ಜನ್ಮವ ಸುತ್ತಿ ಬಂದ್ಯೋಯತ್ತಿ | ನ್ನೇಸು ಜನ್ಮವ ತಾಳಬೇಕು ಮುಂದ | ಹೇಸಲಿಲ್ಲವನೊಂದು ಘಾಸಿಯಿಂದ | ಅಶನ ವ್ಯಸನ ತೃಷಿ ಭಸಿಯೊಳು ನಿಶಿದಿನ | ಪಶುವಿನ ಪರಿಯಲಿ ದೆಶೆಗೆಡ ಬ್ಯಾಡಾ 2 ಎಂತು ಹೇಳಲಿನ್ನು ಮನವೇ ನಾನು | ಸಾಧು | ಸಂತರ ಸಂಗದಿ ಬಾಳು ನೀನು | ಅಂತರಂಗದಿ ಹರಿ ಮೂಡುವನು | ಹಿತಾಹಿತ ನರಿತು ಸುಮತಿಯಲಿ ಗುರು ಮಹೀ | ಪತಿ ಸುತ ಪ್ರಭು ಸ್ತುತಿರತಿಯಲಿ ಬಾಳು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮುಖ್ಯಪ್ರಾಣ ಕರವೆತ್ತಿ ನಿಂದ ಪ ಹರಿಯೆ ಪರನೆನ್ನದವನ ಹಲ್ಮುರಿವೆನೆಂದು ಅ.ಪ. ಸಿರಿ ರಾಮನಾಜ್ಞೆಯನು ಸಿರದೊಳಾನುತ ಬಂದು ವರಕಪಿಗಳೊಡಗೂಡಿ ಸಿರಿದೇವಿಯನರಸುತ ಶರಧಿತಟಕೆ ಬಂದು ಸಿರಿಪೋದ ಪಥವರಿಯದೆ ಪರಿತೋರದಿರ್ದ ಹರಿವರರಿಗಭಯವಿತ್ತು 1 ಇರುಳು ಇಂದ್ರಜಿತುವಿನ ಶರಹತಿಯಲಳಿದಂಥ ಸಿರಿ ರಾಮ ನೋಡುತ ಮರುಗುತಿರಲಂದು ವರ ಜಾಂಬವನ ಸುಮತಿಯಲಿ ತ್ವರಿತದಿ ಸಂಜೀವನ ಗಿರಿಯ ತಹೆನೆನ್ನುತ 2 ಭರದಿ ದಶಶಿರನು ತಾನರಿಯದೆ ಹನುಮನ ಬಲ ಭರವಸದಲಿ ಮಾಡಿ ಮೂರು ಗುದ್ದಿನ ಪಂಥ ಕರಹತಿಗೆ ಕಂಗೆಟ್ಟು ಧುರವ ಬಿಟ್ಟೋಡುತಿರೆ ಅರಸಿ ಅಸುರನ ಪಿಡಿದ ಹರಿಸು ಋಣವನೆಂದು 3 ದುರುಳ ಕೀಚಕನಂದು ಕರಿಗಮನೆಯನು ಕಂಡು ಸ್ಮರಶರಹತಿಯಿಂದ ಉರುತರದಲಿ ನೊಂದು ಹರಿಣಾಕ್ಷಿಯನು ಬರಿಸಿ ಸೆರಗ್ಹಿಡಿದೆಳೆದುದನು ತರಳೆ ಮುಖದಿ ಕೇಳವನ ಸಿರ ಮುರಿವೆನೆಂದು 4 ಕುರುಪತಿಯ ಸಭೆಯಲಿ ದುರುಪದಿ ಗೈದ ಶಪಥ ಮರೆಯದೆ ದುಶ್ಶಾಸನನ ಧುರದಿ ಕೆಡಹಿ ಕೊಂದು ಉರ ಬಗೆದು ಕರುಳ ನಿಜತರುಣಿಗೆ ಮುಡಿಸುವಾಗ ಬರಲಿ ಬಿಡಿಸುವರೆಂದು ಉರು ಗದೆಯನು ಪಿಡಿದು 5 ಹರಿಹರರು ಸರಿಯೆಂದು ಹರಟುತಿರ್ದವರನು ಗುರುತರ ವಾಕುಗಳೆಂಬ ಬಿರುಬಾಣದಿಂದ ಗರ ಹೊಡೆದವರ ಮಾಡಿ ಪರತತ್ವವನು ಪೇಳಿ ಭರದಿ ನಡೆದೆ 'ಪರಮೋನಹತಿ ಸದೃಶ' ವೆಂದು 6 ಸರುವರಂತರ್ಯಾಖ್ಯ ಹರಿಯಾಜ್ಞಾನುಸಾರ ಸರುವ ಜೀವರಿಗೆ ತಾನು ಗುರುವೆನಿಸಿಕೊಂಡು ಸಿರಿ ರಂಗೇಶವಿಠಲನ ದುರಿತ ಭಯವಿಲ್ಲೆಂದು 7
--------------
ರಂಗೇಶವಿಠಲದಾಸರು
126 - 3ಚತುರ್ಥ ಕೀರ್ತನೆಸತ್ಯ ಬೋಧಾರ್ಯರ ವೃತತಿಜಾಂಘ್ರಿಗಳಲ್ಲಿಸತತ ಶರಣಾದೆ ನಾಹಿತದಿ ಪಾಲಿಪರುಪ್ರತತ ಭೂಮಾದಿ ಗುಣಸಿಂಧು ಪುರುಷೋತ್ತಮನವಿತತ ಮನದಲಿ ಧ್ಯಾನಿಸಿ ಒಲಿಸಿಕೊಂಡ ಪಸತ್ಯಬೋಧಾರ್ಯರು ಭಾಗೀರಥಿ ಕುರಿತುಯಾತ್ರೆ ಮಾಡಲು ಮನದಿ ಯೋಚಿಸುತಲಿದ್ದಾಗಇದ್ದ ಕಡೆಯಲ್ಲೆ ಗಂಗಾ ಬಂದು ಒದಗುವಳುಎಂದು ಸ್ವಪ್ನವು ಆಯಿತು ಅಂದು ರಾತ್ರಿಯಲಿ 1ಶ್ರೀ ಮಠಕ್ಕೆ ಅರ್ಧಗಾವುದ ದೂರ ಇರುವಂಥಭೂಮಿಯಲಿ ಕೃಷಿಕೂಪ ಬಹು ದೊಡ್ಡದಲ್ಲಿಸಮೀಪಸ್ತ ಔದುಂಬರತರುಮೂಲದಿಂಅಮರ ತಟನೀ ಬರುವ ವೇಳೆಯು ತಿಳಿಯಿತು 2ಶ್ರೀಗುರು ನವಾಬನಿಗೂ ಖಂಡೇರಾಯನಿಗುನಗರಜನರಿಗು ತಿಳಿಸಿ ಆ ಸ್ಥಳಕ್ಕೆ ಪೋಗೆಗಂಗಾವತರಣವು ಆಯಿತು ಸೂಚಿತವೇಳೆಕಂಗೊಳಿಸುವ ಬಾಗೀರಥೀ ಧಾರಾಸುರಿದು 3ತ್ರಿವಿಕ್ರಮ ಸುಪಾದಜಾ ತ್ರಿಜಗತ್ ಪಾವನಿಗಂಗಾತ್ರಿದಶೇಶ್ವರಿ ನಳಿನಿ ಸೀತಾನಮಸ್ತೆತ್ರಾಹಿಜಾಹ್ನವಿಭಾಗೀರಥೀ ನಮೋ ಭೋಗವತಿತ್ರಿಪಥ್‍ಗಾಮಿನಿಪಾಹಿಮಾಲತಿ ನಂದಿನಿ4ನವಾಬನು ಮಂತ್ರಿಯು ನೆರೆದಿದ್ದ ಜನರೆಲ್ಲದೇವ ತಟಿನಿ ಧಾರಾ ಸುರಿದದ್ದು ನೋಡಿದೈವೀಕ ಈ ಮಹಿಮೆ ಕೊಂಡಾಡಿ ಸ್ನಾನಜಪಸೇವೆದಾನಾದಿಗಳ ಮಾಡಿದರು ಮುದದಿ 5ವಿಷ್ಣುತೀರ್ಥ ಎಂಬ ನಾಮ ಈ ತೀರ್ಥಕ್ಕೆವಿಷ್ಣು ಭಕ್ತಾಗ್ರಣಿ ಸದಾಶಿವನ ಲಿಂಗವಿಷ್ಣು ತೀರ್ಥದ ದಡದಿ ಇಹುದು ಶರಣೆಂಬೆವಿಷ್ಣು ್ವಂಘ್ರಿ ಜಾತೆಗೂ ಉಮೇಶನಿಗೂ ಶ್ರೀಶಗೂ 6ಶ್ರೀ ಸತ್ಯಬೋಧರು ಗಂಗೆಯ ತರಿಸಿದ್ದುಶ್ರೀ ಸತ್ಯಬೋಧರ ಬಹು ಇಂಥ ಮಹಿಮೆವಸುಮತಿಯಲಿ ಹರಡಿ ದೇಶ ದೇಶಗಳಿಂದಭೂಸುರರು ಸಜ್ಜನರು ಬಂದು ಸೇವಿಪರು 7ಪಟ್ಟಣದ ಮಧ್ಯದಿ ನವಾಬ ಕೊಡಿಸಿದ ಸ್ಥಳದಿಕಟ್ಟಡವು ಶ್ರೀಮಠ ವಿಸ್ತಾರವಾದ್ದುಮಠದಲ್ಲೇ ಉಂಟೊಂದು ಸೋಪಾನ ಭಾವಿಯುಕಟ್ಟೆಯಲಿ ಶಿವಲಿಂಗ ಭಾವಿಯಲಿ ಗಂಗಾ 8ಭೃಗು ಅಂಶ ವಿಜಯದಾಸಾರ್ಯರ ಪ್ರಭಾವವುಏಕದಂತಾಂಶ ಗೋಪಾಲ ದಾಸಾರ್ಯರ ಪ್ರಭಾವಭಾಗಣ್ಣಾನುಜರು ಈರ್ವರು ಪ್ರಭಾವವಶ್ರೀ ಗುರುಗಳು ಮೆಚ್ಚಿ ಮಾನ್ಯ ಮಾಡಿದರು 9ವಿದ್ವತ್ಸ್‍ಭೆಯಲಿ ಗೋಪಾಲದಾಸಾರ್ಯರುಆ ದಾಸವರ್ಯರ ಅನುಜರು ಈರ್ವರುದೇವತಾಂಶದವರುಅಪರೋಕ್ಷಪ್ರಚುರರುಎಂದು ಜನರಿಗೆ ನಿದರ್ಶನ ತೋರಿಸಿದರು 10ವಿಠ್ಠಲ ನೃಹರಿವ್ಯಾಸ ಶ್ರೀಸಹ ವೇಂಕಟರಾಮಘೋಟಕಾಸ್ಯ ಮಧ್ವೇಶನ್ನರಾಧಿಪಂತಮಠದಲ್ಲಿ ಜಗನ್ನಾಥ ದಾಸಾರ್ಯರ ಸೇವೆಕೊಂಡು ಬಹು ಪ್ರೀತಿಯಲಿ ಅನುಗ್ರಹ ಮಾಡಿಹರು 11ಅಮಲ ವೈದಿಕ ತತ್ವ ಮಧ್ವಸಿದ್ಧಾಂತವಭೂಮಿ ದೇವರಿಗೆ ಬೋಧಿಸಿ ಸರ್ವಜನರ್ಗುಕ್ಷೇಮ ಒದಗಿಸಿ ರಮಾಕಾಂತನ್ನ ಸ್ಮರಿಸುತಈ ಮಹಿಯೋಳ್ ಸರ್ವಜನ ಪ್ರಿಯತಮರಾಗಿಹರು 12ಒಳ್ಳೆರೀತಿಯಲಿ ಚತ್ವಾರಿವತ್ಸರಮಠಆಳಿ ಶಾಲಿಶಕ ಹದಿನೇಳ್ ನೂರೈದುಫಾಲ್ಗುಣ ಕೃಷ್ಣ ಪ್ರತಿಪದ ದಿನ ಹರಿಧ್ಯಾನದಲ್ಲಿ ಕುಳಿತರು ಲೋಕ ಚಟುವಟಿಕೆ ತೊರೆದು 13ಸತ್ಯಬೋಧರ ವೃಂದಾವನದಿ ಅವರೊಳಿಹನುಸತ್ಯಬೋಧಾಹ್ವಯನು ಶ್ರೀಸಹಹಯಾಸ್ಯವಾತಸೇವಿತ ರಾಮಕೃಷ್ಣನೃಹರಿ ವ್ಯಾಸಭೃತ್ಯವತ್ಸಲ ವಾಮದೇವನುತನಾಗಿ 14ದರ್ಶನ ಪ್ರದಕ್ಷಿಣೆ ನಮನ ಪಾದೋದಕಸಂಸ್ಕøತಿಸುಚರಿತ್ರೆ ಪಾರಾಯಣಸಚ್ಛಾಸ್ತ್ರ ಪ್ರವಚನ ಜಪತಪದಾನಾದಿಗಳುವಾಂಛಿತಪ್ರದ ಸರ್ವ ಪೀಡಹರವು 15ಪುತ್ರಧನ ಆರೋಗ್ಯ ಆಯುಷ್ಯ ಮಾಂಗಲ್ಯತಾಪತ್ರಯ ಪರಿಹಾರ ರೋಗ ನಿವೃತ್ತಿಕ್ಷಿಪ್ರಲಭಿಸುವುವು ಹರಿಗುರುಗಳ ದಯದಿಂದಸುಶ್ರವಣ ಪಠನ ಈ ಗ್ರಂಥಮಾಳ್ಪರಿಗೆ 16ಸತ್ಯಸಂಧಾರ್ಯರು ಮಹಾಮಹಿಮ ಶಿಷ್ಯರುಸತ್ಯಬೋಧರ ಆರಾಧನ ಭಕ್ತಿಉತ್ಸಾಹದಿ ಮಾಡಿದರು ಅದ್ಯಾಪಿ ಸಹಸ್ರಾರುಭಕ್ತರು ಸೇವಿಸುತಿಹರು ಪ್ರೇಮದಲಿ 17ಹೇಮಗರ್ಭನತಾತಶ್ರಿಪತಿ ಜಗನ್ನಾಥಅಮಲಗುಣಗಣಸಿಂಧು ಪ್ರಸನ್ನ ಶ್ರೀನಿವಾಸರಾಮ ಹಯಮುಖವ್ಯಾಸನೃಹರಿಗೆ ಪ್ರಿಯತಮರೆನಿಮ್ಮಲ್ಲಿ ಶರಣಾದೆ ಸತ್ಯಬೋಧಾರ್ಯ 18 ಪ|| ಇತಿ ಶ್ರೀ ಸತ್ಯಬೋಧ ಚರಿತ್ರೆ ಸಂಪೂರ್ಣಂ ||
--------------
ಪ್ರಸನ್ನ ಶ್ರೀನಿವಾಸದಾಸರು