ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರ್ತಭಾವ ಸುಳಾದಿ ಧ್ರುವತಾಳ ವೊಂದು ತೋರೆನಗರವಿಂದನಯನ ಮಂದಾಕಿನಿಯ ಪಡೆದ ಮುದ್ದು ಚರಣ ಸುಂದರಾಂಗ ತೋರೆನಗೆ ಸುರೇಂದ್ರನಾಥ ಕಂದರ್ಪಪಿತನ ಕಾಲಂದಿಗೆ ರುಳಿ ಗೆಜ್ಜೆ ಚೆಂದುಳ್ಳ ಪದ್ಮರೇಖೆಯಿಂದೊಪ್ಪುವೊ ಇಂದಿರೆ ಕರಕಮಲದಿಂದ ಪೂಜಿತನಾದ ಚಂದ್ರವದನ ನಿನ್ನ ಚೆಲುವ ಪಾದ ಇಂದ್ರಾದಿ ಹರ ನಾರಂದ ಸುರಬ್ರಹ್ಮಾದಿ ವಂದ್ಯ ನಿನಗೆ ಕೋಟಿ ನಮೋ ನಮೋ ಎಂದು ಬೇಡುವೆ ದಯಾಸಿಂಧು ಎನಿಸಿದಾತ ಕಂದನಂದದಿ ನೋಡಿ ಸಲಹೋ ಎನ್ನ ಮಂದಬುದ್ಧಿಯ ಮಹಾಮದಡ ಪಾಮರ ಭವ ಬಂಧನದೊಳು ಸಿಲುಕಿ ನೊಂದೆನಯ್ಯ ಸಂದೇಹ ಮಾಡದೆ ಸಲಹದಿದ್ದರೆ ನಿನ್ನ ಹೊಂದಿ ಬಾಳುವುದೆಂತೊ ಮುಂದರಿಯೆ ಬಿಂದು ಮಾತ್ರದಿ ನಾಮಾಮೃತವ ಭೀಮೇಶಕೃಷ್ಣ ತಂದು ನೀಡೆನಿಗೆ ಇಂದೀವರಾಕ್ಷ 1 ಮಠ್ಯತಾಳ ಯುಗಳ ಪಾದಕೆ ಕೈಯ ಮುಗಿದು ಬೇಡುವೆನಯ್ಯ ಜಗದುದರನೆ ನಿನ್ನ ಜಾಣತನವ ಬಿಟ್ಟು ಅಗಣಿತಗುಣಮಹಿಮ ಅಂತರಾತ್ಮಕ ದೇವ ಬಗೆಬಗೆಯಲಿ ಸಲಹೋ ಭಕ್ತವತ್ಸಲ ನಿನ್ನ ಮಗುವೆಂದೆನ್ನ ಕಾಯೊ ಮಂದರೋದ್ಧರ ದೇವ ನಿಗಮಗೋಚರ ಸ್ವಾಮಿ ನಿಂತು ನೋಡುತ ಎನ್ನ ಚಿಗುರುದೋಷದಕುಡಿಯ ಚಿವುಟಿ ಹಾಕುತ ನಿನ್ನ ಸುಗುಣಗಳನೆ ಬಿಟ್ಟೆನ್ನವಗುಣವೆಣಿಸಿದರೆ ಇಗೋ ನಿನಗಪಕೀರ್ತಿ ಈಗ ಒಪ್ಪಿಸುವೆನು ಬಿಗಿದ ಭವಪಾಶ ಬಿಚ್ಚಿ ಭೀಮೇಶಕೃಷ್ಣ ತೆಗೆಯದೆ ನಿನ್ಹೊರತೀ ಜಗದೊಳಗುಂಟೇನಯ್ಯ 2 ವಚನ ಸಕಲ ಸ್ನಾನವು ನೇಮ ಹೋಮ ಜಪಂಗಳು ಸಕಲ ಪುಣ್ಯಕ್ಷೇತ್ರ ಮೂರ್ತಿನಾಮಂಗಳು ಸಕಲ ಪುರಾಣ ವೇದಾದಿಗ್ರಂಥಗಳು ಸಕಲ ಕಾರ್ಯವು ಸರ್ವೇಷ್ಟ ಫಲಂಗಳು ಸಾಯುಜ್ಯ ಪದವಿಗಳು ಲಕುಮೀಶ ಇವು ನಿನ್ನ ನಖಶಿಖ ಪರಿಯಂತ್ರ ಸಾರಥಿ ಸಮದೃಷ್ಟಿಲಿ ನೋಡಲು ಸಕಲಸಿದ್ಧ್ದಿಯು ಸರಿಯಾಗಿ ಕೈಗೂಡೋದು ಶಕಟಸುರಾಂತಕ ಕಕುಲಾತಿ ಮಾಡದೆ ಬಕನ್ವೈರಿಯೆನ್ನ ಭಾರವ ನೀ ವಹಿಸಲಿ ಬೇಕೊ ಇಕೋ ನಿನ್ನ ಚರಣಕ್ಕೆ ಈ ದೇಹ ಅರ್ಪಿಸುವೆ ಗೋಕುಲಾವಾಸ ನಿನ್ನ ಪಾದಕೆ ನಮಸ್ಕರಿಸುವೆ ಮುಕುತಿದಾಯಕ ಮುದ್ದು ಭೀಮೇಶಕೃಷ್ಣನೆ ಭಕುತಿಜ್ಞಾನದಲಿಡೊ ಭಯಹಾರಿ ಎನ್ನ 3 ಗೋಪಸುತನೆ ನಿನ್ನ ಗುರುವಿನ್ವಲ್ಲಭೆ ಮಹ ದಪರಾಧವೆಣಿಸದೆ ನೀ ಕರುಣದಲೆ ಸಾಂ- ದೀಪಗೆ ಸುತರನಿಟ್ಟ ಪಯಾಂಬುಧಿವಾಸ ಕೋಪದಿ ಬಯ್ದ್ದಾ ಶಿಶುಪಾಲಗೊಲಿದೆಯೊ ಶ್ರೀಪತಿ ಶರಣೆಂದಾ ದ್ರೌಪದಿ ಕಾಯ್ದಂತೆ ಕಾಪಾಡೊ ಈ ಭವಕೂಪದೊಳಗೆ ಬಿದ್ದೆ ನೀ ಪಿಡಿಕೈಯ ದಯಾಪರಮೂರುತಿ ಆಪತ್ತು ಬಾಂಧವ ಈ ದೇಹವೃಕ್ಷದಲಿ ದ್ವಾ- ಸೂಪರಣನಂತೆ ದೂರೇನೋ ಎನ್ನ ಸ- ಮೀಪದಲ್ಲಿದ್ದು ಸ್ವರೂಪ ತೋರದಲೆ ಸಂ- ತಾಪ ಬಡಿಸದಿರೆಂದಾಪನಿತು ಪೇಳ್ವೆ ಭೂಪಾಲ ಭೀಮೇಶಕೃಷ್ಣ ನಿನ್ನ ಪಾದ ನಾ ಪೊಂದಿದೆನೊ ದೊರೆ ನೀ ಪೊರೆಯೆಂದು 4 ಜತೆ ಏಸೇಸು ಕಾಲಕೆ ಬ್ಯಾಸರದೆ ಭೀಮೇಶಕೃಷ್ಣ ಲೇಸು ನೀಡೆನಗೆ ಸದಾ ಸುಮಂಗಳವ 5
--------------
ಹರಪನಹಳ್ಳಿಭೀಮವ್ವ
ರಾಘವೇಂದ್ರರ ಸ್ತೋತ್ರ ಬಂದರಾ ರಾಘವೇಂದ್ರರಾಯರು ಮಂತ್ರ ಮಂದಿರ ವೆಂಬೀ ಸ್ಥಳಕೆ ವಿಭವದಿ ಪ ಇಂದು ಭಜಕ ದ್ವಿಜ ವೃಂದಕೆ ಪರಮಾ ನಂದ ಗರಿಯಲು ಶ್ಯಂದನವೇರಿ ಅ.ಪ ಶ್ಯಂದನವೇರಿ ಧಣಂ ಧಣ ವಾದ್ಯದಲಿ ಪೌರಜನ ಸಂದಣಿಸಿತು ಆನಂದದಿ ನೋಡುತಲಿ ಪ್ರಾರ್ಥಿಪರು ಮುಗಿಯುತಲಿಕೈಯಾ ಕವಿಗೇಯಾ ಶುಭಕಾಯಾ ಸುಧೀಂದ್ರರ ತನಯಾ ಗುರುವರಮಧ್ವ ಮು- ನೀಂದ್ರರಾ ಸುಮತಾಂಬುಧಿ ಚಂದಿರ ಅತಿ ಸುಂದರ ವೃಂದಾವನದಲಿ ನಿಂದಿಹರೆಂದರಿದೊಂದಿಪರಿಗೆ ಭವ ಬಂಧವ ಬಿಡಿಸಲು 1 ಸಡಗರದಲಿ ಬಿಳಿಗೊಡೆ ಚಾಮರ ವ್ಯಜನಾದಿಗಳನು ಪಿಡಿದು ಸೇವಿಸುವ ಎಡಬಲದಲಿ ಸುಜನಾ ಸಚ್ಛಾಸ್ತ್ರ ವೇದ ಪುರಾಣ ಪ್ರವಚನ ಪಾವನ್ನ ಗುರುಗಳ ಗುಣಸ್ತವನ ಮಾಡುವಾ ವರಗಳ ಬೇಡುವಾ ಕುಣಿಕುಣಿದಾಡುವಾ ಪಾಡುವಾ ಪೊಡವಿ ನಿರ್ಜರರ ಕಡು ವೈಭವದಲಿ 2 ಮಣಿ ಮುಕುಟ ದಿಂದ ದಿ- ಗ್ವಲಯ ಬೆಳಗುತಿಹ ಚಲುವ ಮುಖದ ಮಾಟಾ ಗಳದಲ್ಲಿ ಮೌಕ್ತಿಕದ ಹಾರ ಕೇಯೂರ ನೂಪರ ಸ- ಪೊಳೆಯುತ ಭಜಕರ ಕ- ಲುಷಾಭ್ರಕೆ ಮಾರುvರೆÀನಿಸುತ ಇಳೆಯೊಳು ಪಂಡಿತ ಯಳೆಮೇಲಾರ್ಯಗೊಲಿದು ಭಕುತ ವತ್ಸಲರೆಂದೆ ನಿಸುತ3 ಮಂಗಳ ತುಂಗ ತರಂಗಿಣಿ ತೀರದಲಿ ಭಕುತ ಜ- ನಂಗಳಿಗೆ ನಿಖಿಲಾರ್ಧಂಗಳ ಸಲಿಸುತಲೀ ಪಾಲಿಸುವ ದೇವ ಸ್ವಭಾವ ಶರಣ ಸಂಜೀವ ಕರದಲ್ಲಿಗೆ ಬರುವ ಎನ್ನುತ ತುತಿಪರು ದೃಗ್ಭಾಷ್ಪವ ಸುರಿಸುತ ಮೈಮರೆಯುತ ಬಲು ನಿರ್ಮಲ ಅಂತರಂಗದಿತವ ಪದಂಗಳ ಸ್ಮರಿಪರ ಸಂಘಕೆ ಸತತ ಸುಮಂಗಳವೀಯಲು 4 ಪುರದರಸನು ತನ್ನ ಸಿರಿಪರಿವಾರದಲಿ ಚರಿಸುತ ಬರುತ ಕಾಣುತಲೆ ಗುರುವರ ಚರಣದಲಿ ಕಾಣಕೆಯನ್ನಿತ್ತು ಶಿರಬಾಗಿ ಚನ್ನಾಗಿ ಆರುತಿಯ ಬೆಳಗಿ ಬರುತಿರೆ ರಥಸಾಗಿ ತೋರುವಾ ನೋಳ್ಪರ ನಯನಕ್ಕೆ ಪರಮೋತ್ಸವಾ ಶರಣರ ವಾಂಛಿüತಗಳ ಗರಿಯುವಾ ಪೊರೆಯುವ ಧರೆಯೊಳು ಮೆರೆಯುವ 'ಶಿರಿ ಕಾರ್ಪರ ನರಹರಿಯ' ನೊಲಿಸಿರುವ ಗುರು ಪ್ರಹ್ಲಾದರು 5
--------------
ಕಾರ್ಪರ ನರಹರಿದಾಸರು