ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದ್ಹೇಳಲಿ ಸ್ವಾನುಭವದ ಸುಭೋಗ ಧ್ರುವ ಸುಖಗರುತದ ಶಿಖಾಮಧ್ಯ ಸಂತ್ರಾಧಾರಿ ಬೇಕಾದರೆ ನೋಡಿ ಷಕಚಕ್ರವೇರಿ ಏಕೋಮಯವಾಗ್ಯದ ವಸ್ತು ಒಂದೇ ಸರಿ ಲೋಕಪಾಲಕಸ್ವಾಮಿ ತಾ ಸಹಕಾರಿ 1 ಜುಮ್ಮು ಜುಮ್ಮುಗುಡುತದೆ ರೋಮಾಂಚಗಳು ಧಿಮಿ ಧಿಮಿಗುಡುತದೆ ನಾದಧ್ವನಿಗಳು ಕ್ರಮ ತಿಳಿದರೆ ಭಾಸುತದೆ ಸುಳಹುಗಳು ಸಂಭ್ರಮವಾದರು ಅನುಭವಿಗಳು 2 ಕಳೆ ಮಳೆಮಿಂಚು ತುಂಬೇದ ಬಲು ಬಹಳ ಹೊಳೆಯುತಲ್ಯದೆ ಸ್ವಸುಖದ ಕಲ್ಲೋಳ ಝಳಝಳಿಸುತ ಜ್ಯೋತಿರ್ಮಯ ಥಳಥಳ ತಿಳಕೊ ಮಹಿಪತಿ ಗುರುದಯದ ಸುಫಳ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಗತ್ಸಾರ ವಿಠಲ | ನೀನಿವಳ ಸಲಹೊ ಪ ಬಗೆಬಗೆಯಲಿಂ ನಿನ್ನ | ದಾಸ್ಯಕಾಂಕ್ಷಿಪಳಅ.ಪ. ಭಯದೋರಿ ಸ್ವಪ್ನದಲಿ | ಜಯದೇವಿಸುತ ಪ್ರಾಣದಯೆ ಪಡೆಯಲನುವಾಗ್ಯೆ | ಭಯವನು ತೋರ್ದೇಹಯಮೊಗನೆ ನಿನ್ನಂಥ | ದಯೆ ಪೂರ್ಣರಿನ್ನುಂಟೆನಯವಿನಯ ದಿಂದಿರ್ಪ | ಕನ್ಯೆಯನು ಸಲಹೊ 1 ವ್ಯಾಜ ಕರುಣೇಗೋಜು ಸಂಸøತಿಯಳಿಯೆ | ಬಾಜಿಸುತ ಮನದಲ್ಲಿನೈಜರೂಪವ ತೋರೊ | ಹೇ ಜನಾರ್ದನನೇ 2 ನೂಕಿ ಸಂತಾಪಗಳ | ಲೌಕಿಕ ಸುಭೋಗ ವೈದೀಕ ವೆನಿಸೋ ಹೇ ಕೃ | ಪಾಕರನೇ ದೇವಾಜೋಕೆಯಿಂದಿವಳ ನೀ ಸಾಕಬೇಕೆಂದೆಂಬವಾಕು ಮನ್ನಿಸಿ ಕಾಯೊ | ಶ್ರೀ ಕರಾರ್ಚಿತನೇ 3 ನೀಚೋಚ್ಚ ತರತಮದ | ಸೂಕ್ಷ್ಮ ಸುಜ್ಞಾನಗಳವಾಚಿಸಿವಳಲಿ ನಿಂತು | ಕೀಚಕಾಂತಕನುತಪ್ರಾಚೀನ ಕರ್ಮಗಳ | ಮೋಚಕನು ನೀ ಸವ್ಯಸಾಚಿ ಸಖನೇ ಇವಳ | ಪೇಕ್ಷೆಗಳ ನೀಯೋ 4 ದೇವವರ ಭವ್ಯಾತ್ಮ | ಪಾವನವು ತವ ಸ್ಮøತಿಯನೀ ವೊಲಿದು ಸರ್ವತ್ರ | ಸರ್ವ ಕಾಲದಲೀಈ ವುದನೆ ಬಿನ್ನವಿಪೆ | ಬಾವಜ್ಞ ಸಲಿಸುವುದುಕಾವ ಕರುಣಾಳು ಗುರು | ಗೋವಿಂದ ವಿಠಲಾ5
--------------
ಗುರುಗೋವಿಂದವಿಠಲರು
ಸ್ಥಿರ ನೀಡೆನ್ನ್ವದನಾಬ್ಜದಿ ಪರಮ ಪುರುಷ ನಿನ್ನ ಸ್ಮರಣೆ ಪ ಸೌಖ್ಯ ಸುಭೋಗದಿರಲಿ ಬೇನಿಯಿಂದ ಒರಲುತಿರಲಿ ತ್ರಾಣಗುಂದಿ ತೊಳಲುತಿರಲಿ ದಾನವಾಂತಕ ನಿನ್ನ ಧ್ಯಾನ 1 ಭೂಮಿಪರು ಸನ್ಮಾನ ಕೊಡಲಿ ಪಾಮರೆಂದು ಒದೆದು ನೂಕಲಿ ಭೂಮಿಜನರಪಹಾಸ್ಯ ಗೈಯಲಿ ಸ್ವಾಮಿ ನಿಮ್ಮ ಭಜನಾನಂದ 2 ಚಿಂತೆಯಿರಲಿ ಶ್ರೀಮಂತಿಕಿರಲಿ ಸಂತಸೆಂಬುದು ಸಿಗದ್ಹೋಗಲಿ ಅಂತಕಾರಿ ಶ್ರೀರಾಮ ನಿನ್ನ ಚಿಂತನೆ ಎನ್ನ ಅಂತ್ಯಕಾಲದಿ 3
--------------
ರಾಮದಾಸರು
ಪದುಮನಾಭನೆ ಏನೆಂತಾಡಿದ್ಯೊ |ವದಗಿ ಬಂದವರಿಗೆ ಎದೆಗಲ್ಲಿನಂತೆ ಪಸ್ವರ ಕೇಳಿದಾಕ್ಷಣಸ್ಮರಬಾಧೆ ಹೆಚ್ಚಿ ಜ- |ರ್ಝರಿತರಾದೆವೊ ಕೇಳೊ ತರುಣಿಯರೆಲ್ಲ 1ಯೋಗೇಶ ನಿನ ನೋಡ ವೇಗದಿಂ ಬಂದೆವೊ |ಹೋಗೆಂದು ನಿನ್ನ ನಾಲಿಗೀಗೆಂತು ಬಂತೋ 2ನಾರೆರಲಂಕಾರ ಸೀರಿ ಹಂಬಲ ಬಿಟ್ಟು |ಸಾರಿದರೆಂದು ವಿಚಾರಿಸಲಿಲ್ಲೆ 3ಪತಿಗಳು ಹುಡುಕೊರೆಂದತಿ ಕರುಣವರಲ್ಲೆ |ಚ್ಯುತನಾವೆ ನಿನಗೆ ಅಹಿತರಾದೆವೇನೋ 4ಆಗಾರತೊರೆದು ಸುಭೋಗವಿತ್ತೆವೋ ನಿ- |ನಗೀಗ ಮರದಿ ನಮ್ಮ ಕೈಗುಣವೇನೋ 5ವಾರಿಜಬಾಣಕ್ಕೆ ಆರಲಾರಿವೊ ದಯಾ |ವಾರಿಧಿಕಾಮನಾ ಪೂರತಿ ಮಾಡೋ 6ಪ್ರಾಣೇಶ ವಿಠಲ ನೀ ಮಾನವರಂತಲ್ಲ |ಪ್ರಾಣದ ಪದಕ ಈಗೇನು ಕಲ್ಲಾದ್ಯೊ 7
--------------
ಪ್ರಾಣೇಶದಾಸರು