ಒಟ್ಟು 6 ಕಡೆಗಳಲ್ಲಿ , 3 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನನುದ್ಧರಿಸಲಾಗದೆ ಚೆನ್ನರಾಯ ಪ. ಎನ್ನನುದ್ಧರಿಸಲಾಗದೆ ಚೆನ್ನರಾಯ ಬಿನ್ನೈಸುವೆಇನ್ನು ಬೇರೆ ಗತಿಯ ಕಾಣೆ ನಿನ್ನ ಚರಣಕಮಲದಾಣೆ ಅ.ಪ. ನಿಗಮ ಉಸುರುತಿರಲು ನಿನ್ನಚರಣವನ್ನು ಶಿರದೊಳಾಂತೆ ಎನ್ನ ಮೇಲಣಕರುಣವಿಲ್ಲದದೇನುಕಾರಣ ಸಲಹಬೇಕುಸುರರ ಮಸ್ತಕದ ಸುಭೂಷಣ 1 ಹಿಂದೆ ನಾನನಾಥನಾಗಿ ಒಂದೆರಡ[ಲ್ಲಾ]ನೇಕ ಜನ್ಮದಿಬಂದು ನರಕಯಾತನೆಯಲ್ಲಿ ನೊಂದು ಬೆಂದು ಬಾಯಬಿಡುತಬಂದೆ ನಿನ್ನ ಪೆಸರುಗೊಂಡೆನೊ ಸನಾಥನಾಗಿಮುಂದೆ ನಾಮಸುಧೆಯನುಂಡೆನೊ ನೀ ಕೃಪಾಳುಎಂದು ನುಡಿವರನ್ನು ಕಂಡೆನೊ 2 ಹಲವು ಮಾತನಾಡಲೇನು ಒಲಿವುದಿನ್ನು ಹರಿಯೆ ನಿನ್ನಸಲಿಗೆಯೊಳೀ ಬಿನ್ನಪವನು ಸಲಿಸುತಿಹೆನು ಮುಂದಕಿನ್ನುಜಲುಮ ಬಾರದಂತೆ ವರವನು ಇತ್ತು ಎನ್ನಸಲಹೊ ದೊರೆಯೆ ನಿನ್ನ ಕರೆಯೆನೊ ಮುಂದೆ ಮುಕುತಿ-ಲಲನೆಯೊಡನೆ ಸುಖದಲಿರುವೆನು 3 ದೇಶವರಿಯೆ ನಾನು ನಿನ್ನ ದಾಸನೆಂದು ಡಂಗುರವನು ಹೊ-ಯಿಸಿ ತಿರುಗುತಿರÀಲು ಮೋಹಪಾಶವೆನ್ನ ಸುತ್ತಿಕೊಂಡುಘಾಸಿ ಮಾಡುತಿರಲು ಬಿಡಿಸದೆ ಇರುವ ಪಂಥವಾಸಿಯೇನು ಇನ್ನು ಅಲೆಸದೆ ಸಲಹೊ ಸ-ರ್ವೇಶ ನಂಬಿದವನ ಕೆಡಿಸದೆ 4 ಎನ್ನ ದುರ್ಗುಣವನ್ನು ಮರೆದು ನಿನ್ನ ಸದ್ಗುಣದಿ ಪೊರೆದುಮನ್ನಿಸಿದರೆ ಲೋಕದೊಳಗೆ ಧನ್ಯನಹೆನು ಜನಮವೆತ್ತಿಉನ್ನತಾಹುದು ನಿನ್ನ ಕೀರುತಿ ನಾಶವಾಹುದುಎನ್ನ ಭವದ ಬಹಳ ಧಾವತಿ ಸಲಹೊಚೆನ್ನ ಹಯವದನಮೂರುತಿ 5
--------------
ವಾದಿರಾಜ
ಕಡುಣಸಯ್ಯ ಗುರುವರೇಶ ಪರಮಪುರುಷ ಹರಿಸರ್ವೇಶ ಧ್ರುವ ನೋಡದಿರಯ್ಯ ಭಿನ್ನಭೇದ ಮಾಡೊ ದಯ ಸುಜ್ಞಾನಬೋಧ ನೀಡೊ ನಿಮ್ಮ ನಿಜಪ್ರಸಾದ ಕೊಡುವದನುಭವಾಮೃತಸ್ವಾದ 1 ಸರಿಯಗಾಣೆ ಹರಿಯೆ ನಿಮ್ಮ ಸಿರಿಯಲೋಲಾನಂದ ಬ್ರಹ್ಮ ಕರಿಯವರದ ದಯನಿಸ್ಸೀಮ ಮೊರಿಯಗೇಳಿ ಘನಮಹಿಮ 2 ಕರುಣ ದಯದಲಿ ನೀ ಪೂರ್ಣ ಶರಣಜನರ ಸುಭೂಷಣ ಮಹಿಪತಿಯ ಪ್ರಾಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಂಡೆವು ಗುರುದಿವ್ಯ ಶ್ರೀ ಸುಚರಣ ಮಂಡಲದೊಳಾಯಿತು ಸುಭೂಷಣ ಧ್ರುವ ಇದೆ ನಿಜ ಪುಣ್ಯ ಪೂರ್ವಾರ್ಜಿತ ಇದರಿಟ್ಟು ಬಂತೆನಗಾಯಿತು ಒದಗಿ ಕೈಗೂಡಿತು ತ್ವರಿತ ಹೃದಯಲೆನ್ನಾಯಿತು ಉದಿತ 1 ಕಣ್ಣಾರೆ ಕಂಡೆವು ನಿಜ ಧನ ಜನುಮವೆನ್ನಾಯಿತು ಪಾವನ ಎನ್ನೊಳು ದೋರಿತಾನಂದ ಘನ ಧನ್ಯ ಧನ್ಯವಾಯಿತು ಜೀವನ 2 ಲೇಸು ಲೇಸಾಯಿತಯ್ಯ ನೋಡಿ ಭಾವಿಸಿದ ಸದ್ಗುರು ದಯಮಾಡಿ ವಾಸನೆ ಪೂರಿಸಿತು ಇಲ್ಲೆ ನೋಡಿ ದಾಸಮಹಿಪತಿ ನಿಜಗೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ದೇವ ಜಯ ದೇವ ಜಯ ಜಗಜೀವನ ಕರ ರತ್ನ ಧ್ರುವ ಅಜ ಸುರ ಮುನಿ ಪ್ರಾಣ ರಾಜೀವ ನಯನ ಸುಜನ ಸುಭೂಷಣ ತ್ರಿಜಗ ಪಾವನ 1 ಭಕ್ತ ಜನ ಉದ್ಧಾರ ಘನಗುರು ದಾತಾರ ಪತಿತಪಾವನಮೂರ್ತಿ ಮುನಿಜನ ಮಂದಾರ ಅತಿಶಯಾನಂದ ಅನುಪಮ ವ್ಯಾಪಕ ನಿರ್ಧಾರ ಸತತ ಸುಪಥ ಸದ್ಗುರು ಸಹಕಾರ 2 ಸಹ್ಯಾದ್ರಿ ಗಿರಿವಾಸ ಶ್ರೀಗುರು ಸರ್ವೇಶ ಬಾಹ್ಯಾಂತ್ರ ಪರಿಪೂರ್ಣ ಜಗದೀಶ ಮಹಿಪತಿಸ್ವಾಮಿ ಶ್ರೀ ದೇವದೇವೇಶ ದಾತ ಭಾಸ್ಕರಕೋಟಿ ಪ್ರಕಾಶ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶಿಖಾಮಣಿ ಬಾರೋ ಬಾರೊ ಪಾವನ ಗೈಸುವ ಪರಮ ದಯಾಕರುಣ ಬಾರೊ ಬಾರೊ ಧ್ರುವ ಮಾಧವ ಶ್ರೀಹರಿ ಮುಕುಂದ ಬಾರೊ ಸುಂದರ ವದನನೆ ನಂದ ಯಶೋದೆಯ ಕಂದ ಬಾರೊ ಕಂದರ್ಪ ಕೋಟಿ ಲಾವಣ್ಯದಲೊಪ್ಪುವಾನಂದ ಬಾರೊ ವಂದಿತ ತ್ರೈಲೋಕ್ಯ ಇಂದಿರಾಪತಿ ದೀನಬಂಧು ಬಾರೊ 1 ಗರುಡವಾಹನ ಗೋವಿಂದ ಗೋಪಾಲ ಶ್ರೀಕೃಷ್ಣ ಬಾರೊ ಸರಸಿಜೋದ್ಭವನುತ ಸಿರಿಯ ಲೋಲನೆ ಪರಿಪೂರ್ಣ ಬಾರೊ ಶರಣರಕ್ಷಕ ಸದಾ ಸಾಮಜವರದ ಸದ್ಗುಣ ಬಾರೊ ವರ ಶಿರೋಮಣಿ ಮುನಿಜನರ ಸ್ವಹಿತ ಸುಭೂಷಣ ಬಾರೊ 2 ಅನಾಥರನುಕೂಲಾಗುವ ಘನದಾಗರ ಬಾರೊ ಅನುಭವಿಗಳ ಅನುಭವದ ಸುಖಸಾಗರ ಬಾರೊ ಭಾನುಕೋಟಿತೇಜ ಭಕ್ತಜನ ಸಹಕಾರ ಬಾರೊ ದೀನಮಹಿಪತಿ ಸ್ವಾಮಿ ನೀನೆ ಎನ್ನ ಮನೋಹರ ಬಾರೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀ ಲತಾಂಗಿಯ ವಲ್ಲಭಾ|ಎನ್ನ| ಪಾಲಿಸೋ ಭಕ್ತರ ಸುಲಭಾ ಪ ಇಂದೀವರದಳ ನಯನಾ ಮು| ಕುಂದ ಉರಗರಾಜ ಶಯನಾ| ಮಂದರೋದ್ಧರ ಪಾಪ ಶಮನಾ|ಗೋ| ವಿಂದ ಖಗೇಶ್ವರ ಗಮನಾ 1 ಶರಣ ಜನರಾಭರಣಾ|ಮುರ| ಹರ ಜಗದೀಶನೇ ಕರುಣಾ| ಪರಮಾನಂದ ಜೀತ-ದೂಷಣಾ|ಮ| ಕರಕುಂಡಲ ಸುಭೂಷಣಾ 2 ಸರಸಿಜ ಭವನುತ ಸ್ವಾಮಿನ್ನಾ|ಶ್ರೀ| ಹರಿ ಪೂರಿತ ಮನೋಕಾಮನ| ಶರಧಿ ಕೀಲನಾ|ಗುರು| ವರ ಮಹಿಪತಿ ಸುತ ಪಾಲನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು