ಒಟ್ಟು 7 ಕಡೆಗಳಲ್ಲಿ , 4 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನನುದ್ಧರಿಸಲಾಗದೆ ಚೆನ್ನರಾಯ ಪ. ಎನ್ನನುದ್ಧರಿಸಲಾಗದೆ ಚೆನ್ನರಾಯ ಬಿನ್ನೈಸುವೆಇನ್ನು ಬೇರೆ ಗತಿಯ ಕಾಣೆ ನಿನ್ನ ಚರಣಕಮಲದಾಣೆ ಅ.ಪ. ನಿಗಮ ಉಸುರುತಿರಲು ನಿನ್ನಚರಣವನ್ನು ಶಿರದೊಳಾಂತೆ ಎನ್ನ ಮೇಲಣಕರುಣವಿಲ್ಲದದೇನುಕಾರಣ ಸಲಹಬೇಕುಸುರರ ಮಸ್ತಕದ ಸುಭೂಷಣ 1 ಹಿಂದೆ ನಾನನಾಥನಾಗಿ ಒಂದೆರಡ[ಲ್ಲಾ]ನೇಕ ಜನ್ಮದಿಬಂದು ನರಕಯಾತನೆಯಲ್ಲಿ ನೊಂದು ಬೆಂದು ಬಾಯಬಿಡುತಬಂದೆ ನಿನ್ನ ಪೆಸರುಗೊಂಡೆನೊ ಸನಾಥನಾಗಿಮುಂದೆ ನಾಮಸುಧೆಯನುಂಡೆನೊ ನೀ ಕೃಪಾಳುಎಂದು ನುಡಿವರನ್ನು ಕಂಡೆನೊ 2 ಹಲವು ಮಾತನಾಡಲೇನು ಒಲಿವುದಿನ್ನು ಹರಿಯೆ ನಿನ್ನಸಲಿಗೆಯೊಳೀ ಬಿನ್ನಪವನು ಸಲಿಸುತಿಹೆನು ಮುಂದಕಿನ್ನುಜಲುಮ ಬಾರದಂತೆ ವರವನು ಇತ್ತು ಎನ್ನಸಲಹೊ ದೊರೆಯೆ ನಿನ್ನ ಕರೆಯೆನೊ ಮುಂದೆ ಮುಕುತಿ-ಲಲನೆಯೊಡನೆ ಸುಖದಲಿರುವೆನು 3 ದೇಶವರಿಯೆ ನಾನು ನಿನ್ನ ದಾಸನೆಂದು ಡಂಗುರವನು ಹೊ-ಯಿಸಿ ತಿರುಗುತಿರÀಲು ಮೋಹಪಾಶವೆನ್ನ ಸುತ್ತಿಕೊಂಡುಘಾಸಿ ಮಾಡುತಿರಲು ಬಿಡಿಸದೆ ಇರುವ ಪಂಥವಾಸಿಯೇನು ಇನ್ನು ಅಲೆಸದೆ ಸಲಹೊ ಸ-ರ್ವೇಶ ನಂಬಿದವನ ಕೆಡಿಸದೆ 4 ಎನ್ನ ದುರ್ಗುಣವನ್ನು ಮರೆದು ನಿನ್ನ ಸದ್ಗುಣದಿ ಪೊರೆದುಮನ್ನಿಸಿದರೆ ಲೋಕದೊಳಗೆ ಧನ್ಯನಹೆನು ಜನಮವೆತ್ತಿಉನ್ನತಾಹುದು ನಿನ್ನ ಕೀರುತಿ ನಾಶವಾಹುದುಎನ್ನ ಭವದ ಬಹಳ ಧಾವತಿ ಸಲಹೊಚೆನ್ನ ಹಯವದನಮೂರುತಿ 5
--------------
ವಾದಿರಾಜ
ಕಡುಣಸಯ್ಯ ಗುರುವರೇಶ ಪರಮಪುರುಷ ಹರಿಸರ್ವೇಶ ಧ್ರುವ ನೋಡದಿರಯ್ಯ ಭಿನ್ನಭೇದ ಮಾಡೊ ದಯ ಸುಜ್ಞಾನಬೋಧ ನೀಡೊ ನಿಮ್ಮ ನಿಜಪ್ರಸಾದ ಕೊಡುವದನುಭವಾಮೃತಸ್ವಾದ 1 ಸರಿಯಗಾಣೆ ಹರಿಯೆ ನಿಮ್ಮ ಸಿರಿಯಲೋಲಾನಂದ ಬ್ರಹ್ಮ ಕರಿಯವರದ ದಯನಿಸ್ಸೀಮ ಮೊರಿಯಗೇಳಿ ಘನಮಹಿಮ 2 ಕರುಣ ದಯದಲಿ ನೀ ಪೂರ್ಣ ಶರಣಜನರ ಸುಭೂಷಣ ಮಹಿಪತಿಯ ಪ್ರಾಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಂಡೆವು ಗುರುದಿವ್ಯ ಶ್ರೀ ಸುಚರಣ ಮಂಡಲದೊಳಾಯಿತು ಸುಭೂಷಣ ಧ್ರುವ ಇದೆ ನಿಜ ಪುಣ್ಯ ಪೂರ್ವಾರ್ಜಿತ ಇದರಿಟ್ಟು ಬಂತೆನಗಾಯಿತು ಒದಗಿ ಕೈಗೂಡಿತು ತ್ವರಿತ ಹೃದಯಲೆನ್ನಾಯಿತು ಉದಿತ 1 ಕಣ್ಣಾರೆ ಕಂಡೆವು ನಿಜ ಧನ ಜನುಮವೆನ್ನಾಯಿತು ಪಾವನ ಎನ್ನೊಳು ದೋರಿತಾನಂದ ಘನ ಧನ್ಯ ಧನ್ಯವಾಯಿತು ಜೀವನ 2 ಲೇಸು ಲೇಸಾಯಿತಯ್ಯ ನೋಡಿ ಭಾವಿಸಿದ ಸದ್ಗುರು ದಯಮಾಡಿ ವಾಸನೆ ಪೂರಿಸಿತು ಇಲ್ಲೆ ನೋಡಿ ದಾಸಮಹಿಪತಿ ನಿಜಗೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ದೇವ ಜಯ ದೇವ ಜಯ ಜಗಜೀವನ ಕರ ರತ್ನ ಧ್ರುವ ಅಜ ಸುರ ಮುನಿ ಪ್ರಾಣ ರಾಜೀವ ನಯನ ಸುಜನ ಸುಭೂಷಣ ತ್ರಿಜಗ ಪಾವನ 1 ಭಕ್ತ ಜನ ಉದ್ಧಾರ ಘನಗುರು ದಾತಾರ ಪತಿತಪಾವನಮೂರ್ತಿ ಮುನಿಜನ ಮಂದಾರ ಅತಿಶಯಾನಂದ ಅನುಪಮ ವ್ಯಾಪಕ ನಿರ್ಧಾರ ಸತತ ಸುಪಥ ಸದ್ಗುರು ಸಹಕಾರ 2 ಸಹ್ಯಾದ್ರಿ ಗಿರಿವಾಸ ಶ್ರೀಗುರು ಸರ್ವೇಶ ಬಾಹ್ಯಾಂತ್ರ ಪರಿಪೂರ್ಣ ಜಗದೀಶ ಮಹಿಪತಿಸ್ವಾಮಿ ಶ್ರೀ ದೇವದೇವೇಶ ದಾತ ಭಾಸ್ಕರಕೋಟಿ ಪ್ರಕಾಶ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಂದ ಬಂದ ವಾಯು ಪೆಸರಿನವ - ರಿಂದಅನಿಮಿತ್ತ ಬಂದು ವೆಂಕಟ ನಿಲಯ ಪ ಇಂದಿರೆ ಸುತನೆನೆ | ಸುಂದರನೂ ಮಮ | ಮಂದಿರ ಸೇರಲುನಂದದಿ ಬಂದನು | ಚಂದ್ರ ಭಾಗ ತಟ | ಸುಂದರ ವಿಠಲನುಮುಂದೆ ಬರುವ | ನೆಂದೆಂಬುದ ಸೂಚಿಸೆ ಅ.ಪ. ಮಕರ ಕೌಸ್ತುಭ ಬ್ರಹ್ಮಾ ಧಿಷ್ಠಿತವಾಗಿರೆ ಹೃತಮ ಕಳೆ ಹರಿ 1 ಸೋಮಕುಲ ಸುಭೂಷ ದಿವ್ಯ | ಧಾಮದಲ್ಲಿ ಶೋಭಮಾನ ||ಶ್ರೀ ಮಹಿಳೆಯು ಎಡ | ಪದ್ಮ ಹಸ್ತ ಬಲಭೂಮಾಂಬೆಯು ಬಲ | ಪದ್ಮ ಹಸ್ತ ಎಡಭೂಮಾರ್ಣವ ಗುಣ | ಸ್ತೋಮ ತುತಿಸುತಲಿಆ ಮಹ ದಿವಿಜರ | ಸ್ತೋಮ ನಿಚಯವಿರೆ2 ಮಾಸ ಸಿರಿ | ಶೇಷಗಿರೀಶನುಒಸೆದು ಹಸ್ತ ಎಡೆ | ಎಸೆವ ಕಟಯಲಿಟ್ಟುವಸುದೇವ ಸುತ ಬಲ | ಹಸ್ತ ಅಭಯ ತೋರಿಬಸುರಿಲಿ ಬೊಮ್ಮನ | ಪ್ರಸವಿಸಿರವ ಹರಿ 3 ಶರಧಿ | ಕಟಿಯ ಮಿತವು ಭಕುತಗೆಂದ ||ವಿಠಲಾಗಮನವು | ದಿಟವೆನೆ ಸೂಚಿಸಿಎಟ ಪಾದವು ಸುರ | ತಟನಿಗೆ ಕಾರಣಪಟುಭಟರೆನಿಸುವ | ನಿಟಿಲ ನಯನ ಸುರಕಟಕವ ಪಾಲಿಪ | ಧಿಟ ದೊರೆ ವೆಂಕಟ 4 ಅರಿ | ಹೊಳೆವ ಶಂಖ ಎಡ ನಿಲವು ಮಾಟವಿಗೆ | ಗೆಲವು ಸುರರಿಗೆನೆಕಳೆ ಕಳೆ ನಗು ಗುರು | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಶಿಖಾಮಣಿ ಬಾರೋ ಬಾರೊ ಪಾವನ ಗೈಸುವ ಪರಮ ದಯಾಕರುಣ ಬಾರೊ ಬಾರೊ ಧ್ರುವ ಮಾಧವ ಶ್ರೀಹರಿ ಮುಕುಂದ ಬಾರೊ ಸುಂದರ ವದನನೆ ನಂದ ಯಶೋದೆಯ ಕಂದ ಬಾರೊ ಕಂದರ್ಪ ಕೋಟಿ ಲಾವಣ್ಯದಲೊಪ್ಪುವಾನಂದ ಬಾರೊ ವಂದಿತ ತ್ರೈಲೋಕ್ಯ ಇಂದಿರಾಪತಿ ದೀನಬಂಧು ಬಾರೊ 1 ಗರುಡವಾಹನ ಗೋವಿಂದ ಗೋಪಾಲ ಶ್ರೀಕೃಷ್ಣ ಬಾರೊ ಸರಸಿಜೋದ್ಭವನುತ ಸಿರಿಯ ಲೋಲನೆ ಪರಿಪೂರ್ಣ ಬಾರೊ ಶರಣರಕ್ಷಕ ಸದಾ ಸಾಮಜವರದ ಸದ್ಗುಣ ಬಾರೊ ವರ ಶಿರೋಮಣಿ ಮುನಿಜನರ ಸ್ವಹಿತ ಸುಭೂಷಣ ಬಾರೊ 2 ಅನಾಥರನುಕೂಲಾಗುವ ಘನದಾಗರ ಬಾರೊ ಅನುಭವಿಗಳ ಅನುಭವದ ಸುಖಸಾಗರ ಬಾರೊ ಭಾನುಕೋಟಿತೇಜ ಭಕ್ತಜನ ಸಹಕಾರ ಬಾರೊ ದೀನಮಹಿಪತಿ ಸ್ವಾಮಿ ನೀನೆ ಎನ್ನ ಮನೋಹರ ಬಾರೊ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀ ಲತಾಂಗಿಯ ವಲ್ಲಭಾ|ಎನ್ನ| ಪಾಲಿಸೋ ಭಕ್ತರ ಸುಲಭಾ ಪ ಇಂದೀವರದಳ ನಯನಾ ಮು| ಕುಂದ ಉರಗರಾಜ ಶಯನಾ| ಮಂದರೋದ್ಧರ ಪಾಪ ಶಮನಾ|ಗೋ| ವಿಂದ ಖಗೇಶ್ವರ ಗಮನಾ 1 ಶರಣ ಜನರಾಭರಣಾ|ಮುರ| ಹರ ಜಗದೀಶನೇ ಕರುಣಾ| ಪರಮಾನಂದ ಜೀತ-ದೂಷಣಾ|ಮ| ಕರಕುಂಡಲ ಸುಭೂಷಣಾ 2 ಸರಸಿಜ ಭವನುತ ಸ್ವಾಮಿನ್ನಾ|ಶ್ರೀ| ಹರಿ ಪೂರಿತ ಮನೋಕಾಮನ| ಶರಧಿ ಕೀಲನಾ|ಗುರು| ವರ ಮಹಿಪತಿ ಸುತ ಪಾಲನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು