ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋಲು ಕೋಲೆ ಕೋಲು ಕೋಲನ್ನ ಕೋಲೆ ಮೂಲೆ ಮೂಲೆಯ ಹೊಕ್ಕು ಅಡಗಿರ್ದ ಕೋಲೆ ಪ ಕೆಂಜಿಗ ಉಡನು ಬಂದು ಮುಂಚಿಕವಲ ಕೊಟ್ಟು ಅಂಚೆಡೆಗಳನೆಲ್ಲ ಸುಲಿದರ್ದ ಕೋಲೆ 1 ಆನೆ ಕುದುರೆಯಿಲ್ಲ ಸೇನೆ ಬಹಳವಿಲ್ಲ ಏನೆಂದು ಬೆಸಗೊಂಬರಿಲ್ಲದ ಕೋಲೆ 2 ಮುನಿಯ ಭಾವನದಂಡು ಮನೆ ಮನೆಗಳ ಹೊಕ್ಕು ಧನಕನಕಂಗಳ ಸುಲಿದಿರ್ದ ಕೋಲೆ 3 ಮಕ್ಕಳು ಮರಿಗಳು ವೃದ್ಧ ಜವ್ವನರನ್ನು ದಿಕ್ಕುದಿಕ್ಕಿನ ಕಾನಿಗಟ್ಟಿದ ಕೋಲೆ 4 ಜನರನ್ನು ತರಿದು ಸುಲಿದು ಕರುಗಳ ತರುಗಳ ಹಿಂಡನು ಹೊಡೆದಿರ್ದ ಕೋಲೆ 5 ಕೊಟ್ಟ ಕಣ್ಣಿಯನೆಲ್ಲ ಕಿತ್ತೊಯ್ದು ಸೂಸ್ಯಾನು ಪಟ್ಟೆ ಪೀತಾಂಬರಗಳ ನೊಯ್ದ ಕೋಲೆ 6 ಕಾಣಿ ಜೀವರನೆಲ್ಲ ಹಾಡಿ ಹಿಳಿದು ಹಿಪ್ಪೆಹೀರಿದ ಕೋಲೆ 7 ಇಟ್ಟವಡವೆ ವಸ್ತು ಇಟ್ಟಲ್ಲಿ ಇಲ್ಲದೆ ಕೆಟ್ಟು ಜನರು ಹೊಟ್ಟೆ ಹೊಡಕೊಂಬರು 8 ಉಟ್ಟು ತೊಟ್ಟುದನೆಲ್ಲ ಸುಲಿದುಬೆತ್ತಲೆ ಮಾಡಿ ಬಿಟ್ಟು ಮನೆಗೆ ಬೆಂಕಿ ಕೊಟ್ಹೋದ ಕೊಲೆ 9 ಕೆಲರ ತಲೆಯ ಕುಟ್ಟಿ ಕೆಲರು ಸುಲಿದು ಬಿಟ್ಟು ಕೆಲರಿಗೆ ಮುರುವಾಳ ವಿಕ್ಕಿದ ಕೋಲೆ 10 ಅಟ್ಟಡಿಗೆಯ ನುಂಡು ಇಟ್ಟೊಡವೆಯ ಕೊಂಡು ಕುಟ್ಟಿ ಖಂಡವ ಚೂರು ಮಾಡಿದ ಕೋಲೆ 11 ಉಪ್ಪಿನಕಾಯಿ ಕೊಡ ತುಪ್ಪ ತೈಲದ ಪಾತ್ರೆ ಜಪ್ಪಿ ವಡೆದು ನೆಲ ಕುಣಿಸಿದ ಕೋಲೆ 12 ಚಿನ್ನ ಚಿಗುರು ಬೆಳ್ಳಿ ಕಂಚು ತಾಮ್ರಗಳನ್ನು ನುಣ್ಣಗೆ ಹೊರೆಗಟ್ಟಿ ಹೊತ್ತೊಯ್ದ ಕೋಲೆ 13 ಉಣ್ಣ ಉಡಲಿಕ್ಕಿಲ್ಲ ಹೊನ್ನು ಕೈಯೊಳಗಿಲ್ಲ ಎಣ್ಣೆ ಬೆಣ್ಣೆಗೆ ಬಾಲ ನಳಿಸಿದ ಕೋಲೆ 14 ಮುಂಜ ಮುಚ್ಚಲಿಕಿಲ್ಲ ಗಂಜಿಗೆ ಲವಣಿಲ್ಲ ಸಂಜೆ ದೀಪಕೆ ತೈಲವಿಲ್ಲದೆ ಕೋಲೆ 15 ಅತಿಥಿಗಿಕ್ಕಲಿಲ್ಲ ಪ್ರತಿಮೆ ಪೂಜೆಗಳಿಲ್ಲ ವ್ರತನೇಮಗಳನು ಕಟ್ಟಿರಿಸಿದ ಕೋಲೆ 16 ತೆಪಕಾರನ ಪದಾರ ಕಾಲಟದೊಳು ಜಪ ತಪಗಳಿಲ್ಲದೆ ಕೊಳ ತನ್ನಿಸಿದ ಕೋಲೆ 17 ನಗರದ ಕೋಲೆದ್ದು ತೆಪರಾರ ಮೇಲ್ಬಿದ್ದು ಜಿಗಿದು ಹಿಂದಕೆ ಜಾರಿ ಜುಣುಗಿದ ಕೋಲೆ 18 ಹಿಂದಣ ಬೆಳೆಮಣ್ಣ ಕೂಡಿತು ಕುಳಿಯಲಿ ಮುಂದಣ ದುದುರಿತು ಹಣ್ಣಾಗಿ ಕೋಲೆ 19 ಕೆಳಗು ಮೇಲಕು ದಂಡು ಬಳಪ್ರಾಂತ ದೊಳುದಂಡು ನೆಲೆಗೊಂಡು ಜನರು ತಲ್ಲಣಿಪರು ಕೋಲೆ 20 ಸುಬ್ಬರಾಯನ ವೀರಭದ್ರನ ಪ್ರಸಾದ ಸರ್ವಜನರ ಬಾಯ್ಗೆ ಬಿತ್ತಣ್ಣ ಕೋಲೆ 21 ನರರೂಪ ಧರಿಸಿ ಲಕ್ಷ್ಮೀಶನು ಹೊಯ್ಸೂವ ಕೋಲೆ 22
--------------
ಕವಿ ಪರಮದೇವದಾಸರು
ತಾಯಿತಂದೆಯರಿಗೆ ನಮನ (ವಾರ್ಧಕ ಷಟ್ಪದಿ) ಆನಮಿಪೆ ಮಾತೆ ಪಿತರರ್ಗೆ ಪ ಆನಮಿಸಿ ಈರ್ವರಿಗೆ | ಜ್ಞಾನ ಸಾಧನ ದೇಹದಾನ ಮಾಡ್ದದಕವರ | ಧೇನಿಸುತ ಪದವನಜಗಾನ ಮಾಡುವೆ ವಂಶದ ಅಕ್ಷೀಣ ವಾರ್ತೆಗಳ ಕೇಳ ಬಯಸುವರಾಲಿಸಿ ಅ.ಪ. ವಿಸ್ತರದ ಕೀರ್ತಿಯುತ | ಚಿತ್ತೂರು ಕೃಷ್ಣಾಖ್ಯರಿತ್ತ ಮಹಿ ಶೂರೊಳಗೆ | ನೆಲೆಸುತ್ತ ತಮ ಧರ್ಮಪತ್ನಿಯಲಿ ಚತುರ ಕುವ | ರರ ಪಡೆದು ಚತುರರಂಗೆಅಯ್ಯುತಿರೆ ವಿಧಿವಶದಲಿ |ಪೆತ್ತ ಪಿತ ಪರಪುರಕಡರೆ ಮಾತೆ ಕಡೆ ಕುವರಗೆತ್ತಣದು ವಿದ್ಯೆ ಎಂ | ದೆನ್ನಿಸದೆ ಸಲಹುತ್ತಉತ್ತಮರು ಬಕ್ಷಿತಿರು | ಮಲರ ವಂಶೋದ್ಭೂತ ಸುಬ್ಬರಾಯರ ಕುವರಿಯ 1 ಕಾಲ ಕಳೆಯುತಿರಲು 2 ಪತಿ ವಿಯೋಗವು ಆಯ್ತುಮಾರಿ ಕೋಪದ್ರವದಿ | ಮಾರಿ ಕಣಿವೆಲಿ ಪ್ರಥಮ ಅಪಮೃತ್ಯು ಸಂಭವಿಸಲು |ತಾರುಣ್ಯ ಉರುತರ | ವ್ಯಸನದಿಂ ನೂಕುತ್ತಪೋರನಭಿವೃದ್ಧಿಗಿ | ನ್ನೇನುಗತಿ ಎಂದೆನುತನಾರಾಯಣ ಸ್ಮರಣೆ | ಪರಿಪರಿಯಗೈಯ್ಸುತ್ತ ನಿಟ್ಟುಸಿರ ಬಿಡುತ್ತಿದ್ದಳು 3 ನಾಲ್ಕಾರು ವರುಷಗಳು | ದಾಯಾದ್ಯರೊಳು ದುಡಿದುನಾಲ್ಕೆಂಟು ಕಡುಕ್ರೂರ | ವಾಕ್ಕುಗಳ ಸಹಿಸುತ್ತಪ್ರಾಕ್ಕು ಕರ್ಮದ ಫಲವ | ಮುಕ್ಕಲೇಬೇಕೆಂಬ ವಾಕ್ಕುಗಳ ಮನ್ನಿಸುತಲಿ ||ನೂಕುತಿರೆ ಕೆಲಕಾಲ | ತೋಕಗಾಯ್ತುಪನಯನಕಾಕು ಮಾತುಗಳಾಡಿ | ನೂಕಲೂ ಗೃಹದಿಂದಆ ಕುಮಾರ ಧೃವನ | ನೂಕಿದಾಪರಿಯಾಯ್ತು ಎಂದೆನುತ ಹೊರ ಹೊರಡಲು 4 ಭವ ತರಣ | ಧವಣೆಯಲಿ ಕುವರಂಗೆ ವೈವಾಹ ತಾವಿರಚಿಸಿ 5 ಭಾಗವತ ವತ್ಸರ ವಸಿತ ದ್ವಿತಿಯ ತೃತಿಯ ತಿಥಿ ಹರಿ ಸ್ಮøತಿಲಿತನು ವಪ್ಪಿಸಿದಳು 6 ಭಾರತೀಶ ಪ್ರಿಯಗಭಿನ್ನಾತ್ಮನಮೊ ಗುರು ಗೋವಿಂದ ವಿಠ್ಠಲನ ದಾಸ ದಾಸಿಯರಿಗೇ ನಮೊ ಎಂಬೆನು 7
--------------
ಗುರುಗೋವಿಂದವಿಠಲರು
ತೆರಳಿದರೋ ತಂದೆ ಮುದ್ದು ಮೋಹನರೂಮರಳಿ ಬಾರವ ಪುರಿ ನರಹರಿ ಪೂರಕೇ ಪ ತರಳತನಾರಭ್ಯ ದ್ವಾದಶ ವತ್ಸರಪರಿಸರಾಗಮ ಪಠಿಸಿ ನಿಪುಣನೆನಿಸೀ |ಇರಲು ಬಂದರು ಮುದ್ದು ಮೋಹನ್ನದಾಸರುಕರಿಗಿರಿ ನರಹರಿ ರಥವ ಉತ್ಸವಕೇ 1 ಕರಿಗಿರಿ ಸನಿಯದ ನರಸಿಪುರದೊಳಿದ್ದವರಸುಬ್ಬರಾಯಾಖ್ಯ ಭರದಿಂದ ಬರುತಾ |ಗುರು ಮುದ್ದು ಮೋಹನರ ಪದಪಾಂಸು ಶಿರದಲ್ಲಿಧರಿಸಿ ಬಿನ್ನವಿಸಿದರುಪದೇಶ ಕೊಂಡಿರೆಂದೂ 2 ಪರಿಕಿಸಲೋಸುಗ ಅರುಣ ಉದಯ ಮುನ್ನಕರಿಗಿರಿ ಪುರಬಿಟ್ಟು ತೆರಳಲು ಅವರೂ |ಭರದಿ ಅಡ್ಡೈಸುತ ಗುರುಪಾದದಲಿ ಬಿದ್ದುವರ ಉಪದೇಶವ ಕೈಗೊಂಡ ಧೀರಾ 3 ಶುಭ ಅಂಕಿತವಾ |ತಂದೆ ಮುದ್ದು ಮೋಹನ್ನ ವಿಠ್ಠಲನೆಂದುಛಂದೋಗಮ್ಯನೆ ದಿವ್ಯ ನಾಮವನಿತ್ತರು 4 ದಾಸ ದೀಕ್ಷೆಯ ಪೊತ್ತು ದಾಸ ಕೂಟವ ನೆರಸಿಶೇಷಗಿರೀಶನೆ ಸರ್ವೇಶನೆನುತಾಎಸೆವ ಅಂಕಿತ ಮಂತ್ರ ಉಪದೇಶಗೈಯ್ಯುತ್ತದಾಸರ ಕ್ಲೇಶವ ಹರಿಸೀದ ಗುರುವೇ 5 ವರಚೈತ್ರ ಪಂಚಮಿ ವರುಷವು ವಿಕ್ರಮಶರಣರ ಪೊರೆಯಲು ಕರಿಗಿರಿಯಲ್ಲೀ |ಗುರು ಮುಖ್ಯ ಪ್ರಾಣ ಪ್ರತೀಕವ ನಿಲಿಸುತಆರು ಮೂರನೆ ದಿನ ಹರಿಯ ಸೇರುವೆ ನೆನುತಾ 6 ನರಲೀಲೆ ಕೊನೆಗೈದು ಪರಮ ಪುರುಷಹರಿಶಿರಿಯರಸಗೆ ಪ್ರೀತೆ ಪಾತ್ರನೆನಿಪಾನೂ |ವರ ಗುರು ಗೋವಿಂದ ವಿಠಲನ ಚರಣವಸ್ಮರಿಸಿ ಹಿಗ್ಗುತ ಪೊರಟ ನೀರಿಕ್ಷಿಸುತಾ7
--------------
ಗುರುಗೋವಿಂದವಿಠಲರು
ನೋಡಿದ್ರ್ಯಾ ಕಂಡಿದ್ರ್ಯಾ ಶ್ರೀಸುಬ್ಬರಾಯ ದಾಸರ್ಯರಾ ಪ ಕಾಡೂವ ಭವದ ದೂರೋಡಿಪ ಮಾರ್ಗದಜಾಡನೆ ತಿಳಿಸುವಾಗಾಢ ಮಹಿಮರ ಅ.ಪ. ಪುರಂದರ | ದಾಸರ ಪೀಳಿಗೆ ಶರಧಿಗಾಶಶಿಗೊಪ್ಪುವ ದಾಸವರ್ಯರನ 1 ಮುದ್ದು ಮೋಹನ ಗುರು | ಮುದ್ದು ಶಿಷ್ಯರು ತಂದೆಮುದ್ದು ಮೋಹನರು | ಪ್ರಸಿದ್ಧರಾಗಿಹರಾ 2 ಪರ | ಮಾರ್ಥ ಚಂದಿರ ಹರಿಕೀರ್ತನೆ ಗೈವ ಸ | ತ್ಪಂಥ ಬೀರಿದರಾ 3 ಅಂಕಿತರಹಿತ ನಿ | ಷಿದ್ಧ ದೇಹವು ಎಂದುಅಂಕನಗೈಧರಿ | ಲೆಂಕತನವ ಬೀರ್ದರ 4 ಸಹಸ್ರಾರು ಅಂಕಿತ | ವಿಹಿತೋಪದೇಶ ಸ-ನ್ನಿಹಿತರ ಗೈದೂ | ದ್ಧರಿಸಿದ ಗುರುಗಳ5 | ದಾಸಕೂಟಾಬ್ಧಿ ತಾ | ರೇಶನ ಪರಿಯಲಿಭಾಸಿಸಿ ಶರಣರ | ಪೋಷಿಸಿದವರನು 6 ಸಾರ ಶಾಸ್ತ್ರದ ಸವಿ | ಆರು ಮೊಗನ ಪರಿಆರು ಬಗೇಯಲಿ | ಬೀರಿದ ವರನ 7 ಸುಂದರೇಶ ಪ್ರಾಣ | ಅಂದ ಪ್ರತೀಕವಅಂದೇಭ ಗಿರಿಯಲ್ಲಿ | ಚಂದದಿ ನಿಲಿಸಿದರ 8 ಪ್ರಥಮ ಮಾಸವು ವರ | ಸಿತ ನವಮಿ ಮಧ್ಯಾಹ್ನಪೃಥುವಿ ಸಂಬಂಧವ | ಮತಿಯಿಂದ ತ್ಯಜಿಸಿದರ 9 ಇಂದು ಕರಿಗಿರಿಲಿಹರ 10 ಗೋವಿದಾಂಪತಿ ಗುರು ಗೋವಿಂದ ವಿಠಲ ಪರಾವರೇಶನು ಎಂದು | ಓವಿ ತುತಿಸುತ್ತಿಹರ11
--------------
ಗುರುಗೋವಿಂದವಿಠಲರು
ಸುಬ್ಬರಾಯ ಸುಜನಪ್ರಿಯ ಕರ್ಬುರಾಂತಕ ನಿರ್ಭಯವನು ಪಾಲಿಸಯ್ಯ ನಿರ್ಗತಮಾಯ ಪ. ಗೌರೀಕುಮಾರ ಪಾರಾವಾರಗಭೀರ ಮಾರನವತಾರ ತಾರಕಾರಿ ಶ್ರೀಕರ1 ಪಂಕಜಾಕ್ಷ ಪಾಹಿಮಾಂ ಶ್ರೀಶಂಕರಾತ್ಮಜ ಕುಂಕುಮಾರುಣವರ್ಣ ಪೂರ್ಣಾಲಂಕೃತ ವಿರಜ2 ಪೃಥ್ವಿಗುತ್ತಮ ಪಾವಂಜಾಖ್ಯ ಕ್ಷೇತ್ರಮಂದಿರ ಕರ್ತ ಲಕ್ಷ್ಮೀನಾರಾಯಣಭೃತ್ಯ ಸುಂದರ3
--------------
ತುಪಾಕಿ ವೆಂಕಟರಮಣಾಚಾರ್ಯ
ಸುಬ್ಬರಾಯ ಸುಜನಪ್ರಿಯ ಕರ್ಬುರಾಂತಕನಿರ್ಭಯವನು ಪಾಲಿಸಯ್ಯ ನಿರ್ಗತಮಾಯ ಪ.ಗೌರೀಕುಮಾರ ಪಾರಾವಾರಗಭೀರಮಾರನವತಾರ ತಾರಕಾರಿ ಶ್ರೀಕರ 1ಪಂಕಜಾಕ್ಷ ಪಾಹಿಮಾಂ ಶ್ರೀಶಂಕರಾತ್ಮಜಕುಂಕುಮಾರುಣವರ್ಣ ಪೂರ್ಣಾಲಂಕೃತವಿರಜ2ಪೃಥ್ವಿಗುತ್ತಮ ಪಾವಂಜಾಖ್ಯ ಕ್ಷೇತ್ರಮಂದಿರಕರ್ತಲಕ್ಷ್ಮೀನಾರಾಯಣಭೃತ್ಯ ಸುಂದರ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ