ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆಂದ್ಹೇಳಲಿ ಸ್ವಾನುಭವದ ಸುಭೋಗ ಧ್ರುವ ಸುಖಗರುತದ ಶಿಖಾಮಧ್ಯ ಸಂತ್ರಾಧಾರಿ ಬೇಕಾದರೆ ನೋಡಿ ಷಕಚಕ್ರವೇರಿ ಏಕೋಮಯವಾಗ್ಯದ ವಸ್ತು ಒಂದೇ ಸರಿ ಲೋಕಪಾಲಕಸ್ವಾಮಿ ತಾ ಸಹಕಾರಿ 1 ಜುಮ್ಮು ಜುಮ್ಮುಗುಡುತದೆ ರೋಮಾಂಚಗಳು ಧಿಮಿ ಧಿಮಿಗುಡುತದೆ ನಾದಧ್ವನಿಗಳು ಕ್ರಮ ತಿಳಿದರೆ ಭಾಸುತದೆ ಸುಳಹುಗಳು ಸಂಭ್ರಮವಾದರು ಅನುಭವಿಗಳು 2 ಕಳೆ ಮಳೆಮಿಂಚು ತುಂಬೇದ ಬಲು ಬಹಳ ಹೊಳೆಯುತಲ್ಯದೆ ಸ್ವಸುಖದ ಕಲ್ಲೋಳ ಝಳಝಳಿಸುತ ಜ್ಯೋತಿರ್ಮಯ ಥಳಥಳ ತಿಳಕೊ ಮಹಿಪತಿ ಗುರುದಯದ ಸುಫಳ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏಳುತಲೆದ್ದು ಮನವೆ ನೀ ವಲೀ ನಿಜಖೂನ ಕುಲಕೋಟಿ ಉದ್ಧರಿಸುವ ನೆಲೆನಿಭ ಸ್ಥಾನ ಬೆಳಗಾಗಲಿಕ್ಕೇರಿತು ನೀ ಒಳಿತಾಗಿ ಪೂರ್ಣ ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ 1 ಒಳಮುಖನಾಗರಿಯೋ ನೀ ಸುಲಲಿತ ಜ್ಞಾನ ಅಲೇಶ ಮಾಡದೆ ನೀ ಬ್ಯಾಗ ಬಲಿ ನಿಜಧ್ಯಾನ ಥಳಥಳಗುಡುತಲ್ಯದ ಒಳಿತಾಗಿ ಪೂರ್ಣ ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ 2 ತೊಳಿಬೇಕೆಲೊ ಮನದ ಹೀನ ಮಲಿನಗುಣ ಕರ್ಮ ತಮಂಧತನ ಕಳೆಕಾಂತಿಯುಳ್ಳ ಕರುಣಾರ್ಣವ ಸ್ವಾಮಿ ಪೂರ್ಣ ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ 3 ಸಲೆ ಮೊರೆಹೊಕ್ಕು ನೀ ಸದಾಬಲಿ ಭಕ್ತಿ ಪೂರ್ಣ ಅನುದಿನ ಸದ್ವಸ್ತು ಶರಣ ಸಕಳ ಸುರವುತಲ್ಯದೆ ಬಲ್ಲ ಸ್ವಾಮಿ ಕರುಣ ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ 4 ಇಳೆಯೊಳಿದೆ ಸಕಲಪುಣ್ಯಶಿರೋನಿಧಾನ ಘಳಿಸುವದೊಂದೆ ಸುಫಳಿತ ಸುದಿವ್ಯ ಘನ ತಿಳಿಯೊ ಸುಮನವೆ ಮಹಿಪತಿಸ್ವಾಮಿ ಪೂರ್ಣ ಒಲುವಾಂಗೆ ಮಾಡು ಗುರುಮೂರ್ತಿಗೆ ಸುನಮನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು