ಒಟ್ಟು 11 ಕಡೆಗಳಲ್ಲಿ , 6 ದಾಸರು , 11 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಸುದಿನ ಶುಭದಿವಸ ನೋಡಿ ಬಂದು ಕೂಡಿದ ಸದ್ಗುರು ದಯಮಾಡಿ ಧ್ರುವ ಮುನ್ನ ಮಾಡಿದ ಸುಪಣ್ಯ ಒದಗಿತು ಭಿನ್ನವಿಲ್ಲದೆ ಸುಚಿನ್ಹ ಹೊಳೆಯಿತು ಧನ್ಯಗೈಸುವ ಸುಫಲದೋರಿತು ಎನ್ನ ಜನುಮ ಸಾಫಲ್ಯವಾಯಿತು 1 ಸ್ವಾಮಿ ಕಂಡೆ ಕಣ್ಣಿನೊಳಂತರಂಗ ಬ್ರಹ್ಮಾನಂದ ಭಾಸುತದೆ ಸರ್ವಾಂಗ ಸಮಾರಂಭದೋರುತದೆ ಸುಸಂಗ ಒಮ್ಮಿಂದೊಮ್ಮೆ ಬಂದ ನೋಡಿ ಶ್ರೀರಂಗ 2 ಗುಹ್ಯ ಒಡೆದು ಹೇಳಲು ಸುವಿಚಾರ ದಯವಿಟ್ಟು ಬಂದ ನೋಡಿದರ ಇಹಪರಕೆ ಸದ್ಗುರು ಸಹಕಾರ ಮಹಿಪತಿಗೆ ಮಾಡಿದ ಮನೋಹರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಉದ್ಧರಿಸೆನ್ನಯ್ಯ ಮುದ್ದು ಶ್ರೀಹರಿಯೆ ಬಿದ್ದು ಬೇಡುವೆ ನಿಮ್ಮ ಪಾದಪದ್ಮದೊಳು ಪ ಬದ್ಧಗುಣ ಬಚ್ಚಿಟ್ಟು ಶುದ್ಧ ಮನದವನಂತೆ ಸುದ್ದಿ ಹೇಳುತ ಸತತ ಕದ್ದು ತಿನ್ನುವ ಎನ್ನ ಬದ್ಧ ಮನಸಿನ ಡೊಂಕ ತಿದ್ದು ಬೇಗದೊಳು 1 ನಂಬಿಗುಳ್ಳವನಂತೆ ಹೇಳುವ ಪರರ ಅಂಬುಜಾಕ್ಷಯರೊಲುಮೆ ಹಂಬಲವ ಮನದಿ ತುಂಬಿಕೊಂಡಿಹ್ಯ ಎನ್ನಡೊಂಕ ಶಂಭುವಿನುತನೆ ತಿದ್ದಿ ಇಂಬುಗೊಡು ಜವದಿ 2 ಸಫಲಮಾನಿಸನಂತೆ ಜಪಮಾತುಗಳಾಡಿ ಕಪಟತ್ವದಿಂದಿತರ ಅಪಹರಿಸುವ ಕುಪಿತ ಮನಸಿನ ಡೊಂಕ ಅಪರೂಪತಿದ್ದಿ ನುತ ಸುಫಲದಾಯಕ ಹರಿ ಕೃಪೆಮಾಡು ಜವದಿ 3 ಹಸುತೃಷಳಿದವನಂತೆ ವಸುಧೆಜನರಿಗೆ ತೋರಿ ಬಸವಳಿದು ಬಾಯಾರಿ ದೆಸೆಗೆಟ್ಟು ಪರರ ಅಶನ ಬೇಡುಂಬ ಪುಸಿಯ ಮನಸಿನ ಡೊಂಕ ಹಸನಾಗಿ ತಿದ್ದಿ ಲಕುಮೀಶ ಒಲಿ ದಯದಿ 4 ಪಾಮರಮನದ ದುಷ್ಕಾಮಿತಗಳನೆಲ್ಲ ಕ್ಷೇಮದಿಂ ಕಡೆಹಾಯ್ಸಿ ಸ್ವಾಮಿಯೇ ನಿಮ್ಮ ನಾಮಧ್ಯಾನದ ನಿತ್ಯನೇಮವನು ಪಾಲಿಸಿ ಪ್ರೇಮದ್ಹಿಡಿಕರ ಶ್ರೀರಾಮಪ್ರಭುತಂದೆ 5
--------------
ರಾಮದಾಸರು
ಏನು ಮಾಡಿದರೇನು ಹೀನಮಾನವನು ಧಿನದಯಾಸಿಂಧು ಹರಿ ನೀನೊಲಿಯದಿರಲು ಪ ಸ್ನಾನ ಮಾಡಿದರೇನು ನಾನಾತೀರ್ಥವ ತಿರುಗಿ ಮೌನ ಮಾಡಿದರೇನು ನಯನಗಳು ಮುಚ್ಚಿ ದಾನ ಮಾಡಿದರೇನು ಧ್ಯಾನ ಮಾಡಿದರೇನು ಧ್ಯಾನದಾಯಕ ನಿನ್ನ ದಯವಾಗದಿರಲು 1 ಜಪವ ಮಾಡಿದರೇನು ಅಪರೂಪ ಮಡಿಯುಟ್ಟು ತಪವ ಮಾಡಿದರೇನು ವಿಪಿನವನು ಸೇರಿ ಗುಪಿತಶಾಸ್ತ್ರವ ಕಲಿತು ನಿಪುಣನೆನಿಸಿದರೇನು ಸುಫಲದಾಯಕ ನಿನ್ನ ಕೃಪೆಯಾಗದಿರಲು 2 ತತ್ವವನು ವಿಂಗಡಿಸಿ ಅರ್ಥಮಾಡಿದರೇನು ಪೃಥ್ವಿಬಿಡದ್ಯಾವತ್ತು ಸುತ್ತುಗಟ್ಟಿದರೇನು ಕುತ್ತಿಗೆಯ ಕೊಯ್ದಿಟ್ಟು ಮತ್ತೆ ಕಲೆಸಿದರೇನು ಚಿತ್ತಜಪಿತ ನಿನ್ನ ಚಿತ್ತಕ್ಕೆ ಬರದಿರಲು 3 ಯೋಗವನು ಕಲಿತು ಬಲುಯೋಗ ಮಾಡಿದರೇನು ಭಾಗವತವೋದಿ ಬಲು ಯಾಗ ಮಾಡಿದರೇನು ಭೋಗವನ್ನು ತ್ಯಜಿಸಿ ಬಲು ಜಾಗರಣ ಮಾಡಲೇನು ನಾಗಶಯನನೆ ನಿನ್ನ ನಿಗ ಬೀಳದಿರಲು 4 ಒಪ್ಪಿಡಿ ಅವಲಕ್ಕಿಗೊಪ್ಪಿ ಸಂಪದ ಕೊಟ್ಟು ತಪ್ಪುಗಾರನ ಕ್ಷಮಿಸಿ ಅಪ್ಪಿ ಪದವಿತ್ತಿ ಒಪ್ಪುಗಾರನೆ ನೀನು ಒಪ್ಪಿದ ಬಳಿಕಾವ ತಿಪ್ಪುಳದ ಗೋಜಿಲ್ಲೆನ್ನಪ್ಪ ಶ್ರೀರಾಮ 5
--------------
ರಾಮದಾಸರು
ಕಾಯ ಪ ಗತಿ ನೀನೆ ಎನಗೆ ಸಂತತ ಪರಂಧಾಮಾ ಅ ಕೃಪಣ ವತ್ಸಲನೆ ಎಮ್ಮಪರಾಧಗಳ ನೋಡಿ ಕುಪಿತನಾಗುವರೇನೋ ಸುಫಲದಾಯೀ ನೃಪಗನಿರುದ್ಧ ಬಿನ್ನಪವ ಮಾಡುವೆ ನಿನಗೆ ಚಪಲ ಚಿತ್ತರಾದ ಕಾಶ್ಯಪಿಸುರರನ ಕಾಯೋ 1 ಮಾನ್ಯಮಾನದನೆ ಬ್ರಹ್ಮಣ್ಯದೇವ ನೀನೆಂದು ಉನ್ನತ ಶ್ರುತಿಗಳು ಬಣ್ಣಿಸುವುವು ಸನ್ನುತ ಮಹಿಮನೆ ನಿನ್ನ ಪೊಂದಿದವರ ಬನ್ನ ಬಡಿಸುವುದು ನಿನಗಿನ್ನು ಧರ್ಮವು ಅಲ್ಲ 2 ಹಲವು ಮಾತುಗಳಾಡಿ ಫಲವೇನು ಬ್ರಾಹ್ಮಣರ ಕುಲಕೆ ಮಂಗಳವೀಯೋ ಕಲುಷದೂರ ಸುಲಭ ದೇವೇಶ ನಿನ್ನುಳಿದು ಕಾವರ ಕಾಣೆ ಬಲಿಯ ಬಾಗಿಲ ಕಾಯ್ದ ಜಗನ್ನಾಥ ವಿಠಲಾ 3
--------------
ಜಗನ್ನಾಥದಾಸರು
ತ್ತಾತ್ವಿಕವಿವೇಚನೆ ಏಕ ಪಂಚಾಶದ್ವರ್ಣವಾಚ್ಯ ಶ್ರೀಕಳತÀ್ರನೆ ಸರ್ವಶಬ್ದಗೋಚರನಯ್ಯ ಪ ಕಾಯ ಕಾರ್ಯಕಾರಣವನನುಸರಿಸಿ ತ್ರಿಕರಣದೊಳಗಿದ್ದು ಕ್ರಿಯವ ನÀಡೆಸುವ ದೇವಅ.ಪ ಅಜಾನಂದೇಂದ್ರೇಶ ಶಿರ ಮುಖ ನೇತ್ರದೊಳು ನಿಜರೂಪ ಉಗ್ರ ಊರ್ಜ ಕರ್ಣದೊಳು ನಿಜ ಋತುಂಬರ ಋಘನಾಸದಲ್ಲಿ ಲೃಶಾ ಲೃಜ ವರ್ಣವಾಚ್ಯ ಗಂಡ ಸ್ಥಳದಲ್ಲಿಪ್ಪ 1 ಅನಂತಾರ್ಥಗರ್ಭನೆ ನೀ ವಾಚಿಯಲ್ಲಿ 2 ಕಪಿಲ ಖಪತಿ ಗರುಡ ಘರ್ಮ ದಕ್ಷಿಣಭುಜದೊಳ್ ಅಪರಿಚ್ಛಿನ್ನನೇ ನೀನು ಸಂಧಿಗಳಲಿ ಸುಫಲದಾತನೆ ಙಸಾರನಾಮದಲಿದ್ದು ಅಂಗುಲ್ಯಾಗ್ರದಲ್ಲಿ ನೀ ನಿರುತರಲಿ ನೆಲಸಿರ್ಪೆ 3 ಝೂಟಿತಾರ ವರ್ಣವಾಚ್ಯವ ಮಾಡಿ ನಿರುತದಲಿ ವಾಮಭುಜ ಸಂಧಿಗಳಲ್ಲಿರುವೆ ಬೆರಳ ಅಗ್ರದಿ ಞಮನಾಮದಲಿ ನೆಲೆಸಿರುವೆ 4 ಟಂಕ ಠಲಕ ಡರೌಕ ಢರಣಣಾಕ್ಮಕ ನೀ ನಾ ಟಂಕ ರಹಿತ ದಕ್ಷಿಣ ಪಾದದಲ್ಲಿ ಬಿಂಕವಿಲ್ಲದೆ ತಾರ ಥಪತಿ ದಂಡಿ ಧನ್ವೀ ನಮ್ಯನಾಮನೆ ವಾಮಪಾದ ಸಂಧಿಗಳಲ್ಲಿ 5 ಪರಫಲಿ ವರ್ಣವಾಚ್ಯ ದೇಹದಪಾಶ್ರ್ವ ಬಲಿ ಭಗನಾಮ ಪೃಷ್ಟ ಗುಹ್ಯದಲಿ ನಿರುತ ಮನ ವರ್ಣವಾಚ್ಯ ನೆನಿಸಿಹೆ ದೇವ ತುಂದಿ ಸ್ಥಾನದಲಿ ಎಂದೆಂದು ನಿಂದೆ6 ಯಜ್ಞ ಹೃದಯದಿ ರಾಮ ತ್ವಕ್‍ಲಕ್ಷ್ಮೀಪತಿ ರುಧಿರ ಶಾಂತಸಂವಿತ್ ಮಾಂಸದಲ್ಲಿ ಸುಜ್ಞ ಷಡ್ಗುಣ ಮಜ್ಜ ಸಾರತ್ಮ ಅಸ್ತಿಯು ಹಂಸ ಸ್ನಾಯುಳಾಳುಕ ನೀ ಪ್ರಾಣದಲ್ಲಿ 7 ಕ್ಷಕಾರವಾಚ್ಚ ಶ್ರೀ ಲಕ್ಷ್ಮೀ ನರಸಿಂಹ ಕ್ಷರ ಜೀವರಾ ದೇವ ಸರ್ವ ಸ್ಥಳದಲ್ಲಿಪ್ಪ ಶ್ರೀಕರಾರ್ಚಿತ ನಿನ್ನ ವಾಕ್ ಮನೋರೂಪಗಳು ಸಕಲ ಸಚ್ಛಾಸ್ತ್ರಾಗಮಗಳಾಗಿಹವೋ 8 ಸ್ವರವರ್ಣ ಸಂಯುಕ್ತ ಶಬ್ದವಾಕ್ಯದಿ ಸಕಲ ಪುರಾಣಾಗಮದಿ ಶಾಸ್ತ್ರ ಸರ್ವದಿ ನಿತ್ಯ ನಿರುತ ನಿನ್ನನುದಿನದಿ ಪೊಗಳುತಿಹವೋ 9 ಸ್ವಪ್ರಯೋಜನಕಾಗಿ ವರ್ಣ ಭೇದದಿ ವಾಕ್ಯ ಅಪ್ರಕೃತವಾಗೆಷ್ಟೋ ನಾನುಚ್ಚರಿಸಿದೆ ಸ್ವಪ್ರಯೋಜನ ರಹಿತ ಶ್ರೀವೇಂಕಟೇಶ ಶ್ರೀ ಉರಗಾದ್ರಿವಾಸ ವಿಠಲ ಜಗದೀಶ10
--------------
ಉರಗಾದ್ರಿವಾಸವಿಠಲದಾಸರು
ದುರಿತ ಉಪಶಮನೆ | ಅಮಮ ಮಂದಗಮನೆ || ಅಗಣಿತ ಸುಮನೆ ಪ ಆ ಮಹಾ ಮಾರ್ತಾಂಡ ಪುತ್ರೆ ಮಂಗಳಗಾತ್ರೆ | ಕಾಮಿತ ಸುಫಲದಾಯೆ ಕಾಲನಿಭ ಕಾಯೆ | ಆ ಮಂಜುಗಿರಿ ಬಳಿಯ ಅಲ್ಲಿ ಪುಟ್ಟಿದ ಸಿರಿಯೆ | ಸೋಮಕುಲಪಾವನೇ ಶರಣ ಸಂಜೀವನೆ 1 ಗಂಗಾ ಸಂಗಮ ಘನತರಂಗಿಣೀ ಮಹಾಮಹಿಮೆ | ಅಂಗವಟೆ ಅತಿ ಚಲುವೆ ನಲಿದಾಡಿ ನಲಿವೆ | ಮುಂಗುರಳು ಸುಮಲತೆ ಮೂಲೋಕ ವಿಖ್ಯಾತೆ | ಕಂಗಳಲಿ ನೋಳ್ಪಂಗೆ ಹೃತ್ಕಮಲ ಭೃಂಗೆ 2 ವಾರಿನಿಧಿ ಪ್ರಥುಕುಗಾಮಿನಿ | ಹಾರ ಮುಖೆ ಸುಪ್ರಮುಖೆ | ವೀರಶಕ್ತಿ ವಿಜಯವಿಠ್ಠಲನ |ಕಾರುಣ್ಯಪಾತ್ರೆ ಸಂಗೀತಲೋಲೆ 3
--------------
ವಿಜಯದಾಸ
ದೋಷನಾಶ ಜಗದೀಶ ಈಶ ಕೈ ಲಾಸವಾಸ ಸದಾನಂದ ಹರ ಜೈಜೈ ಪರಮಾನಂದ ಪ ದಂಡಧರನೆ ಹರ ರುಂಡಮಾಲ ರುದ್ರ ಕೆಂಡನಯನ ಸದಾನಂದ ಹರ ಜೈ ಜೈ ಪರಮಾನಂದ1 ಗೌರಿನಾಥ ಪ್ರಭು ಮಾರಮರ್ದನ ಮೃಡ ವಾರಿಧಿಧರ ಸದಾನಂದ ಹರ ಜೈ ಜೈ ಪರಮಾನಂದ 2 ಅಗಜಾವಲ್ಲಭ ನಿಗಮವಂದ್ಯ ಭಕ್ತ ರಘನಾಶನ ಸದಾನಂದ ಹರ ಜೈ ಜೈ ಪರಮಾನಂದ 3 ಗಜಚರ್ಮಾಂಬರ ಸುಜನರ ಪರಿಪಾಲ ತ್ರಿಜಗಪೂಜ್ಯ ಸದಾನಂದ ಹರ ಜೈ ಜೈ ಪರಮಾನಂದ 4 ತ್ರಿಪುರಸಂಹರ ನುತ ಸುಫಲದಾಯಕ ಮಹ ಕೃಪಾಕರ ಶಿವ ಸದಾನಂದ ಹರ ಜೈ ಜೈ ಪರಮಾನಂದ 5 ನೀಲಕಂಠ ಭವಮಾಲನಿವಾರ ತ್ರಿ ಶೂಲಧಾರಿ ಸದಾನಂದ ಹರ ಜೈ ಜೈ ಪರಮಾನಂದ 6 ಚಂದ್ರಚೂಡ ಶರಣೇಂದ್ರ ಮೃಕಂಡುಮುನಿ ಕಂದಗೊಲಿದ ಸದಾನಂದ ಹರ ಜೈ ಜೈ ಪರಮಾನಂದ 7 ಫಾಲನಯನ ಸುಖದಾಲಯ ನುತಜನ ಮೇಲುಮಂದಿರ ಸದಾನಂದ ಹರ ಜೈ ಜೈ ಪರಮಾನಂದ 8 ಭವ ಭೂತಿಖ್ಯಾತ ಜಗ ದಾತ ಸದಾನಂದ ಹರ ಜೈಜೈ ಪರಮಾನಂದ 9 ನಾದತೀತ ಅಮರಾದಿವಿನುತ ಮಹ ದಾದಿದೇವ ಸದಾನಂದ ಹರ ಜೈ ಜೈ ಪರಮಾನಂದ 10 ನತಜನ ಸುಖದಾಶ್ರಿತ ಹಿತಮತಿ ದೇ ನುತಿಪೆ ಸತತ ಸದಾನಂದ ಹರ ಜೈಜೈ ಪರಮಾನಂದ 11 ಭಾಗವತರ ಪ್ರಿಯ ಭಗವತ್ಶಿಖಾಮಣಿ ನಾಗಭೂಷ ಸದಾನಂದ ಹರ ಜೈ ಜೈ ಪರಮಾನಂದ 12 ಖೊಟ್ಟಿಲೋಹ ಸುಟ್ಟು ಕಿಟ್ಟತೆಗೆವಂತೆನ್ನ ಭ್ರಷ್ಟತ್ವಕಳಿ ಸದಾನಂದ ಹರ ಜೈ ಜೈ ಪರಮಾನಂದ 13 ಹರಣಪೋದರು ಹರಿಚರಣಸ್ಮರಣೆಬಿಡ ದ್ವರವ ಪಾಲಿಸು ಸದಾನಂದ ಹರ ಜೈ ಜೈ ಪರಮಾನಂದ 14 ಲಿಂಗಪುರೇಶ ಶಿವಲಿಂಗರೂಪ ಭವ ಭಂಗಸಂಗ ಸದಾನಂದ ಹರ ಜೈ ಜೈ ಪರಮಾನಂದ 15 ಮಂದರಧರನಡಿ ಚಂದದೊಲಿಸಿ ಎನಗಾ ನಂದಕೊಡು ಸದಾನಂದ ಹರ ಜೈ ಜೈ ಪರಮಾನಂದ 16 ಮಂಗಳಮೂರುತಿ ತುಂಗವಿಕ್ರಮ ಶ್ರೀ ರಂಗ ರಾಮ ಭಕ್ತಾನಂದ ಹರ ಜೈ ಜೈ ಪರಮಾನಂದ 17
--------------
ರಾಮದಾಸರು
ನಮೋ ನಮೋ ಕಮಲಾಲಯೆ ಸರ್ವೋ ತ್ತುಮ ನಾರಾಯಣನಂಕದ್ವಯ ಸಮುಪಸ್ಥಿತೆ ಸುಂದರ ಮದಗಜ ಗಮನೆ ಗುಣಪೂರ್ಣೆ ಶೋಭಾನೆ ಪ ಕಂಗಳ ಕುಡಿನೋಟದಿ ಕಂಜಜ ಗಂಗಾಧರ ಸುರಮುಖ ಸುಜನರ ಇಂಗಿತ ಫಲ ಪೂರೈಸಿಕೊಡುವ ಮಂಗಳ ಸುಚರಿತ್ರೆ ಭೃಂಗಾಳಿಗಳಂದದಿ ಸೊಗಯಿಪ ಮುಂಗುರುಳಿಂದೊಪ್ಪುವ ನಿಜಪತಿ ಸಂಗಡ ಬಾ ಹಸಿಯ ಜಗಲೀಗೆ 1 ಜಲಜಾಕ್ಷನ ವಿಮಲಾಂಗದಿ ಪ್ರತಿ ಫಲಿಸಿದ ರೂಪಗಳನೆ ನೋಡುತ ಪುಳಕೋತ್ಸವದಿಂದಲಿ ಪಾಡುತ ಹೊಲಬು ಗಾಣದಲೆ ತಲೆದೂಗುತ ಮಿಗೆ ಸಂತೋಷದಿ ಗಳರವದಿಂ ಪಾಡುತ ಶ್ರೀ ಭೂಲಲನೆ ಬಾ ಹಸಿಯ ಜಗಲೀಗೆ 2 ಪ್ರತಿಫಲಿಸಿಹ ರೂಪಗಳೆನ್ನವು ಕತಿಪಯರೂಪಗಳೆನಗಿಂದಲಿ ಅತಿಶಯವೆ ತೋರುತಲಿಪ್ಪವು ಪ್ರತಿ ಪ್ರತಿಕ್ಷಣದಿ ಶ್ರುತಿ ಪ್ರತೀಕನು ದಯದಿಂದೆನ ಗ್ಹಿತದಿಂದಲಿ ತೋರಿದನೆನುತಲಿ ನತಿಸುತ ನಗುತಿಪ್ಪ ಲಕ್ಷ್ಮೀ ಹಸಿಗೇಳು 3 ಆ ಬ್ರಹ್ಮಾಂಡಗಳೊಳ ಹೊರ ಗುಪಮರು ನಿನಗಿಲ್ಲವಾಗಲು ಅಪರಾಜಿತನಮಲ ಸುರೂಪ ಗಳಪರೋಕ್ಷಣದಿ ಕಾಂಬ ಚಪಲಾಂಬಕ ಕೃಪಣರ ಸಲಹಲು ಸ್ವಪತಿಯ ಶಿಪಿವರನಂಸಗೆ ಸುಫಲದೆ ಬಾಹಸಿಯ ಜಗುಲೀಗೆ 4 ವೀತಭಯನ ವಕ್ಷಸ್ಥಳವೆ ಪು ರಾತನ ಮನೆಯೆನಿಪುದು ಅವಿನಾ ಭುತರು ನೀವಿರ್ವರು ಅಮೃತಾ ಜಾತರು ಎಂದೆಂದೂ ಭೌತಿಕ ಮಂದಿರದೊಳು ನೆಲೆಸಿ ಪು ನೀತರ ಮಾಳ್ಪುದೆಮ್ಮ ಜಗ ನ್ನಾಥ ವಿಠಲನರ್ಧಾಂಗಿ ಜಗ ನ್ಮಾತೆ ವಿಖ್ಯಾತೆ ಬಾಹಸಿಯ ಜಗುಲೀಗೆ 5
--------------
ಜಗನ್ನಾಥದಾಸರು
ಮಾಯ ಮೋಹಿಗಳಿಗೆಲ್ಲ ಭವಬಂಧಳಿಯುವುದೇ ಕಾಯ ಶುದ್ಧಲ್ಲದವಗೆ ಕರ್ಮಬಂಧ್ಹರಿಯುವುದೇ ಪ ಮುಣುಗು ಕಲಿತಿರುವನು ದಣಿವಿನಿಂ ಮುಕ್ತಹನೆ ಕುಣಿತಕಲಿತಿರುವವ ಮನದಿ ನಾಚುವನೆ ಒನಪು ಕಲಿತಿರುವಗೆ ಮನಸಿಜ ದೂರನೆ ಮನೆಮನೆ ತಿರುಗುವನು ಘನತೆಗೆ ಬಹನೆ 1 ಪಾದ ತಾಡಣೆಯು ತಪ್ಪುವುದೆ ಕೇಡುಗಾರಿಗೆ ಸುಖದ ಜಾಡು ತಿಳಿಯುವುದೆ ಕಾಡಡವಿಲಿರುವವಗೆ ರೂಢಿಯ ಸುದ್ದಿಹುದೆ ನಾಡ ಮಾತಾಡುವಗೆ ಕೇಡು ತಪ್ಪುವುದೆ 2 ನಿಂದಕಗೆ ಮುಂದಿನ್ನು ಹಂದಿಜನ್ಮ ತಪ್ಪುವುದೆ ಛಂದಸ್ಸರಿಯದವಗೆ ಕವಿತದಂದ ತಿಳಿಯುವುದೆ ಮಂದಿಗೋಷ್ಠಿಗ್ಹೋಗುವಗೆ ಕುಂದೊದಗದಿರುತಿಹ್ಯದೆ ತಂದೆತಾಯನ್ಹಳಿಯುವಗೆ ಬಂಧ ತಪ್ಪುವುದೆ 3 ಮೋಸಕಾರಿಗೆಮಶಾಪವು ತಪ್ಪುವುದೆ ಆಶಕಾರಿಗೆ ಮಹನಾಶ ಬಿಡುತಿಹ್ಯದೆ ದೇಶದೇಶ ತಿರುಗುವಗೆ ಘಾಸಿಯು ತಪ್ಪುವುದೆ ದಾಸಜನ ದೂಷಕಗೆ ಈಶನೊಲಿಮಿಹ್ಯದೆ 4 ಸುಗುಡಿಗೆ ಪತಿಸರಸ ಸೊಗಸಾಗಿ ಕಾಣುವುದೆ ಜಗಳಗಂಟಿಗೆ ವ್ರತದ ಬಗೆಯುಶೋಭಿಪುದೆ ಸುಗುಣೆಯರೊಡನಾಟ ಷಂಡನಿಗೆ ಸಲ್ಲುವುದೆ ಸುಗುಣ ಸಂಗಿಲ್ಲದೆ ನರಕ ಭುಗಿಲು ತಪ್ಪುವುದೆ 5 ಕಪಟತ್ವ ನೀಗದೆ ತಪವೃದ್ದಿಯಾಗುವುದೆ ಕೃಪಣತ್ವ ಬಿಡದವಗೆ ತಾಪತ್ರಳಿಯುವುದೆ ಜಪವಿಲ್ಲದೆ ವಿನಾ ಸುಫಲದೊರಕುವುದೆ ಗುಪಿತವನು ತಿಳಿಯದವಗಪರೋಕ್ಷವಿಹ್ಯದೆ 6 ಮಾನವನ ಗುಣರಿಯದೆ ಜ್ಞಾನ ಸ್ಥಿರವಾಹುದೆ ಜ್ಞಾನವಿಲ್ಲದೆ ಬೇರೆ ಧ್ಯಾನ ಸಿದ್ದಿಪುದೆ ದೀನನಾಥ ಮಮ ಪ್ರಾಣೇಶ ಶ್ರೀರಾಮನಡಿ ಖೂನವರಿಯದೆ ಮುಕ್ತಿ ಜಾಣೆ ಸುಖಬಹುದೆ 7
--------------
ರಾಮದಾಸರು
ಶ್ರೀ ಗಣೇಶ ಕ್ಷಿಪ್ರ ಪ್ರಸಾದನೆ ಪ್ರಣಮಿಸುವೆ ಕರುಣಾಳು ವಿಪ್ರ ಪ್ರಬುಧ್ಧರಿಗೆ ಪ್ರಿಯತರ ಗಣೇಶ ಅಪ್ರತಿಸುಪೂರ್ಣ ಸಚ್ಛಕ್ತಿಸ್ವರೂಪನು ಸುಪ್ರಕಟ ನಿನ್ನೊಳು ಪ್ರಭಂಜನಸಮೇತ ಪ ಬಾಲಾರ್ಕನಿಭ ವಸ್ತ್ರ ತನುಮಾಲ್ಯ ಲೇಪನದಿ ಹೊಳೆಯುವ ಮಹೋದರ ಗಜಾನನ ಸುಫಲದ ಥಳಥಳಿಪ ಪಾಶ ದಂತಾಂಕುಶಾಭಯಹಸ್ತ ಒಲಿದು ವಿಘ್ನವ ಕಳೆದು ಕಾಮಿತಾರ್ಥವನೀವೆ 1 ನಿಖಿಳ ಲೋಕಂಗಳ ಮುಕ್ತಾಮುಕ್ತರ ಸರ್ವಧಾರಕಾಕಾಶ ಏಕಾತ್ಮ ವಿಶ್ವನು ಪ್ರಕಾಶಿಪನು ನಿನ್ನೊಳು ಶಂಕರಾತ್ಮಜ ಭೂತಾಕಾಶಾಭಿಮಾನಿ 2 ತ್ರಾತ ಪದ್ಮಜಪಿತ ಪ್ರಸನ್ನ ಶ್ರೀನಿವಾಸನ ಅತಿ ವಿಮಲ ನಾಭಿಧೇಶದಲಿರುವೆ ಮುದದಿ ಅನುಜ ವಿತ್ತಪಗೆ ಸಮ ಶೇಷ ಶತಸ್ಥರಿಗೆ ಉತ್ತಮನೆ ಗುರುವರ ನಮಸ್ತೆ 3
--------------
ಪ್ರಸನ್ನ ಶ್ರೀನಿವಾಸದಾಸರು
ಸತ್ತು ಚಿತ್ತಾನಂದ ಭಕ್ತಜನಬೆಂಬಲನೆ ಸತ್ಯಾತ್ಮ ಸರ್ವೋತ್ತಮ ಪ ಮೃತ್ಯುಸಂಹರ ಸರ್ಗಮತ್ರ್ಯಪಾತಾಳತ್ರಯ ಶೌರಿ ಅ.ಪ ಬದ್ಧಕುಲಹರಣ ಗೋವರ್ಧನೋದ್ಧಾರ ಕ್ಷೀ ರಾಬ್ಧಿ ಕನ್ನಿಕಾರಮಣ ಬದ್ಧಸಂಸಾರದೊಳಗೆ ಬಿದ್ದು ಬಳಲುವ ಎನ್ನ ನುದ್ಧರಿಸು ದಯಭೂಷಣ ಬಿದ್ದೆ ನಿಮ್ಮಯಪದಕೆ ಮಧ್ವಮುನಿಪ್ರಿಯನೆ ಪರಿ ಶುದ್ಧನೆಂದೆನಿಸೆನ್ನ ಶುದ್ಧಪದ್ಧತಿಗಳನು ತಿದ್ದು ಎನ್ನೊಳಗಿದ್ದು ಶುದ್ಧಚೈತನ್ಯರೂಪ ಭೂಪ 1 ಕಪಟಬುದ್ಧಿಯ ಕಳೆದು ಅಪರೂಪ ನಿಜಜ್ಞಾನ ಕೃಪೆಮಾಡು ಭಕ್ತಲೋಲ ಅಪರೋಕ್ಷಮತಿ ನೀಡಿ ಅಪಮೃತ್ಯು ಪರಿಹರಿಸು ಅಪರಿಮಿತ ಮಹಿಮ ಜಾಲ ಸುಫಲದಾಯಕ ನಿಮ್ಮ ಜಪವೆನ್ನ ಜಿಹ್ವೆಯೊಳು ಸ್ಥಾಪಿಸೈ ಭಜಕಜನಪಾಲ ಕಪಿವರದ ವನಮಾಲ ಕಪಟಗಳಕುಲಕಾಲ ಕೃಪಾದೃಷ್ಟಿನೀಡೆನ್ನೊಳು ಕೇಳು 2 ಭ್ರಷ್ಟನು ಇವನೆಂದು ಬಿಟ್ಟಿ ಬೇಸರ ಬೇಡ ಮುಟ್ಟಿಭಜಿಪೆ ತವಪಾದವ ಎಷ್ಟು ತಪ್ಪಿರ್ದರು ಸುಟ್ಟು ಸಫಲೆನಿಸೆನ್ನ ಕೆಟ್ಟ ಬವಣೆ ಕಳಿಯಭವ ಹುಟ್ಟಿ ಸಾಯುವ ಮಹಕೆಟ್ಟ ಕಷ್ಟದ ಹಾದಿ ಕಟ್ಟುಮಾಡು ಹೇ ಮಾಧವ ದಿಟ್ಟ ಶ್ರೀರಾಮ ಎನ್ನ ಇಷ್ಟದೇವರು ನೀನೆ ಶಿಷ್ಟ ಸಜ್ಜನರ ಪ್ರೇಮಿ ಸ್ವಾಮಿ 3
--------------
ರಾಮದಾಸರು