ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಬ್ರಹ್ಮಾಂಡ ಪುರಾಣದ ಕರುಣಾಕರ ಸ್ತೋತ್ರದ ಅನುವಾದ) ಶ್ರೀ ರಮಣನೆ ನಮೋ ಎಂದು ನುತಿ ಪೇಳ್ವೆನಿಂದು ಪ. ನಿನ್ನನು ದೂಡದಿರನ್ಯರ ಬಳಿಗೆ ಪಾದ ಕಾಪಾಡು ದೇಹವ ದಾಢ್ರ್ಯದೊಳಗೆ 1 ಈಶನು ನೀ ಎನಗೆಂದಿಗು ನಿನ್ನ ದಾಸನಾದುದರಿಂದ ಪೋಷಕರನು ಕೃಪೆಯಿಂದ 2 ಎನ್ನ ಭರಣಕನ್ಯರಸಡ್ಯೆಯೇನು ಕಂಬುರುಹಾಕ್ಷಾಶ್ರಿತ ಕಾಮಧೇನು 3 ಫಣಿರಾಜಶಯನ ಶ್ರೀಕಾಂತ ಎನಗೆ ಸಿದ್ಧಾಂತ 4 ಕಲ್ಕಿರುವ ಸ್ವಾಪಲ್ಕಿವರದ ನಿನ್ನ ಶುಲ್ಕದಾಸಗೆ ಭಯವಿಲ್ಲ ಫಲ್ಕಸ ಪಾವನ ಮನದಿ ನೀಯಿರಲನ್ಯ ಕಲ್ಕಗಳುಂಟೆ ಭೂನಲ್ಲ 5 ಹೆಚ್ಚಾದರ್ಥಗಳುಂಟೆ ಪೇಳು ತಡಮಾಳ್ಪದಾಶ್ಚರ್ಯ ಕೇಳು ದಯಾಳು 6 ತಾಯೆ ತನ್ನಣುಗಗೆ ಗರವನಿಕ್ಕೆ ಬೇರೆ ಕಾಯುವರುಂಟೆ ಬೇಗದಲಿ ಲೋಕದಲಿ 7 ದಾತ ಪರಿತ್ರಾತ ಜ್ಞಾತದಯಾನ್ವಿತನೆಂದು ಪಾಲಿಸು ಗುಣಸಿಂಧು 8 ನೀ ನಿರ್ವಹಿಸುವಿಯೆಂದು ತಿಳಿದೆ ಎನ್ನಯ ವಾರ್ತೆಗೊಳದೆ9 ನೀ ಬಿಡದಿರು ಹರಿಯೆ ಸರ್ವಾರ್ಥದಾಯಕ ಎನ್ನ ದೊರೆಯೆ 10 ಎಂದು ಪೇಳ್ದೆದು ಶ್ರುತಿ ನಿಂದು ಭವ ಬೇಗ ಓಡಿ ಬಂದು 11 ಎನ್ನೊಳ್ಯಾಕೆ ನಿರ್ದಯವು ಬೇಗ ಪರಿಹರಿಸಾಧ್ಯಾತ್ಮಿಕಾರ್ತಿ 12 ಶಕುತಿಯದ್ಭುತವಲ್ಲ ಸ್ವಾಮಿ ಬಹುದು ಸುಪ್ರೇಮಿ 13 ಪಂಡಿತಜನರು ಲೋಕದಲಿ ಪುಂಡರೀಕಾಕ್ಷ ನೀನರಿವಿ 14 ದಯೆದೋರು ಭೃಂಗಾಳಕಾಂತ ದಿನಕಾಂತ ದಯೆದೋರೊ ಬೇಗ ನಿಶ್ಚಿಂತಾ 15 ಕರಗಳ ಮುಗಿದು ಸ್ವೀಕರಿಪುದು ಬುಧುರರಿದು. 16
--------------
ತುಪಾಕಿ ವೆಂಕಟರಮಣಾಚಾರ್ಯ
ಕಂಡೆ ಕಂಡೆನು ಸ್ವಾಮಿಯ ಸುಪ್ರೇಮಿಯಾ ಪ ಕಂಡೆ ಕಂಡೆನು ಕೃಷ್ಣರಾಯನ ಪುಂಡರೀಕ ದಳಾಯತಾಕ್ಷನ ಪಾಂಡವಪ್ರಿಯ ಪಾರ್ಥಸಖನ ಉ ದ್ದಂಡ ಮಹಿಮ ಸುರೇಂದ್ರವಂದ್ಯನ ಅ.ಪ. ಕನಕ ನವಮಣಿ ಖಚಿತ | ವಾಗಿಹ ಸಿಂಹಾ ಸನದೊಳು ಸಲೆ ಶೋಭಿತ | ಸುರುಚಿರ ದಿವ್ಯ ಘನನೀಲನಿಭರಂಜಿತ | ನಿರ್ಮಲಗಾತ್ರ ಕುಂಡಲ ಮಣಿ ಗಣದ ಹಾರಾದಿ ಬಹು ಭೂ ಷಣಗಳನುಪಮ ಕಾಂತಿಯಿಂದಲಿ ಮಿನುಗುವತಿ ಲಾವಣ್ಯ ಮೂರ್ತಿಯ 1 ಕೋಟಿ ಮನ್ಮಥರೂಪನ | ಶ್ರೀಕೃಷ್ಣನ ಹಾಟಕಾಂಬರಧಾರನ | ಕರುಣಾಮಯ ಕಂಬು ಕಂಠನ ಆಟಮಾತ್ರದಿ ಪ್ರಬಲ ದೈತ್ಯ ಮ ಹಾಟವಿಯ ನಿರ್ಧೂಮಗೈದನ ಖೇಟವಾಹನನೆನಿಪ ತ್ರಿಜಗದಿ ಸಾಟಿಯಿಲ್ಲದ ದೇವದೇವನ 2 ಮೆರೆವ ದ್ವಾರಕಾಧೀಶನ | ದ್ರೌಪದಿದೇವಿ ಮೊರೆ ಕೇಳಿ ಸಲಹಿದನ | ಭಜಿಪರ ಅವ ಸರಕೊದಗುವ ದೇವನ | ಶ್ರೀ ಕೃಷ್ಣನ ತರಳತನದಲಿ ಗೋಕುಲದಿ ತಾ ಪರಿಪರಿಯ ಲೀಲೆಗಳ ತೋರಿದ ಪರಮ ಪುರುಷನ ಕರಿಗಿರೀಶನ ಸರಿಯಧಕರಿಲ್ಲದ ಸುರೇಶನ 3
--------------
ವರಾವಾಣಿರಾಮರಾಯದಾಸರು
ಕಾಯೇ - ಕಮಲಾಲಯೆ ಶ್ರೀ ಲಕುಮೀ | ಭಕುತ ಸುಪ್ರೇಮಿ ಪ ಕಾಯಜ ಜನನಿಯೆ | ಮಾಯ ಭವದೊಳೆನ್ನಕಾಯ ಮುಳಗದೂ | ಪಾಯವ ಕಲ್ಪಿಸಿ ಅ.ಪ. ಸತಿ ಸತ್ಯ ರುಕ್ಮಿಣಿ ಯನ್ನನು | ಶಿಷ್ಟ ಜನರೊಳಿಟ್ಟು ಶ್ರೇೀಷ್ಠ ಸಾಧನವೀಯೆ 1 ಯಾತ್ರೆ ತೀರ್ಥಂಗಳ ಮಾಡರಿಯೇ | ಕೈ ಮುಗಿವೆನು ಸಿರಿಯೇಪಾತ್ರಾ ಪಾತ್ರಂಗಳ ನಾನರಿಯೇ | ದಾನೆಂಬುದನರಿಯೇಮಾತ್ರಾ ಸ್ಪರ್ಶಂಗಳ ಗೆಲಲರಿಯೇ | ಮನನಿಲ್ಲದು ಸರಿಯೇ |ಗಾತ್ರಗಳಿಸಿತಿದು ವಿಧಾತೃಜನನಿಯೇ | ಸೂತ್ರಗತನ ಈ | ಗಾತ್ರದಿ ತೋರಿಸಿ 2 ಇಂದಿರೆ ಗುರು ಗೋವಿಂದ ವಿಠಲನರಸಿ 3
--------------
ಗುರುಗೋವಿಂದವಿಠಲರು
ಕಾಲಭೈರವ ಸ್ವಾಮಿಯೆ ಭಕ್ತಜನ- ರಾಳಿಗೆ ಸುಪ್ರೇಮಿಯೆ ಪ. ಮೂರ್ಲೋಕದೊಳು ಹರಿಲೀಲೆ ಕೊಂಡಾಡುವ ಶೀಲರ ಕಾವ ಕೃಪಾಳುವೆ ಜಯ ಜಯ ಅ.ಪ. ರುದ್ರನಾಮಕ ಹರಿಯ ಪಾದಭಕ್ತಿ- ಮುದ್ರಾಂಕಿತ ನೀನಯ್ಯ ಬುದ್ಧಿಜ್ಞಾನ ಸಂಸಿದ್ಧಿಸುತೆಮ್ಮನು ಉದ್ಧರಿಸುವ ಸುಪ್ರಸಿದ್ಧ ಮಹಿಮ ನಿನ್ನ ಹೊಂದಿದೆನು ಶಾಂತೀರಮಣನನಿ- ರುದ್ಧನಂಘ್ರಿಸರೋಜ ಸ್ಮರಣೆ ಸ- ಮೃದ್ಧಿಯನು ನೀನಿತ್ತು ಒಳಹೊರ- ಗಿದ್ದು ಕಾಯೊ ಸುಭದ್ರದಾಯಕ 1 ಕಾಮಕ್ರೋಧ ಮುಂತಾದ ವೈರಿಜನ- ಸ್ತೋಮದಿಂದ ಬಹಳ ಬಾಧಾ ಶ್ರೀಮನೋರಮನ ಸುನಾಮಸ್ಮರಣೆಯನ್ನು ಪ್ರೇಮದಿಂದಿತ್ತು ಸುಕ್ಷೇಮದಿಂ ಪೊರೆಯೆಂದು ವ್ಯೋಮಕೇಶನೆ ಧೀಮತಾಂವರ ಸೋಮಧರ ಸುತ್ರಾಮವಂದಿತ ತಾಮರಸಸಖ ತೇಜ ಸುಜನರ ಕಾಮಧೇನು ಮನೋಮಯನೆ ಜಯ 2 ಲಕ್ಷ್ಮೀನಾರಾಯಣನ ದಾಸಾರ್ಯ ಫಾ- ಲಾಕ್ಷ ಮಹೇಶಾನ ಸೂಕ್ಷ್ಮಸ್ಥೂಲದೊಳ್ಪರೀಕ್ಷಕನಾಗಿ ವಿ- ಪಕ್ಷದವರನು ಶಿಕ್ಷಿಸಿ ಶಿಷ್ಟರ ರಕ್ಷಿಸುವ ಸದಯಾದ್ರ್ರಹೃದಯ ಮು- ಮುಕ್ಷುಪ್ರಿಯ ಗುರುವರ್ಯ ಲೋಕಾ- ಧ್ಯಕ್ಷ ದಕ್ಷಮುಖಾಂತರ ಕರು-ಣೇಕ್ಷಣದಲಿ ನಿರೀಕ್ಷಿಸೆಮ್ಮನು3
--------------
ತುಪಾಕಿ ವೆಂಕಟರಮಣಾಚಾರ್ಯ
ಕಾಲಭೈರವ ಸ್ವಾಮಿಯೆ ಭಕ್ತಜನ- ರಾಳಿಗೆ ಸುಪ್ರೇಮಿಯೆ ಪ. ಮೂರ್ಲೋಕದೊಳು ಹರಿಲೀಲೆ ಕೊಂಡಾಡುವ ಶೀಲರ ಕಾವ ಕೃಪಾಳುವೆ ಜಯ ಜಯಅ.ಪ. ರುದ್ರನಾಮಕ ಹರಿಯ ಪಾದಭಕ್ತಿ- ಮುದ್ರಾಂಕಿತ ನೀನಯ್ಯ ಬುದ್ಧಿಜ್ಞಾನ ಸಂಸಿದ್ಧಿಸುತೆಮ್ಮನು ಉದ್ಧರಿಸುವ ಸುಪ್ರಸಿದ್ಧ ಮಹಿಮ ನಿನ್ನ ಹೊಂದಿದೆನು ಶಾಂತೀರಮಣನನಿ- ರುದ್ಧನಂಘ್ರಿಸರೋಜ ಸ್ಮರಣೆ ಸ- ಮೃದ್ಧಿಯನು ನೀನಿತ್ತು ಒಳಹೊರ- ಗಿದ್ದು ಕಾಯೊ ಸುಭದ್ರದಾಯಕ 1 ಕಾಮಕ್ರೋಧ ಮುಂತಾದ ವೈರಿಜನ- ಸ್ತೋಮದಿಂದ ಬಹಳ ಬಾಧಾ ಶ್ರೀಮನೋರಮನ ಸುನಾಮಸ್ಮರಣೆಯನ್ನು ಪ್ರೇಮದಿಂದಿತ್ತು ಸುಕ್ಷೇಮದಿಂ ಪೊರೆಯೆಂದು ವ್ಯೋಮಕೇಶನೆ ಧೀಮತಾಂವರ ಸೋಮಧರ ಸುತ್ರಾಮವಂದಿತ ತಾಮರಸಸಖ ತೇಜ ಸುಜನರ ಕಾಮಧೇನು ಮನೋಮಯನೆ ಜಯ 2 ಲಕ್ಷ್ಮೀನಾರಾಯಣನ ದಾಸಾರ್ಯ ಫಾ- ಲಾಕ್ಷ ಮಹೇಶಾನ ಸೂಕ್ಷ್ಮಸ್ಥೂಲದೊಳ್ಪರೀಕ್ಷಕನಾಗಿ ವಿ- ಪಕ್ಷದವರನು ಶಿಕ್ಷಿಸಿ ಶಿಷ್ಟರ ರಕ್ಷಿಸುವ ಸದಯಾದ್ರ್ರಹೃದಯ ಮು- ಮುಕ್ಷುಪ್ರಿಯ ಗುರುವರ್ಯ ಲೋಕಾ- ಧ್ಯಕ್ಷ ದಕ್ಷಮುಖಾಂತರ ಕರು- ಣೇಕ್ಷಣದಲಿ ನಿರೀಕ್ಷಿಸೆಮ್ಮನು 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಯಕ್ಷಿಣೀ ಸರ್ವಲಕ್ಷ್ಮಿಣೀ ರಕ್ಷಿಸು ಮಗನ ಅಪೇಕ್ಷವ ಪೂರೈಸಿ ಪ ಕಂಟಕ ಸಕಲಪೂರ್ಣ ಕರುಣವಿಟ್ಟು ಮಾಡು ಸಫಲ ತ್ರಾಣಿ ಕರುಣದಿ ಬಡತನವಖಿಲ ಜಾಣೆ ಪರಿಹರಿಸಿ ಕೊಡು ಎನಗೆ ಸುಫಲನ ಆಹ ಮೊರೆಯಿಟ್ಟು ಬೇಡುವೆ ಪರಮಪಾವನೆ ಎನ್ನ ಇರವ ತೀರಿಸು ತಾಯಿ ಸರುವ ಸಿದ್ಧಾಂತಳೆ 1 ಮನುಮುನಿಗಳಿಗಾದಿ ಒಲುಮೆ ನೀನು ಘನ ಸಿದ್ಧಿನಿತ್ತು ಸದ್ಧರ್ಮಿ ಜಾಣ ರೆನಿಸಿದಿ ದಯದಿ ಸುಪ್ರೇಮಿ ಮಾಣ ದನುಪಮಮತಿ ನಿಜಮಹಿಮೆ ಆಹ ವನರುಹ ಬ್ರಹ್ಮಾಂಡ ಘನ ಘನ ಎನುವಂಥ ಅನುಪಮಪದದೆನ್ನ ಕನಿಕರದಿಂ ಕಾಯೆ 2 ಸರುವ ಸಿಧ್ದಿಯ ನೀಡಿ ಕರುಣಿ ಎನ್ನ ಸರುವ ಶುದ್ಧವೆನಿಸೆ ಜನನೀ ಪೂರ್ಣೆ ಸರ್ವಜ್ಞೆ ಪಾಲಿಸೆ ನಿಪುಣೆ ವಾಣಿ ಸರ್ವಮಂಗಲಿ ಸುಪ್ರವೀಣೆ ಆಹ ಸರ್ವಶಕ್ತ ಜಗದಾರ್ಯ ಶ್ರೀರಾಮನ ಭಾರ್ಯೆ ಸಕಲ ಐಶ್ಚರ್ಯದಿಂ ಪೊರೆಯೆನ್ನ 3
--------------
ರಾಮದಾಸರು
ರಕ್ಷಿಸು ಕಮಲಾಕ್ಷ ಶ್ರೀ ವಕ್ಷ ಪ ರಕ್ಷಾ ಶಿಕ್ಷಾಶ್ರಿತಜನ ಸಂರಕ್ಷ ಅಕ್ಷಯ ಸುರಪಕ್ಷ ಅಧ್ಯಕ್ಷ ಅ.ಪ. ಪ್ರಾಚೀನ ಕರ್ಮಾಬ್ಧಿ ವೀಚಿಯೊಳಗೆ ಸಿಕ್ಕಿ ಪೇಚಾಡುತಲಿರೆ ತೋರದು ಯೋಚನೆ ಶ್ರೀ ಚರಣಕೆ ಶಿರಬಾಗುವೆ ಶ್ರೀಕರ ಸೂಚಿಸಿ ಘನ ಭಕ್ತಿ ವಿರಕ್ತಿ 1 ಆರ್ತ ಬಾಂಧವನೆಂದು ಕೀರ್ತಿ ಪೊತ್ತವನೆಂದು ಅರ್ತಿಯಿಂದಲಿ ಬಂದೆ ಸುತ್ತುತೆ ತಂದೆ ಕೀರ್ತಿಯ ಉಳುಹಿಕೊ ಕೀರ್ತಿಯ ತಂದುಕೊ ಭಕ್ತವತ್ಸಲ ಸ್ವಾಮಿ ಸುಪ್ರೇಮಿ 2 ಜನನಿ ಜನಕರು ಅನುಜಾ ತನುಜರು ಅನುವಾಗಿದ್ದರೆ ಎಲ್ಲ ನಮ್ಮವರೆ ಅನುವು ತಪ್ಪಿದರಾರು ಕಣ್ಣಲಿ ನೋಡರು ಅನಿಮಿತ್ತ ದಯವಂತ ಶ್ರೀಕಾಂತ 3
--------------
ಲಕ್ಷ್ಮೀನಾರಯಣರಾಯರು