ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರವಿಂದ ನೇತ್ರಾನಂದ ಗೋವಿಂದಾ ವರನಂದ ಕಂದಾ ಪೊರೆಯೈ ಮುಕುಂದಾ ಪ ಶ್ರೀಲಲಾಮ ರಾಮ ಬಾಲಕ ಸುಪ್ರೇಮಾ ಕಾಲಕಾಲಭೀಮ ಲೋಲ ರಂಗಧಾಮಾ 1 ಮಾನುಷಾವತಾರ ದೀನಪಾಲ ಶೂರ ಮಾರ ದಾನವ ಸಂಹಾರ 2 ಗಜರಾಜ ವರದ ಅಜಸುರ ವಿನೋದ ಭಜಕ ಹೃದಯಾಹ್ಲಾದ | ವಿಜಯ ಪದ್ಮಪಾದ 3 ಮಡುವಿನೊಳಿಹೆನಯ್ಯ ಪಿಡಿಯೆನ್ನ ಕೈಯ ಮೃಡನುತಾ ರಂಗಯ್ಯ ಪೊಡವಿಯರಸ ಜೀಯ 4 ವಾಮದೇವ ನುತ ಭೂಮಿಜಾಸೇವಿತ ರಾಮದಾಸನುತ ಕೋಮಲಾ ದಯಾಭರಿತ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಎಂತು ನಿನ್ನ ಮೆಚ್ಚಿಸುವೆನೊ ಎಲೊ ವೆಂಕಟಾ ಸಂತತ ಬಿಡದೆ ಎನ್ನ ಅಂತರಂಗದಲ್ಲಿ ಇರೊ ಪ ಕುಣಿದು ನಿನ್ನ ಮೆಚ್ಚಿಸುವೆನೆ | ಫಣಿಹಾರನೈಯನನ ಜನಕಾ | ಮಣಿದು ನಿನ್ನ ಮೆಚ್ಚಿಸುವೆನೆ | ಸನಕಾದಿಗಳ ಸುಪ್ರೇಮಾ 1 ಅನ್ನವಿತ್ತು ಮೆಚ್ಚಿಸುವೆನೆ | ನಿತ್ಯ ತೃಪ್ತ ನೀನು | ಹೆಣ್ಣನಿತ್ತು ಮೆಚ್ಚಿಸುವೆನೆ | ಹೆಣ್ಣುರೂಪ ನೀನೆ ಸ್ವಾಮಿ 2 ಅಪ್ಪ ನಿನ್ನ ಮೆಚ್ಚಿಸುವೆನೆ | ದರ್ಪಾಕ ಬೊಮ್ಮನ ತಂದೆ | ಅಪ್ಪ ನಿನ್ನ ಮೆಚ್ಚಿಸುವೆನೆ | ಸುಪ್ಪಾಣಿ ರಮೆಯರಸಾ 3 ಪಾಲು ಕುಡಿಸಿ ಮೆಚ್ಚಿಸುವೆನೆ | ಸದನ ನೀನು | ಮಾಲೆ ಹಾಕಿ ಮೆಚ್ಚಿಸುವೆನೆ | ಮಾಲೆ ಕೌಸ್ತಭ ಭೂಷಣಾ4 ಸೇವೆ ಮಾಡಿ ಮೆಚ್ಚಿಸುವೆನೆ | ಪಾವಮಾನಿ ತಾತ ನೀನು | ಕಾವುದು ವಿಜಯವಿಠ್ಠಲಾ 5
--------------
ವಿಜಯದಾಸ
ಬಾ ಬಾ ರಾಘವ ಬಾ ವೀರ ರಾಘವ ಪ ಮತ್ಸ್ಯರೂಪನಾಗಿ ಹೆಚ್ಚಿದ ದೈತ್ಯನ ಇಚ್ಛೆಯಿಂದಲಿ ಕೊಂದ ಅಚ್ಯುತರಾಯನೆ 1 ಕೂರ್ಮರೂಪನಾಗಿ ಅಮರರಿಗೊಲಿದು ನೀ ಕಾಮಜನಕ ಸುಪ್ರೇಮಾವನಿತ್ಯಂತೆ4 2 ವರಹರೂಪನಾಗಿ ಧರಣಿಯ ಚೋರನ ಶಿರವ ತಂದು ನೀ ಜಗವ ಪೊರೆದ್ಯಂತೆ 3 ದುರುಳ ರಕ್ಕಸನ ಕರುಳ ತೆಗೆದು ನಿನ್ನ ಕೊರಳೊಳಗಿಟ್ಯಂತೆ 4 ಚೆಲುವತನದಿ ಪೋಗಿ ಬಲಿಯದಾನವ ಬೇಡಿ ಕಲುಷ ಹರಿಸಿ ಅವನ ಪಾತಾಳಕ್ಕೊತ್ತಿದ್ಯಂತೆ 5 ಕೊಡಲಿಯ ಪಿಡಿಯುತ ದುಗುಡ ರಾಯರುಗಳ ಸೊ ಗಡು ಮುರಿದು ನೀ ಸಡಗರ ಪಟ್ಯಂತೆ 6 ಸೀತೆಗೋಸ್ಕರ ಪೋಗಿ ಸೇತುವೆಯನೆ ಕಟ್ಟಿ ಭೂತ ರಾವಣನ ಖ್ಯಾತಿಯಿಂದಲಿ ಕೊಂದ 7 ವಾರಿಜಾಕ್ಷಿಯರ ಕೂಡಿ ನೀರಾಟದೊಳು ಪೊಕ್ಕು ನೀರೆಯರ1 ಮನ ಅಪಹಾರಮಾಡಿದ ಕೃಷ್ಣ 8 ಚಿತ್ತಜಪಿತ ನೀನು ಬತ್ತಲೆಯೊಳು ಬಂದು ಉತ್ತಮ ಸ್ತ್ರೀಯರ ವ್ರತಗಳಳಿದ್ಯಂತೆ 9 ಸುಂದರ ವಾಜಿಯ ಚೆಂದಾದಿಂದೇರುತ ಮಂದಗಮನೆಯರ ನಂದವಳಿದ್ಯಂತೆ 10 ದೋಷರಹಿತ ನಮ್ಮ ಶೇಷವಿಠ್ಠಲನೆ ಬ್ಯಾಸರವಿಲ್ಲದೆ ಪೋಷಿಸಿ ಸಲಹಲು 11
--------------
ಬಾಗೇಪಲ್ಲಿ ಶೇಷದಾಸರು
ಭಕ್ತ ಮಂದಾರಿಣಿ ಭವಭಯನಿವಾರಿಣಿ ಭಕ್ತಿಮುಕ್ತಿ ಪ್ರದಾಯಿನಿ ತ್ರಿಭುವನೈಕ ಜನನಿ ಪ. ಭುವನತ್ರಯಮೋಹಿನಿ ಭಾನುಕೋಟಿಪ್ರಕಾಶಿನಿ ಭೂರಿಭೂಭುಜ ಸೌಭಾಗ್ಯದಾಯಿನಿ ಪಾಹಿಮಾಂ ಜನನಿ ಅ.ಪ. ಸಾಮಜಾಧಿಪಗಾಮಿನಿ ಕಾಮಿತಾರ್ಥಪ್ರದಾಯಿನಿ ರಾಮಣೀಯ ಸ್ವರೂಪಿಣಿ ಕಾಮಜನನಿ ಕಲುಷವಿಭಂಜಿನಿ 1 ಕನಕವಸನೆ ಕವಿಮನೊಲ್ಲಾಸಿನಿ ಸುಮನಸವರ ಪರಿತೋಷಿಣಿ ಕೋಮಲತರ ಕೋಕಿಲ ಮೃದುಭಾಷಿಣಿ 2 ಕಮಲ ಬಾಂಧವ ವಂಶ ಸಂಭವ ರಾಮಚಂದ್ರ ಸುಪ್ರೇಮಾಕಾಂಕ್ಷಿಣಿ 3 ವನಜ ಸಂಭವ ಸನ್ನುತೆ ಕನಕಭೂಷಣ ಭೂಷಿತೆ ಅನಿಲನಂದನ ಸೇವಿತೇ ಘನಕರುಣಾರಸಾನ್ವಿತೇ 4 ಅನಘ ಸದ್ಗುಣಭೂಷಿತೆ ಅನಿಮಿಷಾಧಿಪ ಪೂಜಿತೆ ಜನಕ ಭೂಪತಿ ಪೋಷಿತೇ ಘನಶೇಷಾದ್ರೀಶ ದಯಿತೆ5
--------------
ನಂಜನಗೂಡು ತಿರುಮಲಾಂಬಾ
ಯಾತಕಿದೆಲೋ ಪ್ರಾಣಿ ಪ್ರೇಮದ | ರೀತಿಲ್ಲದ ಭಜನೀ ಪ ಪ್ರೇಮವಿಲ್ಲದ ಸ್ನಾನ ಸಂಧ್ಯಾನಾ | ಪ್ರೇಮವಿಲ್ಲದ ಜಪವೃತ ಅನುಷ್ಠಾನಾ 1 ಪ್ರೇಮವಿಲ್ಲದ ಶೃತಿ ಶಾಸ್ತ್ರಜ್ಞಾನಾ | ಪ್ರೇಮವಿಲ್ಲದ ಕವಿತ್ವದ ತ್ರಾಣಾ 2 ಬೆರೆತರೆ ಹರಿಭಕುತಿಗೆ ಸುಪ್ರೇಮಾ | ಗುರುಮಹಿಪತಿ ಪ್ರಭು ವಲಿವನು ನೇಮಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೇವ ದೇವೇಶ ವೆಂಕಟೇಶಶ್ರೀವಿಧಾತ ವಂದ್ಯ ಭೂವೈಕುಂಠೇಶ ಪ.ಸಾಮಜಾರ್ಚಾರಿ ಶಿಕ್ಷ ಸ್ವಾಮಿಸಾಮಗಾನಪ್ರಿಯ ಸತ್ಪಕ್ಷಶ್ರೀ ಮಾವಧೂ ಮನೋರಮ ತ್ರಿಧಾಮ ಶ್ರೀರಾಮ ಸುಪ್ರೇಮಾಬ್ಧಿ ಕೋಮಲ ಕುಕ್ಷ 1ರಾಕೇಂದುರವಿಕೋಟಿತೇಜ ಸ್ವಾಮಿನಾಕಪಾರ್ಚಿತ ಪದಾಂಬೋಜವ್ಯಾಕೀರ್ಣಾನೇಕಾಜಾಂಡಾಂಕಿತಾವ್ಯಾಕೃತಶ್ರೀಕಾರ ಸಾಕಾರ ಲೋಕೇಶ ಪೂಜ್ಯ 2ಅನಂತಗುಣ ಪರಿಪೂರ್ಣ ಸ್ವಾಮಿಆನತಜನ ಬುಧಭರ್ಣಧೇನುಗಿರಿನಾಥÀ ದಾನಿ ಪ್ರಸನ್ವೆಂಕಟಜ್ಞಾನಾನಂದ ನಿತ್ಯತೇ ನಮೋ ಕರುಣಿ 3
--------------
ಪ್ರಸನ್ನವೆಂಕಟದಾಸರು
ಶ್ರೀಪುರಂದರದಾಸಾರ್ಯ ಸ್ತೋತ್ರ133ಹರಿದಾಸ ಶ್ರೇಷ್ಠ ಶ್ರೀಪುರಂದರದಾಸಾರ್ಯರಸರಸೀರುಹಾಂಘ್ರಿಯಲಿ ಶರಣಾದೆ ಸತತ ||ವೈರಾಗ್ಯ ಯುಕ್‍ಜ್ಞಾನ ಭಕ್ತ್ಯಾದಿ ಸಂಪತ್ತುಕರುಣದಲಿ ಒದಗಿಸಿ ಶ್ರೀಕೃಷ್ಣ ನ್ನೊಲಿಸುವರು ||ಈ ಪುಣ್ಯತಮ ಭರತಖಂಡದಲಿ ಪ್ರಖ್ಯಾತ ||ಕೃಪಾಂಬುಧಿ ಜಗನ್ನಾಥವಿಠ್ಠಲ ರುಕ್ಮಿಣೀಶ ||ರೂಪಗುಣ ಭೇಧವಿಲ್ಲದ ಪೂರ್ಣನಿರ್ದೋಷಶ್ರೀಪ್ರಸನ್ನ ವೇಂಕಟನೇ ನಮೋ ಪದ್ಮಾವತೀಶ 1ಪುರುಷರೂಪತ್ರಯ ಕ್ಷರಾ ಕ್ಷರೋತ್ತಮ ಭೂಮ |ಅರದೂರಗುಣನಿಧಿ ನಾರಾಯಣಗೆ ಶರಣು |ಸುಪ್ರೇಮಾತಿಶಯದಲಿ ಸದಾ ಪತಿಯ ಸೇವಿಸುವನಿರಾಮಯಳು ಸುಖಪೂರ್ಣಲಕ್ಷ್ಮಿಗೆ ಶರಣು 2ದ್ವಿಷೋಡಶ ಲಕ್ಷಣದಿ ರಾಜಿಪವಿಧಿದಶಪ್ರಮತಿಗು ವಾಣಿ ಭಾರತಿಯರಿಗು ನಮಿಪೆಶ್ರೀಶನ ಪೂರ್ಣಾನುಗ್ರಹ ಪೂರ್ಣಪಾತ್ರರುಉತ್ಕøಷ್ಟರಜುಸ್ತೋಮಚರಣಕಾನಮಿಪೆ3ಉತ್ತಮ ಶ್ಲೋಕನ್ನ ಜಪಿಸಿ ಪೂಜಿಪ ಶಿವಹೊತ್ತು ಸೇವಿಪಗರುಡಪರ್ಯಂಕಶೇಷಭಕ್ತಾಗ್ರಣಿ ಈ ಸರ್ವರಿಗು ನಮಿಸುವೆನುಮಾಧವನ ಷಣ್ಮುಹಿಷಿಯರಿಗು ನಮಿಪೆ 4ವಿಮಲ ಚರಿತರು ಉಮಾಸೌಪರ್ಣಿ ವಾರುಣಿಗು |ಅಮರೇಂದ್ರ ಮನ್ಮಥಮುನಿಗು ನಮನಮಾಡಿನಮಿಸುವೆ ಅಹುಪ್ರಾಣದೇವನಿಗೆಗುರುಶಚಿಕಾಮಸತಿ ಸುತದತ್ತ ಸ್ವಾಯಂಭುವಗೆ 5
--------------
ಪ್ರಸನ್ನ ಶ್ರೀನಿವಾಸದಾಸರು