ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಪ್ಪವಡಿಸಯ್ಯ ಉಡುಪಿನ ಕೃಷ್ಣ ಚೆಲ್ವಕಂ-ದÀರ್ಪನಪ್ಪನೆ ಕಣ್ದೆರೆ ಪ. ಸರ್ಪನಂಗದಲಿ ರುಕ್ಮಿಣಿ ಸತ್ಯಭಾಮೆಯರಅಪ್ಪಿಕೊಂಡಿಪ್ಪ ಬಲು ಸುಪ್ರಸಿದ್ಧಅಪ್ರತಿಮ ಗುಣಗಣಾಂಬುಧಿ ಕರುಣಾನಿಧಿಯೆಸುಪ್ರೇಮದಿಂದ ನೋಡಾ ದೇವ 1 ದೇಹಿಗಳ ನಿದ್ರೆಯನು ತಿಳುಹಿಸುವರಾರು ನಿ-ರ್ವಾಹಕನು ನೀನು ನಿದ್ರೆಯ ಕೈಕೊಳೆಆಹುತಿಗಳನುವಾದ ಅನಲಮುಖದಲಿ ನಿನಗೆಶ್ರೀಹರಿಯೆ ದುರಿತಾರಿಯೆ ದೇವ 2 ನಿದ್ರೆಯಂ ತೊರೆದು ಸಿದ್ಧಾಸನದಿ ಕುಳ್ಳಿರ್ದುಸಿದ್ಧರೆಲ್ಲರು ತಮ್ಮ ಹೃದಯಕಮಲಸದ್ಮವನು ಬೆಳಗಿ ನಿನ್ನನೆ ಅರಸುತೈದಾರೆಮುದ್ದುಮೊಗವನು ತೋರಿಸಾ ದೇವ 3 ತುಂಬಿ ಕರೆಯಕಳುಹಿದ ನಿನ್ನಮನೆಯ ಬಾಗಿಲೊಳರಸುತ್ತ ದೇವ 4 ಕಮಲಕೊಬ್ಬಿತು ಸೂರ್ಯನತಿ ಪೆರ್ಮೆಯಂ ಪೊತ್ತಕ್ರಮದಿಂದ ನಿನ್ನ ಪೂರ್ವಜಸೋಮನೊಭ್ರಮೆಗೊಂಡವನ ಪರಿವಾರಕಾಯಿತು ಸೋಲುಸುಮುಖಚಂದ್ರನೆ ಬೆಳಗಿಸಾ ದೇವ 5 ಅಮಲಜಲದಲ್ಲಿ ಮಜ್ಜನವ ಮಾಡುವೆನೆಂದುಕ್ರಮದಿಂದ ತೀರ್ಥಗಳು ಕರೆದು ನಿನ್ನ ರಮಣೀಯ ಮೂರುತಿಯ ಮನದಲ್ಲಿ ನಿಲಿಸುವಶ್ರಮವ ಸಾರ್ಥಕ ಮಾಡೊ ದೇವ 6 ಅತಿಶೀತ ಹರುಷದಿಂ ಪುಳಕ ಶೋಭಿತರಾಗಿಪ್ರತಿಕ್ಷಣದಿ ನಿನ್ನನೇ ನೆನೆದು ನೆನೆದುವ್ರತದಿಂದ ಪೇಳುವ ಶ್ರುತಿ ಪುರಾಣದೊಳಿಪ್ಪಸ್ತುತಿಯನಾಲೈಸಿ ಕೇಳಾ ದೇವ 7 ತನುವ ರಂಜಿಸಿ ಶಂಖ ಚಕ್ರೋಧ್ರ್ವಪುಂಡÀ್ರದಿಂಪ್ರಣಮಮಂ ಪೇಳಿ ಮಂತ್ರಿತ ವಾರಿಯಘನ ಮಹಿಮ ನಿನ್ನ ಹಸ್ತದಲಿ ತರ್ಪಣ ಮಾಡಲನುವಾದರಯ್ಯ ಬುಧರು 8 ಎನಲುಪ್ಪವಡಿಸಿ ಶ್ರೀಕೃಷ್ಣ ಹಯವದನ ತಂ-ಪಿನ ನಾಗಭೋಗ ವಿಸ್ತರದಿ ಕುಳಿತುವನಜಸಂಭವಸಹಿತ ವಿಬುಧರೊಡ್ಡೋಲಗದಿಮುನಿಗಳರ್ಚಿಸಿ ಮೆಚ್ಚಿಸೆ ದೇವ9
--------------
ವಾದಿರಾಜ
ಗುರುಸುಶೀಲೇಂದ್ರ | ಚರಣವಾರಿಜ ಯುಗ್ಮ ಸ್ಮರಿಸುವ ನರರು ಶ್ರೀಹರಿದಾಸರು ಪ ಹರಿವರ ಸುಮಚಾಬ್ಧಿ | ಹರಿಣಾಂಕರೆನಿಸಿದ ವರಸುವೃತೀಂದ್ರರ ತೀರ್ಥರ ಕರಕಮಲಜ ಅ.ಪ ಮಾಸ ತ್ರಯದಿ ಸಡಗರದಲಿ ಮಹ ಸಭೆ ನಿರ್ಮಿಸಿ ಪೊಡವಿಯೊಳಿದ್ದ ಭೂಸರರಾಜ್ಞ ಪತ್ರ ಬರಮಾಡಿ ವಿದ್ವಾಂಸರ ಒಡಗೂಡಿ | ಮಧ್ವಾಗಮನವನು ನೋಡಿ ಬೆಲೆಯುಳ್ಳವೆಗ್ಗಳ ಒಡವೆ ಉಡುಪಗಳನು ಕರುಣಿಸಿ ಮೃಷ್ಟಾನ್ನ ದ್ವಿಜರಿಗೆ ಕಡು ಸುಪ್ರೇಮದಿ ಸಲಿಸಿ | ಮುದ ಬಡಿಸಿ ಜಡಕುಮಾಯ್ಗಳ | ಗಡಣ ಜಡಧಿಗೆ ವಡೆಯ ತಾನೆನಿಸಿ ಕ್ರೋಢ ಜಾಸ್ಥಿತ | ಒಡೆಯ ಶ್ರೀಗುರು ರಾಘವೇಂದ್ರರ ಅಡಿಗಳಾಬ್ಜಕಾ ರಡಿಯಂತೊಪ್ಪುತ | ಬಿಡದೆ ಸಂತತ ಧೃಢದಿ ಸೇವಿಸಿ ಜಡಜ ಜಾಂಡದಿ ಮೆರೆದ ಅಸ್ಮದ್ 1 ತರಣಿ ಕುಲೇಂದ್ರನ ಕರುಣವೆಷ್ಟಿವರೊಳು ಅರುಹಲಾರೆ ವರಕಾಪ್ಯಾಸನ ಪುರಕೆ ಎರಡಾರು ಯತಿಗಳ ವತಿಯಿಂದ ತಮ್ಮಯ ಶಿಷ್ಯ ತತಿಯಿಂದ ಬಹುವಿಧ ಬಿರುದಾವಳಿಯಿಂದ ತೆರಳಿ ಶಶಿರವಿವರ ಸುವಾದ್ಯಧ್ವಾನ ಮೊಳಗಿಸುತ ‌ಘನ ಭಕ್ತಿ ಪರವಶರಾಗಿ ಸುರಚಿರ ಕನಕಮಣಿ ಧನ ತನುಮನ ತ್ವರಿತ ತೃಣ ಬಗೆಯ ದೇವಕಿ ತರಳ ರುಕ್ಮಿಣಿ ವರ ಮುರಾಂತಕÀ ಚರಣಗರ್ಪಿಸುತ | ಆನಂದಪಡುತ ಸರ್ವಮುನಿ ಜನಗಳಿಗೆ ಬಲು ಉಪಚರಿಸಿ | ಮನ್ನಣೆ ಧರಿಸಿ ಹರುಷದಿ ವರ ಸುಧೀಂದ್ರರ ಕರಜರನು ನೆರೆಸ್ಥಾಪಿಸಿ ಆಶ್ಚÀರ್ಯ ಚರಿತ 2 ಪತಿ ಶೃತಿ ಶಾಸ್ತ್ರಾರ್ಥ ಚತುರ ತನದಿ ಪಡೆದು ವಿತತ ಮಹಿಮನಾದ ಪತಿತ ಪಾವನ ಶಾಮಸುಂದರನ ಸ್ತುತಿಸುತಲಯ ಚಿಂತನೆ ಗೈಯುತ ಶ್ರೀಯುತ ಸಂಸ್ಥಾನಮತಿ ವಿಶಾರದರಾದವರ ಸುವೃತೀಂದ್ರ ತೀರ್ಥರಿಗೆ ಹಿತದಿಂದ ಒಪ್ಪಿಸಿ | ಯತಿ ಧೀರೇಂದ್ರರ ಚಾರುಸ್ಥಳದೊಳಗೆ ತನುವಿತ್ತು | ಹರಿಪುರಪಥವ ಪಿಡಿದೈದಿದರು ಚನ್ನಾಗಿ | ಸೇವಿಪ ಜನರಿಗೆ ಅತಿದಯದಿ ಮನೋರಥವ ನೀಡುತ ಸತತ ಮಾಣದೆ ಪರಮ ಭಕುತಿಲಿ ಪೃಥ್ವಿ ಸುರಕರ ಶತಪತ್ರಗಳಿಂದ ನುತಿಸಿಕೊಳುತಲರ್ಚನೆಗೊಂಬ 3
--------------
ಶಾಮಸುಂದರ ವಿಠಲ
ಜೈ ಜೈ ವೆಂಕಟರಾಯ ಸಲಹು ಗಡ ಪ ಶುಭ ಕಾಯ ಐಹಿಕ ಮಹಮಾಯವ ಬಿಡಿಸಯ್ಯಅ.ಪ ಪಂಕಜಾಕ್ಷ ಹರಿ ಸಂಕರುಷಣ ಭವ ಸಂಕಟ ಪರಿಹಾರ ಶುಭಕರ ಶಂಖಶಕ್ರಧರ ಮಂಕುದನುಜಹರ ಕಿಂಕರಘದೂರ ಶಂಖಸುರನ ಬಲು ಬಿಂಕಮುರಿದ ಬಲದಂಕ ಅದಟವೀರ ಶೂರ ಅಂಕುರಿಸೆನ್ನೊಳಾತಂಕತಾರದೆ ಪೊರೆ ಲಂಕಾ ವಿಜಯಕಾರ 1 ದಾತ ಮೂರುಜಗನಾಥ ಪರಮ ಅ ದ್ಭೂತ ಮಹಿಮೆಗಾರ ಚದುರ ಪ್ರೀತ ಭಕುತ ಭವಭೀತರಹಿತ ಮಾಯಾ ಪೂತನಿ ಸಂಹಾರ ನೀತಿಕೋವಿದ ವಿಧಿತಾತ ಅಸಮ ವಿ ಖ್ಯಾತ ಕರುಣನಿಕರ ಸುಂದರ ಘಾತಿಸಿ ಕಂಸನ ಮಾತಪಿತರ ಕಾಯ್ದ ಪಾತಕ ನಿವಾರ 2 ಬಾಲನಂತರಿಯದೆ ಆಲಯಗಳ ಪೊಕ್ಕು ಪಾಲು ಮೊಸರು ಕದಿದ ಸವಿದ ಬಾಲೆರುಡುವ ದುಕೂಲ ಕದಿದು ತಾ ಮೇಲು ಮರವನೇರ್ದ ಕಾಲಿಂದಿ ಧುಮಕಿದ ಕಾಳಿಯಮೆಟ್ಟಿದ ಕಾಳರಕ್ಕಸರೊದೆದ ಸದೆದ ಲೀಲಾ ಜಾಲ ನಂದ ಬಾಲನಾಗಿ ಬಲು ಬಾಲಲೀಲೆಗೈದ 3 ಪರಮ ಪರಾತ್ಪರ ಪರಮಪುರುಷ ಸಿರಿ ಪರಮ ಪಂಚಪ್ರಾಣ ದುರಿತ ಹರಣಜನನಮರಣ್ಹರಸುರವಿನಮಿತ ಧರಣಿಗಧಿಕ ತ್ರಾಣ ಕರಿಧ್ರುವರಿರ್ವರನು ಭರದಿ ನೀಡಿ ನಿಂತು ಪೊರೆದ ಪಾಂಚಾಲೀಮಾನ ಜಾಣ ಶರಣಜನರ ಮೈನೆರಳು ನಿಗಮಾತೀತ ನಿರಂಜನ 4 ಸೋಮವದನ ಸತ್ಯಭಾಮಾರಮಣ ಸುಖ ಧಾಮ ಸುಜನಹೃದಯನಿಲಯ ಕಾಮಜನಕ ಪುಣ್ಯನಾಮ ರಕ್ಕಸಕುಲ ಭೀಮ ಪಾಲಿಸಭಯ ಶಾಮವರ್ಣ ಮಮಸ್ವಾಮಿ ಭಜಿಪೆ ಶ್ರೀ ರಾಮಪಿಡಿಯೋಕಯ್ಯ ಸದಯ ಕಾಮಿತ ವರ ಸುಪ್ರೇಮದಿ ಇತ್ತೆನ್ನ ಪ್ರೇಮದುದ್ಧರಿಸಯ್ಯ 5
--------------
ರಾಮದಾಸರು