ಒಟ್ಟು 8 ಕಡೆಗಳಲ್ಲಿ , 5 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯದೋರು| ದಯದೋರು | ದಯದೋರು | ಜನನಿ ಪ ಜಯ ಜಗನ್ಮಾತೆ ನೀ | ದಯದೋರಿ ಪೊರೆ ನೀ ಅ.ಪ ಆದಿ ನಾರಾಯಣಿ | ಮಾಧವಭಗಿನಿ || ಸಾಧುಸುಪ್ರೀತೆ ನೀ| ವೇದವಂದಿತೆ ನೀ 1 ಭುವನಪಾಲಿನಿ ದೇವಿ | ಭುವನವಂದಿತೆ ನೀ || ಭವಭಯಹಾರಿಣಿ | ಭುವನೇಶ್ವರಿ ನೀ 2 ಶಂಖಚಕ್ರಾಂಕಿತೆ | ಶಂಕರಿ ಸುಗುಣಿ | ವೆಂಕಟರಮಣನ | ಪ್ರೇಮದ ಭಗಿನಿ 3
--------------
ವೆಂಕಟ್‍ರಾವ್
ನಂಬಿದೆನು ಜಗದಂಬೆ ನಿನ್ನನು ಪಾಲಿಸು ಸರ್ವಾ- ರಂಭಸೂತ್ರಳೆ ಇಂಬುದೋರಿನ್ನು ಪ. ಅಂಬುಜಾಂಬಕಿ ಶುಂಭಮರ್ದಿನಿ ಕಂಬುಗ್ರೀವೆ ಹೇರಂಬ ಜನನಿ ಶೋ- ಣಾಂಬರಾವೃತೆ ಶಂಭುಪ್ರಿಯೆ ದಯಾ- ಲಂಬೆ ಸುರನಿಕುರುಂಬಸನ್ನುತೆ ಅ.ಪ. ಕ್ರೂರದೈತ್ಯವಿದಾರೆ ಮಹದಾಕಾರೆ ಮಂಗಲೇ ವಿಶ್ವಾ- ಧಾರೆ ಕಲ್ಮಷದೂರೆ ಕದನಕಠೋರೆ ನಿಶ್ಚಲೆ ಪಾರಾ- ವಾರ ಸಮಗಂಭೀರೆ ಸುಗುಣವಿಹಾರೆ ನಿರ್ಮಲೆ ರತಿಶೃಂ- ಗಾರೆ ರಿಪುಸಂಹಾರೆ ತುಂಬುರು ನಾರದಾದಿಮುನೀಂದ್ರ ನುತಚರ- ಸೂರಿಜನ ಸುಮನೋರಥಪ್ರದೆ 1 ವಿಶಾಲಸುಗುಣಯುತೆ ಮುನಿಜನ- ಲೋಲತರುಣಮರಾಳೆ ಸಚ್ಚರಿತೆ ನವಮಣಿ ಮಾಲೆ ಮನ್ಮಥಲೀಲೆ ರಿಪುಶಿರಶೂಲೆ ಸಚ್ಚರಿತೆ ಹಿಮಗಿರಿ- ಬಾಲೆ ನೀಲತಮಾಲವರ್ಣೆ ಕ- ರಾಳಸುರಗಿ ಕಪಾಲಧರೆ ಸುಜ- ನಾಳಿಪಾಲನಶೀಲೆ ಹಿಮಕರಮೌಳಿಶೋಭಿತೆ ಕಾಳಿಕಾಂಬಿಕೆÉ2 ಶೋಕಮೋಹಾನಾನೀಕದೂರೆ ಪಿನಾಕಿಸುಪ್ರೀತೆ ಕೋಟಿ ದಿ- ಪರಾಕು ಶರಣಜನೈಕಹಿತದಾತೆ ಸುರನರ- ಲೋಕಮಾತೆ ನಿರಾಕುಲಿತೆ ಸುವಿವೇಕಗುಣವ್ರಾತೆ ಮಾನಸ- ವಾಕುಕಾಯದಿಂದ ಗೈದಾ ನೇಕ ದುರಿತವ ದೂರಗೈದು ರ- ಮಾಳಕಳತ್ರನ ಪಾದಭಕುತಿಯ ನೀ ಕರುಣಿಸು ಕೃಪಾಕರೇಶ್ವರಿ3 ಈಶೆ ಪಾಪವಿನಾಶೆ ಮಣಿಗಣಭೂರಿಪ್ರದೆ ಶಕ್ತಿವಿ- ಲಾಸೆ ವಿಗತವಿಶೇಷೆ ಕೃತಜಯಘೋಷೆ ಸರ್ವವಿದೆ ಮನ್ಮನ- ದಾಸೆಗಳ ಪೂರೈಸು ಸಜನರ ಪೋಷೆ ಕುಂದರದೆ ಶಂಕರೋ- ಲ್ಲಾಸೆ ಯೋಗೀಶಾಶಯಸ್ಥಿತೆ ವಾಸವಾರ್ಚಿತೆ ಶ್ರೀಸರಸ್ವತಿ ದೋಷರಹಿತೆ ಮಹೇಶೆ ಸುಗುಣರಾಶಿ ಸುರತತಿದಾಸಜನಯುತೆ4 ಸಾಮಗಾನಪ್ರೇಮೆ ರಾಕ್ಷಸ ಭೀಮೆ ರುದ್ರಾಣಿ ಅರಳ- ಗ್ರಾಮದೇವತೆ ಕ್ಷೇಮದಾಯಿನಿ ತಾಮರಸಪಾಣಿ ಪಶುಪತಿ- ವಾಮಭಾಗ ಲಲಾಮೆ ಮಂಗಲಧಾಮೆ ಫಣಿವೇಣಿ ಜಯಜಯ ಶ್ರೀಮಹಾಲಕ್ಷ್ಮಿ ನಾರಾಯಣಿ ರಾಮನಾಮಾಸಕ್ತೆ ಕವಿಜನ- ಸೋಮಶೇಖರಿ5
--------------
ತುಪಾಕಿ ವೆಂಕಟರಮಣಾಚಾರ್ಯ
ಪಾವನಾತ್ಮಕಿಯೆ | ಪಾಲಿಸು | ಪಾವನಾತ್ಮಕಿಯೆ ಪ ಭಾವಜಾರಿಹಿತೆ ಸುಪ್ರೀತೆ|| ದೇವಿಪಾವನೆ ಪಾಲಿಸು ಮಾತೆ ಅ ಪ ಸೃಷ್ಟಿ ಭಾರರಾಗುತಿರ್ದ| ದುಷ್ಟ ದನುಜರಸುವ ಹೀರ್ದ|| ಶಿಷ್ಟರಿಂಗೆ ದಯವದೋರ್ದ| ಸೃಷ್ಟವಿನುತೆ ಶಿಷ್ಟದಾತೆ 1 ವೇದವಿನುತೆ ಭೇದರಹಿತೆ| ಸಾಧುಸುಜನಮೋದದಾತೆ|| ಆದಿಮಧ್ಯಾಂತರಹಿತೆ| ಮಾಧವನ ಸಹಜಾತೆ 2 ಶಂಖಚಕ್ರಗಳನು ಧರಿಸಿ| ಬಿಂಕದ ಸುರರನ್ನು ವಧಿಸಿ|| ಸೋದರಿ ಶಂಕರಿ3
--------------
ವೆಂಕಟ್‍ರಾವ್
ಪೂಜಿಸುವೆನು ದೇವಿಯ ಶ್ರೀನಿತ್ಯ ಗೌರಿಯ ಪ ಪರಶಕ್ತಿರೂಪೆಯ ಪರತತ್ವಮೂರ್ತಿಯ ಪರಮಮಂಗಳ ದೇವಿಯ ಪರಮಾನುರಾಗದಿ 1 ಮೃಗಧರಮೌಳಿಯ ಜಗದುದ್ಧಾರಾಂಬೆಯ ಮಿಗೆ ಮನದಲಿ ಧ್ಯಾನಿಸಿ ಅವಾಹಿಸುತ್ತಲಿ 2 ಸರ್ವಲೋಕೇಶ್ವರಿಯ ಸರ್ವಾಲಂಕಾರೆಯ ಸರ್ವಾಂಗ ಸುಂದರಿಯ ಆಸನವನಿತ್ತು 3 ವಿದ್ಯಾಧಿದೇವಿಯ ಶುದ್ಧಚಿದ್ರೂಪೆಯ ಪಾದ್ಯಾಘ್ರ್ಯಾಚ ಮನದಿಂದ ಪರಿಶುದ್ಧ ಹೃದಯದಿ 4 ಪಂಚಮವಾಣಿಯ ಚಂಚರಿಕಾಂಬೆಯ ಪಂಚಾಮೃತವ ಜಲವ ಮುದದಿಂದ ತಳಿಯುತ 5 ಸುಂದರ ಹಾಸೆಯ ಸೌಂದರ್ಯ ಶರದಿಯ ಚಂದ್ರಗಾವಿಯ ನುಡಿಸಿ ಕಂಚುಕವ ಗೊಡಿಸಿ 6 ಚಂದ್ರ ಬಿಂಬಾಸ್ಯೆಯ ಸಿಂಧುರ ಗಮನೆಯ ಇಂದು ತಿಲಕವ ತಿದ್ದುತ ಗಂಧವನೆ ತೊಡೆದು 7 ಮಂಗಳ ಮಾತೆಯ ಮಂಗಳ ಮೂರ್ತಿಯ ಮಂಗಳ ದ್ರವ್ಯದಿಂದ ಶೃಂಗಾರ ವೆಸಗಿ8 ಲೀಲಾವಿನೋದೆಯ ಬಾಲ ಕುಚಾಂಬೆಯ ಮಾಲೆಯ ನರ್ಪಿಸುತ ಕುಸುಮಗಳ ನಿಚಯದಿ 9 ಪಾಪನಿಹಂಶ್ರಿಯ ಶ್ರೀಪತಿ ಸೋದರಿಯ ಧೂಪ ದೀಪವ ಕಲ್ಪಿಸಿ ಅಚಮನವಿತ್ತು 10 ಸತ್ಯಸಂಕಲ್ಪೆಯ ನಿತ್ಯಸಂತುಷ್ಟೆಯ ಉತ್ತಮ ಫಲಭಕ್ಷ್ಯದಿಂ ನೈವೇದ್ಯ ವೆಸಗಿ 11 ಕಂಬುಸುಕಂಠಿಯ ಬಿಂಬಫಲಾಧರೆಯ ತಾಂಬೂಲ ದಕ್ಷಿಣೆಯಂ ಭಕ್ತಿಯೊಳಗರ್ಪಿಸಿ 12 ಮಂಗಳ ಮೂರ್ತಿಯ ಮಂಗಳ ಗೌರಿಯ ಮಂಗಳಾರತಿಯ ಗೈದು ಆಚಮನವಿತ್ತು 13 ಕಲಕೀರವಾಣಿಯ ಕಲಹಂಸಗಮನೆಯ ಲಲನಾಶಿರೋಮಣಿಯ ಬಲವಂದುನಮಿಸಿ 14 ಜಯ ಜಯ ಗೌರಿಯೆ ಜಯ ಜಯ ಮಾತೆಯೆ ಜಯದೇವಿ ಕರುಣಿಸು ನೀಂ ವರ ಸುಪ್ರಸಾದವ 15 ಮಾನಿನಿ ದೇವಿಯು ಮೌನಿ ಸುವಂದ್ಯೆಯು ಧೇನುಪುರೀಶ್ವರಿಯು ಸುಪ್ರೀತೆಯಾಗಲಿ 16
--------------
ಬೇಟೆರಾಯ ದೀಕ್ಷಿತರು
ಲಕ್ಷ್ಮೀ ಸ್ತುತಿಗಳು ಆರೋಗಿಸು ತಾಯೇ ಮೋದದಿ ಕ್ಷೀರಾಂಬುಧಿ ತನಯೆ ಪ. ಸಾರಸನಯನೆ ಮದವಾರಣಗಮನೆ ಸಾರಿ ಚೀಡುವೆ ಸರಾಗದೊಳೀಕ್ಷಿಸು ಅ.ಪ. ಉಪ್ಪು ಉಪ್ಪಿನಕಾಯಿಕೋಸುಂಬರಿ ಹಪ್ಪಳ ಸಂಡಿಗೆಯ ತಪ್ಪದೆ ತಂದೊಪ್ಪಿಸುತಿಹೆ ಎನ್ನಪ್ಪನೊಡನೊಪ್ಪದಿ ವ ುಂಡಿಸಿ 1 ಚಕ್ಕುಲಿ ಕರಜಿಕಾಯಿ ಅತಿರಸ ಸಕ್ಕರೆ ಹೋಳಿಗೆಯಂ ನಲಿಯುತ 2 ದಧಿ ನವನೀತ ಘೃತ ಮಧುಸಾರವೆನಿಪ ಪರಮಾನ್ನ ಕ್ಷೀರಶರಧಿಸುತೆ ನೀ ನೀರಸ ಸಹಿತಾಪಾರ ಕೃಪಾಪಾಯದೊಳೀಕ್ಷಿಸಿ3 ಸವಿನೋಡುತೆ ನಲಿದು4 ನಿಗಮಾಗಮ ವಿನುತೇ ನಮಿಸುವೆ ನಗಧರ ಸುಪ್ರೀತೆ ಗುಣಗಳ ಬಗೆಗೊಳಿಸುತ್ತಲಿ 5
--------------
ನಂಜನಗೂಡು ತಿರುಮಲಾಂಬಾ
ಲಕ್ಷ್ಮೀದೇವಿ ಜನನಿ ಬ್ರಹ್ಮನ ರಾಣಿ | ಪುಸ್ತಕಪಾಣಿ ಪ. ಫಣಿರಾಜನಿಭವೇಣಿ | ವರವೀಣಾಪಾಣಿ || ಘನವಿದ್ಯಾದಾಯಿನಿ | ಪರಮಕಲ್ಯಾಣಿ1 ಶರದಿಂದುನಿಭವಕ್ತ್ರೆ | ಅರವಿಂದದಳನೇತ್ರೆ || ಪರಮಕೋಮಲಗಾತ್ರೆ | ಸುರಮುನಿನುತಿಪಾತ್ರೆ 2 ನೃತ್ಯವಿನೋದಿನಿ | ಸ್ತೋತ್ರ ಸುಪ್ರೀತೆ ನೀ ಭೃತ್ಯೌಘಪಾಲಿನಿ | ನಿತ್ಯಕಲ್ಯಾಣೀ 3
--------------
ವೆಂಕಟ್‍ರಾವ್
ಶಾರದೇಂದು ಸನ್ನಿಭಾನನೇ ಸರಸಿಜಲೋಚನೆ ಪ. ಶಾರದೇ ಸುವಿಶಾರದೇ ದಯೆಬಾರದೇ ನತಕಾಮದೆ ಭೂರಿಹರ್ಷದೆ ಬೀರಿ ನಲ್ಮೆಯಾಪಾರ ಸೌಖ್ಯವ ತೋರು ಕೀರ್ತಿಯ 1 ವಾಣಿ ವೀಣಾಪಾಣಿ ಮಂಜಳವಾಣಿ ಪುಸ್ತಕಧಾರಿಣಿ ವೇಣುನಾದ ವಿನೋದಿನಿ ಸುಜ್ಞಾನದಾಯಿನಿ ಪಾಹಿ ಜನನೀ 2 ಮಾತೆ ಮಂಗಳ ಗೀತೆ ಕವಿಸುಪ್ರೀತೆ ಪದ್ಮಜದಯಿತೆ ಖ್ಯಾತೆ ಶೇಷಗಿರೀಶ ಭಕ್ತಿಪ್ರದಾತೆ ಸದ್ಗುಣಪೂತೆ ಮಹಿತೆ 3
--------------
ನಂಜನಗೂಡು ತಿರುಮಲಾಂಬಾ
ನಂಬಿದೆನು ಜಗದಂಬೆ ನಿನ್ನನು ಪಾಲಿಸು ಸರ್ವಾ-ರಂಭಸೂತ್ರಳೆ ಇಂಬುದೋರಿನ್ನು ಪ.ಅಂಬುಜಾಂಬಕಿ ಶುಂಭಮರ್ದಿನಿಕಂಬುಗ್ರೀವೆಹೇರಂಬಜನನಿಶೋ-ಣಾಂಬರಾವೃತೆ ಶಂಭುಪ್ರಿಯೆ ದಯಾ-ಲಂಬೆ ಸುರನಿಕುರುಂಬಸನ್ನುತೆ ಅ.ಪ.ಕ್ರೂರದೈತ್ಯವಿದಾರೆ ಮಹದಾಕಾರೆ ಮಂಗಲೇ ವಿಶ್ವಾ-ಧಾರೆ ಕಲ್ಮಷದೂರೆ ಕದನಕಠೋರೆ ನಿಶ್ಚಲೆ ಪಾರಾ-ವಾರ ಸಮಗಂಭೀರೆ ಸುಗುಣವಿಹಾರೆ ನಿರ್ಮಲೆ ರತಿಶೃಂ-ಗಾರೆ ರಿಪುಸಂಹಾರೆ ತುಂಬುರುನಾರದಾದಿಮುನೀಂದ್ರ ನುತಚರ-ಣಾರವಿಂದೆ ಮಯೂರಗಾಮಿನಿಸೂರಿಜನ ಸುಮನೋರಥಪ್ರದೆ 1ಮೂಲರೂಪೆ ದಯಾಲವಾಲೆವಿಶಾಲಸುಗುಣಯುತೆ ಮುನಿಜನ-ಲೋಲತರುಣಮರಾಳೆ ಸಚ್ಚರಿತೆ ನವಮಣಿಮಾಲೆ ಮನ್ಮಥಲೀಲೆ ರಿಪುಶಿರಶೂಲೆ ಸಚ್ಚರಿತೆ ಹಿಮಗಿರಿ-ಬಾಲೆ ನೀಲತಮಾಲವರ್ಣೆ ಕ-ರಾಳಸುರಗಿ ಕಪಾಲಧರೆ ಸುಜ-ನಾಳಿಪಾಲನಶೀಲೆ ಹಿಮಕರಮೌಳಿಶೋಭಿತೆ ಕಾಳಿಕಾಂಬಿಕೆÉ 2ಶೋಕಮೋಹಾನಾನೀಕದೂರೆ ಪಿನಾಕಿಸುಪ್ರೀತೆ ಕೋಟಿ ದಿ-ವಾಕರಾಭೆಪರಾಕುಶರಣಜನೈಕಹಿತದಾತೆ ಸುರನರ-ಲೋಕಮಾತೆ ನಿರಾಕುಲಿತೆ ಸುವಿವೇಕಗುಣವ್ರಾತೆ ಮಾನಸ-ವಾಕುಕಾಯದಿಂದ ಗೈದಾನೇಕ ದುರಿತವ ದೂರಗೈದು ರ-ಮಾಳಕಳತ್ರನ ಪಾದಭಕುತಿಯ ನೀ ಕರುಣಿಸು ಕೃಪಾಕರೇಶ್ವರಿ3ಈಶೆ ಪಾಪವಿನಾಶೆ ಮಣಿಗಣಭೂರಿಪ್ರದೆ ಶಕ್ತಿವಿ-ಲಾಸೆ ವಿಗತವಿಶೇಷೆ ಕೃತಜಯಘೋಷೆ ಸರ್ವವಿದೆ ಮನ್ಮನ-ದಾಸೆಗಳ ಪೂರೈಸು ಸಜನರ ಪೋಷೆ ಕುಂದರದೆ ಶಂಕರೋ-ಲ್ಲಾಸೆ ಯೋಗೀಶಾಶಯಸ್ಥಿತೆವಾಸವಾರ್ಚಿತೆ ಶ್ರೀಸರಸ್ವತಿದೋಷರಹಿತೆ ಮಹೇಶೆ ಸುಗುಣರಾಶಿ ಸುರತತಿದಾಸಜನಯುತೆ 4ಸಾಮಗಾನಪ್ರೇಮೆ ರಾಕ್ಷಸ ಭೀಮೆ ರುದ್ರಾಣಿ ಅರಳ-ಗ್ರಾಮದೇವತೆ ಕ್ಷೇಮದಾಯಿನಿ ತಾಮರಸಪಾಣಿ ಪಶುಪತಿ-ವಾಮಭಾಗಲಲಾಮೆ ಮಂಗಲಧಾಮೆ ಫಣಿವೇಣಿ ಜಯಜಯಶ್ರೀಮಹಾಲಕ್ಷ್ಮಿ ನಾರಾಯಣಿರಾಮನಾಮಾಸಕ್ತೆ ಕವಿಜನ-ಸ್ತೋಮಕೃತ ಪರಿಣಾಮೆ ಭೌಮೆ ಪುಲೋಮಜಾರ್ಚಿತೆಸೋಮಶೇಖರಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ