ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೂಜಿಸುವೆನು ದೇವಿಯ ಶ್ರೀನಿತ್ಯ ಗೌರಿಯ ಪ ಪರಶಕ್ತಿರೂಪೆಯ ಪರತತ್ವಮೂರ್ತಿಯ ಪರಮಮಂಗಳ ದೇವಿಯ ಪರಮಾನುರಾಗದಿ 1 ಮೃಗಧರಮೌಳಿಯ ಜಗದುದ್ಧಾರಾಂಬೆಯ ಮಿಗೆ ಮನದಲಿ ಧ್ಯಾನಿಸಿ ಅವಾಹಿಸುತ್ತಲಿ 2 ಸರ್ವಲೋಕೇಶ್ವರಿಯ ಸರ್ವಾಲಂಕಾರೆಯ ಸರ್ವಾಂಗ ಸುಂದರಿಯ ಆಸನವನಿತ್ತು 3 ವಿದ್ಯಾಧಿದೇವಿಯ ಶುದ್ಧಚಿದ್ರೂಪೆಯ ಪಾದ್ಯಾಘ್ರ್ಯಾಚ ಮನದಿಂದ ಪರಿಶುದ್ಧ ಹೃದಯದಿ 4 ಪಂಚಮವಾಣಿಯ ಚಂಚರಿಕಾಂಬೆಯ ಪಂಚಾಮೃತವ ಜಲವ ಮುದದಿಂದ ತಳಿಯುತ 5 ಸುಂದರ ಹಾಸೆಯ ಸೌಂದರ್ಯ ಶರದಿಯ ಚಂದ್ರಗಾವಿಯ ನುಡಿಸಿ ಕಂಚುಕವ ಗೊಡಿಸಿ 6 ಚಂದ್ರ ಬಿಂಬಾಸ್ಯೆಯ ಸಿಂಧುರ ಗಮನೆಯ ಇಂದು ತಿಲಕವ ತಿದ್ದುತ ಗಂಧವನೆ ತೊಡೆದು 7 ಮಂಗಳ ಮಾತೆಯ ಮಂಗಳ ಮೂರ್ತಿಯ ಮಂಗಳ ದ್ರವ್ಯದಿಂದ ಶೃಂಗಾರ ವೆಸಗಿ8 ಲೀಲಾವಿನೋದೆಯ ಬಾಲ ಕುಚಾಂಬೆಯ ಮಾಲೆಯ ನರ್ಪಿಸುತ ಕುಸುಮಗಳ ನಿಚಯದಿ 9 ಪಾಪನಿಹಂಶ್ರಿಯ ಶ್ರೀಪತಿ ಸೋದರಿಯ ಧೂಪ ದೀಪವ ಕಲ್ಪಿಸಿ ಅಚಮನವಿತ್ತು 10 ಸತ್ಯಸಂಕಲ್ಪೆಯ ನಿತ್ಯಸಂತುಷ್ಟೆಯ ಉತ್ತಮ ಫಲಭಕ್ಷ್ಯದಿಂ ನೈವೇದ್ಯ ವೆಸಗಿ 11 ಕಂಬುಸುಕಂಠಿಯ ಬಿಂಬಫಲಾಧರೆಯ ತಾಂಬೂಲ ದಕ್ಷಿಣೆಯಂ ಭಕ್ತಿಯೊಳಗರ್ಪಿಸಿ 12 ಮಂಗಳ ಮೂರ್ತಿಯ ಮಂಗಳ ಗೌರಿಯ ಮಂಗಳಾರತಿಯ ಗೈದು ಆಚಮನವಿತ್ತು 13 ಕಲಕೀರವಾಣಿಯ ಕಲಹಂಸಗಮನೆಯ ಲಲನಾಶಿರೋಮಣಿಯ ಬಲವಂದುನಮಿಸಿ 14 ಜಯ ಜಯ ಗೌರಿಯೆ ಜಯ ಜಯ ಮಾತೆಯೆ ಜಯದೇವಿ ಕರುಣಿಸು ನೀಂ ವರ ಸುಪ್ರಸಾದವ 15 ಮಾನಿನಿ ದೇವಿಯು ಮೌನಿ ಸುವಂದ್ಯೆಯು ಧೇನುಪುರೀಶ್ವರಿಯು ಸುಪ್ರೀತೆಯಾಗಲಿ 16
--------------
ಬೇಟೆರಾಯ ದೀಕ್ಷಿತರು
ಪ್ರಾಯಶ್ಚಿತ್ತವು ಎನಗೆ ಇಲ್ಲವಯ್ಯಾ ಪ ನಾಯಿಯಂತೆ ಕಂಡ ಕಂಡಲ್ಲಿ ತಿಂಬುವಗೆ ಅ.ಪ ಮಾನಸದಿ ತ-ದೇಕ ಧ್ಯಾನದಲ್ಲೇ ಕುಳಿತು ಜ್ಞಾನಿಗಳ ಸಹವಾಸ ಮಾಡದಲೆ ಹೀನರಾಶ್ರೈಸೆ ನಾಲಿಗ್ಯೆ ಹಿತವನೆ ಬಯಸಿ ಮೀನು ಗಾಣಕೆ ಬಿದ್ದು ಮಿಡುಕುವಂದದಲಿ 1 ಸರಸರನೆ ಕಂಠವನು ಗರಗಸದಿ ಕೊಯ್ದರೂ ತರಹರಿಸದೇ ಪರರ ಮನೆಯನ್ನವನ್ನು ಕರದಲಿ ಸ್ಪರ್ಶ ಸಲ್ಲದು ಎಂದು ಪೇಳುತಿರೆ ಹಿರಿದಾಗಿ ಕುಳಿತು ಭುಂಜಿಸುವ ಪಾತಕಿಗೆ2 ಪರರಿತ್ತ ಕೂಳಿನಲಿ ಅವರ ಕುಲಕೋಟಿ ಸಾ- ವಿರ ಜನುಮದಲಿ ಅರ್ಜಿಸಿದ ಪಾಪ ಬೆರೆತಿಹುದು ಎಂದ್ಹೇಳಿ ಕೇಳಿ ಕೇಳಿ ನಗುತ ಹರುಷದಿಂ ಕುಳಿತು ವಿಷವುಂಬ ಪಾತಕಿಗೆ 3 ಯಾತ್ರೆಯ ಪೋಪಲ್ಲಿ ತಿಥಿ ಮತಿ ಹವ್ಯದಲಿ ಮತ್ತೆ ಕುಲಹೀನದಲಿ ಅನ್ನ ತಿಂದು ನಿತ್ಯ ಹಿಂಗದಲೆ ಈ ನೀಚ ಒಡಲನು ಹೊರೆವ ತೊತ್ತು ಬಡುಕಗೆ ಪುಣ್ಯವೆತ್ತ ದೊರಕುವುದೊ 4 ಕ್ಷಿಪ್ರ ಪ್ರಾಯಶ್ಚಿತ್ತ ಪೊಂದಿಹುದು ಕೇಳಯ್ಯಾ ಈ ಪೃಥ್ವಿಯೊಳಗೆಲ್ಲ ನಿನ್ನ ನಾಮ ಕಾಯ ವಿಜಯವಿಠ್ಠಲರೇಯ ಸುಪ್ರಸಾದವನಿತ್ತು ಶುದ್ಧಾತ್ಮನನು ಮಾಡು 5
--------------
ವಿಜಯದಾಸ
ಬರಬೇಕು ಬರಬೇಕು ಸಕಲ ಸಜ್ಜನಭಕ್ತರುಗುರುಸಾರ್ವಭೌಮರ ಆರಾಧನೆಗೆ ಗಲಗಲಿಗೆ ಪಪಂಚರಾತ್ರೋತ್ಸವವು ವೈಭವದಿ ನಡೆಯುವದುಚಂಚ'ುತ ಸುಪ್ರಸಾದವು ಇರುವದುವಂಚಿಸದೆ ಸೇವೆಯನು ಮಾಡಿದರೆ ಗುರುರಾಯವಾಂಛಿತಾರ್ಥವನಿತ್ತು ಸಂತೋಷಪಡಿಸುವನು 1ನಿತ್ಯ ಅಷ್ಟೋತ್ತರ ಅಲಂಕಾರ ಮಹಾಪೂಜೆಕ್ಷೇತ್ರ ಭೋಜನ ಕೀರ್ತನೆ ಪುರಾಣನೃತ್ಯಗೀತಗಳಿಂದ ಪಲ್ಲಕ್ಕಿ ಸೇವೆಯುಉತ್ತರಾರಾಧನೆಗೆ ರಥೋತ್ಸವದ ವೈಭವವು 2ಸಹಸ್ರಕುಂಭಾಭಿಷೇಕೋತ್ಸವವು ಕೊನೆಯದಿನಸತ್ಯನಾರಾಯಣನ ಮಹಾಪೂಜೆಯುಪವಮಾನಹೋಮ ಸಂಭಾವನಾ 'ತರಣೆಮುಕ್ತಾಯವಾಗುವದು ಪಂಚರಾತ್ರೋತ್ಸವವು 3ಕೃಷ್ಣವೇಣಿಯ ಪುಣ್ಯಕ್ಷೇತ್ರ'ದು ಗಲಗಲಿಯುಪ್ರಲ್ಹಾದವರದ ಶ್ರೀನರಹರಿಯ ಕ್ಷೇತ್ರವುಶ್ರೀವೆಂಕಟೇಶ'ಠ್ಠಲ ದತ್ತ, ಎಲ್ಲಮ್ಮ 'ೀರಮಾರುತಿ ಪರ್ವತೇಶ್ವರನ ಕ್ಷೇತ್ರ4ಗಾಲವ ಮರ್'ಗಳು ತಪವಗೈದಿಹ ಕ್ಷೇತ್ರಎಲ್ಲದರಲ್ಲಿಯೂ ಮುಂದಿರುವ ಕ್ಷೇತ್ರದೇವ ಭಕ್ತರ ಕ್ಷೇತ್ರ ದೇಶಭಕ್ತರ ಕ್ಷೇತ್ರಭೂಪತಿ'ಠ್ಠಲನ ಪ್ರೀತಿಯ ಕ್ಷೇತ್ರ5
--------------
ಭೂಪತಿ ವಿಠಲರು
ಲಕ್ಷ್ಮೀನಾಥ ವಿಠಲ | ರಕ್ಷಿಸೊ ಇವನಾ ಪ ಇಕ್ಷುಚಾಪನ ಪಿತನೆ | ಅಕ್ಷರನೆ ದೇವಾ ಅ.ಪ. ನಿತ್ಯ ತೃಪ್ತಾತ್ಮಾಅರ್ಥಿಯಲಿ ಲಕ್ಷ್ಮಿಯನು | ಭಕ್ತಿಯಿಂ ಸೇವಿಸುತಪ್ರಾರ್ಥಿಸುವ ತವಪ್ರೀತಿ | ಲಕ್ಷ್ಮಿವಲ್ಲಭನೇ 1 ಅಪ್ರಮೇಯನ ಪತ್ನಿ | ಲಕ್ಷ್ಮಿಯನೆ ತುತಿಸುತ್ತಸುಪ್ರಸಾದವ ಕೊಂಡು | ಗೃಹಕಾಗಿ ತೆರಳೀಅಪ್ರತಿಮ ಸಂತಸದಿ | ಹರಿಯ ಕೊಂಡಾಡುತ್ತಅಪ್ಪವೆಂಕಟನನ್ನು | ಹಾಡಿ ಹೊಗಳಿದನಾ 2 ವೇದಾಂತ ವೇದ್ಯ ಹರಿ | ವೇದ್ಯವಾಗಲಿ ಇವಗೆಮೋದ ತೀರ್ಥರ ಮತದ | ಸಾದು ತತ್ವಗಳುಹಾದಿಯಾಗಲಿ ಮುಕುತಿ | ಸಾಧನ ಸುಮಾರ್ಗಕ್ಕೆಬಾದರಾಯಣ ದೇವ | ಮಾಧವನೆ ಹರಿಯೆ 3 ಕರ್ಮಮರ್ಮವ ತಿಳಿಸಿ | ದುಷ್ಕರ್ಮ ಪರಿಹರಿಸಿನಿರ್ಮಮನ ಮಾಡಯ್ಯ | ಬ್ರಹ್ಮಾದಿ ವಂದ್ಯಪ್ರಮ್ಮೆಯಂಗಳ ಬೋದ | ಸಲ್ಲಲಿತವಾಗಿರಲಿಅಮ್ಮಹಾ ಪರದೈವ | ಹರಿಯೆಂದು ತಿಳಿಸೊ4 ಅದೈತ ತ್ರಯದರಿವು | ಬುದ್ದಿಗೇ ನಿಲುಕಿಸುತಸಿದ್ಧಾಂತ ಪಥವೆಂಬ | ಹೆದ್ದಾರಿ ನಡಸೋಕೃದ್ಧಬಳಮರ್ದನನೆ | ಮುದ್ದು ನರಹರಿದೇವಅದ್ವಿತೀಯನೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
139-5ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ವಿಠ್ಠಲನ ಮಂದಿರದಿ ತಪ್ಪದೇ ಪ್ರತಿದಿನಪಠಿಸಿ ಅರ್ಪಿಸುತ್ತಿದ್ದವಿಶ್ವವಿಷ್ಣುವಷಟ್ಕಾರ ಮೊದಲಾದ ಸಹಸ್ರನಾಮಗಳದಿಟ ಜ್ಞಾನ ಭಕ್ತಿಯಿಂ ಮಾರ್ಗದಿ ಸ್ಮರಿಸಿದರು 1ತನ್ನ ಹೊರ ಒಳಗೆ ಶ್ರೀಹರಿಯ ತಿಳಿಯುತ್ತಕಾಣುವುದು ಎಲ್ಲವೂ ಅನಘಹರಿ ಆವಾಸ್ಯತನಗೆ ಯದೃಚ್ಛದಿ ಲಭಿಸುವುವು ಹರಿಕೊಡುವುವುಎನ್ನುತ ಅನಪೇಕ್ಷಿ ನಿರ್ಭಯದಿ ನಡೆದರು 2ಮಾರ್ಗಸ್ಥ ಅಕ್ಷೋಭ್ಯ ಜಯಮುನಿಗಳಲಿಪೋಗಿ ಬಾಗಿ ಶಿರಸ್ಸಾಷ್ಠಾಂಗ ನಮಸÀ್ಕರಿಸಿ ಮುಂದುಪೋಗಿ ಕೃಷ್ಣಾ ತೀರ ಹನುಮನ್ನ ವಂದಿಸಿಚೀಕಲಪರಿವಿಗೆ ನಮಿಸಿ ಕರಮುಗಿದರು 3ಗುರುಗುಣಸ್ತವನಾದಿ ಗ್ರಂಥಗಳ ರಚಿಸಿರುವಸೂರಿವಾದೀಂದ್ರರ ನಮಿಸಿ ಅಪ್ಪಣೆಯಿಂಶ್ರೀರಾಘವೇಂದ್ರ ತೀರ್ಥರ ನಮಿಸಿ ಶರಣಾಗಿಸ್ತೋತ್ರ ಅರ್ಪಿಸಿದರು ಕವಿತಾರೂಪದಲಿ 4ಹರಿಶಿರಿ ಹನುಮ ಶಿವಗುರು ಅನುಗ್ರಹಕೊಂಡುದಾರಿಯಲ್ಲಿರುವಂಥ ಕ್ಷೇತ್ರ ಮೂರ್ತಿಗಳದರುಶನ ಮಾಡಿ ಗೋಪಾಲ ದಾಸಾರ್ಯರುಇರುವ ಸ್ಥಳ ಸೇರಿದರು ಜಗನ್ನಾಥದಾಸರು 5ಗುರುಗಳ ನೋಡಿ ಆನಂದ ಬಾಷ್ಪವ ಸುರಿಸಿಚರಣಪದ್ಮಗಳಲ್ಲಿ ನಮಿಸಿ ಶರಣಾಗಿಘೋರವ್ಯಾಧಿಹರಿಸಿ ಅಪಮೃತ್ಯು ತರಿದಂಥಕಾರುಣ್ಯ ನಿಧಿ ಉದ್ಧಾರಕರು ಎಂದರು 6ರಾಜೀವಾಲಯಪತಿವಿಜಯಗೋಪಾಲನುಭಜತರ ರಕ್ಷಿಸುವ ಕರುಣಾಸಮುದ್ರಈ ಜಗನ್ನಾಥನೇ ನಿನಗೆ ಒಲಿದಿಹನುಭುಜಗಾದ್ರಿವಾಸ ಫಂಡರಿ ವಿಠ್ಠಲ 7ನಿಜಭಕ್ತಾಗ್ರಣಿ ಗೋಪಾಲ ದಾಸಾರ್ಯರುನಿಜಭಾವದಲಿ ಈ ರೀತಿಯಲಿ ಹೇಳೆಐಜೀ ಮಹಾತ್ಮರು ಸೂಚಿಸಿದರು ಹರಿಯಭೋಜನ ಜಗನ್ನಾಥದಾಸಗೆ ಮಾಡಿಸಿದ್ದು 8ಜಗನ್ನಾಥದಾಸರು ನಡೆದ ವೃತ್ತಾಂತವಮುಗಿದು ಕರಗದ್ಗದ ಕಂಠದಲಿ ಪೇಳೆಚಕಿತರಾದರು ಅಲ್ಲಿ ನೆರೆದಿದ್ದ ಸಜ್ಜನರುಉದ್ಘೊಷ ಜಯ ಜಯ ಶಬ್ದ ಮಾಡಿದರು 9ಉತ್ತನೂರಿಗೆವೇಣಿಸೋಮಪುರದಿಂ ಪೋಗಿಮತ್ತೂವೇಣಿಸೋಮಪುರವನ್ನು ಯೈದಿಸತ್ತತ್ವ ಬ್ರಹ್ಮ ಜಿಜ್ಞಾಸವೂ ಭಾಗ -ವತ ಧರ್ಮ ಆಚರಿಸಿದರು ಮುದದಿಂದ 10ಗೋಪಾಲಕೃಷ್ಣ ಪ್ರಿಯ ಐಜೀಮಹಂತರುಗೋಪಾಲದಾಸಾರ್ಯ ªರದ ಗುರುತಂಗೋಪಾಲ ದಾಸಾರ್ಯರುಗಳ ಸಮೇತದಿಭೂಪಾಲ ಪ್ರಮುಖರು ಸಾಧುಜನಗುಂಪು 11ಶಿರಿವಾಸುದೇವಪ್ರಿಯವಾಸತತ್ವಜÕರಗುರುಗಳು ಗೋಪಾಲದಾಸರ ಅನುಗ್ರಹದಿವರದ ಗುರುತಂದೆ ಗೋಪಾಲರು ಮತ್ತೆಲ್ಲರಿಗೂಕರಮುಗಿದು ಹೊರಟರು ಅಪ್ಪಣೆಕೊಂಡು 12ಗದ್ವಾಲ ಮಾರ್ಗದಿ ಮಂತ್ರಾಲಯ ಪೋಗಿಮಧ್ವಮತ ದುಗ್ಧಾಬ್ಧಿ ಚಂದ್ರ ಶ್ರೀ ರಾಘವೇಂದ್ರ ವಾದೀಂದ್ರರ ನಮಿಸಿ ಅಲ್ಲಿಂದಯೈದಿಹರು ಪರಮಗುರುಗಳು ಇದ್ದ ಸ್ಥಳವ 13ಪರಮಗುರುಗಳು ವಿಜಯವಿಠ್ಠಲ ದಾಸಾರ್ಯರಚರಣಾರವಿಂದದಿ ಶರಣಾಗಿಅವರಕರದಿಂದ ನರಸಿಂಹ ವಿಜಯವಿಠ್ಠಲನಸುಪ್ರಸಾದವ ಕೊಂಡು ಮಾನವಿಗೆ ಹೋದರು 14ಮನುತೀರ್ಥ ತಟದಲಿ ಮನೆಯಲ್ಲಿ ವಾಸಿಸುತಹನುಮಂತಸ್ಥ ನರಹರಿ ಜಗನ್ನಾಥನ್ನಹನುಮನ್ನ ಪೂಜಿಸುತ ಗುರುಗಳ ಸ್ಮರಿಸುತ್ತಜ್ಞಾನಾರ್ಥಿ ವಿದ್ಯಾರ್ಥಿಗಳಿಗೆ ಒದಗಿಹರು 15ಇಷ್ಟರಲ್ಲೇ ಜಗನ್ನಾಥದಾಸರ ಕೀರ್ತಿಅಷ್ಟದಿಕ್ಕಲ್ಲು ಪ್ರಖ್ಯಾತಿಯ ಹೊಂದಿಇಷ್ಟಾರ್ಥ ಸಿದ್ಧಿಗೆ ಬರುವರಾದರು ಜನರುಕೃಷ್ಣನ ಒಲಿಮೆ ಈ ದಾಸರಲಿ ಪೂರ್ಣ 16ಮಾಧ್ವ ಮೂಲಗ್ರಂಥ ಟೀಕಾಟಿಪ್ಪಣಿಗಳುಸಾಧು ಹರಿದಾಸರ ಕೀರ್ತನೆಗಳುವೇದವ್ಯಾಸೋದಿತ ಪುರಾಣ ಇತಿಹಾಸವಿದ್ಯಾರ್ಥಿಗಳಿಗೆಲ್ಲ ಪಾಠ ಪ್ರವಚನವು 17ಯೋಗಿವರ ಪ್ರಾಣೇಶವಿಠ್ಠಲ ದಾಸಾರ್ಯರುಭಾಗವತವರಶ್ರೀಶ ವಿಠ್ಠಲದಾಸಾರ್ಯನಿಗಮವೇದ್ಯನ ಭಕ್ತಜನರು ಬಹುಮಂದಿಯುಬಾಗಿ ದಾಸಾರ್ಯರಿಗೆ ಶಿಷ್ಯ ಜನರಾದರು 18ಪ್ರಾಣೇಶ ದಾಸರಿಗೆ ಶರಣಾದೆ ಎಂದೆಂದುಪ್ರಾಣದೇವನು ಇವರೊಳ್ ಪ್ರಸನ್ನನಾಗಿಹನುಪ್ರಾಣದೇವಾಂತಸ್ಥ ಶ್ರಿಹರಿ ಕೇಶವನಕಾಣುತ ಭಜಿಸುವ ಭಾಗವತರೆಂದು 19ಜಗನ್ನಾಥದಾಸರ ಶಿಷ್ಯ ಸಜ್ಜನರಿಗೆಭಾಗವತವರಶ್ರೀಶ ಶ್ರೀದವಿಠ್ಠಲಾದಿಭಗವದ್ದಾಸರಿಗೆ ನಮಿಪೆ ಶ್ರೀ ಹರಿವಾಯುಝಗಝಗಿಪ ಇವರುಗಳೊಳ್ ಸಂತತ ಎಂದು 20ನೋಡಬೇಕಾಗಿದ್ದ ಕ್ಷೇತ್ರಗಳಿಗೆ ಪೋಗಿನಾಡಿನಲಿಭಾಗವತಧರ್ಮವ ಬೆಳೆಸೆಬೇಡುವ ಯೋಗ್ಯರಿಗೆ ಉಪದೇಶ ಕೊಡೆ ಶಿಷ್ಯರೊಡಗೂಡಿ ಹೊರಟರು ಜಗನ್ನಾಥದಾಸರು 21ಕರ್ಜಗಿ ಕ್ಷೇತ್ರದಲ್ಲಿ ಇರುವ ವರದಾ ನದಿಯುಸಜ್ಜನ ಸಮೂಹವು ಬಹಳ ಅಲ್ಲುಂಟುಶ್ರೀ ಜಗನ್ನಾಥನ್ನ ಭಜಿಸುತ್ತ ದಾಸರುಕರ್ಜಗಿ ಜಮೀನ್ದಾರ ಮನೆಯಲ್ಲಿ ಕುಳಿತರು 22ಸಾಧ್ವಿ ಶಿರೋಮಣಿ ಆ ಗೃಹಸ್ಥನ ಪತ್ನಿಪಾದನಮಿಸಿ ಪತಿಗೆ ಬಿನ್ನಹ ಮಾಡಿದಳುಇಂದುಲೌಕಿಕ ವಿಷಯಲಾಂಪಟ್ಯ ನಿಲ್ಲಿಸಿವಂದಿಸಿ ದಾಸರಿಗೆ ಪೂಜೆ ನೋಡೆಂದು 23ಅಹರ ಆರಾಧಿಸುವ ಕ್ರಮದಿ ದಾಸಾರ್ಯರುಸಾಯಾಹ್ನ ಸಾಮವಾಪ್ರತಿಪಾದ್ಯ ನರಸಿಂಹನವಿಹಿತದಿ ಅರ್ಚಿಸಿ ಕೀರ್ತನೆಗಳರ್ಪಿಸಿಮಹಾಹರ್ವ ಭಜಿಸುವರು ಶಿಷ್ಯರ ಸಮೇತ 24ಅಂದು ಈ ಗೃಹಸ್ಥನು ಹೆಂಡತಿ ಕೋರಿಕೆಯಂತೆಬಂದು ಕುಳಿತನು ದಾಸಾರ್ಯರ ಮುಂದೆಅಂದೇ ಆ ವಿಪ್ರನ ಅನಿಷ್ಠ ಪ್ರಾರಬ್ಧವುಚಂದದಿ ಪೋಪುವದೆಂದರಿತರು ದಾಸಾರ್ಯ 25ಪೂಜಾ ಆರಂಭ ಆಗಲಿಕೆ ಇರುವಾಗ ಆದ್ವಿಜನ ನೋಡಿ ಪ್ರಾಣೇಶ ದಾಸಾರ್ಯಗರ್ಜಿಸಿದರು ಇನ್ನಾದರೂ ಒಳ್ಳೆಋಜುಮಾರ್ಗ ಹಿಡಿ ಹರಿಯ ಒಲಿಸಿಕೊಳ್ಳೆಂದು 26ವಾಗ್ವಜ್ರಧಾರೆಯು ಪರಿಣಮಿಸಿ ವಿಪ್ರನತೀವ್ರ ಆ ಕ್ಷಣದಲ್ಲೆ ಮನಕಲುಷಕಳೆದುಶ್ರೀವರನ ಪ್ರಿಯತರ ಜಗನ್ನಾಥದಾಸರಿಗೆಸುವಿನಯದಿ ನಮಿಸಿ ಉದ್ಧರಿಸಿ ಎಂದ 27ಪ್ರಾಣೇಶ ದಾಸರಿಗು ಜಗನ್ನಾಥದಾಸರಿಗುತನ್ನ ಕೃತಜÕತೆಯನ್ನು ಚೆನ್ನಾಗಿ ತಿಳಿಸಿಮನ ಶುದ್ಧಿ ಭಕ್ತಿಯಿಂದಲಿ ಪೂಜೆ ನೋಡಲುಹನುಮಂತ ದೇವರು ಕುಳಿತಿದ್ದು ಕಂಡ 28ಶ್ರದ್ಧೆ ಭಕ್ತಿಯಿಂದ ಗೃಹಸ್ಥನುದಾಸರಪಾದಕೆರಗಿ ತನ್ನನ್ನು ಹರಿದಾಸವೃಂದದಲಿ ಸೇರಿಸಬೇಕೆಂದು ಪ್ರಾರ್ಥಿಸಿಶ್ರೀದವಿಠ್ಠಲನಾಮ ಅಂಕಿತವಕೊಂಡ29ಜಗನ್ನಾಥದಾಸಾರ್ಯಪರಮದಯಮಾಡಿಆ ಗೃಹಸ್ಥಗೆ ಶ್ರೀದವಿಠ್ಠಲಾಂಕಿತವುಭಕುತ ಜನರಿಗೆ ಫಲಮಂತ್ರಾಕ್ಷತೆ ಕೊಟ್ಟುಶ್ರೀಕರನ ಸ್ಮರಿಸಿ ಸವಣೂರಿಗೆ ಹೊರಟರು 30ವಾರಿಜಾಸನ ಪಿತನು ಪೂರ್ಣ ಪ್ರಜÕರ ಹೃತ್‍ಸ್ಥಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥ ದಾಸಾರ್ಯ ಶರಣು 31- ಇತಿ ಷಷ್ಠ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು