ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಜಗನ್ನಾಥದಾಸರ ಸ್ತೋತ್ರ ರಾಯರ ನೋಡಿರೈ ದಾಸರಾಯರ ಪಾಡಿರೈ |ಮಾಯ ರಮಣಪ್ರಿಯಾ |ಇವರ ಮನದೊಳಗೆ ಸುಳಿದಾ | ಶ್ರೀರಂಗವಲಿದ ಪ ಮೋದ |ಕಾಣಿಸುವದು ಜಗದೊಳಗೆ, ಇವರಿಗೆ ಕೀರುತಿಯ |ಪುಣ್ಯ ಮೂರುತಿಯು |ಧೇನಿಸಿ ಎರಡನೆ ಜನ್ಮದಿ, ಈತನೆ ಶಲ್ಯಾ |ತತ್ವವ ಬಲ್ಲಾ 1 ಮೂರನೆ ಜನ್ಮದಿ ಕೊಂಡಪ್ಪ, ರಾಜನದೂತ | ಸುಪ್ರಖ್ಯಾತಾ |ಸಾರ ಜನರ ಪ್ರಿಯ ಶ್ರಿ ಪುರಂದರದಾಸಾರ್ಯ |ಸುತ ಆಶ್ಚರ್ಯ |ತೋರುವ ಐದನೆ ಜನ್ಮದಿ ಶ್ರೀಹರಿದೂತ |ಗುರು, ಜಗನ್ನಾಥ 2 ನರಹರಿಯ ತುತಿಪ ವಂದಂಶದಿ ಸಾಂಶರೆಂದುಖಂಬದಿ ನಿಂದು |ಮೆರೆವರು ಊಧ್ರ್ವಪುಂಢವು ತುಲಸಿಯಮಾಲಾ |ಅಕ್ಷ ಸುಶೀಲಾ |ಪರಿಪರಿ ಸೇವಿಪ ಜನರಿಗಭೀಷ್ಟವ ಗೆರೆವಾ |ದುರಿತವ ತರಿವಾ 3 ದೇಶದೇಶವ ಜನರುಗಳೆಲ್ಲರು ಬಂದು |ನೋಡಲು ನಿಂದು |ಸೋಸಿಲಿ ದರುಶನಕೊಳಲವರಿಗೆ ಆನಂದ |ವಾಹುದು ಛಂದ |ಮೀಸಲಹುದು ಮನ, ಕೈಸೇರುವ ಶ್ರೀಪತಿಯೂ |ಹರ ಅಘತತಿಯು 4 ಎಷ್ಟು ಪೇಳಲಿ ಇವರ ಮಹಿಮೆ ತುತಿಸಲ್ಕೆ |ವಶವಲ್ಲ ಮನಕೆ |ನಿಷ್ಠಿಯಿಂದಿವರನು ತುತಿಸಲು ಶ್ರೀವರತುಷ್ಟಾ |ಪಾಪವು ನಷ್ಟಾ |ಸೃಷ್ಟಿಯೊಳಗೆ ಶ್ರೀಶ ಪ್ರಾಣೇಶವಿಠಲನ ದಾಸ |ದಾಸೋತ್ತಂಸ 5
--------------
ಶ್ರೀಶಪ್ರಾಣೇಶವಿಠಲರು
ಶೋಭಾನ ಪಾಂಡುರಂಗಗೆ | ಶೋಭನ ಶ್ರೀನಿವಾಸಗೆ |ಶೋಭನಉಡುಪಿನಿಲಯಾಗೇ ಪಸುಮನಸರಾಳ್ದವನ ವರಜ ಬಾ |ಕಮಲೆಸದನಮುಖಕಂಜರವಿಬಾ |ವಿಮಲ ಗುಣಾರ್ಣವನೀಲಜಲದನಿಗಾತ್ರಾ ಬಾ ||ವಾರಿಜನೇತ್ರ ಬಾ ಮಂಗಳ ಸ್ತೋತ್ರ ಬಾ |ವಹನ ಪತತ್ರಾ ಬಾ ನತಜನ ಮಿತ್ರಾ ಬಾಹಸಿಯಾ ಜಗುಲೀಗೇ 1ಅಷ್ಟನಾಮ ಒಪ್ಪುವನೇ ಬಾ |ದುಷ್ಟ ದಿತಿ ಸುತ ಮದಹರಣಾ ಬಾ |ಮುಷ್ಟಿಕ ಪ್ರಮುಖಹ ಗೋವರ್ಧನಧರ ಕೃಷ್ಣಾ ಬಾ ||ಹರಿಗತಕಷ್ಟಾ ಬಾ ತ್ರಿಜಗಚ್ಚೇಷ್ಟಾ ಬಾ |ಅಕ್ಷರಜೇಷ್ಠಾ ಬಾ ನಿರುತ ವಿಶಿಷ್ಟಾ ಬಾಹಸಿಯಾ ಜಗುಲೀಗೇ 2ಮಾತುಳರಿಪುವನಅನಳಬಾ |ಶ್ವೇತವಹನ ರಥಸಾರಥಿಬಾ |ಮಾತಿ ಶಿರ ಕಡಿದು ಬಾಹುಜರೊರಸಿದ ನಾಥಾ ಬಾ ||ಗೋಕುಲ ತ್ರಾತಾ ಬಾ ಲೋಕೈಕದಾತಾಬಾ |ವಸುದೇವ ಜಾತಾ ಬಾ ಸುಪ್ರಖ್ಯಾತಾ ಬಾಹಸಿಯಾ ಜಗುಲೀಗೇ 3ವಾಮನ ಕೇಶವ ಹಯಮುಖ ಬಾ |ಭೀಮವಿನುತನಿಃಸೀಮಾ ಬಾ |ಕಾಮಿನಿಯರ ಚೈಲಹರಣ, ಋಷಿ, ರಣಭೀಮಾ ಬಾ ||ದಶರಥ ರಾಮಾ ಬಾ ಬಾಣವಿರಾಮಾ ಬಾ |ಅಜಮುಖ ನಾಮಾ ಬಾ ಕೃಷ್ಣಾ ಪ್ರೇಮಾ ಬಾಹಸಿಯಾ ಜಗುಲೀಗೇ 4ಕಂದರ್ಪಜನಕ ನರಹರಿ ಬಾ |ಅಂದಮೃತವ ತಂದವನೇ ಬಾ |ಮಂದೇತರಮುದಘಟಜ ಪ್ರಮುಖ ಮುನಿವಂದ್ಯಾ ಬಾ ||ಕಸ್ತುರಿ ಛಂದಾ ಬಾ ದೇವ ಮುಕುಂದಾ ಬಾ |ದೇವಕಿ ಕಂದಾ ಬಾ ಸದ್ಗುಣ ವೃಂದಾ ಬಾಹಸಿಯಾ ಜಗುಲೀಗೆ 5ಕ್ಷಿತಿಧರ ಜಿನಧರ ಸಖನೇ ಬಾ |ಅತುಳಮಹಿಮನೆ ಅಜಿತನೇ ಬಾ |ಸತಿಗಮರ ಸದನದಕುಸುಮತಂದಚ್ಯುತನೇ ಬಾ ||ಮೂರುತಿ ಸುತನೆ ಬಾ ಲೋಕ ವಿತತನೆ ಬಾ |ಪೂಜಿಗುಚಿತನೆ ಬಾ ರಕ್ಷಣರತನೇ ಬಾಹಸಿಯಾ ಜಗುಲೀಗೆ 6ಪ್ರಾಣೇಶ ವಿಠ್ಠಲರಾಯಾ ಬಾ |ವೀಣಾಪಾಣೀ ಜನಕನೆ ಬಾ |ಮಾಣದೆಭಕ್ತರ ಪೊರವುತಿಹನೆ ಸತ್ರಾಣಾ ಬಾ ||ಸತ್ಯಾ ಪ್ರಾಣಾ ಬಾ ಶ್ರೀ ಪಾಠೀಣಾ ಬಾ |ನಿಜ ವಿಜ್ಞಾನಾ ಬಾನಿತ್ಯಕಲ್ಯಾಣಾ ಬಾಹಸಿಯಾ ಜಗುಲೀಗೆ 7
--------------
ಪ್ರಾಣೇಶದಾಸರು