ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೇ ಘನ್ನ ಪಾವನ್ನ ಗುರುವರ ಪ ದಾನಿ ಅದಕನುಮಾನ ಮಾಡದೆ ನಾನಭೀಷ್ಟೆಯ ನೀನು ಕೊಡೋದಕೆ ಅ.ಪ ನಿನ್ನ ನಂಬಿದೆ ನಾನು ಯತಿಕುಲಾಗ್ರಣಿ ರನ್ನ ಪಾಲಿಸೊ ನೀನು ಅನ್ಯನಲ್ಲವೊ ನಿನ್ನ ತನುಜನು ಧನ್ಯನಾಗುವದನ್ನು ಸಲಿಸೋ ಘನ್ನ ಮಹಿಮಾಪನ್ನ ಪಾಲಕ 1 ಆರ್ತಜನಮಂದಾರಾ ಮೋಕ್ಷಾದಿ ಸತ್ಪುರು - ಷಾರ್ಥ ಮಹÀದಾತಾರ ತೀರ್ಥಪದಯುಗ ಪಾರ್ಥಸೂತಗೆ ವಾರ್ತೆ ತಿಳಿಸಿ ಆರ್ತಸತಿಯಾ ಅರ್ತಿ ಕಳೆದಿಹÀ ಕೀರ್ತಿ ಕೇಳಿ ಪ್ರಾರ್ಥಿಪೆನೊ ಕೃತಾರ್ಥನೆನಿಸೋ 2 ಮಾತಾ ಪಿತ ಗುರುದೂತಾ ಎನಗೆ ಭಾವಿ ವಿ - ಧಾತಾ ಭ್ರಾತ ಸುಪೋತ ಭೂತಪತಿ ಸುರಯೂಥ ವಂದ್ಯನೆ ದಾತ ಗುರುಜಗನ್ನಾಥ ವಿಠಲನ ದೂತ ಮನ್ಮನೋಜಾತ ಕಾಮಿತ ವ್ರಾತ ಸಲಿಸೋ 3
--------------
ಗುರುಜಗನ್ನಾಥದಾಸರು
ನೋಡಿದೆ ಗುರುರಾಯರನ್ನ ಈ ರೂಢಿಯೊಳಗೆ ಮೆರೆವೊ ಸಾರ್ವಭೌಮನ್ನ ಪ ಥಳಥಳಿಸುವ ಬೃಂದಾವನದಿ - ತಾನು ಕುಳಿತು ಭಕ್ತರಿಗೀವ ವರವನು ತ್ವರದಿ ನಳಿನನಾಭನ ಕೃಪಾಬಲದಿ - ಇದೆ ನಳಿನಜಾಂಡದಿ ಸರಿಗಾಣೆ ಮಹಿಮಾದಿ1 ಪೊಳೆವೊ ವಕ್ಷಸ್ಥಳದವನ - ಎಳೆ ತುಳಸಿ ಮಾಲಾಂಕಿತ ಕಂಧರಯುತನಾ ನಳಿನಾಕ್ಷಮಾಲೆ ಶೋಭಿತನ - ಉರ ಚಲುವ ದ್ವಾದಶಪುಂಢ್ರ -ಮುದ್ರಚಿಹ್ನಿತನಾ 2 ಕೃಷ್ಣವರ್ಣದಿ ಶೋಭೀತನಾ - ಮಹಾ ವೈಷ್ಣವ ಕುಮುದ - ನಿಕರಕೆ ಚಂದಿರನಾ ವಿಷ್ಣು ಭಕ್ತಾಗ್ರೇಸರನಾ - ಬಾಲ ಕೃಷ್ಣಮೂರುತಿ ಪದಯುಗ ಸರೋಜ ಇನಾ 3 ದಿನನಾಥ - ದೀಪ್ತಿ - ಭಾಸಕನ - ಭವ ವನಧಿ - ಸಂತರಣ - ಸುಪೋತಕೋಪÀಮನಾ ಮುನಿಜನ ಕುಲದಿ ಶೋಭಿಪನ - ಸ್ವೀಯ ಜನರ ಪಾಲಕ ಮಹಾರಾಯನೆನಿಪನಾ 4 ಗುರುಜಗನ್ನಾಥ ವಿಠಲನ - ಪಾದ ಸರಸಿಜ ಯುಗಳಕಾರಡಿ ಎನಿಪÀನಾ ಪೆರಿವೋನು ತನ್ನ ಜನರನಾ - ಎಂದು ಶಿರಸದಿ ನಮಿಸಿ ಬೇಡಿದೆ ಗುರುವರನಾ 5
--------------
ಗುರುಜಗನ್ನಾಥದಾಸರು