ಭಾರತಿ ಭರತನ ರಮಣಿ
ಶಿರಬಾಗುವೆ ತ್ರಿಜಗಜ್ಜನನಿ ಪ.
ಭಾರತ ಭಾಗವತಾರ್ಥ ಬೋಧಿನಿ
ಶಾರದೇಂದುನಿಭವದನಿ ಅ.ಪ.
ಹರಿಗುರುಗಳಲಿ ಸದ್ಭಕ್ತಿ ದೃಢ
ಕರುಣಿಸು ಸರಸಿಜನೇತ್ರಿ
ಗಿರೀಶಾದಿ ಸರ್ವಸುರೌಘಪ್ರಣೇತ್ರಿ
ಶರಣು ಶರಣು ಸುಪವಿತ್ರಿ 1
ಕಾಳಿ ದ್ರೌಪದಿ ಸುನಾಮೆ ನಮ್ಮ
ಪಾಲಿಸು ಭೀಮಪ್ರೇಮ
ಶ್ರೀ ಲಕ್ಷ್ಮೀನಾರಾಯಣನ ಭೃತ್ಯೆ
ಕಾಲತ್ರಯ ಕೃತಕೃತ್ಯೆ 2