ನಿನ್ನ ದಾಸರ ದಾಸನೆನಿಸೂ ಶ್ರೀಕೃಷ್ಣ || ಪ
ನಿನ್ನ ಕೃಪೆಯೊಳು ಜನ್ಮ ಸುಪವಿತ್ರವಹುದೂ 1
ನಿನ್ನ ಕೃಪೆಯಿರಲು ಸಂಸಾರ ಸುಖವಹುದೂ 2
ನಿನ್ನ ಕೃಪೆಯಿರಲು ಸತ್ಕೀರ್ತಿ ದೊರಕುವುದೂ 3
ನಿನ್ನ ಕೃಪೆಯೊಳಗಾಯುರಾರೋಗ್ಯ ಸಿದ್ಧಿಪುದು |
ನಿನ್ನ ಕೃಪೆಯೊಳು ಕಾಮ್ಯದಿಂ ಮೋಕ್ಷವಹುದೂ 4
ಭವ ನಿನ್ನ ಕೃಪೆಯೊಳು ಸದಾನಂದ ಸುಖವಹುದೂ 5