ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ಫಂಡರಿರಾಯನ ಸಿರಿಮನ ಪ್ರಿಯನಾ ಪ ಚಂಡವಿಕ್ರಮ ಕರದಂಡ ಮುನಿಪನೊಲಿ ದಂಡಜಾಧಿಪ ಪ್ರಕಾಂಡ ಸುಪೀಠನ ಅ.ಪ. ಮಣಿಮಯ ಮಕುಟ ಮಧುಪನವಿರಪ್ಯರೇ ಪಣೆಯೊಳಿಟ್ಟ ಕಸ್ತೂರಿ ತಿ¯ಕಾ ವನÀರುಹ ಉಪಮ ಲೋಚನಯುಗ ಚಂಪಕ ಸುನಾಸ ವಕುಂಡಲವ ವಿಕಾಸವ ಕದಪಿನ ವಿಲಾಸವ ಮೊಗದ ಮಂದಹಾಸವ 1 ಕುಂದ ಕೋರಕ ದಶನಾವಳಿಯ ಬಿಂಬಾ ಅಧರ ಕಳೆಯ ಕಂಧರ ತ್ರಿವಳಿ ಪುರಂದರ ಇಭಕರ ಪೋಲುವ ಭುಜಯುಗ ವಿಶಾಲವಾ ಕರತಳರಸಾಲವ ನಖರ ಮಲ್ಲಿಕಾಸವ 2 ಅತಿವಿಸ್ತøತ ವಕ್ಷಸ್ಥಳವಾ ಸಿರಿ ಸತಿ ಸದನಾರ್ಕನಂದದಿ ಪೊಳೆವಾ ಕೌಸ್ತುಭ ದೀಧಿತಿ ವಿಲಸಿತ ವೈಜಯಂತಿಯ ಉದರ ರೋಮ ಪಂಕ್ತಿಯಾ ಕುಕ್ಷಿತ್ರಿವಳಿ ಕಾಂತಿಯಾ ನಾಭಿವಲ್ಮೀಕ ದಂತಿಹ 3 ಮುಂಬಿಸಿಲಿನಂತೆ ಕನಕ ಚೈಲಾ ಸುನಿ ತಂಬದಿ ಪೊಳೆವ ಗೋಲಿಯ ಚೀಲಾ ಕುಂಬು ಕೋಕನದ ವಿಡಂಬ ಮೇಖಲ ಕದಂಬವ ಊರು ಕದಳೀ ಜಾನುಗಳಿಂದು ಬಿಂಬನಾ ಆಚರಿಪ ವಿಡಂಬನಾ 4 ಮಾತಂಗಕರವ ಜಂಘೆಗಳ ಗುಲ್ಫ ಜಾತಿಮಣಿಕಾಂಗುಲಿ ಸಂಘಗಳ ಜ್ಯೋತಿ ಬೆಳಗೆ ಜಗನ್ನಾಥ ವಿಠಲ ನಂಘ್ರಿ ಪುಷ್ಕರಾ ಉದಿತ ಶತ ಭಾಸ್ಕರಾ ಗಭಸ್ತಿ ತಿರಸ್ಕರ ಸುಜನರಿಗೆ ಶ್ರೇಯಸ್ಕರ 5
--------------
ಜಗನ್ನಾಥದಾಸರು
ನಂಬಿದೆ ಧನ್ವಂತ್ರಿ ನಿನ್ನ ಕರುಣಾಂಬುಧಿ ಚಿನ್ಮಯ ಪರಿಪಾಲಿಸೆನ್ನ ಪ. ದೇವಾಸುರರೆಲ್ಲ ಸೇರಿ ಏಕ ಭಾವದಿಂದಲಿ ತಮ್ಮ ಸಾಹಸವ ತೋರಿ ತಾವಾಗಿ ಕಡೆಯಲಂಬುಧಿಯ ಭವ ನಾವನ ಸಮಯದಿ ಬಂದಿಯನ್ನೊಡೆಯ 1 ಕುಲಿಶಧರಗೆ ಯುಕ್ತಿ ಕಲಿಸಿ ಬಲಿವಲ ಶಂಬರಾದಿ ದೈತ್ಯರ ಮೋಹಗೊಳಿಸಿ ಕಲಶಪೂರಿತ ದಿವ್ಯ ಸುಧೆಯ ದೇವ ಬಲಕಿತ್ತು ಸಲಿಸಿದ ಸಾಮ್ರಾಜ್ಯನಿಧಿಯ 2 ಪೂರ್ಣೇಂದು ಗಣಜಾಯಿ ಸುಮುಖಾ ಶ್ಯಾಮ ವರ್ಣ ಸುಬಾಲಕ ದುರ್ಜನ ವಿಮುಖಾ ಸ್ವರ್ಣಾವದಾತ ಸುವಾಸ ದಿವ್ಯ ಕರ್ಣಾಭರಣಾದಿ ಭೂಷ ಸುನಾಸಾ 3 ದೀರ್ಘಪೀವರ ದೋರ್ದಂಡ ಪಂಚ ಶುಭ ಶುಂಡಾ ಜನಿತ ಬ್ರಹ್ಮಾಂಡ ವ್ಯಾಧಿ ವರ್ಗವ ಓಡಿಸುವರೆ ಸುಪ್ರಚಂಡಾ 4 ಕಂಬುಗ್ರೀನ ಪರೇಶ ಅರು- ಣಾಂಬುಜಾಕ್ಷ ಸುಖ ಚಿದ್ಘನ ವೇಷಾ ನಂಬಿದವರ ಕಾವ ಶ್ರೀಶಯನ ನಿಂಬಾಗಿ ರಕ್ಷಿಸು ಶ್ರೀ ವೆಂಕಟೇಶಾ 5
--------------
ತುಪಾಕಿ ವೆಂಕಟರಮಣಾಚಾರ್ಯ
ಪೊಗಳಲರಿಯೆನೆ ಲೋಕಮಾತೇ ನಿನ್ನ ಸೊಗಸಾದ ರೂಪುರೇಖೆಯ ಸಿಂಧುಜಾತೇ ನಿಗಮವಿಖ್ಯಾತೇ ಪ ಅಳಕ ನಿಚಯವು ಇಂದ್ರನೀಲಗಳು ತುಂಬಿಗಳು ತಳಪುಗಳು ಯೆಸೆವ ನಳಿನಗಳು ಬಾಳೆಗಳು ಚೆಲುವಹಿ ಸುನಾಸಿಕವು ಅಲಕೆ ಸುಮವು ಚಂಪಕವು ಅಲರ್ವಿಲ್ಲಿನ ಧನುವೋ ಪುರ್ಬುಗಳೋ ಪೊಳೆವರದನದಸಾಲುಗಳುಕಳಸಗಳೋ ಕುಂಡಲಗಳೋ ವಿಲಸದಧರವು ಬಿಂಬಫಲವೋ ನವವಿದ್ರುಮವೋ ಅಳವಟ್ಟ ಸವಿನುಡಿಯು ಗಿಣಿಯ ಸೋಲಿಪ ಪರಿಯೋ ಕಳೆ ಪೆರ್ಚಿದಾನನವೋ ಶಶಿಯೋ ಭಳಿರೆ ಮಳಯಜಗಂಧಿನಿ ಮಹೇಶರಿಪು ಜನನೀ 1 ಗಳವು ಶಂಖವು ಮೆರೆವ ಕದಪುಗಳು ಮುಖರಗಳು ಕುಸುಮ ಮಾಲೆಗಳು ಸುಲಲಿತವಯವವೋ ಲತಾವಳಿಗಳ ತರಂಗವೋ ತಳಿವ ಪೂಜಡೆಯೋ ಸುಲಿಪಲ್ಲವವೋ ತೊಳಗುವ ತೊಡೆಯೆನಲೋ ಸಲಿಲಜಾಗಾರೇ ಸಮ್ಮೋಹನಾಕಾರೇ ಸೌಂದರ್ಯಭರಿತೆ 2 ವರಜಂಘೆಗಳು ಪಂಚಶರನ ಶರಧಿಗಳೋ ಸರಸೀರುಹ ಕೆಂದಳಿರೋ ಚರಣಗಳು ನಖಗಳು ಸುರುಚಿರಾಂಬಕೀ ದಯಾಕಾರೇ ಶುಭಚರಿತೆ ವಿಖ್ಯಾತೆ ಪುರಹರ ಸುರೇಶ್ವರ ಸುಪೂಜಿತಾಂಘ್ರಿಸರೋಜೇ ಭಕ್ತ ಮಂದಾರೇ ವರವೇಲಾನಗರವಾಸಿ ವೈಕುಂಠಚನ್ನಿಗರಾಯನರಸಿ ಗುಣರಾಸಿ ದುರಿತಾಸಿ ನಮೋ ಪರಮಪದದಾಯಕಿಯೆ ಸೌಮ್ಯನಾಯಕಿಯೆ 3
--------------
ಬೇಲೂರು ವೈಕುಂಠದಾಸರು
ಶೋಭಾನ | ಶೋಭಾನವೆನ್ನಿರೆ ಸುರರಂಗನಿಯರೆಲ್ಲ ಶೋಭಾನವೆನ್ನಿ ಶುಭವೆನ್ನಿ ಪ ಶೃಂಗಾರದ ಗುಣನಿಧಿಯೆ ಬಾ | ಅಂಗಜಜನಕ ಅರವಿಂದದಾಳಾಕ್ಷನೆ ರಂಗಾ ಬಾ || ಭವಭವ ಭಂಗಾ ಬಾ | ದೇವೋತ್ತುಂಗಾ ಬಾ | ಜಗದಂತರಂಗಾ ಬಾ ಹಸೆಯ ಜಗುಲಿಗೆ1 ಪಂಕಜ ಸಂಭವನಯ್ಯ ಬಾ | ಕುಂಕುಮಾಂಕಿತನೆ ಭಕುತ ಕುಮುದ ಮೃಗಾಂಕ ಬಾ || ನಿಷ್ಕಳಂಕಾ ಬಾ ಶಂಖಚಕ್ರಾಂಕ ಬಾ | ಅಹಿಪರಿಯಂಕÀ ಬಾ ಹಸೆಯ ಜಗುಲಿಗೆ 2 ಸಾಮಜರಾಜಾ ವರದಾ ಬಾ | ಸಾಮವಿಲೋಲನೆ ಸದ್ಗುಣ ಶೀಲನೆ ರಾಮಾ ಬಾ || ರಣರಂಗಭೀಮಾ ಬಾ ಹಸೆಯಾ ಜಗುಲಿಗೆ 3 ಅಚ್ಯುತ ಉನ್ನತ ಮಹಿಮನೆ ಯಾದವ ಬಾ | ಘನ್ನ ಮೂರುತಿಯೆ ಸುಪ್ರಸನ್ನಾ ಬಾ ಸಚ್ಚರಿತಾ ಬಾ | ಭಾಗ್ಯ ಸಂಪನ್ನಾ ಬಾ ಜೀವರ ಭಿನ್ನಾ ಬಾ ಹಸೆಯಾ ಜಗುಲಿಗೆ 4 ನಾರಾಯಣ ದಶರೂಪಾ ಬಾ | ಚಾರುಚರಿತಾ ಪ್ರತಾಪ ಬಾ | ಶೌರಿ ಮುರಾರಿಯೆ ನಿಟಿಲ ಕಸ್ತೂರಿಯ ಲೇಪಾ ಬಾ || ನಿತ್ಯ ಸಲ್ಲಾಪಾ ಬಾ ನಮ್ಮ ಸಮೀಪ ಬಾ ಹಸೆಯಾ ಜಗುಲಿಗೆ 5 ವಾಸುದೇವ ಮುಕುಂದಾ ಬಾ | ಸಾಸಿರನಾಮ ಗೋವಿಂದಾ ಬಾ | ಕೇಶವ ಪುರುಷೋತ್ತಮ ನರಸಿಂಹ ಉಪೇಂದ್ರ ಬಾ || ಗೋಪಿಕಂದಾ ಬಾ | ಬಹುಬಲ ವೃಂದಾ ಬಾ | ಅತಿಜವದಿಂದಾ ಬಾ ಹಸೆಯಾ ಜಗುಲಿಗೆ 6 ಪರತತ್ವದಿ ಅತಿ ಚಿಂತಾ ಬಾ | ಪರಬೊಮ್ಮನೆ ಅತಿ ಶಾಂತಾ ಬಾ | ಪರಮಾತ್ಮನೆ ಪರಿಪೂರ್ಣ ವಿಭೂತಿವಂತಾ ಬಾ || ಅಖಿಳ ವೇದಾಂತಾ ಬಾ | ರುಕ್ಮಿಣಿಕಾಂತಾ ಬಾ | ಸದ್ಗುಣವಂತಾ ಬಾ ಹಸೆಯಾ ಜಗುಲಿಗೆ7 ತ್ರಿದಶಗುಣನುತ ವಿಲಾಸಾ ಬಾ | ಮಾಧವ ಶ್ರೀಧರನೆ ಸುನಾಸಾ ಬಾ || ಸಿರಿಮಂದಹಾಸಾ ಬಾ | ಭಕುತ ಉಲ್ಲಾಸಾ ಬಾ | ಶ್ರೀ ಶ್ರೀನಿವಾಸಾ ಬಾ ಹಸೆಯಾ ಜಗುಲಿಗೆ8 ಕೃಷ್ಣವೇಣಿಯ ಪಡೆದವನೆ ಬಾ | ರಥ ಹೊಡೆದವನೆ ಬಾ | ಕೃಷ್ಣೆಯ ಕಷ್ಟವ ನಷ್ಟ ಮಾಡಿದ ಕೃಷ್ಣಾ ಬಾ || ಯದುಕುಲ ಶ್ರೇಷ್ಠ ಬಾ | ಸತತ ಸಂತುಷ್ಟ ಬಾ | ಉಡುಪಿಯ ಕೃಷ್ಣ ಬಾ ಹಸೆಯಾ ಜಗುಲಿಗೆ 9 ಎಲ್ಲರೊಳಗೆ ವ್ಯಾಪಕನೆ ಬಾ ಬಲ್ಲಿದ ದೊರೆಗಳ ಅರಸನೆ ಬಾ | ನಾ ಎಲ್ಲಿ ನೋಡಲು ಪ್ರತಿಗಾಣೆ ನಿನಗೆ ಸಿರಿನಲ್ಲಾ ಬಾ || ಅಪ್ರತಿಮಲ್ಲ ಬಾ ಭಕ್ತವತ್ಸಲಾ ಬಾ | ವಿಜಯವಿಠ್ಠಲ ಬಾ ಹಸೆಯ ಜಗುಲಿಗೆ10
--------------
ವಿಜಯದಾಸ
ರಾಮನ ನೋಡಿರೈ ರಘುಕುಲಸೋಮನ ಪಾಡಿರೈ ಪ.ಜೀಮೂತಶ್ಯಾಮಲಕಾಯ ಜನಕಜಾಮಾತಸೀತಾಕಾಂತಅ.ಪ.ಕೋಟಿದಿವಾಕರನಿಭ ಮಕುಟದ ಮಸ್ತಕದ ಮುದ್ದಿನ ಮುಖದನೀಟಹ ಪಣೆಯಲಿಮೃಗಮದಪುಂಡ್ರತಿಲಕದ ನೀಲಾಳಕದಮಾಟಕ ಮದನನ ಬಿಲ್ಲ ಹಳಿವ ಹುಬ್ಬುಗಳ ಇತ್ತಂಡಗಳನೋಟದಿ ದಯಾರಸ ಸೂಸುವ ಕಮಲದಳಗಳ ಸಮನಯನಗಳ 1ಎಸೆವ ಸುನಾಸಿಕ ಜ್ವಲಿತಕುಂಡಲಸ್ಮಿತವದನ ಶಶಿಸಮರದನಹೊಸ ತುಲಸಿಯ ಮಂಜರಿ ವನಮಾಲಾಧರನ ಸತ್ಕಂಧರನಮಿಸುನಿಯವೈಜಯಂತಿತ್ರಿಸರವು ದಿವ್ಯಪದಕಗಳ ಝಳ ಝಳಪುಗಳಲಸತ್ ಶ್ರೀವತ್ಸ ವಕ್ಷದಿ ಕುಂಕುಮ ಚಂದನದ ಗುಣಗಣಘನದ 2ಮರಕತಸ್ತಂಭಗಳಿಗೆ ಪೋಲ್ವೆಡೆಬಾಹುಗಳ ಅಂಗದಯುಗಳಕರವಲಯಾಂಗುಲಿಮುದ್ರಿಕೆ ಧೃತಕೋದಂಡ ದಂಡಕದಂಡಸಿರಿಜಠರತ್ರಿವಳಿಗಂಭೀರನಾಭ ನಿರ್ಜರನಾಭವರಪಿಂಗಳ ಕೌಶೇಯಾಂಬರಕಟಿಸೂತ್ರಶ್ರೀ ಬ್ರಹ್ಮಸೂತ್ರ3ಬಟ್ಟದೊಡೆಜಾನುಘಟ್ಟಿದಂತೋಪಮ ಜಂಘ ಸಂವೃತ ಜಂಘಾಕುಟಿಲ ನೀ ರಾಕ್ಷಸದಲ್ಲಣ ಪೆಂಡೆಯದ ಚೆಲುವಾ ಜನಜನಿಗೊಲಿವಕಠಿಣತರ ಪದತಳದೆಡೆ ಧ್ವಜಾಂಕುಶಾಂಬುಜ ಹೃತ್ಕಲುಷಾನಿಟಿಲನಯನ ವಿಧಿಸುರ ಋಷಿವಂದಿತಚರಣನೂಪುರಾಭರಣ4ಸುಖಮುನಿ ಮುಖ್ಯಮುನಿ ಪೂಜಿತ ವಿಗ್ರಹ ವಾರಾಪಾರವಿಹಾರನಿಖಿಲ ಗುಣಾರ್ಣವ ನಿತ್ಯದಯಾರ್ಣವ ರಾಜ ರಾಜಾಧಿರಾಜಸಕಲ ಸಂಯಮಿಕುಲಮೌಳಿರತುನ ಸತ್ಯಪೂರ್ಣ
--------------
ಪ್ರಸನ್ನವೆಂಕಟದಾಸರು