ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈತÀನೀಗ ವಿಜಯ ವಿಠ್ಠಲಾ ಯಾತನೆಯನು ಕಳೆದು ಪೊರೆವಾ ಪ ಕರೆದರೊಂದೆ ನುಡಿಗೆ ಬಂದು ಕರುಣದಿಂದ ಮುಂದೆ ನಿಂದು ಕರವ ಪಿಡಿದು ಅಂದು ಅಭಯ ಕರವ ಪಾಲಿಸಿದ ದಯಾಸಿಂಧು ಪರಿಪರಿಯಿಂದಲಿ ಹಿಂದು ಮುಂದು ದುರಿತದಿಂದ ನೊಂದು ಬಂದು ಮೊರೆ ವಿಚಾರಿಸಿ ಸಾಕಿದನಿಂದು 1 ಅಚ್ಯುತಾನಂತನೆಂಬ ನಾಮಾ ಅಚ್ಚು ಸುಧೆಯೆನಗೆ ನೇಮಾ ನಿಚ್ಚ ಉಣಲಿಕಿತ್ತ ಪ್ರೇಮಾ ಚಚ್ಚಲದಲಿ ಪೂರ್ಣಕಾಮಾ ಹೆಚ್ಚಿ ಬಪ್ಪ ಮದದಾ ಸ್ತೋಮಾ ನುಚ್ಚು ಮಾಡಿ ಬಿಡುವ ಭೀಮಾ ಸುಚ್ಚರಿತ ಸಾರ್ವಭೌಮಾ2 ಮೊದಲೆ ಗುರು ಪುರಂದರದಾಸರಾ ಹೃದಯದೊಳಗೆ ನಿಂದಾ ಶೃಂಗಾರಾ ಉದಧಿಯೋ ಇದು ಬಣ್ಣಿಸಿಬಲ್ಲ್ಲಿರಾ ತ್ರಿದಶರೊಳಗೆ ಕಾಣೆ ಜ್ಞಾನರ ಸದಮಲಾನಂದ ಪೂರ್ಣ ಇಂದಿರಾ ಸದನಾ ಪ್ರತಾಪಗುಣ ಪಾರಾವಾರಾ ಪದೋಪದಿಗೆ ಎನ್ನಯ ಮನೋಹರಾ3
--------------
ವಿಜಯದಾಸ
ಬಾರೆ ಸುಬುದ್ಧಿ ನಿನ್ನ ಕಾಣದೆ ಇರಲಾರೆ ಕಾಣೆ ಸಖಿ ಜಾಣೆ ಪ್ರವೀಣೆ ಪ.ಮಾರನ ಶರಗಣ ದಾರುಣ ನೀಗವ್ವನಾರಿ ನಾರೀಮಣಿ ಕಾಳಾಹಿವೇಣಿತೋರೆ ನಿನ್ನಧರದಸಾರಸುಧೆಯೆನಗೆಚಾರುಹಿತಾನಂದ ಕಾರಣ ನೀರೆ1ಮಂದಗಮನೆ ಕೇಳೆ ಇಂದಿಗೆ ನಿನ್ನರವಿಂದಶರನಿಟ್ಟಧ್ವರ್ಯ ಕುಚದ್ವಂದ್ವವಹೊಂದಲು ಬಂದಿಹ ಅವನೊಳುಹಿಂದುಮುಂದಾಡಲಿ ಬೇಡೆನಿಂದುಮಾತಾಡೆ2ಪಂಕಜಗಂಧಿ ಮುದಾಂಕಿತಳೆ ನಿನ್ನಸೋಂಕಲು ಪ್ರಸನ್ವೆಂಕಟೇಶಭೋಂಕನೆ ಬಂದಿಹ ಚಿಂತಾಯಕ ಹೃದಯಪರಿಯಂಕದಿ ಸುಖಿಸೇಳೇಣಾಂಕ ಮುಖಿ 3
--------------
ಪ್ರಸನ್ನವೆಂಕಟದಾಸರು