ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

*ಆರಿಗಾದರು ಪೂರ್ವದ ಕಟ್ಟಳಿಯು ತಪ್ಪುದು ವಿಧಿಬರಹವು ಪ. ಪೊಡವಿಭಾರವ ಪೊತ್ತು ಮೃಡಗೆ ಭೂಷಣನಾಗಿ ಹೆಡೆಯಲ್ಲಿ ಮಾಣಿಕವಯಿಟ್ಟುಕೊಂಡು ಬಿಡದೆ ಶ್ರೀಹರಿಗೆ ಹಾಸಿಗೆ ಆದ ಫಣಿಪಂಗೆ ಅಡವಿಯೊಳಗಣ ಹುತ್ತ ಮನಿಯಾಯಿತೈಯ್ಯಾ 1 ಸುರಪತಿಯಗೆದ್ದು ಸುಧೆಯನೆ ತಂದು ಮತ್ತೆ ಮಾತೆಯ ಸೆರೆಯ ಪರಿಹರಿಸಿ ಬಹುಶಕ್ತನೆನಿಸಿಕೊಂಡ ಹದಿನಾಲ್ಕು ಲೋಕನಾಳುವವನ ಹೊತ್ತು ಇರುವವಗಾಯಿತು ಮನೆಯು ಮರದ ಮೇಲೆ 2 ರಾಮಚಂದ್ರನ ಸೇವೆಮಾಡಿ ಮೆಚ್ಚಿಸಿಕೊಂಡು ರಾವಣನ ಗರ್ವಮುರಿದು ಬಂದೂ ರೋಮರೋಮಕೆ ಕೋಟಿಲಿಂಗಧರಿಸಿದ ಹನುಮಂತಗೆ ಗ್ರಾಮಗಳ ಕಾಯ್ವದಾಯಿತೈಯ್ಯಾ 3 ಮೂರ್ಲೋಕಕಾಧೀಶ ಮುಕ್ಕಣ್ಣ ಶಿವನೆಂದು ಸಾರುತಿದೆ ವೇದ ಸಟೆಯಲ್ಲವಿದು ಪಾರ್ವತಿಗೆ ಪತಿಯಾದ ಕೈಲಾಸವಾಸನಿಗೆ ಊರಹೊರಗಣ ಕಾಡ ಕಾಯ್ವದಾಯಿತೈಯ್ಯಾ 4 ಮೀರಲಳವಲ್ಲಾ ಮುನ್ನಿನಾ ಕರ್ಮವನು ಕಾರಣಕರ್ತನಿಗಲ್ಲದೆ ಮಾರಪಿತ ಹೆಳವನಾಕಟ್ಟೆರಂಗೈಯ್ಯನ ಸೇರದ ಕಾಲವ್ಯರ್ಥವ್ಯಾದಿತೈಯ್ಯಾ 5
--------------
ಹೆಳವನಕಟ್ಟೆ ಗಿರಿಯಮ್ಮ
ಕನ್ಯಾರೂಪವ ತಾಳಿದ ಚನ್ನಿಗ ಕೃಷ್ಣರಾಯನಾ ಪ ದಾನವರ ಮರಳು ಮಾಡಿ ಮಾಣದೆ ಸುಧೆಯನೆರೆದು ಆ ನಿರ್ಜರರ ಪಾಲಿಸಿದ ಶ್ರೀ ನಾರಾಯಣಿ ವೇಷವಾ 1 ಆರಾರು ಸಾವಿರ ಸಕಲ ಶರೀರದ ಎಡಕೆ ಇಪ್ಪ ಸಾರಸುಂದರವಾಗಿದ್ದ ನಾರಿ ರೂಪಗಳು ಇದೊ 2 ಭೂತಳದೊಳಗೆ ಜನಕೆ ಮಾತೆಯಾಗಿ ಕಾವುತಿಪ್ಪ ಜಾತರಹಿತ ವಿಜಯವಿಠ್ಠಲ ಶ್ರೀ ತರಣಿಯಾಳಿದ ಪೆಣ್ಣಿನ 3
--------------
ವಿಜಯದಾಸ
ಜಯತೀರ್ಥರಾಯಾ ಗುರುವರ್ಯಾ ಮುಗಿವೆನು ಕೈಯ್ಯಾ ಪ ತೋಯಜಾಕ್ಷನಂಘ್ರಿ ಪ್ರೀಯ - ಜೀಯ ಮಳಬೇಡ ನಿಲಯ ಅ.ಪ ಮೋದ ತೀರ್ಥಗ್ರಂಥ ಕ್ಷೀರ ವಾರಿಧಿಯನ್ನು ಮಥಿಸಿ ಧೀರ ಸಾಧುಗಳಿಗೆ ಸುಧೆಯನೆರದೆ - ವಾದಿಗಳೆದಯ ಮುರಿದೇ 1 ಅದ್ವೈತಾರಣ್ಯದಹನ - ಮಧ್ವ ಪಂಥಸುಜನಸದನ ಪೊದ್ದಿದೆನೋ ನಿನ್ನ ಚರಣ - ಉದ್ಧರಿಸೋ ದೀನೋದ್ಧರಣ 2 ಅಕ್ಷಯಮಾಲಾ ದಂಡ ಧಾರೀ - ಭಿಕ್ಷುಶ್ರೇಷ್ಠನಧಿಕಾರಿ ಅಕ್ಷೋಭ್ಯ ಮುನಿಪ ತನಯ - ಲಕ್ಷ್ಮೀಕಾಂತ ಭಜಕ ಸದಯ 3
--------------
ಲಕ್ಷ್ಮೀನಾರಯಣರಾಯರು
ನಿತ್ಯ ನಿಸ್ಸಂಗಾ ಪ ಅಂದು ದಶಕಂಧರನ ಮಂದಿರದೊಳಗೆ ಸೇರಿ| ಇಂದ್ರಾದಿಗಳು ಬಿದ್ದಿರೆ ಬಂದು ದಯದಿಂದ ಸಲುಹಿದಾ 1 ಸುರರು ಮಂದರಗಿರಿಯ ಕಟಿಯ | ಕುಂದದೆ ಸುಧೆಯನೆರೆದ ನಂದ ವಿಗ್ರಹ ಗೋವಿಂದಾ 2 ಇಂದು ಪುಷ್ಕರಣಿ ಕಾವೇರಿ | ದ್ವಂದ್ವ ತೀರವನಿರುತ ವಾಸಾ | ಕಂದರ್ಪಜನಕ ರಂಗ ಮಂದಿರ ವಿಜಯವಿಠ್ಠಲಾ 3
--------------
ವಿಜಯದಾಸ
ಶ್ರೀವರ ಹರಿ ವಿಠಲ | ಕಾಪಾಡೋ ಇವಳಾ ಪ ಭಾವುಕರ ಪಾಲ ನೆಂ | ದೇವೆ ಶ್ರುತಿ ಸಿದ್ಧ ಅ.ಪ. ಹರಿಸೇವೆ ಕೈಕಂರ್ಯ | ನಿರತಳಾಗಿ ಹಳೀಕೆಹರಿಗುರು ದಾಸ್ಯದಲಿ | ದೀಕ್ಷೆಕಾಂಕ್ಷಿಪಳೋ |ಹರಿಯ ತೈಜಸರೂಪಿ | ವರಮಾರ್ಗ ತೋರ್ಪಪರಿಹರಿಯ ನಿನ್ನಂಕಿತವ | ಇತ್ತಿಹೆನೊ ದೇವಾ 1 ಸಾರತಮ ಹರಿಯ ಜಗ | ನಿಸ್ಸಾರವೆಂದು ಸಂ |ಸಾರ ಶರಧಿಯ ಹಾಯೋ | ವಾರಿಜ ಸುನಾಭಾ |ಆರು ಮಾರ್ಭಕುತಿಗಳ | ವೈರಾಗ್ಯ ಸುಜ್ಞಾನಧೀರ ನೀ ಕರುಣಿಸುತ | ಕಡೆ ಹಾಯ್ಸೊ ಇವಳಾ 2 ಮೋದ ತೀರ್ಥರ ಮತದಿ | ಸಾಧನ ಸುಮಾರ್ಗದಲಿಹಾದಿ ಕ್ರಮಿಸುತ್ತಿಹಳೂ | ವೇದಾಂತ ವೇದ್ಯಾಹೇ ದಯಾ ಪೂರ್ಣಹರಿ | ಸ್ವಾಧ್ವಿಗೆ ತವನಾಮಸುಧೆಯನೆ ಉಣಿಸೊ ಸ | ರ್ಪಾರ್ದಿಗೇ ಓಡೆಯ 3 ಶಮದ ಮಾದಿಯನಿತ್ತು | ಭ್ರಮಮಾರ ಪರಿಹರಿಸೊಅಮಿತ ಮಹಿಮೋಪೇತ | ಸುಮನಸಾರಾಧ್ಯಕರ್ಮನಿಷ್ಕಾಮನದಿ | ರಮೆಯರಸಗರ್ಪಿಸುವಸುಮನೊಭಾವದಲಿ | ಕ್ರಮಿಪ ತೆರಮಾಡೋ 4 ನಿತ್ಯ ನಿಗಮಾತೀತ | ದೈತ್ಯ ಜನ ಸಂಹರ್ತಭೃತ್ಯಳಿಗೆ ಮೈದೋರಿ | ಹೃತ್ಕøಕ್ಷಿಯೊಳಗೇಪ್ರತ್ಯಕ್ಷನಾಗೆಂಬ | ಪ್ರಾರ್ಥನೆಯ ಸಲಿಸೋಹರಿಕರ್ತೃ ಕರ್ಮಾಖ್ಯ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು