ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಂಕಜನಯನ ಪಾವನ್ನ ಸುಖ ಸಂಕೂಲ ಮೂರುತಿ ಲಾಲಿಸು ಚಿನ್ನಾ ವೆಂಕಟ ನಿಲಯಾ ಹಸೆಗೇಳು ಪ ಕಮಲ ಸಂಭವಗಿತ್ತ ಕಮನೀಯ ಕಾಯ ಸುಮನಸ ಜನತೆ ಸುಧೆಯನುಣಿಸಿ ಭೂಮಿ ಚೋರನ ಕೊಂದ ಮುನಿಗಳೊಡೆಯ ವಿಮಲ ಮೂರುತಿ ಹಸೆಗೇಳೋ 1 ನರಹರಿ ರೂಪದಿ ಬಂದು ದೈತ್ಯ ನುರವ ಬಗೆದು ವಟು ರೂಪದಿ ನಿಂದ್ಯೋ ದುರುಳ ರಾಯರನೆಲ್ಲ ಕೊಂದು ಲಂಕಾ ಪುರದಾಧಿಪತಿಯ ಸದೆದ ದಯಸಿಂಧೋ ಕರುಣಾಸಾಗರನೆ ಹಸೆಗೇಳೋ 2 ಯದುಜನೆನಿಸಿ ಎಲ್ಲಾ ಖಳರ ಜಯಿಸಿ ಸುದತೇರ ವ್ರತವ ಕೆಡಿಸಿದತಿ ಧೀರ ಕುದುರೆನೇರಿದ ಮಾಧಾರಾ ನಿನ್ನ ಅದುಭೂತ ಬಲ್ಲಿದಕ್ಕೆಣೆಗಾಣೆನುದಾರಾ ಉದಧಿ ಶಯನನೆ ಹಸೆಗೇಳು 3 ಅಪ್ರತಿಮಲ್ಲ ಅನಂತಾ ಸುಹಜ ನ ಪ್ರೀಯಾ ಸುರಪತಿ ಸಿರಿದೇವಿ ಕಾಂತಾ ಸ್ವ ಪ್ರಕಾಶಿತನೆ ಧೀಮಂತಾ ಅತಿ ಕ್ಷಿಪ್ರದಿ ಭಕ್ತರ ಪೊರೆವತಿ ಶಾಂತಾ ಸುಪ್ರದಾಯಕನೆ ಹಸೆಗೇಳೋ 4 ಪರಮ ಪುರುಷ ಪುಣ್ಯನಾಮಾ ಪರ ಪುರಷೋತ್ತಮ ಪರಿಪೂರ್ಣ ಕಾಮಾ ಶರಣರ ಭವವನ ಧೂಮಾ ಕೇತು ಕರಿಯ ಬಲ್ಲೆನೆ ಕಾಮಿತರ ಕಲ್ಪದ್ರುಮಾ ಕರಿರಾಜವರದಾ ಹಸೆಗೇಳೋ 5 ನಿತ್ಯ ಅತ್ಯಂತ ಮಹಿಮನೆ ಆಪ್ತ ಜನರ ಕ್ಲೇಶ ಕಳೆವ ಸುಕೀರ್ತೀ ಚಿತ್ತಜ ಜನಕ ಹಸೆಗೇಳೋ 6 ಕ್ಷೀರಾಬ್ಧಿವಾಸಾ ಚಿನ್ಮಯನೆ ನಿನ್ನ ಪಾರ ಮಹಿಮೆ ತಿಳಿವವನಿಹನೆ ಮೂರು ಗುಣ ರಹಿತನೆ ದೋಷ ದೂರ ವಿದೂರ ಶಿರಿದೇವಿಯೊಡನೆ ಬಾರಯ್ಯ ಹಸೆಯ ಜಗುಲಿಗೆ7 ವ್ಯಾಳಮರ್ದನನೆ ವಿಗಮನಾ ತ್ರಿ ಶೂಲ ಪಾಣಿಯ ಓಡಿಸಿದ ಖಳನಾ ಸೋಲಿಸಿದಪ್ರತಿಸುಗುಣ ಹೇಮ ಲಲಿತಾಂಗ ಹಸೆಗೇಳೋ 8 ಅಗಣಿತ ಜೌದಾರ್ಯ ಸಾರಾ ನಿನ್ನ ಪೊಗಳ ಬಲ್ಲೆನೆ ಪಾತಕದೂರಾ ನಗರಾಜನುತ ನಿರಾಧಾರ ಭವಾದಿಗಳಿಂದ ವಂದ್ಯನೆ ನವನೀತ ಚೋರ ಜಗನ್ನಾಥ ವಿಠಲ ಹಾಸೆಗೇಳೋ9
--------------
ಜಗನ್ನಾಥದಾಸರು
ರಕ್ಷಿಸೋಯನ್ನ ರಕ್ಷಿಸೋ ರಕ್ಷಿಸೋ ಬೇಗ ಉಪೇಕ್ಷಿಸದಲೆ ಜಲ ಜಾಕ್ಷ ಯನ್ನ ಮೊರೆ ಪಕ್ಷಿವಾಹನ ದೊರೆ ಪ ವಾರಿಧಿ ಮತ್ಸ್ಯಾವತಾರದಿ ಧರಿಸಿ ಪೊಕ್ಕು ಘೋರದೈತ್ಯನ ಕೊಂದು ಇನ್ನು ಚಾರು ಚರಿತ ವಿಸ್ತಾರ ಶೃತಿಗಳನು ವಾರಿಜಾಸನಗಿತ್ತ ವರದ ಜಗನ್ನಾಥ 1 ವರಕೂರ್ಮನಾಗಿ ಮಂದರಗಿರಿ ಪೊತ್ತು ನಿರ್ಜರರಿಗೆ ಸುಧೆಯನುಣಿಸಿ ಹರುಷದಲಿ ಕರುಣಿಸೋಯಂದರೆ ಕಠಿಣತ್ವ ವಹಿಸುವರೇ ಪರಮ ಪುರುಷ ನೀನು ಭಜಕರ ಕಾಮಧೇನು 2 ಧರೆಯ ಕದ್ದು ಒಯ್ದವನ ಕೋಪದಿ ಘನತರ ಕೋರೆಯಲಿ ಸೆಳದೆ ದನುಜಹರ ವರಾಹನಾದ ಶ್ರೀ ವತ್ಸಲಾಂಛನ ದೇವ ಶರಣಜನ ಮಂದಾರ ಶರನಿಧಿ ಗಂಭೀರ 3 ಗರುಡಗಮನ ಶ್ರೀ ಹರಿ ಸರ್ವೋತ್ತಮನೆಂಬ ತರುಳನ ತಂದೆಯ ತಾಮಸದಿ ಪರಿಪರಿಹಿಂಸೆಯ ಪಡಿಸುತಿರಲು ನರಹರಿ ರೂಪತೋರಿ ಪ್ರಹ್ಲಾದಗೊಲಿದ ಧೊರೆ 4 ಬಲಿಯದಾನವು ಬೇಡಿ ಬ್ರಹ್ಮಾಂಡ ಭಾಂಡವು ಅಳೆದು ಮೂರು ಪಾದದೊಳಗೆ ಮಾಡಿ ತುಳಿದವನ ಪಾತಾಳಕಿಳಿಯಲು ವಾಮನ ಬಲಭೇದಿ ಸನ್ನತ ಪಾಲಿಸೋ ಪ್ರಖ್ಯಾತ 5 ಪರಶುರಾಮ ಬಾಹು ಬಲದಿ ಸಕಲ ರಾಜರನೆಲ್ಲ ಗೆದ್ದು ಸುಸ್ಥಿರ ಮೂರ್ತಿ ಧುರದಿಂದ ಭೂಮಿ ಭೂಸುರರಿಗೇ ಧಾರೆಯ ನೆರೆದ ಶ್ರೀಮದನಂತ ನಿರತದಿ ಭಗವಂತ 6 ಅನಿಮಿಷರೊಡೆಯ ಶರಣು ಶರಣೆನುತ ರಾವಣನನು ಜನು ವಿಭೀಷಣನು ಬರಲು ಘನದಿ ಪಂಕ್ತಿ ಕಂಧರನ ಜಯಿಸಿ ಲಂ- ಇನಕುಲ ಪಾವನ 7 ಬಲದು:ಶಾಸನ ಸೀರಿಸೆಳಿಯೇ ದ್ರೌಪದಿ ಮನದಲಿ ಕಾಮಿತಾರ್ಥ ಫಲದಾಯಕ ಮಾನವ ರಕ್ಷಿಸೆಂದು ಸ್ತುತಿಸಲು ಪೊರೆದೆ ಹಲಧರಾನುಜ ಮುದದಿ 8 ಅಂಗಜ ಪಿತ ತ್ರಿಪುರಾಂಗನೆಯರ ವ್ರತ ಭಂಗಮಾಡಿದೆ ಹಿಂಗದಲೇ ಮಂಗಳಮಹಿಮ ಕೃಪಾಂಗ ಗಂಗೆಯನು ಪಾದ 9 ಚಲುವ ಕುದುರೆಯನೇರಿ ಕಲ್ಕಿಕಯ್ಯೊಳು ಖಂಡೆಯ ಪಿಡಿದು ಝಳಪಿಸುತ ಕಲುಷಾತ್ಮರೆಲ್ಲರ ಖಂಡಿಸಿ ಧರ್ಮವು ಪರಿಪಾಲನೆಮಾಳ್ಪ ಶ್ರೀ ಭೂದುರ್ಗಾಧಿಪಾ 10 ಪಾವನಚರಿತ ಕೃಪಾವನ ರಾಶಿ ಶ್ರೀ ದೇವಕೀಸುತ `ಹೆನ್ನೆಪುರೀಶ’ ದೀನ ದೇವೋತ್ತಮ ದೀನ ಬಾಂಧವ ವೃಂದಾವನ ನಿಲಯಾನಂದ ಸುಂದರಕಾಯಾ 11
--------------
ಹೆನ್ನೆರಂಗದಾಸರು
ರೂಪನ ಗುಡಿನಿ¯ಯಾ ವೇಂಟಕರಾಯಾ ರೂಪನ ಗುಡಿ ನಿಲಯಾ ವ್ಯಾಪಕ ಜಗತ್ರಯ ಕಾಪಾಡುವ ಭಾರತರ್ಕನು ದಾಸರ ಪ ದಂಡಿ ದಾನವಮರ್ದನ ಸಕಲಜಗ ಉ- ದ್ದಂಡ ರಕ್ಷಕ ಪಾವನಾ ಚಂಡ ಪ್ರ- ಚಂಡ ಮಾರ್ತಾಂಡ----ದ್ಭವ ಕುಂಡಲಿ ಶಯನ ಕೋದಂಡ ಪಾಣಿ ಹರಿ 1 ಗಂಗಾಜನಕ ದೇವಾ ಸಕಲಮೋಹ- ನಾಂಗನಾ ಪಡೆದನಾ ಶೃಂಗಾರದಲಿ ಕುಜ ರಂಗ ಮಂಟಪದಲಿ ಮಂಗ ಳಾಂಗಿಯ ಬಿಡದೆ ಮಡಗಿಸಿ ಇರುವಂಥಾ 2 ಮಂದರಾದ್ರಿಯ ಧರಿಸಿ ಸುಜನರಿಗೆ ಆ- ನಂದದಿ ಸುಧೆಯನುಣಿಸಿ ಅಂದು ಭಕ್ತರ ಆನಂದದಿ ಸಲುಹಿದ ತಂದೆ 'ಹೊನ್ನ ವಿಠ್ಠಲ’ ದಯಮಾಡಿ ಸಲಹಯ್ಯಾ 3
--------------
ಹೆನ್ನೆರಂಗದಾಸರು
ಸೈ ಸೈ ಶರಣಾಗತ ವತ್ಸಲ ನೀ ನೋಯಿಸಬಂದಸುರೆಗೆ ನಿರ್ಮಲ ಸುಖವಿತ್ತಿ ಪ. ಬೆನ್ನಿನ ಮೇಲೆ ಬೆಟ್ಟವ ಪೊರಿಸಿದ ಸುರ- ರನ್ನು ಕಾಪಾಡಿ ಸುಧೆಯನುಣಿಸಿದಿ ನೀ 1 ಹಂಜಿಯಂದದಿ ತಲೆ ನರತಿಹ ಬ್ಯಾಡತಿ ನಿರಂಜನ ಮೂರುತಿ2 ಅಟ್ಟಿ ಬರುತ ನಿನ್ನ ಕಟ್ಟಿದ ಗೋಪೆಗೆ ಪೊಟ್ಟೆಯೊಳಿಹ ಸರ್ವ ಲೋಕವ ತೋರಿದಿ 3 ಅಗ್ರಜ ಭಾರ್ಯಳನುಳುಪಿ ಕೊಲ್ಲಿಸಿದಂಥ ಸುಗ್ರೀವನ ಕೂಡೆ ಸಖ್ಯವ ಬೆಳಸಿದಿ 4 ಪಾತಕಿ ಪತಿಯಾದ- ಜಾಮಿಳನನು ತನ್ನ ನಿಲಯಕೆ ಕರೆಸಿದಿ 5 ವಿಧ ವಿಧದನ್ನವ ಕುರುಪತಿಯಲಿ ಬಿಟ್ಟು ಕುಡುತೆ ಪಾಲುಂಡುವ 6 ಕಂಡವರನು ಕೊಂದಿಹ ಕ್ರೂರನ ಮುನಿ ಮಂಡಲದಲಿ ಪ್ರಚಂಡನೆಂದೆನಿಸಿದಿ 7 ಕುಂತಿಯ ಕುವರನ ಕುದುರೆಯ ನಡೆಸುತ ಅಂತರಂಗ ಸಖ್ಯವ ಬೆಳೆಸಿದಿ ನೀ 8 ಖುಲ್ಲ ಚೇಷ್ಟೆಯ ಮಾಡಿ ಕಲ್ಲಾಗಿ ಬಿದ್ದ ಅ- ಹಲ್ಯೆ ಪತಿವ್ರತೆ ಎಂಬ ಬಿರುದ ಕೊಟ್ಟ್ಟಿ 9 ತಂದೆಯ ಕೊಲ್ಲಬೇಕೆಂದು ಸನ್ನಹಗೈದ ಕಂದನ ಸ್ವಾಂಕದೊಳಂದು ಕುಳ್ಳಿರಿಸಿದಿ 10 ಎಷ್ಟೊ ಪಾಪಗಳಟ್ಟುಳಿ ಬಿಡಿಸಿರೆ ಭ್ರಷ್ಟನೆಂದೆನ್ನೊಳು ನಿಷ್ಠುರವ್ಯಾತಕೆ 11 ಪನ್ನಗ ಗಿರಿವರ 12
--------------
ತುಪಾಕಿ ವೆಂಕಟರಮಣಾಚಾರ್ಯ