ಒಟ್ಟು 5 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಾಸಾಗರ ಬಾ ಗುರುವೆ | ಚರಣ ಕಮಲವನು ಸಾರಿದೆನೈ ಸ್ವಾಮಿ ಪ ಏನೆಂದು ಬಣ್ಣಿಪೆ | ದೀನವತ್ಸಲಪ್ರಭುವೆ | ಸಾನುರಾಗದಿ ನಿನ್ನ ಧ್ಯಾನಿಪೆನೈ ಜೀಯ1 ಗುರುರಾಘವೇಂದ್ರನೆ | ಶರಣರ ಸುರತರುವೆ | ನಿರುತ ಎಮ್ಮೊಳು ಕೃಪೆಯ ತೋರಿದಿರೈ ಸ್ವಾಮಿ 2 ಶ್ರೀ ಸುಧೀಂದ್ರಾರ್ಯರ | ಭಾಸುರಪ್ರಿಯತನಯ | ಶ್ರೀಶಕೇಶವನೊಲುಮೆ ಯಾಚಿಸುವೈ ಪ್ರಭುವೆ 3
--------------
ಶ್ರೀಶ ಕೇಶವದಾಸರು
ರಾಘವೇಂದ್ರ ರಾಯರಡಿಗೆ ಬಾಗಿ ನಮಿಸಿರೊ ನೀಗಿ ಭವದ ಬಂಧದಿಂದ ಮುಕ್ತರಾಗಿರೊ ಪ ಶಂಕೆಯಿಲ್ಲದೆ ವರಗಳ ಕೊಟ್ಟು ಚಿಂತೆ ಹರಿಸುವರ ಕಂತುಪಿತನ ಭಕ್ತರಿಗೆ ನಿರಂತರ ಸಂತಸ ನೀಡುವರ ಪಂಕಜನಾಭನ ಕಿಂಕರರ ಭಯ ಚಿಂತೆಯ ನೀಗುವರ ಶಂಖು ಕರ್ನರಿವರೆನ್ನುತ ಅಭಯದ ಕಂಕಣ ಕಟ್ಟಿಹರ 1 ಹಾಟಕಶ್ಯಪುತ್ರನು ವಿನಯದಿ ಪ್ರಾರ್ಥಿಸಿ ಪೂಜಿಸಿದ ಮಾಟಮುಖದ ದೇವನ ಪಾದಾಂಬುಜ ಧ್ಯಾನಿಸಿ ಸೇವಿಸಿದ ಕೋಟಲೆ ಭವದೊಳು ತಾಪವ ಪಡುವರ ಆಪದ ಪರಿಹರಿಸಿ ಭ- ವಾಟವಿದಾಟಿಸಿ ಪೊರೆದ ಪ್ರಹ್ಲಾದರ ಉಲ್ಲಾಸದಿ ಭಜಿಸಿರಿ2 ವ್ಯಾಸರಾಯರೆಂದು ಜಗದಿ ಪ್ರಖ್ಯಾತಿ ಪಡೆದವರ ದೇಶ ದೇಶದ ಭಕುತರ ಉಲ್ಲಾಸ ಕೊಡುವರ ಶ್ರೀ ಸುಧೀಂದ್ರಾರ್ಯರ ಪುತ್ರರೆನಿಸಿಕೊಂಬರ ಕ್ಲೇಶಗಳನೆ ಕಳೆವರೆಂಬ ಕೀರ್ತಿಪಡೆದರ3 ಕಂಗೊಳಿಪ ಕೋರೆಯಿಂದ ಬಂದ ಭದ್ರೆಯ ತೀರದಿ ಚಂದದಿಂದ ಮೆರೆವ ರಾಘ- ವೇಂದ್ರ ರಾಯರ ಕೊಂಡಾಡಿ ಪಾಡಿರೊ ಮನಕೆ ಸಂಭ್ರಮ ನೀಡುವರು ಪೊಂದಿದ ಪಾಪಗಳೆಲ್ಲವ ನೀಗಿಸಿ ಚಂದದಿ ಸಲಹುವರು 4 ಕರುಣದಿಂದ ಭಕ್ತರನೆಲ್ಲ ಸಲಹುತಿರ್ಪರ ಕಮಲನಾಭ ವಿಠ್ಠಲನಂಘ್ರಿ ಭಜನೆ ಮಾಳ್ಪರ ಕನಕಮಯದ ಮಂಟಪದಲಿ ಮರೆಯುತಿರ್ಪರ ಕರೆದು ಪ್ರಾರ್ಥಿಸುವವರ ಮನಕೆಹರುಷ ತೋರ್ಪರ 5
--------------
ನಿಡಗುರುಕಿ ಜೀವೂಬಾಯಿ
ರಾಯ ಬಾರೋ ತಂದೆ ತಾಯಿ ಬಾರೋ ನಮ್ಮ ಕಾಯೊ ಬಾರೋ ಮಾಯಿಗಳ ಮರ್ದಿಸಿದ ರಾಘವೇಂದ್ರ ರಾಯ ಬಾರೋ ಪ ಭಾಸುರ ಚರಿತನೆ ಭೂಸುರ ವಂದ್ಯನೆ ಶ್ರೀ ಸುಧೀಂದ್ರಾರ್ಯರ ವರಪುತ್ರ ರಾಯ ಬಾರೋ ಶ್ರೀ ಸುಧೀಂದ್ರಾರ್ಯರ ವರಪುತ್ರರೆನಿಸಿದ ದೇಸಿಕರೊಡೆಯ ರಾಘವೇಂದ್ರರಾಯ ಬಾರೋ 1 ವಂದಿಪ ಜನರಿಗೆ ಮಂದಾರ ತರುವಂತೆ ಕುಂದಾದಭೀಷ್ಟೆಯ ಸಲಿಸುತಿಪ್ಪ ರಾಯ ಕುಂದದಾಭೀಷ್ಟ ಸಲಿಸುತಿಪ್ಪ ಸರ್ವಜ್ಞ ಮಂದನಮತಿಗೆ ರಾಘವೇಂದ್ರ ರಾಯ ಬಾರೋ 2 ಆರು ಮೂರೇಳು ನಾಲ್ಕೆಂಟು ಗ್ರಂಥ ಸಾರಾರ್ಥ ತೋರಿಸಿದೆ ನ್ಯಾಯದಿಂದ ಸರ್ವರಿಗೆ ರಾಯ ಬಾರೋ ಸೂರಿಗಳರಸನೆ ರಾಘವೇಂದ್ರಾ ರಾಯ ಬಾರೋ 3 ರಾಮ ಪಾದಾಂಬುಜ ಸರಸಭೃಂಗ ಕೃಪಾಪಾಂಗ ಭ್ರಾಮಕ ಜನರ ಮಾನಭಂಗ ರಾಯ ಬಾರೋ ಭ್ರಾಮಕಜನ ಸನ್ಮಾನಭಂಗ ಮಾಡೀದಾ ಧೀಮಂತರೊಡೆಯನೆ ರಾಘವೇಂದ್ರಾ ರಾಯ ಬಾರೋ4 ಭೂತಳಾಧಿಪನಾ ಭೀತಿಯ ಬಿಡಿಸಿದೆ ಪ್ರೇತತ್ವ ಕಳೆದ ಮಹಿಷಿಯಾ ರಾಯ ಬಾರೋ ಪ್ರೇತತ್ವ ಕಳೆವ ಮಹಿಷಿಯಾ ಶ್ರೀಜಗ ನ್ನಾಥ ವಿಠ್ಠಲನಾ ಪ್ರೀತಿಪಾತ್ರಾ ರಾಯ ಬಾರೋ 5
--------------
ಜಗನ್ನಾಥದಾಸರು
ವೃಂದಾವನಗಳಿಗಾನಮಿಸಿ ನಿತ್ಯ ನಂದ ತೀರ್ಥ ಮತೋದ್ದಾರಕರೆನಿಪ ಪ ವರ ಮಧ್ವಮುನಿ ಕÀಮಲಕರ ಪದ್ಮ ಸಂಜಾತ ಪದ್ಮನಾಭ ಶ್ರೀ ರಾಮತೀರ್ಥ ಕವೀಂದ್ರಾ ಕರಸರೋರುಹ ಜಾತ ವಾಗೀಶಮುನಿ ಪರಘುವರ್ಯ ಗೋವಿಂದಾಖ್ಯ ಒಡೆಯರ ಪವಿತ್ರತಮ 1 ಶ್ರೀ ಸುಧೀಂದ್ರಾರ್ಯರ ಪ್ರಪೌತ್ರರೆನಿಪ ವಸುಧೀಂದ್ರ ವ್ಯಾಸರಾಯ ಶ್ರೀನಿವಾಸ ಮುನಿಯಾ ಭೂಸುರರು ಪರಮ ಸಂತೋಷದಲಿ ಸ್ಮರಿಸೆ ನಿ ರ್ದೋಷರನ ಮಾಡಿ ಅಭಿಲಾಷೆ ಪೂರೈಸುತಿಹ 2 ದೇವತೆಗಳು ಇವರು ಸಂದೇಹ ಬಡಸಲ್ಲಾ ಮಿ ಪರಾಭವ ಮಾಡಿ ಈ ವಸುಂಧರೆಯೊಳಗೆ ಕೀರ್ತಿಯುತರಾಗಿ ಲಕ್ಷ್ಮೀವರ ಜಗ ನ್ನಾಥ ವಿಠಲನ ಐದಿಹರಾ 3 ಸತ್ಯಬೋಧ ತೀರ್ಥ
--------------
ಜಗನ್ನಾಥದಾಸರು