ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಪಾಲಿಸುವುದಾನಂತ ಶಯನ | ಚನ್ನ ಗರುಡವಾಹನಾ | ಮುನಿಗೊಲಿದನಂತ ಗುಣಾರ್ಣವಾ ಪ ದೇವಾ ನಂಬಿದವರ ನೋವ ಕಳೆದು ಬಿಡದೆ | ಕಾವ ಬೇಡಿದ ವರವ ನೀವ ಮೂರು | ಭುವನ ಜೀವ ವಿಮಲರಾ | ಜೀವ ನಯನ ವಸುದೇವ ದೇವಕಿತನು | ಭವನೆ ಭವದೂರ ದುರ್ಜನ ಸಂಹಾರ | ದೇವತಾ ವರ ಸಂಜೀವಾ ಪ್ರಭಾವಾ1 ಸೂರ್ಯಕೋಟಿ ಪ್ರಕಾಶಾ | ಚಾರ್ಯನಾ ನಾಯಕಾಧೀಶಾ | ಧೈರ್ಯವುಳ್ಳ ಸರ್ವೇಶಾ | ಕಾರ್ಯರೊಳು ವಿಶೇಷಾ | ಕಾರ್ಯವಂತನೆ ಈಶಾ | ತುರ್ಯಮಹಿಮಾ ಸುರ ಮರ್ಯಾದಿಯಲಿ ಬಲು | ವೀರ್ಯದಲಿ ಮತಿ | ಧಾರ್ಯನ ಮಾಡೋದು | ನಿರ್ಯಾಣ ಸಮಯಕ್ಕೆ 2 ಬಂದು ಮತ್ಸ್ಯಾದಿ ತೀರ್ಥ | ಬಂದು ಬಲು ಸಮರ್ಥ | ಇಂದು ಕರುಣಿಸು ಕರ್ತಾ | ಬೆಂದು ಪೋಗಲಾರ್ಥ | ಮುಂದುಣಿಸು ಸುಧಾರ್ಥ | ತಂದು ನೀನೆ ಮುಕ್ತ್ತಾರ್ಥ | ಬಂದು ವೈತಿರುವಾ ನಂದು ರೂಪವನೆ | ಸಿಂಧುಶಯನ ಆ ನಂದ ವಿಜಯವಿಠ್ಠಲೆನ್ನ ಪಾಲಿಸೋ3
--------------
ವಿಜಯದಾಸ
ಶ್ರೀ ವಿಷ್ಣು ತೀರ್ಥರು ಅಡವಿ ಆಚಾರ್ಯರ ಅಡಿಯ ಪೊಂದಿದ ಜನರು ಅಡಿಗಡಿಗೆ ಬಹುಪುಣ್ಯ ಪಡೆದು ಕೊಂಬುವರು ಪ ಪೊಡವಿಯಲಿ ಸಂಸಾರ ಮಡುವಿನಲಿ ಮುಣಿಮುಣಿಗಿ ಬಡವರಂತತಿ ಬಾಯ ಬಿಡುವರಲ್ಲವರು ಅ.ಪ ಪಂಚರತ್ನವ ಪಠಿಸಿ ಪಂಚಮೂರ್ತಿಗಳನ್ನು ಮುಂಚೆ ತಿಳಿವರು ಈ ಪ್ರಪಂಚದಲ್ಲಿ ಹಂಚಿಕೆಯಲಿ ಮತ್ತೆ ಪಂಚಭೇದವ ತಿಳಿದು ಪಂಚ ಮಹಾ ಪಾಪಗಳ ಮುಂಚೆ ಕಳೆಯುವರು 1 ಭಂಗ ಬಿಡಿಸುವ ಸುಧೆಯ ಮಂಗಳಾರ್ಥವ ತಿಳಿದು ಅಂಗದಲಿ ಸುರಿವರು ಕಂಗಳೊದಕವ ಮಂಗಳಾಂಗನ ಅಂತರಂಗದಿ(ದಲಿ) ಸ್ಮರಿಸುತ್ತ ಮುಂಗೈಯ್ಯ ಮುದ್ರೆಗಳ ಧರಿಸುವರಿವರು 2 ವಾಸುದೇವನ ದಾಸ ದಾಸರಾದೆವೆಂಬೊ ಆಶೆಯಲಿ ಅವನ ಸಹವಾಸ ಬಯಸುವರು ಶ್ರೀಸುಧಾರ್ಥಾನಂತಾದ್ರೀಶನಲ್ಲೇ ಭಕುತಿ ಯೇಸು ಕಾಲಕು ಬಿಡದೆ ಬ್ಯಾಸರದೆ ಬೇಡುವರು 3
--------------
ಅನಂತಾದ್ರೀಶರು