ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಭಗವದ್ಭಕ್ತ ಸಂಮೋಹ ಪ್ರಾರ್ಥನೆ) ಗಜಮುಖನ ಪ್ರಪಿತಾಮಹನಹಿಮನ ಗಜೆಯರಸನ ಪಿತನ ಪೆತ್ತನ ಸಾರಥಿ ಪಾದ ಪಂಕಜವ ಭಜಿಸಿ ಭಾರತಿವರನ ನಮಿಸುವೆ ಅಜಭವಾದಿ ಗುರೂತ್ತಮರ ನಿಜ ವೃಜಿನಪಂಕ ನಿವೃತ್ತಿಗೊಳಿಸುವದೆಂದು ವಂದಿಸುವೆ 1 ಅವ್ಯವಹಿತಾಸದೃಶ ಭಕ್ತಿಯ ಸವ್ಯಸಾಚಿ ಸಹಾಯ ಸಲಿಸಾ ದಿವ್ಯ ಪದವಿಯ ಪಡೆವೆನೆಂದುಗತವ್ಯಳೀಕದಲಿ ಕಾವ್ಯ ವ್ಯಾಕರಣಗಳಿಂದ ವಹಿಸಿದ ಸೇವ್ಯ ಗುರು ಲಾ- ತವ್ಯ ಮುನಿವರರಂಘ್ರಿಕಮಲವ ನುತಿಸಿ ನಮಿಸುವೆನು 2 ಪುಂಡರೀಕ ದಲಾಯತಾಕ್ಷನೆ ಹಿಂಡು ದೈವದ ಗಂಡನೆಂದತಿ ಚಂಡ ಮೈಗಳ ಖಂಡಿಸಿದ ಯತಿಮಂಡಲೇಶ್ವರನ ಪಾಂಡ್ಯದೇಶದೊಳವತರಿಸಿದಾ ಖಂಡಲಾತ್ಮನ ನಮಿಪೆ ಮಮ ಹೃ- ನ್ಮಂಡಲದಿ ಪಾಲಿಸು ಸುಧಾರಸವುಂಡು ನಲಿವಂತೆ 3 ಮೋದತೀರ್ಥ ಮಹಾಬ್ಧಿಯನು ಕಡೆ- ದಾದಿಯಲಿ ನ್ಯಾಯಾಮೃತವ ತೆಗೆ- ದಾದರದಿ ಸಜ್ಜನರಿಗುಣಿಸಿದ ಗಾಢಮತಿಯುತನ ಮಾಧವನ ಗುಣತರ್ಕ ತಾಂಡವ ವೋದಿಸುತ ಚಂದ್ರಿಕೆಯ ತೋರಿದ ಬೋಧಕರ ಪ್ರಲ್ಹಾದಮುನಿ ಕರುಣದಲಿ ಸಲಹೆನ್ನ 4 ಮಂಗಳಾಂಬುತರಂಗ ತುಂಗಾ ಸಂಗಿ ಮಂತ್ರಾಲಯದಿ ನಿಂದು ಕು ರಂಗ ವೈರಿಯ ಪೂರ್ವ ಕರುಣಾಲಿಂಗನೋತ್ಸುಕನ ಪಂಗು ಬಧಿರಾದ್ಯಂಗ ಹೀನರ ಪಾಂಗ ನೋಟದಿ ಪಾಲಿಸುವ ಯತಿ ಪುಂಗವಾರ್ಜಿತ ರಾಘವೇಂದ್ರರ ನಮಿಪೆನನವರತ 5 ಜೋಲಿಸುವ ಕಂಠದಲಿ ತುಳಸೀ ಮಾಲೆಯನು ಕರಯುಗದಿ ವೀಣಾ ತಾಳಗಳ ಬಾರಿಸುತ ಸರ್ವತ್ರದಲಿ ಸಂಚರಿಸಿ ಶ್ರೀಲಲಾಮನ ಲೀಲೆಗಳಿಗನು- ಕೂಲರಾದ ಸುರರ್ಷಿ ನಾರದ ರಾಲಯಸಿ ತಪ್ಪುಗಳ ತಿದ್ದುವುದೆಂದು ನಮಿಸುವೆನು 6 ಸತ್ಯಭಾಮಾಕಾಂತನಿದಿರಲಿ ನಿತ್ಯ ನಡೆಸುವನೆಂಬ ಸೇವೆಗೆ ಒತ್ತಿಬಹ ವಿಘ್ನಗಳ ದೂರದಿ ಕಿತ್ತು ಬಿಸುಟುವರ ಹತ್ತು ದೆಶೆಯಲಿ ನಿಂತು ರಕ್ಷಿಪ ಕೃತ್ತಿವಾಸ ಸುರೇಶಮುಖ ದೇ- ವೋತ್ತುಮರ ನಾ ನಮಿಪೆ ತತ್ವದ ಭೃತ್ಯನಹುದೆಂದು 7 ಪಾವಮಾನ ಮತೀಯ ವೈಷ್ಣವ- ರಾವಳಿಗೆ ಶರಣೆಂಬೆ ನಿಮ್ಮ ಕೃ- ಪಾವಲಂಬನವಿತ್ತು ಕರುಣವ ಶುದ್ಧಿಕರಿಸುತಲಿ ದೇವ ದೇವವರೇಣ್ಯ ಭಕ್ತರ ಕಾವ ಶೇಷಗಿರೀಂದ್ರನಾಥನ ಸೇವಿಸುವ ಸುಖವಿತ್ತು ಸುಲಭದಿ ಸಲುಹಬೇಕೆಂದು 8
--------------
ತುಪಾಕಿ ವೆಂಕಟರಮಣಾಚಾರ್ಯ
ಕರಕಮಲ ತಡೆಯುವುದೆ ಕಟುಖಾರವಾ ನಿತ್ಯ ಪೂಜಿಸುವ ಕೋಮಲದಾ ಪ. ಪರಿವಾರ ಜನವು ಭೋಜನಕೆ ಕುಳಿತಿರಲು ನರ ಹರಿಗೆ ಅರ್ಪಿತದ ಹುಳಿಯಲ್ಲಿ ಕರವಿಟ್ಟು ಪರಿಪಕ್ವ ಶಾಖದ ಹೋಳುಗಳ ಬಡಿಸಲು ಕರ ಕರೆಗೆ ಸಿಲುಕೇ 1 ಮಧ್ವದುಗ್ಧಾಭ್ಧಿಯಲಿ ಜನಿಸಿದ ಸುಧಾರಸವ ಶುದ್ಧ ದೃಷ್ಟಿಯಲ್ಲೀ ಸವಿಸವಿದು ಮಧುರಾ ಹೃದ್ವಜದಲಿ ತುಂಬಲನುವಾದ ಪುಸ್ತಕವ ಮುದ್ದಾಗಿ ಪಿಡಿಯಲನುಕೂಲವಾಗಿ ಇಂಥ 2 ಗಂಧ ಕುಸುಮಾಕ್ಷತೆಗಳಿಂದ ಶ್ರೀ ತುಳಸಿದಳ ದಿಂದ ವಿಠ್ಠಲ ಕೃಷ್ಣ ಲಕ್ಷ್ಮಿನರಹರಿಯಾ ವೃಂದ ಸಾಲಿಗ್ರಾಮ ಹನುಮ ಯತಿಕುಲಜರುಗ ಳಿಂದ ಸಹಿತದಿ ಪೂಜೆ ವಿಭವದಲಿ ಗೈದಾ 3 ಮಧುರಾನ್ನ ಸವಿದು ಮಧುಸೂದನನ ಗುಣಗಳನು ವಿಧವಿಧದಿ ಮಧ್ವಗ್ರಂಥದಿ ಕಂಡು ನಲಿದೂ ಹೃದಯ ನಿರ್ಮಲದಿ ಆಲಿಸುವ ಭಕ್ತರಿಗೆ ಮಧುರ ರಸಮನದ ಎಡೆಯಲ್ಲಿ ಬಿಡಿಸುವ ಇಂಥ 4 ಗೋಪಾಲಕೃಷ್ಣವಿಠ್ಠಲನ ಭಕ್ತರು ಬಂದು ಶ್ರೀಪಾದಕೆರಗೆ ಸಿರದಲ್ಲಿ ಅಕ್ಷತೆಯಾ ಅಪಾರ ಕರುಣದಿಂದಲಿ ಸೂಸಿ ನಲಿಯುತಲಿ ಅಪತ್ತು ಕಳೆವ ಶ್ರೀ ಪ್ರದ್ನುಮ್ನತೀರ್ಥಯತಿ 5
--------------
ಅಂಬಾಬಾಯಿ
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಗುರುನಾಥ ಬಾಹ್ಯಾಂತ್ರ ಪರಿಪೂರ್ಣ ನೀನೆ ಸದೋದಿತ ಸಹಕಾರ ನಿಜವಸ್ತು ನೀನೆ ಅಖಂಡಿತ ಗುಹ್ಯ ತಿಳಿಯದೊ ನಿನ್ನ ಸದ್ಗುರು ಸಮರ್ಥ 1 ಸೆರಗ ಸಿಲುಕದೆಂದು ತಿರುಗಿತು ವೇದ ಸರಸ್ವತಿ ಸ್ತುತಿಗೆ ತಾ ತೀರಲಿಲ್ಲ ಬೋಧ ವರಣಿಸಲಿಕ್ಕೆ ಶೇಷ ತಲೆಯು ಬಾಗಿದ ಮೊರೆ ಇಡುತಿಹುದೆಲ್ಲ ನಿನಗೆ ಗೋವಿಂದ 2 ಋಷಿಮುನಿಗಳಿಗೆ ತಾ ಪೆಸರೊಡೆಯದು ತುಸು ಕೊರತೆಲ್ಲ ತಾ ಪಸರಿಸಿಹ್ಯದು ಮಸಿ ಮಣ್ಣಾಯಿತು ಲೋಕ ಹೆಸರಿಗೆ ಬಂದು ದೆಸೆಗೆಟ್ಟಾಯಿತು ಬಹಳ ಉಸುರೊಡಿಯೆಂದು 3 ಮಾಡದ ಮಾಡಿತು ಲೋಕ ನೋಡೊ ನಿನಗಾಗಿ ಬಡದ ಭವಣೆಬಟ್ಟು ಹಿಡಿಯಲಿಕ್ಕೆ ಹೋಗಿ ಕೊಡಲಿಲ್ಲ ನಿಜಗುಟ್ಟು ಇವ್ಹನೀ ಅಡಗಿ ಯೋಗಿ 4 ಇದೆ ಮುಂದಣುವಾದ ನನ್ನದೇನು ಪಾಡು ಸಾಧಿಸಿ ಸದ್ಗುರು ಕೃಪೆ ನೀನೆ ದಂiÀiಮಾಡು ಒದಗಿ ಮಹಿಪತಿ ನೀ ದಯದಿಂದ ನೋಡು ಸದಮಲ ಸುಖವಾದ ಸುಧಾರಸವ ಕೊಡು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ರಥವೇರಿ ಬರುತಿಹ ಗುರುರಾಯ ನಾ ನೋಡಮ್ಮಯ್ಯ ಪ ಅತಿಸದ್ಭಕುತಿಲಿ ಸ್ತುತಿಸುವರಿಗೆ ಸತ್ಪಥವನೆ ತೋರುವ ಕ್ಷಿತಿಪತಿದಾಸರೆ ಅ.ಪ ತಿದ್ದಿಹಚ್ಚಿದ ನಾಮ ಮುದ್ರೆಗಳಿಂದಲೋಪ್ಪುತಿಹರೇ ನೋಡಮ್ಮಯ್ಯ | ಕ್ಷುದ್ರರ ಮುಖಕೆ ಬೀಗ ಮುದ್ರೆಯ ನೊತ್ತುತ ಸದ್ವೈಷ್ಣವರ ನುದ್ಧರಿಸಿದ ಕರುಣೀ 1 ವರಶ್ರುತಿ ಸಮ್ಮತರಥ ನಿರ್ಮಿತವಾಗಿಹುದೇ ನೋಡಮ್ಮಯ್ಯ || ಸ್ಮರಪುರಹರ ಸಾರಧಿಯಾಗಿಹರೆಂದರಿತವರಿಗೆ ಶುಭಗರೆವ ದಯಾನಿಧೇ 2 ಶಾಮಸುಂದರನ ನಾಮಸುಧಾರಸವ ನೋಡಮ್ಮಯ್ಯ ಶ್ರೀಮಾನ್ ಮಾನವಿ ಕ್ಷೇತ್ರವೆ ತವನಿಜ ಧಾಮವೆಂದೆನಿಸಿ ಸುಸ್ತಂಭದೊಳಿಹರೇ 3
--------------
ಶಾಮಸುಂದರ ವಿಠಲ
ಶ್ರೀ ನರಸಿಂಹ ದೇವರು ರಕ್ಷಿಸೆನ್ನನು ನಿರುತ ನರಮೃತನಾಥ ಪ ರಕ್ಷಿಸೆನ್ನ ಜಗತ್ಕುಕ್ಷಿಯೆ ಕರುಣಾಕ ಟಾಕ್ಷದಿಂದೀಕ್ಷಿಸಿ ತ್ರ್ಯಕ್ಷಾಂತರ್ಗತದೇವ ಅ.ಪ ಪತಿತಪಾವನ ಪರಶತ ಮೋದಗತ ಬೇದ ಚತುರ್ವೇದ ಪಾಲ ಶತಕ್ರತು ಕೃತಿನಾಥ || ಯತಿ ತತಿ ಮಾನಸವೃತ ತೇಜ ಭಾಸ್ಕರ ಸತತ ನಿನ್ನಯ ಪಾದವ | ಸದ್ಭಕುತಿಯಲಿ ಸ್ತುತಿಪ ದಾಸರ ಸಂಗವ | ಗರೆದು ಭವ ಮಾಧವ ನೀನೊಲಿದತಿ ಹಿತದಿಂದುಣಿಸು ನಿನ್ನ ಕಥೆ ಸುಧಾರಸವ 1 ಅರಿದರ ಗದಾಪದ್ಮಧರ ಚತುಷ್ಟಯಕರ ತಸ್ಕರ ಹರ ನರಗಾತ್ರ ಹರಿವಕ್ರ ಸುರಪಾನುಜವಟು ಪರಶುಪಾಣಿಯೆ ವಾನರ ನರಪಾಲಕವಿgಹಿÀ ತಾಂ ಬರಕಲ್ಕಿ ಶರಣ ಜನರು ಭಕ್ತಿಪರವಶದಲಿ ಕೂಗಿ ಕರೆಯಲಾಕ್ಷಣ ಓ ಎಂದು ಭರದಿ ಬಂದು ಪೊರೆವ ಪ್ರಭು ನೀ ಎಂದು ಬುಧರು ಪೇಳ್ವ ವರವಾಕ್ಯ ಮನಕೆ ತಂದು ಪ್ರಾರ್ಥಿಪೆ ನಿನ್ನ ಚರಿತೆ ಪಾಡುವ ಸುಖಗರಿಯೊ ಬಂಧು 2 ಸಿಂಧು ಶಯನ ಶಾಮ ಸುಂದರ ವಿಠಲ ಇಂದಿರಾತ್ಮಕ ತ್ರಯ ಮಂದಿರ ಕಾರ್ಪರ ಮಂದಿರ ತರುರಾಜ ಮಂದಿರ ದ್ವಿಜ ಮಧ್ಯ ಮಂದಿರಾತ್ಮಜ ಹೃ ನ್ಮಂದಿರ ಸದ್ಧಕ್ತ ಮಂದಾರ ಭೂರುಹ3
--------------
ಶಾಮಸುಂದರ ವಿಠಲ
ಶ್ರೀ ವಧುರಮಣನ ಚರಿತಾಮೃತವನು ಸೇವಿಸಬಾರದೆ ಜಿವ್ಹೆ| ಆವಾಗು ವಿಷಯಾಸಕ್ತಿಲಿ ಬಾಳುವ ದಾವರಸಜ್ಞದ ಗುಣವೇ ಪ ಆರತಿಯಿಂದಲಿ ಷಡರಸದನ್ನದ ಸಾರಾಯಕ ಮರುಳಾದೆ ನೀ| ನರೆರಧರಕ್ಕೊಲಿದೇ ಸುಧಾರಸವೆಂದು ಬಗೆದೇ| ಧಾರಣಿ ಕಳ್ಳಿಯ ಹಾಲೆಂದೆನಿಸಲು ಗೋರಸದ್ಹಂಬಲ ಮರೆದೆ 1 ಜ್ಞಾನವ ಸಾಧಿಸಿ ಬಹು ಸಾಯಾಸದಿ ನಾನು ಶಾಸ್ತ್ರವ ನೋಡಿ| ಮಾನದ ಕಾಂಕ್ಷಿಯ ಕೂಡಿ| ಪರಿ ಕುಣಿದಾಡುವ ಹೀನ ಮನುಜರಾ ಪಾಡಿ2 ಸ್ಮರಿಸಲು ಶ್ರೀಹರಿಯಾ ಲೋಹ| ಪರಸವ ಮುಟ್ಟಿದ ಪರಿಯಾ ಧನ್ಯರು ತಮನೆನಿಸುವನರಿಯಾ| ಗುರುವ್ಕ ಮಹಿತಪಿ ನಂದನು ಸಾರಿದ ಮೊರೆ ಹೋಗು| ಮೂಜಗ ಧೊರಿಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹನುಮ ನಮ್ಮ ಕಾಮಧೇನು ಭೀಮ ನಮ್ಮ ಕಲ್ಪವೃಕ್ಷಆನಂದತೀರ್ಥಗುರು ಚಿಂತಾಮಣಿ ಪ.ಸೂತ್ರರಾಮಾಯಣ ಮಹಾವ್ಯಾಕರ್ಣ ಪಂಚರಾತ್ರ ಭಾರತಪುರಾಣ ಶ್ರುತ್ಯರ್ಥ ಸುಧಾರಸವಾವೇತ್ತøಜನಕಾ ಸಂತತಕಿಂಪುರುಷವರುಷದಿ ಉಣಲಿತ್ತನಾ ಸುಸ್ವರದಿ ಶ್ರೀರಾಮಪ್ರಿಯನು 1ರಾಜಸೂಯ ಮೂಲದಿಂದ ಶಾಖೋಪಶಾಖ ಸಧರ್ಮಸೋಜಿಗದ ಕರ್ಮಕುಸುಮ ಬ್ರಹ್ಮತ್ವಛಲದಿರಾಜಿಸುತ್ತ ಸಹಸ್ರಾಕ್ಷ ಸಖಮುಖ್ಯದ್ವಿಜರ್ಗೆ ಸುಖಬೀಜ ನಿಂತು ಹೊರೆದನು ಶ್ರೀಕೃಷ್ಣ ಪ್ರಿಯನು 2ಹಂತ ಭಾಷ್ಯಧ್ವಾಂತದಿ ವೇದಾಂತವಡಗೆಪೋಕಮಣಿಮಂತನ ಮುರಿದನು ಮೂವತ್ತೆರಡು ಲಕ್ಷಣದಿಕಾಂತಿಯಿಂದ ಪ್ರಸನ್ನವೆಂಕಟ ಕಾಂತನ್ನ ಪ್ರಕಾಶಿಸಿದಚಿಂತಿತಾರ್ಥ ನಮಗೀವ ಶ್ರೀವ್ಯಾಸಪ್ರಿಯನು ವೇದವ್ಯಾಸಪ್ರಿಯನು 3
--------------
ಪ್ರಸನ್ನವೆಂಕಟದಾಸರು